Homeಕರ್ನಾಟಕನರಸಿಂಹ ಮೂರ್ತಿ ಬಿಡುಗಡೆಗೊಳಿಸದಿದ್ದರೆ ತೀವ್ರ ಹೋರಾಟ: ಕೆ.ಪಿ ಶ್ರೀಪಾಲ್...

ನರಸಿಂಹ ಮೂರ್ತಿ ಬಿಡುಗಡೆಗೊಳಿಸದಿದ್ದರೆ ತೀವ್ರ ಹೋರಾಟ: ಕೆ.ಪಿ ಶ್ರೀಪಾಲ್…

- Advertisement -
- Advertisement -

ಸ್ವರಾಜ್ ಇಂಡಿಯಾ ರಾಜ್ಯಕಾರ್ಯದರ್ಶಿ ಮತ್ತು ಗೌರಿ ಟ್ರಸ್ಟ್ ಕಾರ್ಯದರ್ಶಿಯಾದ ದೊಡ್ಡಿಪಾಳ್ಯ ನರಸಿಂಹಮೂರ್ತಿಯವರನ್ನು ಕೂಡಲೇ ಬಿಡುಗಡೆಗೊಳಿಸಬೇಕೆಂದು ಸ್ವರಾಜ್ ಇಂಡಿಯಾ ಶಿವಮೊಗ್ಗ ಜಿಲ್ಲಾ ವಕ್ತಾರ ಕೆ.ಪಿ.ಶ್ರೀಪಾಲ್ ಆಗ್ರಹಿಸಿದ್ದಾರೆ.

ಸ್ವರಾಜ್ ಇಂಡಿಯಾ ಶಿವಮೊಗ್ಗ ಜಿಲ್ಲಾ ಘಟಕದಿಂದ ನಡೆದ ಪತ್ರಕಾ ಗೋಷ್ಟಿಯಲ್ಲಿ ಮಾತನಾಡಿದ ಅವರು ಹೋರಾಟಗಾರರು, ಪತ್ರಕರ್ತರು ಆದ ದೊಡ್ಡಿಪಾಳ್ಯ ನರಸಿಂಹಮೂರ್ತಿಯವರ ಬಂಧನ ಖಂಡನೀಯ.. ಸುಳ್ಳು ಕೇಸಿನಲ್ಲಿ ಅವರನ್ನು ಬಂಧಿಸಿರುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

25 ವರ್ಷದ, ಈಗಾಗಲೇ ಖುಲಾಸೆಯಾಗಿರುವ ಕೇಸಿನಲ್ಲಿ ಬಂಧಿಸಿರುವುದು ಪೊಲೀಸರ ನಿರ್ಲಕ್ಷ್ಯವನ್ನು ತೋರಿಸುತ್ತದೆ. ಅವರು ನಮ್ಮ ಪಕ್ಷದ ರಾಜ್ಯ ಕಾರ್ಯದರ್ಶಿಯಾಗಿ ಕೆಲಸ ಮಾಡುತ್ತಿದ್ದಾರೆಯೇ ಹೊರತು ತಲೆಮರೆಸಿಕೊಂಡಿಲ್ಲ ಎಂಬ ಕನಿಷ್ಠ ಜ್ಞಾನ ನಿಮಗಿಲ್ಲವೇ ಎಂದು ಪ್ರಶ್ನಿಸಿದರು.

ಯಾರದೋ ಕೇಸನ್ನು ಇನ್ಯಾರದೋ ಮೇಲೆ ಹಾಕುವುದು ಸರಿಯಲ್ಲ, ಕೂಡಲೇ ಅವರ ಬಿಡುಗಡೆ ಮಾಡಬೇಕು. ಇಲ್ಲದಿದ್ದಲ್ಲಿ ಹೋರಾಟ ತೀವ್ರಗೊಳಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಪತ್ರಿಕಾ ಗೋಷ್ಠಿಯಲ್ಲಿ ಸ್ವರಾಜ್ ಇಂಡಿಯಾ ರಾಜ್ಯ ಸಮಿತಿಯ ಶಿವಾನಂದ ಕುಗ್ವೆ, ರೈತ ಸಂಘದ ವಿರೇಶ್, ಸ್ವರಾಜ್ ಇಂಡಿಯಾ ಸಾಗರ ಶಾಖೆಯ ರಮೇಶ್ ಐಗಿನ ಬೈಲು, ಶಿವಮೊಗ್ಗ ಘಟಕದ ಮಾಲತೇಶ್ ಬೊಮ್ಮನಕಟ್ಟೆ ಮತ್ತು ಮಂಜುನಾಥ ನವುಲೆ ಇದ್ದರು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ದ್ವೇಷ ಬಿತ್ತುವ, ವಿಭಜನೀಯ ಶಕ್ತಿಗಳನ್ನು ಸೋಲಿಸಲು ಒಗ್ಗಟ್ಟಾಗಬೇಕು: ಅಡ್ಮಿರಲ್ ರಾಮದಾಸ್ ಅವರ ಕೊನೆಯ ಸಂದೇಶ...

0
ಲೋಕಸಭೆ ಚುನಾವಣೆ ಹೊಸ್ತಿಲ್ಲಲ್ಲಿ ನೌಕಾಪಡೆಯ ಮಾಜಿ ಮುಖ್ಯಸ್ಥ ಅಡ್ಮಿರಲ್ ರಾಮ್‌ದಾಸ್ ಅವರ ಕೊನೆಯ ಕಾಲದ ಸಂದೇಶವನ್ನು ಅವರ ಪತ್ನಿ ಲಲಿತಾ ರಾಮದಾಸ್‌ ಸಾರ್ವಜನಿಕರ ಮುಂದಿಟ್ಟಿದ್ದು, ದ್ವೇಷಿಸುವ, ವಿಭಜನೀಯ, ಸರ್ವಾಧಿಕಾರಿಗಳನ್ನು ಸೋಲಿಸಲು ಒಗ್ಗಟ್ಟಾಗಬೇಕು ಎಂದು...