2024ರ ಜೂನ್-27 ರಂದು ‘ನಾನುಗೌರಿ.ಕಾಮ್’ ನ್ಯೂಸ್ ಪೋರ್ಟಲ್‌ನಲ್ಲಿ ‘ಪ್ಯಾರಸಿಟಮಲ್ ಸೇರಿದಂತೆ 52 ಔಷಧಿಗಳು ಗುಣಮಟ್ಟ ಪರೀಕ್ಷೆಯಲ್ಲಿ ವಿಫಲ’ ಎಂಬ ತಲೆಬರಹದ ಸುದ್ದಿಯನ್ನು ಪ್ರಕಟಿಸಲಾಗಿದ್ದು, “ಭಾರತದ ಉನ್ನತ ಔಷಧ ನಿಯಂತ್ರಣ ಸಂಸ್ಥೆ, ಸೆಂಟ್ರಲ್ ಡ್ರಗ್ಸ್ ಸ್ಟ್ಯಾಂಡರ್ಡ್ ಕಂಟ್ರೋಲ್ ಆರ್ಗನೈಸೇಶನ್ (ಸಿಡಿಎಸ್‌ಸಿಒ) ನಡೆಸಿದ ಪರೀಕ್ಷೆಯಲ್ಲಿ ಜನಪ್ರಿಯ ಔಷಧಿಗಳಾದ ಪ್ಯಾರಸಿಟಮಲ್, ಪ್ಯಾಂಟೊಪ್ರಜೋಲ್
ಮತ್ತು ಹಲವಾರು ಆಂಟಿ ಬಯೋಟಿಕ್‌ಗಳು ಒಳಗೊಂಡಂತೆ ಸುಮಾರು 50 ಔಷಧಿಗಳು ಗುಣಮಟ್ಟದ ಮಾನದಂಡಗಳನ್ನು ಪೂರೈಸಲು ವಿಫಲವಾಗಿವೆ” ಎಂದು ವರದಿ ಮಾಡಿರುತ್ತೇವೆ.
ಸದರಿ ಸುದ್ದಿಗೆ ಬಳಸಿದ ‘ಫೀಚರ್ ಇಮೇಜ್’ನಲ್ಲಿ ನಿರ್ದಿಷ್ಟವಾಗಿ ಒಂದು ಕಂಪನಿಯ (ಡೋಲೋ-650) ಹೆಸರಿದೆ. ಈ ವಿಚಾರದಲ್ಲಿ ಆಗಿರುವ ಅಚಾತುರ್ಯವು ಕಣ್ತಪ್ಪಿನಿಂದ ಆಗಿದ್ದೇ ಹೊರತು, ಯಾವುದೇ ಸಂಸ್ಥೆ, ಕಂಪನಿ ಅಥವಾ ವ್ಯಕ್ತಿಗಳ ಹೆಸರಿಗೆ ಕಳಂಕ ತರುವ ಉದ್ದೇಶ ಇರಲಿಲ್ಲ. ಬದಲಿಗೆ, ಸರ್ಕಾರಿ ಸಂಸ್ಥೆಯೊಂದು ನಡೆಸಿದ ಅಧ್ಯಯನದ ಕುರಿತು ಸಾರ್ವಜನಿಕರಿಗೆ ಜಾಗೃತಿ ಮೂಡಿಸುವುದಾಗಿರುತ್ತದೆ.
ಕಣ್ ತಪ್ಪಿನಿಂದ ತಪ್ಪು ಫೋಟೋವನ್ನು ಬಳಸಿದ್ದೆವು. ಇದರ ಹಿಂದೆ ಯಾವುದೇ ದುರುದ್ದೇಶ ಇರಲಿಲ್ಲ. ಈಗ ಸರಿಪಡಿಸಿದ್ದೇವೆ ಮತ್ತು ಆದ ತಪ್ಪಿಗೆ ವಿಷಾದ ವ್ಯಕ್ತಪಡಿಸುತ್ತಿದ್ದೇವೆ.


