ಪಿಪಿಇ ಕಿಟ್‌ಗಳು, ಮಾಸ್ಕ್‌ಗಳು, ಹೆಚ್ಚಿನ ಮಾನವ ಶಕ್ತಿ ಮತ್ತು ಸಾಕಷ್ಟು ಸುರಕ್ಷತೆಗೆ ಒತ್ತಾಯಿಸಿ ಹೈದರಾಬಾದ್‌ನ ಗಾಂಧಿ ವೈದ್ಯಕೀಯ ಕಾಲೇಜಿನ ಕಿರಿಯ ವೈದ್ಯರು ನಡೆಸುತ್ತಿರುವ ಪ್ರತಿಭಟನೆ ಎರಡನೇ ದಿನಕ್ಕೆ ಕಾಲಿಟ್ಟಿದೆ.
ಮಂಗಳವಾರ ರಾತ್ರಿ ಕೊರೊನಾ ರೋಗಿಯೊಬ್ಬರ ಸಂಬಂಧಿಕರು ಇಬ್ಬರು ವೈದ್ಯರ ಮೇಲೆ ಹಲ್ಲೆ ನಡೆಸಿದಾಗಿನಿಂದ ಪ್ರತಿಭಟನೆ ಭುಗಿಲೆದ್ದಿದ್ದು ಮುಖ್ಯಮಂತ್ರಿ ಮತ್ತು ಆರೋಗ್ಯ ಸಚಿವರು ತಮ್ಮ ಬೇಡಿಕೆಗಳನ್ನು ಈಡೇರಿಸುವವರೆಗೂ ಪ್ರತಿಭಟನೆ ನಿಲ್ಲುವುದಿಲ್ಲ ಎಂದು ವೈದ್ಯರು ಪಟ್ಟು ಹಿಡಿದಿದ್ದಾರೆ.
Doctors in Hyderabad's Gandhi Hospital push their way past police barricades to stage a protest outside, after one of them was attacked by the kin of a deceased #COVID19 patient last night. pic.twitter.com/OQ3E6Jgwt5
— Nitin B (@NitinBGoode) June 10, 2020
ಗಾಂಧಿ ಆಸ್ಪತ್ರೆ ತೆಲಂಗಾಣದ ಎಲ್ಲಾ ಕರೋನವೈರಸ್ ರೋಗಿಗಳಿಗೆ ಚಿಕಿತ್ಸೆ ನೀಡುವ ನೋಡಲ್ ಕೇಂದ್ರವಾಗಿದೆ. COVID-19 ಪ್ರಕರಣಗಳನ್ನು ಮಾತ್ರ ನಿಭಾಯಿಸಲು ರಾಜ್ಯ ಸರ್ಕಾರ ಆಸ್ಪತ್ರೆಯನ್ನು ಸೀಮಿತಗೊಳಿಸಿದೆ. ಇತ್ತೀಚಿನ ಸಿಎಮ್‌ಒ ಹೇಳಿಕೆಯ ಪ್ರಕಾರ, ಆಸ್ಪತ್ರೆಯಲ್ಲಿ 2,150 ರೋಗಿಗಳಿಗೆ ಚಿಕಿತ್ಸೆ ನೀಡುವ ಸೌಲಭ್ಯವಿದೆ, ಇದರಲ್ಲಿ 1,000 ಹಾಸಿಗೆಗಳು ಆಮ್ಲಜನಕ ಪೂರೈಕೆ ಸೌಲಭ್ಯವನ್ನು ಹೊಂದಿವೆ.
ಆದರೆ ವೈದ್ಯರು ಮತ್ತು ಆರೋಗ್ಯ ಸಿಬ್ಬಂದಿಯ ಕೊರತೆಯುಂಟಾಗಿದ್ದು, ಸಮರ್ಪಕ ಸುರಕ್ಷತಾ ವ್ಯವಸ್ಥೆ ಇಲ್ಲದೇ ಅಧಿಕ ಕೆಲಸದ ಒತ್ತಡ ಉಂಟಾಗುತ್ತಿದೆ ಎಂದು ವೈದ್ಯರು ಆರೋಪಿಸಿದ್ದಾರೆ. ಇಂತಹ ವೇಳೆಯೇ ವೈದ್ಯರ ಮೇಲಿನ ಹಲ್ಲೆಯಿಂದ ಪ್ರತಿಭಟನೆ ತೀವ್ರಗೊಂಡಿದೆ.
#GandhiHospital protest: 'We don't know how many of us are #COVID positive, none of us are tested'. pic.twitter.com/VJrl65LYLJ
— @CoreenaSuares (@CoreenaSuares2) June 10, 2020
ಮಂಗಳವಾರ ರಾತ್ರಿ ನಡೆದ ಘಟನೆಯ ನಂತರ, ವೈದ್ಯರ ಮೇಲೆ ಹಲ್ಲೆ ನಡೆಸಿದ ಇಬ್ಬರು ಆರೋಪಿಗಳನ್ನು ಕೂಡಲೇ ಬಂಧಿಸಲಾಗಿದೆ ಎಂದು ಹೈದರಾಬಾದ್ ನಗರ ಪೊಲೀಸರು ತಿಳಿಸಿದ್ದಾರೆ. ವೈದ್ಯಕೀಯ ಸಿಬ್ಬಂದಿ ಮೇಲೆ ಯಾವುದೇ ದಾಳಿ ನಡೆಯದಂತೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಪೊಲೀಸರು ಟ್ವೀಟ್ ಮಾಡಿದ್ದಾರೆ.
150 ಕಿರಿಯ ವೈದ್ಯರು ಪ್ರತಿಭಟನೆಯಲ್ಲಿರುವುದರಿಂದ, ದಾದಿಯರು ಹೆಚ್ಚುವರಿ ಪಾಳಿಗಳನ್ನು ಮಾಡುತ್ತಿದ್ದಾರೆ ಮತ್ತು ಪರಿಸ್ಥಿತಿಯನ್ನು ನಿರ್ವಹಿಸುತ್ತಿದ್ದಾರೆ ಎಂದು ಆಸ್ಪತ್ರೆಯ ದಾದಿಯೊಬ್ಬರು ಸದ್ಯದ ಸ್ಥಿತಿಯನ್ನು ತಿಳಿಸಿದ್ದಾರೆ.
ಇದನ್ನೂ ಓದಿ: ತಮಾಷೆಗಾಗಿ ಕೆರೆಗೆ ಕಲ್ಲೆಸೆದ ವ್ಯಕ್ತಿ: ತುಂಬಿದ ಕೆರೆ ಖಾಲಿ ಮಾಡಿ ಪರಿತಪಿಸುತ್ತಿರುವ ಜನ!


