Homeಮುಖಪುಟಕೇರಳದ ಈ ಅಭ್ಯರ್ಥಿ ಗೆದ್ದರೆ ‘ವಿಶ್ವಕಪ್‌ ಫುಟ್ಬಾಲ್‌’ ನೋಡಲು ಕರೆದೊಯ್ಯುತ್ತಾರೆ!

ಕೇರಳದ ಈ ಅಭ್ಯರ್ಥಿ ಗೆದ್ದರೆ ‘ವಿಶ್ವಕಪ್‌ ಫುಟ್ಬಾಲ್‌’ ನೋಡಲು ಕರೆದೊಯ್ಯುತ್ತಾರೆ!

- Advertisement -
- Advertisement -

‘ಗೆಲ್ಲಲು ನನಗೆ ಸಹಾಯ ಮಾಡಿ, 2022 ಕತಾರ್ ಫಿಫಾ ವಿಶ್ವಕಪ್‌ಗೆ ಟಿಕೆಟ್ ಪಡೆಯಿರಿ’ ಇದು ಕೇರಳ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸುತ್ತಿರುವ ಅಭ್ಯರ್ಥಿಯೊಬ್ಬರ ಪ್ರಣಾಳಿಕೆ. ರಾಜ್ಯದ ಕುಂಡೊಟ್ಟಿ ಕ್ಷೇತ್ರದಲ್ಲಿ ಸ್ಪರ್ಧಿಸುತ್ತಿರುವ ಎಡಪಕ್ಷ ಬೆಂಬಲಿತ ಪಕ್ಷೇತರ ಅಭ್ಯರ್ಥಿ‌ ಕಟ್ಟಪ್ಪುರುತಿ ಸುಲೈಮಾನ್‌ ಹಾಜಿ ಅವರು ಮೇಲಿನ ಭರವಸೆಯನ್ನು ಯುವಕರಿಗೆ ನೀಡಿದ್ದಾರೆ.

ಕೇರಳದಲ್ಲಿ ಫುಟ್ಬಾಲ್ ಜನಪ್ರಿಯ ಕ್ರೀಡೆಯಾಗಿದೆ. ಯುವಕರನ್ನು ಸೆಳೆಯುವ ಉದ್ದೇಶದಿಂದ ಸುಲೈಮಾನ್‌ ಹಾಜಿ ಈ ಭರವಸೆ ನೀಡಿದ್ದಾರೆ.

“ಒಂದು ವೇಳೆ ನಾನು ಚುನಾಯಿತರಾದರೆ, ‘ಶಾಸಕ ಟ್ರೋಫಿ’ ಪಂದ್ಯಾವಳಿಯನ್ನು ನಡೆಸುತ್ತೇನೆ. ಈ ಪಂದ್ಯಾವಳಿಯಲ್ಲಿ ಕ್ಷೇತ್ರದ ವ್ಯಾಪ್ತಿಗೆ ಬರುವ ಆರು ಪಂಚಾಯಿತಿಗಳು ಮತ್ತು ಒಂದು ಪುರಸಭೆಯಲ್ಲಿನ ಫುಟ್ಬಾಲ್ ಕ್ಲಬ್‌ಗಳಿಗೆ ಭಾಗವಹಿಸುವ ಅವಕಾಶವಿರುತ್ತದೆ. ವಿಜೇತ 11 ಸದಸ್ಯರ ತಂಡವು 2022 ರ ಫಿಫಾ ವಿಶ್ವಕಪ್‌ನಲ್ಲಿ ಕತಾರ್‌ಗೆ ತೆರಳಲು ಮತ್ತು ಪಂದ್ಯವನ್ನು ವೀಕ್ಷಿಸಲು ಅವಕಾಶವನ್ನು ಪಡೆಯಲಿದೆ” ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಕೇರಳದಲ್ಲಿನ ಏಕೈಕ ಬಿಜೆಪಿ ಖಾತೆಯನ್ನೂ ಕ್ಲೋಸ್ ಮಾಡುತ್ತೇವೆ: ಪಿಣರಾಯಿ ವಿಜಯನ್

ಈ ಪ್ರವಾಸದ ಎಲ್ಲಾ ವೆಚ್ಚವನ್ನು ಭರಿಸುವುದಾಗಿ ಸುಲೈಮಾನ್‌ ಹಾಜಿ ಹೇಳಿದ್ದಾರೆ. ಅವರು ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ, ಸರ್ಕಾರಿ ಕಚೇರಿಗಳನ್ನು ಒಂದೇ ಸೂರಿನಡಿ ತರಲು ಕ್ಷೇತ್ರದಲ್ಲಿ ಮಿನಿ ಸಿವಿಲ್ ಸ್ಟೇಷನ್ ಸ್ಥಾಪಿಸುವುದಾಗಿ ಹೇಳಿದ್ದಾರೆ.

ತರಕಾರಿ ಮಾರುಕಟ್ಟೆ, ಹೈಟೆಕ್ ಆಸ್ಪತ್ರೆಗಳು, ಕ್ಯಾನ್ಸರ್ ಮತ್ತು ಡಯಾಲಿಸಿಸ್ ಕೇಂದ್ರಗಳು, ಕ್ರೀಡಾಂಗಣಗಳು ಮತ್ತು ಮಕ್ಕಳ ಉದ್ಯಾನವನಗಳನ್ನು ನಿರ್ಮಿಸುವುದಾಗಿ ಅವರು ತನ್ನ ಪ್ರಣಾಳಿಕೆಯಲ್ಲಿ ತಿಳಿಸಿದ್ದಾರೆ. “ನಾನು ಕೊಂಡೊಟ್ಟಿಯ ಸಮಗ್ರ ಅಭಿವೃದ್ಧಿಯನ್ನು ಖಚಿತಪಡಿಸಿಕೊಳ್ಳಲು ಬಯಸುತ್ತೇನೆ. ರಸ್ತೆ ಸ್ಥಿತಿ ಮತ್ತು ಕುಡಿಯುವ ನೀರಿನ ಲಭ್ಯತೆಯಂತಹ ಸಮಸ್ಯೆಗಳನ್ನು ಸಹ ಪರಿಹರಿಸಲಾಗುವುದು ”ಎಂದು ಅವರು ಹೇಳಿದ್ದಾರೆ.

ಸುಲೈಮಾನ್‌ ಹಾಜಿ ಅವರ ಪ್ರಣಾಳಿಕೆಯ ಹೊರತಾಗಿಯು ಕುಂಡೊಟ್ಟಿ ಮುಸ್ಲಿಂ ಲೀಗ್‌ ಭದ್ರಕೋಟೆಯಾಗಿದ್ದು, ಅವರು ಗೆಲ್ಲುವುದು ಕಠಿಣ ಕಾರ್ಯವಾಗಿದೆ ಎಂದು ರಾಜಕೀಯ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.

ಅಲ್ಲಿ ಪ್ರಸ್ತುತ ಶಾಸಕರಾಗಿರುವ ಟಿ.ವಿ. ಇಬ್ರಾಹಿಂ ಮತ್ತೇ ಅದೇ ಕ್ಷೇತ್ರದಲ್ಲಿ ಸ್ಪರ್ಧಿಸುತ್ತಿದ್ದು, ಕೆಲವು ವಾರಗಳ ಹಿಂದೆಯೆ ನಾಮಪತ್ರ ಸಲ್ಲಿಸಿದ್ದಾರೆ. ಅವರು ಕೂಡ ಕ್ಷೇತ್ರದಲ್ಲಿ ಫುಟ್ಬಾಲ್ ಪಂದ್ಯಾವಳಿ ನಡೆಸುವುದು ಸೇರಿದಂತೆ ಹಲವು ವಿಷಯಗಳನ್ನು ಭರವಸೆ ನೀಡಿದ್ದಾರೆ.

ಇದನ್ನೂ ಓದಿ: ಕೇರಳ: ಆಸ್ಪತ್ರೆಗೆ ತೆರಳುತ್ತಿದ್ದ ಗರ್ಭಿಣಿಯ ಕಾರನ್ನು ತಡೆದು ಪತಿಯ ಮೇಲೆ ಹಲ್ಲೆ ನಡೆಸಿದ ಬಿಜೆಪಿ ಕಾರ್ಯಕರ್ತರು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಲೋಕಸಭೆ ಚುನಾವಣೆ: ಇಂದು ಮೊದಲ ಹಂತದ ಮತದಾನ

0
ಬಹು ನಿರೀಕ್ಷಿತ ಲೋಕಸಭೆ ಚುನಾವಣೆಯ ಮೊದಲ ಹಂತದ ಮತದಾನ ಇಂದು (ಏ.19) ನಡೆಯಲಿದೆ. ದೇಶದ 17 ರಾಜ್ಯಗಳು ಮತ್ತು 4 ಕೇಂದ್ರಾಡಳಿತ ಪ್ರದೇಶಗಳ 16.63 ಕೋಟಿ ಮತದಾರರು ತಮ್ಮ ಹಕ್ಕು ಚಲಾಯಿಸಲಿದ್ದಾರೆ. ದೇಶದ 107...