Homeಕಥೆನಮ್ಮ ‘ಬೋರಜ್ಜಿಯ ಬ್ಯುಸಿನೆಸ್ಸು’ ಹೆಂಗಿತ್ತು ಗೊತ್ತಾ?

ನಮ್ಮ ‘ಬೋರಜ್ಜಿಯ ಬ್ಯುಸಿನೆಸ್ಸು’ ಹೆಂಗಿತ್ತು ಗೊತ್ತಾ?

- Advertisement -
- Advertisement -

|ಸಿದ್ದರಾಮು ಕೆ. ಎಸ್|

ಇವತ್ತು ದೀಪಾವಳಿಯ ಮಧ್ಯಾಹ್ನ. ಮಧ್ಯಾಹ್ನವೇ ಮೋಡ ಕವಿದು ಸಂಜೆಯಂತಾಗಿದೆ. ಇನ್ನೇನು ಮಳೆ ಬಂದೇ ಬಿಡಬಹುದು, ಮಳೆಯಲ್ಲದಿದ್ದರೆ ಸಣ್ಣ ಸೋನೆಯಾದರೂ ಬರಬಹುದು. ಹಾಗಾಗಿ ಆದಷ್ಟು ಬೇಗ ವ್ಯಾಪಾರ ಮುಗಿಸಿ ಮನೆಗೆ ಹೋಗುವ ತರಾತುರಿಯಲ್ಲಿ ಬೋರಜ್ಜಿ ಕುಳಿತಿದೆ – ಹೆದ್ದಾರಿಯಿಂದ ಅರ್ಧ ಮೈಲಿ ದೂರದಲ್ಲಿರುವ ತನ್ನೂರನ್ನು ಸಂಪರ್ಕಿಸಲು ಇರುವ ಮಣ್ಣು ದಾರಿಯು ಹೆದ್ದಾರಿಗೆ ಕೂಡಿ ಗೇಟು ಎಂದು ಕರೆಯಲ್ಪಡುವ ಜಾಗದಲ್ಲಿ, ತನ್ನಷ್ಟೇ ಮುದಿಯಾಗಿ ಸೊಂಪಾದ ನೆರಳನ್ನೂ ನೀಡಲು ಆಗದ ಸ್ಥಿತಿಯಲ್ಲಿರುವ ಆಲದ ಮರದ ಕೆಳಗೆ ಸರ್ಕಾರದವರು ಕಟ್ಟಿರುವ ಸೇತುವೆಯ ಮೇಲೆ. ಬೆಳಿಗ್ಗೆಯಿಂದ ಅಲ್ಲಿಯೇ ಕೂತಿದ್ದ ಬೋರಜ್ಜಿ ಈಗ ಬುಟ್ಟಿ ಎತ್ತಿಕೊಂಡು ರಸ್ತೆ ಪಕ್ಕಕ್ಕೆ ಬಂದು ಬುಟ್ಟಿಯನ್ನು ಕೆಳಗಿಟ್ಟು ಎರಡೂ ಕೈಯಲ್ಲಿ ಮೂರು ಮೂರು ಸೀಬೆ ಹಣ್ಣು ಹಿಡಿದು ವೇಗವಾಗಿ ಚಲಿಸುತ್ತಿದ್ದ ವಾಹನಗಳ ಗಮನ ಸೆಳೆಯಲು ನಿಧಾನವಾಗಿ ಪ್ರಯತ್ನಿಸುತ್ತಿತ್ತು. ರಸ್ತೆ ಪಕ್ಕದಲ್ಲೇ ಇದ್ದ ಮಾವಿನ ತೋಪಿನೊಳಗೆ ಮೇಯಲು ಕಟ್ಟಿ ಬಂದಿದ್ದ ತನ್ನ ಎಮ್ಮೆಯನ್ನೂ ಕೂಡ ಆಗಾಗ ಗಮನಿಸುವ ಕೆಲಸವನ್ನೂ ಅಲ್ಲಿಂದಲೇ ಮಾಡುತ್ತಿತ್ತು.

ಈಗ ದೀಪಾವಳಿಯ ಸಾಲು ರಜೆಯಾದ್ದರಿಂದ ಈ ರಸ್ತೆಯ ಮೂಲಕ ಇವತ್ತು ಮೈಸೂರಿನ ಕಡೆ ಸಾಕಷ್ಟು ವಾಹನಗಳು ಹೋಗುತ್ತವೆ. ಹಾಗಾಗಿ ಬೇಗ ವ್ಯಾಪಾರ ಮುಗಿಸಿಬಿಡಬಹುದು ಎಂಬ ವ್ಯಾವಹಾರಿಕ ಲೆಕ್ಕಾಚಾರದಲ್ಲಿ ಬೋರಜ್ಜಿ ಬೆಳಿಗ್ಗೆ ಬೇಗ ಎದ್ದು ಎರಡು ರೊಟ್ಟಿ ಬಡ್ಕಂಡು ತಿಂದು, ‘ಮಿಕ್ಕಿದ್ದು ಆಮ್ಯಾಕೆ ಮಾಡಿಕಂಡರಾತು’ ಎಂದು ಎಣಿಸಿ ವ್ಯಾಪಾರಕ್ಕೆ ಬಂದು ಕೂತಿತ್ತು.

ತನ್ನ ಗುಡಿಸಲಿನ ಹಿಂದೆ ಹದಿನೈದು ವರ್ಷಕ್ಕಿಂತಲೂ ಮುಂಚಿನಿಂದ ಇರುವ ಸೀಬೆ ಮರದಿಂದ ಹಣ್ಣು ಕಿತ್ತು ಮಾರಬಹುದು ಎಂದು ಬೋರಜ್ಜಿಗೆ ಎಂದಿಗೂ ಅನ್ನಿಸಿರಲಿಲ್ಲ. ಅಂತಹ ಪರಿಸ್ಥಿತಿಯೂ ಬಂದಿರಲಿಲ್ಲ. ಅವರಿವರ ಹೊಲದಲ್ಲಿ ಮಾಡುತ್ತಿದ್ದ ಸಣ್ಣಪುಟ್ಟ ಕೂಲಿ ಕೆಲಸದಿಂದ ಬರುತ್ತಿದ್ದ ಹಣ, ತನ್ನ ಹರೆಯದಿಂದಲೂ ಜೊತೆಗಿದ್ದ ಒಂದೇ ವಂಶದ ಎಮ್ಮೆಗಳು ಕರೆಯುತ್ತಿದ್ದ ಹಾಲಿನಿಂದ ಬರುತ್ತಿದ್ದ ಹಣ ಬೋರಜ್ಜಿಗೆ ಸಾಕಾಗಿತ್ತು. ಅದರೊಟ್ಟಿಗೆ ಇತ್ತೀಚಿಗೆ ಯೆಡಿಯೂರಪ್ಪನ ನಾನೂರು ರೂಪಾಯಿ ಪಿಂಚಣಿ ಬೇರೆ ಬರಲು ಶುರುವಾಗಿ ಇನ್ನೂ ನಿರಾಳವಾಗಿಯೇ ಜೀವನ ಸಾಗಿತ್ತು. ಮನೆ ಹಿಂದಿನ ಸೀಬೆ ಮರದ ಹಣ್ಣುಗಳು ಊರ ಹುಡುಗರಿಗೇ ಮೀಸಲು ಎನ್ನುವಂತೆ ಭಾವಿಸಿ, ಅದರ ಕುರಿತು ಬೋರಜ್ಜಿ ಮೊದಲಿನಿಂದಲೂ ಒಂದು ರೀತಿಯ ನಿರಾಸಕ್ತಿ ವಹಿಸಿಬಿಟ್ಟಿತ್ತು.

ಹದಿನೈದು ವರ್ಷದ ಹಿಂದೆ ಸಣ್ಣವರಿದ್ದ ಊರ ಹುಡುಗರೆಲ್ಲಾ ಈಗ ಬೆಳೆದು ದೊಡ್ಡವರಾದರು. ಕಾಲೇಜು ಶಿಕ್ಷಣ ಮುಗಿಸಿದರು, ಅದರ ಕರ್ಮಫಲವಾಗಿ ತುಮಕೂರು, ಬೆಂಗಳೂರು ಎಂದು ಹೋಗಿಬಿಟ್ಟರು. ಹೋದಲ್ಲಿಯೇ ಮದುವೆಯಾಗಿ ಮಕ್ಕಳನ್ನೂ ಎತ್ತುಬಿಟ್ಟರು. ಊರಲ್ಲೇ ಉಳಿದ ಸೀಬೆ ಮರದ ಹಣ್ಣಿನ ನೆನಪು ಅವರಿಗೆ ಮರೆತೇ ಹೋಯಿತು. ಹಬ್ಬಕ್ಕೋ, ರಜಕ್ಕೋ ಊರಿಗೆ ಬಂದಾಗ ಊರೊಳಗೆ ಎಲ್ಲಾದರು ಬೋರಜ್ಜಿ ಎದುರಿಗೆ ಸಿಕ್ಕರೆ ಮಾತ್ರ ಅವರಿಗೆ ಬೋರಜ್ಜಿಯ ನೆನಪಾಗುವುದು. ಬೋರಜ್ಜಿಯ ಮನೆಯ ಕಡೆ ಬಂದರೆ, ಸೀಬೆ ಮರದ ಕಡೆ ನೋಡಿದರೆ, ಬಾಲ್ಯವನ್ನು ನೆನಪಿಸಿಕೊಂಡು ಅದರ ಶ್ರಾದ್ಧಕ್ಕೆ ಎಂಬಂತೆ ಮರದಲ್ಲಿ ಹಣ್ಣುಗಳಿದ್ದರೆ ಕೆಳಗೆ ನಿಂತು ಕೈಗೆಟುಕುವ ಎರಡು ಹಣ್ಣು ಕಿತ್ತುಕೊಂಡು ಹೋಗುವರು. ಅದೂ ಅಷ್ಟು ಸಮಯವಿದ್ದರೆ.
ಆದರೆ ಬೋರಜ್ಜಿಯ ಸೀಬೆ ಮರ ಮಾತ್ರ ಕೇಳುವವರಿಲ್ಲದೆಯೂ ಹಾಡುವ ಹಕ್ಕಿಗಳಂತೆ ತಿನ್ನುವವರಿಲ್ಲದಿದ್ದರೂ ವರ್ಷಕ್ಕೊಮ್ಮೆ ಹೂವಾಗಿ ಮೈದುಂಬಿಕೊಂಡು, ಹಣ್ಣಾಗಿ ಬಾಗಿ ನಿಂತುಬಿಡುತ್ತದೆ ಚಿರಯೌವ್ವನದ ಚೆಲುವೆಯಂತೆ. ಹಣ್ಣುಗಳ ತೊಟ್ಟು ಕೊಳೆತು ಒಂದೊಂದೇ ಬಿದ್ದು ಮರದ ಅಡಿಯಲ್ಲೆಲ್ಲಾ ಹಣ್ಣಿನ ರಾಶಿಯಾಗಿಬಿಡುತ್ತದೆ. ಬೋರಜ್ಜಿಗೆ ಇದನ್ನು ಕಂಡು ‘ಕರುಳು ಚುರ್’ ಅಂದರೂ ಏನೂ ಮಾಡಲಾಗದೆ ಸುಮ್ಮನಾಗುತ್ತಾಳೆ.

ಇತ್ತೀಚಿಗೆ ಬೋರಜ್ಜಿಗೆ ಕೂಲಿ ಕೆಲಸಕ್ಕೆ ಹೋಗುವುದು ಕಷ್ಟ. ಇದ್ದ ಎಮ್ಮೆಯನ್ನು ನೋಡಿಕೊಂಡು ಕಾಲ ಹಾಕುವುದೇ ಒಂದು ದೊಡ್ಡ ಕೆಲಸ. ಎಡಿಯೂರಪ್ಪನ ನಾನೂರಕ್ಕೆ ಸಿದ್ದರಾಮಯ್ಯನ ಇನ್ನೂರು ಸೇರಿ ಒಟ್ಟು ಆರ‍್ನೂರು ಬರುವುದರಿಂದ ಜೀವನವೂ ತಕ್ಕ ಮಟ್ಟಿಗೆ ಸಲೀಸು.
ಲೈಟ್ ಬಿಲ್ ಕಲೆಕ್ಟರ್ ಲೋಕೇಶ ಪ್ರತೀ ತಿಂಗಳು ಬೋರಜ್ಜಿಯ ಮನೆಯ ಕಡೆಗೆ ಬಂದಾಗ ಸೀಬೇಹಣ್ಣು ಕಂಡರೆ ತಪ್ಪದೇ ಬಂದು ಒಂದೆರೆಡು ಹಣ್ಣು ತಿಂದು ಕವರಿನಲ್ಲಿ ಒಂದಷ್ಟು ಹಣ್ಣುಗಳನ್ನು ತುಂಬಿಕೊಂಡು ಹೋಗುವನು. ಪ್ರತೀಬಾರಿ ಸೀಬೆ ಹಣ್ಣು ಒಯ್ಯುವಾಗಲೂ ಕೃತಜ್ಞತೆಗೆ ಎಂಬಂತೆ ಬೋರಜ್ಜಿಗೆ ಈ ‘ಬ್ಯುಸಿನೆಸ್ಸು ಐಡಿಯ’ ಕೊಡಲು ಮರೆಯುತ್ತಿರಲಿಲ್ಲ – “ಅಜ್ಜಿ, ಸಂಜೆ ಹೊತ್ತು ಹೈವೇ ಪಕ್ಕ ಒಂದೈವತ್ತು ಹಣ್ಣು ಇಟ್ಕಂಡು ಕುತ್ಕೊ. ಹತ್ತು ರುಪಾಯಿಗೆ ಎರಡು ಅಂದರೂ ಅರಾಮಾಗಿ ತಗಳ್ತಾರೆ ಜನ. ಹಿಂಗ್ ಬಿದ್ದು ವೇಸ್ಟ್ ಆಗೋದೂ ತಪ್ಪುತ್ತೆ, ನಿನಗೂ ಖರ್ಚಿಗೆ ಕಾಸಾಗುತ್ತೆ”.

ಆರಂಭದಲ್ಲಿ ಇದು ಬೋರಜ್ಜಿಗೆ ಹುಡುಗಾಟ ಅನ್ನಿಸುತ್ತಿತ್ತು. ಲೋಕೇಶನ ಸಲಹೆಯನ್ನು ಪದೇ ಪದೇ ಕೇಳಿದ ಮೇಲೂ, ಆನಾಡಿ ಹಣ್ಣುಗಳು ಬಿದ್ದು ಹಾಳಾಗುವುದನ್ನು ನೋಡಿಕೊಂಡು ಸುಮ್ಮನಿರಲು ಸಾಧ್ಯವಾಗಲಿಲ್ಲ. ಕಡೆಗೊಂದು ದಿನ ಅಜ್ಜಿ ತೀರ್ಮಾನ ಮಾಡೇ ಬಿಟ್ಟಿತು. ಸೂರ್ಯ ಇಳಿಯುವ ಹೊತ್ತಿಗೆ ಬುಟ್ಟಿಯಲ್ಲಿ ಇಪ್ಪತ್ತು-ಮೂವತ್ತು ಆರಿಸಿದ ಸೀಬೆಕಾಯಿಗಳನ್ನು ತುಂಬಿಕೊಂಡು ಹೋಗಿ ರಸ್ತೆ ಪಕ್ಕ ಕೂರುತ್ತಿತ್ತು. ಪ್ರಾರಂಭದಲ್ಲಿ ಒಂದು ರೀತಿಯಲ್ಲಿ ಮುಜುಗರವಾದರೂ ಆನಂತರದಲ್ಲಿ ನಿಧಾನವಾಗಿ ಅಭ್ಯಾಸವಾಗಿ ಹೋಯಿತು. ಹತ್ತು ರೂಪಾಯಿಗೆ ಎರಡು, ಕೆಲವೊಮ್ಮೆ ಮೂರು, ಕೆಲವೊಮ್ಮೆ ಐದರವರೆಗೂ ಮಾರುತ್ತಿತ್ತು. ಒಂದು ವೇಳೆ ವ್ಯಾಪಾರವಾಗದೇ ಉಳಿದರೆ ದಾರಿಯಲ್ಲಿ ಸಿಕ್ಕವರಿಗೆ ಉಚಿತವಾಗಿಯೂ ಕೊಟ್ಟು ಬರುತ್ತಿತ್ತು. ಲೋಕೇಶನ ಈ ಬ್ಯುಸಿನೆಸ್ಸು ಐಡಿಯಾದಿಂದ ಬೋರಜ್ಜಿಗೆ ವರಮಾನ ಬಂದಿದ್ದಕ್ಕಿಂತ ಹೆಚ್ಚಾಗಿ ಕಾಲ ಕಳೆಯಲು ಒಂದು ಒಳ್ಳೆಯ ದಾರಿ ಸಿಕ್ಕಂತಾಗಿತ್ತು.

ಇವತ್ತು ದೀಪಾವಳಿಯಾಗಿದ್ದರಿಂದ ಬೇಗ ವ್ಯಾಪಾರ ಮುಗಿಸಿ ಮನೆಗೆ ಬಂದು ಹಬ್ಬ ಮಾಡುವ ಸಲುವಾಗಿ ಬೆಳಿಗ್ಗೆ ಹತ್ತು ಹನ್ನೊಂದು ಗಂಟೆಗೇ ಬಂದು ಕೂತಿತ್ತು. ಮಧ್ಯಾಹ್ನ ಎರಡು ಗಂಟೆಯಾದರೂ ವ್ಯಾಪಾರವಿಲ್ಲ! ವಾಹನಗಳಂತೂ ರಸ್ತೆ ತುಂಬ ಹೋಗುತ್ತಿವೆ; ಆದರೆ ನಿಲ್ಲಿಸುವವರು ಯಾರೂ ಇಲ್ಲ. ‘ಇನ್ನೊಂದು ಅರ್ಧ ಗಂಟೆ ನೋಡಿ ಹೋಗನ’ ಎಂದು ತೀರ್ಮಾನಿಸಿ ಬೋರಜ್ಜಿ ಎದ್ದು ಬಂದು ರಸ್ತೆಯ ಬುಡಕ್ಕೇ ನಿಂತು ಕೈಯಾಡಿಸಲು ಶುರು ಮಾಡಿತ್ತು. ಕೈಯಾಡಿಸಲು ಶುರು ಮಾಡಿ ಸರಿಯಾಗಿ ಅರ್ಧಗಂಟೆಗೆ ಒಟ್ಟಿಗೆ ಬಂದ ಮೂರು ಬೈಕುಗಳು ಬೋರಜ್ಜಿಯನ್ನು ಗಮನಿಸಿ ಹತ್ತಿರ ಬಂದು ನಿಂತವು. ವ್ಯಾಪಾರ ಶುರು ಆಯಿತು. ‘ಹತ್ತು ರೂಪಾಯಿಗೆ ಐದು ಮಾಡಿ ಕೊಡ್ತಿನಿ ತಗಳ್ರಪ್ಪ’ ಅಂತು ಅಜ್ಜಿ. ಇದ್ದ ಒಟ್ಟು ಆರು ಜನರಿಂದ ಮೂವತ್ತು ರೂಪಾಯಿಯ ವ್ಯಾಪಾರ ಆಯಿತು. ವ್ಯಾಪಾರ ಮುಗಿಸಿ ಹೊರಡುವ ಮುನ್ನ ಸೀಬೇ ಹಣ್ಣಿನ ವ್ಯಾಪಾರದ ‘ಮೆಮೊರಿ’ಗಾಗಿ ಬಂದವರು ಸೆಲ್ಫಿಗಳನ್ನು ತೆಗೆಯಲು ಶುರು ಮಾಡಿದರು.

ಹಣ್ಣುಗಳನ್ನು ಕೈಯಲ್ಲಿ ಇಟ್ಟುಕೊಂಡು, ಬಾಯಲ್ಲಿ ಇಟ್ಟುಕೊಂಡು, ತಲೆ ಮೇಲೆ ಹೊತ್ತುಕೊಂಡು!, ಕೈಗಳನ್ನು ತಿರುಗಿಸಿ, ಮುಖವನ್ನು ತಿರುಗಿಸಿ ಇನ್ನೂ ವಿಧವಿಧವಾದ ಭಂಗಿಗಳು ನಡೆದೇ ಇದ್ದವು. ಇವರ ಅವತಾರಗಳನ್ನು ನೋಡಿಕೊಂಡು ನಗುತ್ತಿದ್ದ ಬೋರಜ್ಜಿಯ ಜೊತೆಗೂ ಕೆಲವು ಸೆಲ್ಫಿಗಳಾದವು – “ಸೆಲ್ಪಿ ವಿತ್ ಸ್ಮೈಲಿಂಗ್ ಏಂಜೆಲ್” ಎಂದು! ಬಂದವರ ಗುಂಪಿನಲ್ಲಿದ್ದ ಹುಡುಗಿಯೊಬ್ಬಳು ಬುಟ್ಟಿಯನ್ನೇ ಎತ್ತಿಕೊಂಡು ತಲೆಯ ಮೇಲೆ ಮತ್ತು ಕಂಕುಳಲ್ಲಿ ಇಟ್ಟುಕೊಂಡು ಪೋಟೋ ತೆಗಿಸಿಕೊಂಡಳು. ಹಾಗೆಯೇ ಮುಂದುವರೆದು ಸರ್ಕಾರದವರ ಸೇತುವೆಯ ಮೇಲೆ ಹತ್ತಿ ನಿಂತು ದೇಹವನ್ನು ಬಳುಕಿಸುತ್ತಾ ವಿವಿಧ ಭಂಗಿಗಳಲ್ಲಿ ಫೋಟೋ ತೆಗಿಸಿಕೊಳ್ಳುವುದರಲ್ಲಿ ಮಗ್ನಳಾಗಿದ್ದಳು.

ಅದೇ ಸಮಯಕ್ಕೆ ರಸ್ತೆಯಲ್ಲಿ ಬಂದ ಲಾರಿಯೊಂದು ನಿದ್ದೆಯಲ್ಲಿ ಭಯಬಿದ್ದು ಒಮ್ಮೆಲೇ ಎಚ್ಚರಗೊಂಡು ಜೋರಾಗಿ ಚೀರುವವರಂತೆ, ರಸ್ತೆ ಪಕ್ಕದಲ್ಲಿ ಸಾಲುಗಟ್ಟಿ ನಿಂತಿದ್ದ ಬೈಕುಗಳನ್ನು ಕಂಡು ಜೋರಾಗಿ ಹಾರನ್ನು ಮಾಡಿಬಿಟ್ಟಿತು. ಇದ್ದಕ್ಕಿದ್ದಂತೆ ಬಂದ ಸದ್ದಿಗೆ ಬೆಚ್ಚಿದಂತಾಗಿ ಸೇತುವೆ ಮೇಲಿದ್ದ ಹುಡುಗಿಯು ಆಯತಪ್ಪಿ ಸೇತುವೆಯ ಹಿಂಭಾಗದಲ್ಲಿದ್ದ ಗುಂಡಿಯ ಒಳಕ್ಕೆ ಬುಟ್ಟಿಯ ಸಮೇತ ಬಿದ್ದುಬಟ್ಟಳು. ನಿನ್ನೆ ಮೊನ್ನೆ ಬಿದ್ದಿದ್ದ ಮಳೆಯಿಂದಾಗಿ ಗುಂಡಿಯೊಳಗೆ ನಿಂತಿದ್ದ ಸ್ವಲ್ಪ ನೀರಿನಲ್ಲಿ ಹುಡುಗಿ ಕೆಸರಾಗಿ ಹೋದಳು. ಬುಟ್ಟಿ ಮುರಿದು ಸೀಬೆಹಣ್ಣುಗಳೂ ಕೊಳಕಾದವು. ಉಳಿದವರು ಹುಡುಗಿಯನ್ನು ನಿಧಾನವಾಗಿ ವಿಡಿಯೋ ಸಮೇತ ಎತ್ತಿದರು. ಚೇಷ್ಟೆಯೂ ಆಯಿತು. ಹುಡುಗನೊಬ್ಬ ನಿಧಾನವಾಗಿ ಮುರಿದು ಹೋಗಿದ್ದ ಬುಟ್ಟಿಯನ್ನು ತೆಗೆದುಕೊಂಡು ಬಂದ. ಬೋರಜ್ಜಿ ಬುಟ್ಟಿಯನ್ನು ನೋಡಿ ಮಂಕಾಗಿ ಹೋಯಿತು. ಕೆಸರಾಗಿದ್ದ ಹುಡುಗಿ “ನಾನು ಬೇಗ ಫ್ರೆಶ್ ಅಪ್ ಆಗಬೇಕು” ಎಂದು ಒಂದೇ ಸಮ ಹಠ ಮಾಡತೊಡಗಿದ್ದಳು.

ಹುಡುಗನೊಬ್ಬ ಅಜ್ಜಿಯ ಬಳಿ ಬಂದು “ಸಾರಿ ಅಜ್ಜಿ. ಬೇಜಾರಾಗ್ಬೇಡಿ. ಹೊಸ ಬುಟ್ಟಿ ತಗೊಳಿ ಪ್ಲೀಸ್” ಎಂದು ಐದು ನೂರು ತೆಗೆದು ಅಜ್ಜಿಯ ಕೈಗಿಟ್ಟನು. ಉಳಿದವರೂ ‘ಸಾರಿ’ ಸೇರಿಸಿದರು. ಪುಣ್ಯಕ್ಕೆ ಸಾರಿಯ ‘ಮೆಮೊರಿ’ಗಾಗಿ ಮತ್ತೊಂದು ಸೆಲ್ಫಿ ತೆಗೆದುಕೊಳ್ಳುವ ಗೋಜಿಗೆ ಹೋಗದೆ ಬೈಕು ಹತ್ತಿ ಹೊರಟುಬಿಟ್ಟರು.

ಬೋರಜ್ಜಿಗೆ ತನ್ನ ತಿಳಿವಳಿಕೆ ಮತ್ತು ಅನುಭವದ ಆಧಾರದಲ್ಲಿ ಈ ಘಟನೆಯನ್ನು ವಿಶ್ಲೇಷಿಸಲು ಸಾಧ್ಯವಾಗಲೇ ಇಲ್ಲ. ಎಮ್ಮೆ ಅಟ್ಟಿಕೊಂಡು ಮನೆಗೆ ಬಂದು ಹಬ್ಬ ಸುರು ಮಾಡಿತು. ಸಗಣಿ ಸಾರಿಸಿ, ಪೂಜೆ ಮುಗಿಸಿ ಎಡೆಗೆ ಮಾಡಿದ್ದ ಪಾಯಸ ಹಾಕಿಕೊಂಡು ಊಟಕ್ಕೆ ಕೂತಾಗ ಸಂಜೆ ಐದು ಗಂಟೆಯಾಗಿತ್ತು. ಒಂದೆರೆಡು ತುತ್ತು ತಿನ್ನುವಷ್ಟರಲ್ಲಿ ಬೋರಜ್ಜಿಗೆ ಊಟ ಸಾಕೆನಿಸತೊಡಗಿತು. ಮತ್ತೊಂದು ತುತ್ತು ಬಲವಂತದಿಂದ ಗಂಟಲಿಗೆ ಇಳಿಸಲು ಹೋದಾಗ ವಾಕರಿಕೆ ಬಂದಂತೆ ಆಯಿತು. ತಟ್ಟೆಯಲ್ಲಿದ್ದ ಊಟವನ್ನು ಮುಸುರೆಗೆ ಹಾಕಿ ಕೈ ತೊಳೆದುಕೊಂಡು, ಮುಸುರೆ ಬಕೇಟು ಎತ್ತಿಕೊಂಡು ಎಮ್ಮೆಗೆ ಇಡಲು ಕೊಟ್ಟಿಗೆ ಕಡೆಗೆ ಹೊರಟಿತು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಶೂಟ್ ಮಾಡಿಕೊಂಡು ಪ್ರಾಣ ಬಿಟ್ಟ ಕಾನ್ಫಿಡೆಂಟ್ ಗ್ರೂಪ್ ಸಂಸ್ಥಾಪಕ ಸಿ.ಜೆ. ರಾಯ್: ಐಟಿ ದಾಳಿ ಒತ್ತಡದಿಂದ ಆತ್ಮಹತ್ಯೆ ಶಂಕೆ

ಬೆಂಗಳೂರು: ಖ್ಯಾತ ರಿಯಲ್ ಎಸ್ಟೇಟ್ ಉದ್ಯಮಿ, ಕಾನ್ಫಿಡೆಂಟ್ ಗ್ರೂಪ್ (Confident Group) ಅಧ್ಯಕ್ಷ ಡಾ. ಸಿ.ಜೆ. ರಾಯ್ ಅವರು ಶುಕ್ರವಾರ ಬೆಂಗಳೂರಿನ ತಮ್ಮ ಕಚೇರಿಯಲ್ಲಿ ಗನ್ ನಿಂದ ಶೂಟ್ ಮಾಡಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.  ಕೇರಳ...

ಕಾಂಗ್ರೆಸ್ ಆಳ್ವಿಕೆಯಲ್ಲಿ ನುಸುಳಲುಕೋರರು ಬಹುಸಂಖ್ಯಾತರಾದರು; ನುಸುಳುಕೋರರಿಂದ ಅಸ್ಸಾಂ ರಕ್ಷಿಸಲು ಬಿಜೆಪಿಗೆ ಮತ ಹಾಕಿ: ಅಮಿತ್ ಶಾ

ಧೇಮಾಜಿ (ಅಸ್ಸಾಂ): ಕಾಂಗ್ರೆಸ್ ಆಳ್ವಿಕೆಯಲ್ಲಿ ಅಸ್ಸಾಂನ ಜನಸಂಖ್ಯಾಶಾಸ್ತ್ರ ಬದಲಾಗಿದೆ ಎಂದು ಹೇಳಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ , ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ನೇತೃತ್ವದ ಸರ್ಕಾರ ಈ ಪ್ರವೃತ್ತಿಯನ್ನು...

ಕೊಲ್ಕತ್ತಾ ಅಗ್ನಿ ಅವಘಡ| ಈವರೆಗೆ ವಾವ್ ಮೊಮೋ ಕಂಪನಿ ಗೋದಾಮು ಸೇರಿದಂತೆ ಇತರೆಡೆ 21 ಜನರು ಸಾವನ್ನಪ್ಪಿರುವ ಮಾಹಿತಿ ಲಭ್ಯ  

ಜನವರಿ 26 ರ ಮುಂಜಾನೆ ಕೋಲ್ಕತ್ತಾದ ಆನಂದಪುರ ಪ್ರದೇಶದಲ್ಲಿ ಸಂಭವಿಸಿದ ಭೀಕರ ಬೆಂಕಿ ಅಪಘಾತದಲ್ಲಿ ಸಾವನ್ನಪ್ಪಿದವರ ಸಂಖ್ಯೆ ಗುರುವಾರ 21 ಕ್ಕೆ ಏರಿದ್ದು, 28 ಜನರು ಇನ್ನೂ ನಾಪತ್ತೆಯಾಗಿದ್ದಾರೆ.  ಬೆಂಕಿಯ ಅವಘಡದಲ್ಲಿ ಎರಡು ಗೋದಾಮುಗಳು...

ಮುಟ್ಟಿನ ಆರೋಗ್ಯ ಮೂಲಭೂತ ಹಕ್ಕು, ಬದುಕುವ ಹಕ್ಕಿನ ಭಾಗ : ಸುಪ್ರೀಂ ಕೋರ್ಟ್

ಮುಟ್ಟಿನ ಆರೋಗ್ಯ ಸಂವಿಧಾನದ 21ನೇ ವಿಧಿಯಡಿ ಖಾತ್ರಿಪಡಿಸಿದ ಮೂಲಭೂತ ಹಕ್ಕು, ಬದುಕುವ ಹಕ್ಕಿನ ಭಾಗ ಎಂದು ಸುಪ್ರೀಂ ಕೋರ್ಟ್ ಶುಕ್ರವಾರ (ಜ.30) ಮಹತ್ವದ ತೀರ್ಪು ನೀಡಿದೆ. ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಸರ್ಕಾರಿ,...

ಅತ್ಯಾಚಾರ ಪ್ರಕರಣದಲ್ಲಿ ಎಸ್‌ಪಿ ನಾಯಕ ಮೊಯಿದ್ ಖಾನ್ ಖುಲಾಸೆ: ಬಂಧನದ ಎರಡು ವರ್ಷಗಳ ನಂತರ ಬುಲ್ಡೋಜರ್ ನಿಂದ ಮನೆ ಕೆಡವಿದ್ದ ಯೋಗಿ ಸರ್ಕಾರ

2024 ರಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಸಮಾಜವಾದಿ ಪಕ್ಷದ ನಾಯಕ ಮೊಯಿದ್ ಖಾನ್ ಅವರನ್ನು ಉತ್ತರ ಪ್ರದೇಶದ ಅಯೋಧ್ಯೆಯ ಪೋಕ್ಸೋ ನ್ಯಾಯಾಲಯವು ಖುಲಾಸೆಗೊಳಿಸಿದೆ.  ಅಪ್ರಾಪ್ತ ಬಾಲಕಿಯ ಮೇಲೆ ನಡೆದ...

ಸಿಎಂ ಸಿದ್ದರಾಮಯ್ಯ, ಡಿಕೆಶಿ ವಿರುದ್ಧ ‘ಸ್ಕ್ಯಾಮ್ ಲಾರ್ಡ್’ ಪೋಸ್ಟ್: ಕರ್ನಾಟಕ ಬಿಜೆಪಿ ಎಕ್ಸ್ ಹ್ಯಾಂಡಲ್ ವಿರುದ್ಧ ಪ್ರಕರಣ ದಾಖಲು

ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮತ್ತು ಇತರ ಸಚಿವರನ್ನು ಗುರಿಯಾಗಿಸಿಕೊಂಡು "ಮಾನಹಾನಿಕರ" ಪೋಸ್ಟ್ ಪೋಸ್ಟ್ ಮಾಡಿದ್ದಕ್ಕಾಗಿ ಮತ್ತು ರಾಜ್ಯವನ್ನು "ಲೂಟಿ" ಮಾಡುವಲ್ಲಿ ಅವರು ಭಾಗಿಯಾಗಿದ್ದಾರೆ ಎಂದು ಆರೋಪಿಸಿ ಬಿಜೆಪಿಯ 'ಎಕ್ಸ್'...

‘ನೀವು ಮುಂದೆ ಬರಲು ಸಿದ್ಧರಿದ್ದೀರಾ, ಅಥವಾ ಟ್ವೀಟ್ ಮಾಡುತ್ತಲೇ ಇರುತ್ತೀರಾ?’; ಮೋಹನ್ ದಾಸ್ ಪೈಗೆ ರಾಮಲಿಂಗಾರೆಡ್ಡಿ ಓಪನ್ ಚಾಲೆಂಜ್..!

ಬೆಂಗಳೂರಿನಲ್ಲಿ ಬಿಎಂಟಿಸಿ (BMTC) ಬಸ್‌ಗಳ ಕೊರತೆಯನ್ನು ಎತ್ತಿ, ಖಾಸಗಿ ಕಂಪನಿಗಳಿಗೆ ನಗರ ಬಸ್ ಸೇವೆಗೆ ಅವಕಾಶ ನೀಡಬೇಕು ಎಂದು ಸಲಹೆ ನೀಡಿದ್ದ, ಮೋಹನ್ ದಾಸ್ ಪೈ ಹೇಳಿಕೆಗೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ...

ಪ್ಯಾಲೆಸ್ತೀನ್ ಸಿನಿಮಾಗಳ ಪ್ರದರ್ಶನಕ್ಕೆ ಅನುಮತಿ ನಿರಾಕರಣೆ; ರಾಜ್ಯ ಸರ್ಕಾರ ಗಟ್ಟಿ ದನಿಯಲ್ಲಿ ಪ್ರತಿಭಟಿಸಬೇಕು : ನಟ ಪ್ರಕಾಶ್ ರಾಜ್

ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ಯಾಲೆಸ್ತೀನಿಯನ್ ಸಿನಿಮಾಗಳ ಪ್ರದರ್ಶನಕ್ಕೆ ಅನುಮತಿ ನಿರಾಕರಿಸಿರುವ ಕೇಂದ್ರ ಸರ್ಕಾರದ ಕ್ರಮವನ್ನು ರಾಜ್ಯ ಸರ್ಕಾರ ಗಟ್ಟಿ ದನಿಯಲ್ಲಿ ಪ್ರತಿರೋಧಿಸಬೇಕು, ಪ್ರತಿಭಟಿಸಬೇಕು ಎಂದು ನಟ ಪ್ರಕಾಶ್ ರಾಜ್ ಒತ್ತಾಯಿಸಿದರು. ಗುರುವಾರ (ಜ.29) ಸಂಜೆ...

ಗೌರಿ ಲಂಕೇಶರ ನೆರಳು ನನ್ನ ಮೇಲೆ ಬಿದ್ದಿರುವ ಕಾರಣಕ್ಕೆ ‘ಲ್ಯಾಂಡ್‍ ಲಾರ್ಡ್‌’ನಂತಹ ಸಿನಿಮಾ ಮಾಡಲು ಕೈ ಹಾಕಿದ್ದೇನೆ: ನಟ ದುನಿಯಾ ವಿಜಯ್

ಗೌರಿ ಲಂಕೇಶ್ ಹಾಗೂ ಇತರ ಹೋರಾಟಗಾರರ ನೆರಳು ನನ್ನ ಮೇಲೆ ಬಿದ್ದಿರುವ ಕಾರಣಕ್ಕೆ ನಾನು 'ಲ್ಯಾಂಡ್‍ಲಾರ್ಡ್' ನಂತಹ ಸಿನೆಮಾ ಮಾಡುವುದಕ್ಕೆ ಕೈ ಹಾಕಿದ್ದೇನೆ ಎಂದು ನಟ ದುನಿಯಾ ವಿಜಯ್ ಹೇಳಿದರು. ಗುರುವಾರ (ಜ.29) ಬೆಂಗಳೂರಿನ...

ಜಾತಿ ತಾರತಮ್ಯ ತಡೆಗಟ್ಟುವ ಯುಜಿಸಿಯ ಹೊಸ ನಿಯಮಕ್ಕೆ ಸುಪ್ರೀಂ ಕೋರ್ಟ್ ತಡೆ

ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ಆಧಾರಿತ ತಾರತಮ್ಯವನ್ನು ತಡೆಗಟ್ಟಲು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಿಶ್ವವಿದ್ಯಾಲಯ ಅನುದಾನ ಆಯೋಗದ (ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಸಮಾನತೆಯ ಪ್ರಚಾರ) ನಿಯಮಗಳು, 2026ಕ್ಕೆ ಸುಪ್ರೀಂ ಕೋರ್ಟ್ ಗುರುವಾರ...