ಎರಡು ವಾರಗಳ ಹಿಂದೆ ಕೇರಳದ ತ್ರಿಶೂರ್ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿಗಳಾದ ಜಾನಕಿ ಓಂಕುಮಾರ್ ಮತ್ತು ನವೀನ್ ರಜಾಕ್ ಅವರು ‘ರಾಸ್‌ಪುಟಿನ್’ ಸಂಗೀತಕ್ಕೆ ಹೆಜ್ಜೆ ಹಾಕಿದ 30 ಸೆಕೆಂಡುಗಳ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದರು. ಆದರೆ ಬಲಪಂಥೀಯರು ಅದನ್ನು ‘ಡ್ಯಾನ್ಸ್ ಜಿಹಾದ್’ ಎಂದು ದ್ವೇಷ ಹರಡಲು ಪ್ರಯತ್ನಿಸಿ ವಿದ್ಯಾರ್ಥಿಗಳಿಬ್ಬರನ್ನು ಕೇರಳದಾದ್ಯಂತ ಜನಪ್ರಿಯರನ್ನಾಗಿಸಿದ್ದಾರೆ!.
ಇದನ್ನೂ ಓದಿ: ಕೇರಳದ ಈ ಅಭ್ಯರ್ಥಿ ಗೆದ್ದರೆ ‘ವಿಶ್ವಕಪ್ ಫುಟ್ಬಾಲ್’ ನೋಡಲು ಕರೆದೊಯ್ಯುತ್ತಾರೆ!
ಬಲಪಂಥಿಯರ ಟೀಕೆ ವ್ಯಕ್ತವಾಗುತ್ತಿದ್ದಂತೆ ಕೇರಳದಾದ್ಯಂತ ಅವರ ವಿರುದ್ದ ವ್ಯಾಪಕ ಆಕ್ರೋಶಗಳೆದ್ದಿದ್ದು, ವಿದ್ಯಾರ್ಥಿ ಸಂಘಟನೆಗಳು, ಕೋಮುವಾದ ಮತ್ತು ಜನಾಂಗಿಯವಾದದ ವಿರುದ್ದವಾಗಿ ‘ರಾಸ್‌ಪುಟಿನ್’ ಸಂಗೀತಕ್ಕೆ ಹೆಜ್ಜೆ ಹಾಕಿ ಪ್ರತಿರೋಧಿಸುವಂತೆ ಕೋರಿ ಸ್ಪರ್ಧೆ ಏರ್ಪಡಿಸಿದ್ದಾರೆ. ಇದಕ್ಕೆ ರಾಜ್ಯದಾದ್ಯಂತ ಯುವ ಜನರು ವ್ಯಾಪಕವಾಗಿ ಸ್ಪಂದಿಸಿದ್ದು, ವಿದ್ಯಾರ್ಥಿಗಳಿಬ್ಬರಿಗೆ ಡ್ಯಾನ್ ಮೂಲಕ ಬೆಂಬಲ ವ್ಯಕ್ತಪಡಿಸಿದ್ದಾರೆ.
ಅಷ್ಟೇ ಅಲ್ಲದೆ ಕೇರಳ ಸರ್ಕಾರ ಕೂಡಾ ಇದಕ್ಕೆ ಬೆಂಬಲ ವ್ಯಕ್ತಪಡಿಸಿದೆ. ಕೇರಳದ ಆರೋಗ್ಯ ಇಲಾಖೆ ‘ರಾಸ್‌ಪುಟಿನ್’ ಸಂಗೀತಕ್ಕೆ ಅನಿಮೇಷನ್ ವಿಡಿಯೋ ತಯಾರಿಸಿ ಕೊರೊನಾ ವಿರುದ್ದ ಹೋರಾಡಲು ಲಸಿಕೆ ಪಡೆಯುವಂತೆ ಕೇಳಿಕೊಂಡಿದೆ. ಜೊತೆಗೆ ಹಾಲು ಉತ್ಪಾದಕರ ಸಂಘವಾದ ‘ಮಿಲ್ಮಾ’ ‘ನೃತ್ಯ ಮಾಡುತ್ತಲೇ ಇರಿ’ ಎಂದು ವಿದ್ಯಾರ್ಥಿಗಳ ಪರವಾಗಿ ಜಾಹಿರಾತನ್ನೂ ನೀಡಿ ಕೋಮುವಾದಕ್ಕೆ ವಿರುದ್ದವಾಗಿ ಪ್ರಬಲ ಪ್ರತಿರೋಧ ವ್ಯಕ್ತಪಡಿಸಿದೆ.
ಇದನ್ನೂ ಓದಿ: ಕೇರಳದಲ್ಲಿನ ಏಕೈಕ ಬಿಜೆಪಿ ಖಾತೆಯನ್ನೂ ಕ್ಲೋಸ್ ಮಾಡುತ್ತೇವೆ: ಪಿಣರಾಯಿ ವಿಜಯನ್



??????