Homeಮುಖಪುಟ"ರಕ್ತಸಿಕ್ತ ಕ್ರಿಮಿನಲ್‌ನನ್ನು ಆಲಂಗಿಸಿದ ಅತಿ ದೊಡ್ಡ ಪ್ರಜಾಪ್ರಭುತ್ವದ ನಾಯಕ": ಮೋದಿ-ಪುಟಿನ್ ಭೇಟಿ ಕುರಿತು ಉಕ್ರೇನ್ ಅಧ್ಯಕ್ಷ...

“ರಕ್ತಸಿಕ್ತ ಕ್ರಿಮಿನಲ್‌ನನ್ನು ಆಲಂಗಿಸಿದ ಅತಿ ದೊಡ್ಡ ಪ್ರಜಾಪ್ರಭುತ್ವದ ನಾಯಕ”: ಮೋದಿ-ಪುಟಿನ್ ಭೇಟಿ ಕುರಿತು ಉಕ್ರೇನ್ ಅಧ್ಯಕ್ಷ ಟೀಕೆ

- Advertisement -
- Advertisement -

“ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವದ ನಾಯಕ, ವಿಶ್ವದ ಅತ್ಯಂತ ರಕ್ತಸಿಕ್ತ ಕ್ರಿಮಿನಲ್‌ನನ್ನು ಆಲಂಗಿಸಿದ್ದಾರೆ” ಎಂದು ಪ್ರಧಾನಿ ನರೇಂದ್ರ ಮೋದಿ ಮತ್ತು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಭೇಟಿಯ ಕುರಿತು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝಿಲೆನ್‌ಸ್ಕಿ ಟೀಕೆ ವ್ಯಕ್ತಪಡಿಸಿದ್ದಾರೆ.

ಉಕ್ರೇನ್‌ನ ಅತಿದೊಡ್ಡ ಮಕ್ಕಳ ಆಸ್ಪತ್ರೆ ಮೇಲೆ ರಷ್ಯಾ ಕ್ಷಿಪಣಿ ದಾಳಿ ನಡೆಸಿರುವ ಬೆನ್ನಲ್ಲೇ ಎಕ್ಸ್‌ನಲ್ಲಿ ಫೋಟೋಗಳನ್ನು ಹಂಚಿಕೊಂಡಿರುವ ಝಿಲೆನ್‌ಸ್ಕಿ ಮೋದಿಯ ರಷ್ಯಾ ಭೇಟಿ ಕುರಿತು ಅಸಮಾಧಾನ ಹೊರಹಾಕಿದ್ದಾರೆ.

ರಷ್ಯಾದ ಕ್ರೂರ ಕ್ಷಿಪಣಿ ದಾಳಿಯಿಂದ ಉಕ್ರೇನ್‌ನಲ್ಲಿ 37 ಜನರು ಸಾವನ್ನಪ್ಪಿದ್ದಾರೆ. ಈ ಪೈಕಿ ಮೂವರು ಮಕ್ಕಳು ಸೇರಿದ್ದಾರೆ. 13 ಮಕ್ಕಳು ಸೇರಿದಂತೆ 170 ಜನರು ಗಾಯಗೊಂಡಿದ್ದಾರೆ. ಯುವ ಕ್ಯಾನ್ಸರ್‌ ರೋಗಿಗಳನ್ನು ಗುರಿಯಾಗಿಸಿಕೊಂಡು ಮಕ್ಕಳ ಆಸ್ಪತ್ರೆ ಮೇಲೂ ರಷ್ಯಾ ದಾಳಿ ನಡೆಸಿದೆ. ಎಷ್ಟೋ ಮಕ್ಕಳು ಅವಶೇಷಗಳಡಿ ಹೂತು ಹೋಗಿದ್ದಾರೆ” ಎಂದು ಝಿಲೆನ್‌ಸ್ಕಿ ಮಾಹಿತಿ ನೀಡಿದ್ದಾರೆ.

ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವದ ನಾಯಕ ವಿಶ್ವದ ಅತ್ಯಂತ ರಕ್ತಸಿಕ್ತ ಕ್ರಿಮಿನಲ್‌ನನ್ನು ತಬ್ಬಿಕೊಳ್ಳುವುದನ್ನು ನೋಡುವುದು ಶಾಂತಿಯ ಪ್ರಯತ್ನಗಳಿಗೆ ಭಾರೀ ನಿರಾಶೆ ಮತ್ತು ವಿನಾಶಕಾರಿ ಹೊಡೆತವಾಗಿದೆ ಎಂದು ಝಿಲೆನ್‌ಸ್ಕಿ ಹೇಳಿದ್ದಾರೆ.

ಎರಡು ದಿನಗಳ ರಷ್ಯಾ ಭೇಟಿಗಾಗಿ ಸೋಮಾವಾರ ಮಾಸ್ಕೋಗೆ ತೆರಳಿರುವ ಪ್ರಧಾನಿ ನರೇಂದ್ರ ಮೋದಿ, ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರನ್ನು ಭೇಟಿಯಾಗಿದ್ದಾರೆ.

ಮೋದಿಯ ರಷ್ಯಾ ಭೇಟಿಯನ್ನು ಯುಎಸ್‌ ಕೂಡ ವಿರೋಧಿಸಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಯುಎಸ್‌ ಗೃಹ ಇಲಾಖೆಯ ವಕ್ತಾರ ಮ್ಯಾಥ್ಯೂ ಮಿಲ್ಲರ್ ” ರಷ್ಯಾದೊಂದಿಗಿನ ಭಾರತದ ಸಂಬಂಧದ ಕುರಿತು ಯುಎಸ್‌ ಈಗಾಗಲೇ ಕಳವಳ ವ್ಯಕ್ತಪಡಿಸಿದೆ” ಎಂದಿದ್ದಾರೆ. ಆದರೆ, ಭಾರತ ಯುಎಸ್‌ ಜೊತೆಯೂ ಉತ್ತಮ ಭಾಂದ್ಯವ್ಯ ಹೊಂದಿದೆ.

ಇದನ್ನೂ ಓದಿ : ಸ್ಟ್ಯಾನ್‌ ಸ್ವಾಮಿ ಸಾವಿನ ಕುರಿತು ತನಿಖೆಗೆ ಒತ್ತಾಯಿಸಿ ಅಮೆರಿಕ ಸಂಸತ್‌ನಲ್ಲಿ ನಿರ್ಣಯ ಮಂಡನೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಕಾಂಗ್ರೆಸಿಗರನ್ನು ಕತ್ತರಿಸಿ ಸಮುದ್ರಕ್ಕೆ ಎಸೆಯುತ್ತೇವೆ’ ಎಂದಿದ್ದ ನಾರಾಯಣಸ್ವಾಮಿ ಮನೆಗೆ ಬ್ಲಿಂಕಿಟ್ ಮೂಲಕ 20 ಚಾಕುಗಳ ಆರ್ಡರ್: ದೂರು ದಾಖಲಿಸಿದ ಬಿಜೆಪಿ

ಬೆಂಗಳೂರು: ಕ್ವಿಕ್ ಕಾಮರ್ಸ್ ವೇದಿಕೆ ಬ್ಲಿಂಕಿಟ್ ಮೂಲಕ ತನಗೆ 20 ಚಾಕುಗಳನ್ನು ಕಳುಹಿಸಲಾಗಿದೆ. ಕಾಂಗ್ರೆಸ್ ಬೆಂಬಲಿತ ವಿದ್ಯಾರ್ಥಿ ಸಂಘಟನೆಯ ಕಾರ್ಯಕರ್ತರೇ ಈ ಚಾಕುಗಳನ್ನು ಆರ್ಡರ್ ಮಾಡಿದ್ದಾರೆ ಎಂದು ವಿಧಾನ ಪರಿಷತ್ತಿನ ವಿರೋಧ ಪಕ್ಷದ...

ಫಿರೋಜಾಬಾದ್‌ನಲ್ಲಿ ಸಾಮೂಹಿಕ ಅತ್ಯಾಚಾರ; ಬಹು ಅಂಗಾಂಗ ಹಾನಿಯಿಂದ 16 ವರ್ಷದ ದಲಿತ ಬಾಲಕಿ ಸಾವು

ಉತ್ತರ ಪ್ರದೇಶದ ಫಿರೋಜಾಬಾದ್‌ನಲ್ಲಿ ನವೆಂಬರ್ 1 ರಂದು ಬರ್ಬರ ಸಾಮೂಹಿಕ ಅತ್ಯಾಚಾರಕ್ಕೊಳಗಾಗಿದ್ದ 16 ವರ್ಷದ ದಲಿತ ಬಾಲಕಿ, ಆಗ್ರಾದ ಆಸ್ಪತ್ರೆಯೊಂದರಲ್ಲಿ ಸುಮಾರು ಒಂದು ವಾರಗಳ ಕಾಲ ಸಾವಿನೊಂದಿಗೆ ಹೋರಾಡಿದ ನಂತರ ಶುಕ್ರವಾರ ಕೊನೆಯುಸಿರೆಳೆದಿದ್ದಾಳೆ. ಆಕೆಯನ್ನು...

ಬಂಗಾಳದ SIR ಟ್ರಿಬ್ಯೂನಲ್‌ನಿಂದ 4ನೇ ನ್ಯಾಯಾಧೀಶರ ನಿರ್ಗಮನ: ನಿವೃತ್ತ ನ್ಯಾಯಮೂರ್ತಿ ಬಿಸ್ವಜಿತ್ ಬಸು ರಾಜೀನಾಮೆ!

ಕೋಲ್ಕತಾ: ಪಶ್ಚಿಮ ಬಂಗಾಳದ ಮತದಾರರ ಪಟ್ಟಿಯ 'ವಿಶೇಷ ತೀವ್ರ ಪರಿಷ್ಕರಣೆ' (SIR) ಮೇಲ್ಮನವಿ ಟ್ರಿಬ್ಯೂನಲ್‌ನಿಂದ ನಿವೃತ್ತ ನ್ಯಾಯಮೂರ್ತಿ ಬಿಸ್ವಜಿತ್ ಬಸು ಅವರು ಶನಿವಾರ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ವರದಿಗಳ ಪ್ರಕಾರ, ಕಲ್ಕತ್ತಾ...

‘6 ತಿಂಗಳಲ್ಲಿ ನನ್ನ ಪ್ರಾಣ ತೆಗೆಯಲು ಇದು 7ನೇ ಯತ್ನ!’: ಕೋರ್ಟ್-ಪೋಲಿಸ್ ಇಲಾಖೆ ಹಾಗೂ ಬಿಜೆಪಿ ವಿರುದ್ಧ ಸಿಡಿದೆದ್ದ ಟಿಎಂಸಿ ಸಂಸದ ಅಭಿಷೇಕ್ ಬ್ಯಾನರ್ಜಿ!

ಕೋಲ್ಕತಾ: ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ (TMC) ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ಸಂಸದ ಅಭಿಷೇಕ್ ಬ್ಯಾನರ್ಜಿ ಅವರ ಕೋಲ್ಕತಾದ ಕಾಳಿಘಾಟ್ ನಿವಾಸದ ಹೊರಭಾಗದಲ್ಲಿ ಶುಕ್ರವಾರ ನಡುರಾತ್ರಿ ಭಾರಿ ಹೈಡ್ರಾಮಾವೊಂದು ಸಂಭವಿಸಿದೆ. 2...

́ನಿಮ್ಮ ದೀಪಾವಳಿ ವೀಕೆಂಡ್ ಹಾಳುಮಾಡಲ್ಲ, ಸೋಮವಾರ ಉತ್ತರ ಕೊಡ್ತೀವಿ!’: ಎಥನಾಲ್ ಮಿಶ್ರಣ ಸ್ಪಷ್ಟೀಕರಣ ನೀಡಿದ ತೈಲ ಸಂಸ್ಥೆಗಳಿಗೆ ಸಚಿವ ರಿಜ್ವಾನ್ ಅರ್ಷಾದ್ ಟಾಂಗ್!

ಕರ್ನಾಟಕದಲ್ಲಿ ಪ್ರಮುಖ ತೈಲ ಮಾರುಕಟ್ಟೆ ಕಂಪನಿಗಳು ಮಾರಾಟ ಮಾಡುತ್ತಿರುವ ಪೆಟ್ರೋಲ್‌ನಲ್ಲಿ ನಿಗದಿಪಡಿಸಿದ ಶೇಕಡ 20 ಕ್ಕಿಂತ ಹೆಚ್ಚು ಪ್ರಮಾಣದ ಎಥೆನಾಲ್ ಮಿಶ್ರಣ ಮಾಡಲಾಗುತ್ತಿದೆ ಎಂದು ರಾಜ್ಯ ಸರ್ಕಾರ ಆರೋಪಿಸಿದ್ದು, ಪ್ರಯೋಗಾಲಯದ ಪರೀಕ್ಷೆಗಳಲ್ಲಿ ಇದರ...

ಯೂಟರ್ನ್ ಹೊಡೆದ ಚುನಾವಣಾ ಆಯೋಗ : SIR ವಿರುದ್ಧದ ಹೋರಾಟದಲ್ಲಿ ಜನ ಸಂಘಟನೆಗಳಿಗೆ ಮತ್ತೊಂದು ಮಹತ್ವದ ಗೆಲುವು

ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ವಿರುದ್ಧದ ಹೋರಾಟದಲ್ಲಿ ಜನ ಸಂಘಟನೆಗಳಿಗೆ ಮತ್ತೊಂದು ಮಹತ್ವದ ಗೆಲುವಾಗಿದೆ. ಎಸ್‌ಐಆರ್ ವೇಳೆ ಡಿಲೀಟ್ ಪಟ್ಟಿಗೆ (ಎಎಸ್‌ಡಿಡಿ) ಬಿದ್ದ ಅರ್ಹ ಮತದಾರರು ತಮ್ಮ ಹಕ್ಕು ಮರಳಿ...

‘ಪ್ರಧಾನಿ ಮೋದಿಯನ್ನು ಗೊಂದಲಕ್ಕೀಡುಮಾಡಬೇಡಿ, ನನ್ನೊಂದಿಗೆ ಬಹಿರಂಗ ಚರ್ಚೆಗೆ ಒಪ್ಪಿಸಿ!’: ಅಮಿತ್ ಷಾಗೆ ರಾಹುಲ್ ಗಾಂಧಿ ಆಗ್ರಹ!

ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಗೊಂದಲಕ್ಕೀಡುಮಾಡುವ ಬದಲು, ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆ (SIR) ಹಾಗೂ ಇವಿಎಂ ಕುರಿತು ತಮ್ಮೊಂದಿಗೆ ಬಹಿರಂಗ ಚರ್ಚೆಗೆ...

‘ಅಮೆರಿಕ ಅಧ್ಯಕ್ಷರ ಹತ್ಯೆ ಮಾಡುವಂತೆ ಧ್ವನಿ ಕೇಳಿಸುತ್ತಿತ್ತು’: ವೈಟ್ ಹೌಸ್ ಬಳಿ ಮಾರಕಾಸ್ತ್ರಗಳಿದ್ದ ಕಾರಿನೊಂದಿಗೆ ವೆನಿಜುವೆಲ್ಲಾ ಪ್ರಜೆ ಬಂಧನ!

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಹತ್ಯೆ ಮಾಡಲು ಸಂಚು ರೂಪಿಸಿದ್ದ ಆರೋಪದ ಮೇಲೆ 26 ವರ್ಷದ ರೋನಿ ಯೋರ್ಡ್ರಿಕ್ಸ್ ಗುವಾನಿಪಾ ಚ್ರಿನೋಸ್ ಎಂಬ ವೆನಿಜುಎಲ್ಲಾ ಮೂಲದ ವಲಸಿಗನನ್ನು ಯುಎಸ್ ಸೀಕ್ರೆಟ್ ಸರ್ವಿಸ್...

‘E20 turned into 420’ : ಕರ್ನಾಟಕ ಸರ್ಕಾರದ ಪರಿಶೀಲನೆಯಲ್ಲಿ ಬಯಲಾದ ‘ಪೆಟ್ರೋಲ್ ಚೋರಿ’; ಕೇಂದ್ರದ ವಿರುದ್ಧ ಜನಾಕ್ರೋಶ

E20 ಹೆಸರಿನಲ್ಲಿ ಮಾರಾಟವಾಗುತ್ತಿರುವ ಪೆಟ್ರೋಲ್‌ನಲ್ಲಿ ಶೇಕಡ 30ಕ್ಕಿಂತ (31.2) ಅಧಿಕ ಎಥೆನಾಲ್ ಇರುವುದು ಕರ್ನಾಟಕ ಸರ್ಕಾರದ ನಡೆಸಿದ ಪರಿಶೀಲನೆಯಲ್ಲಿ ಬಟಾಬಯಲಾಗಿದ್ದು, ಪ್ರಮುಖ ತೈಲ ಮಾರುಕಟ್ಟೆ ಕಂಪನಿಗಳು ಮತ್ತು ಕೇಂದ್ರ ಸರ್ಕಾರದ ವಿರುದ್ಧ ದೇಶದಾದ್ಯಂತ...

ಜೆಡಿಎಸ್ ಸಮರ್ಥನೆ ಬಿಜೆಪಿಯ ರಾಜಕೀಯ ದಿವಾಳಿತನ ತೋರಿಸುತ್ತದೆ : ಆರ್. ಅಶೋಕ್ ಆರೋಪಕ್ಕೆ ಪ್ರಿಯಾಂಕ್ ಖರ್ಗೆ ತಿರುಗೇಟು!

ಕರ್ನಾಟಕ ರಾಜಕೀಯದಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಹಾಗೂ ಪ್ರತಿಪಕ್ಷ ನಾಯಕ ಆರ್. ಅಶೋಕ್ ನಡುವೆ ಸೋಶಿಯಲ್ ಮೀಡಿಯಾದಲ್ಲಿ ವಾಕ್ಸಮರ ತೀವ್ರಗೊಂಡಿದೆ. ಸಚಿವ ಪ್ರಿಯಾಂಕ್ ಖರ್ಗೆ ಅವರನ್ನು ಗುರಿಯಾಗಿಸಿಕೊಂಡು ಆರ್. ಅಶೋಕ್ ಮಾಡಿದ ಕಟು...