ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕರಾಳ ಕೃಷಿ ಕಾನೂನಿನ ವಿರುದ್ದ ರೈತರು ನಡೆಸುತ್ತಿರುವ ಹೋರಾಟಕ್ಕೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬೆಂಬಲಿಸುವುದಾಗಿ ಮತ್ತೇ ಘೋಷಿಸಿದ್ದಾರೆ. ಹೋರಾಟದಿಂದ ಒಂದೇ ಒಂದು ಇಂಚು ಹಿಂದೆ ಸರಿಯಬೇಡಿ. ನಾವು ನಿಮ್ಮ ಜೊತೆಗೆ ಇದ್ದೇವೆ ಎಂದು ಅವರು ರೈತರಿಗೆ ಭರವಸೆ ನೀಡಿದ್ದಾರೆ.
ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕರಾಳ ಕೃಷಿ ಕಾಯ್ದೆಗಳನ್ನು ವಿರೋಧಿಸಿ ದೇಶದ ರೈತರು ಕಳೆದ ಎರಡು ತಿಂಗಳಿನಿಂದ ಶಾಂತಿಯುತ ಹೋರಾಟ ನಡೆಸುತ್ತಿದ್ದಾರೆ. ಜನವರಿ 26 ರಂದು ಆಯೋಜಿಸಿದ್ದ ಟ್ರಾಕ್ಟರ್ ರ್‍ಯಾಯ ವೇಳೆ ಕೆಂಪುಕೋಟೆಯ ಬಳಿ ಅಹಿತಕರ ಘಟನೆ ನಡೆದಿತ್ತಾದರೂ, ಇದೇ ವೇಳೆ ಲಕ್ಷಾಂತರ ರೈತರು ತಮಗೆ ಪೊಲೀಸರು ಗೊತ್ತುಪಡಿಸಿದ ರಸ್ತೆಯಲ್ಲಿ ಶಾಂತಿಯುತವಾಗಿ ಮೆರವಣಿಗೆ ನಡೆಸಿದ್ದರು. ಆದರೆ, ಕೇಂದ್ರ ಸರ್ಕಾರ ಮತ್ತು ಸರ್ಕಾರದ ಪರವಾಗಿರುವ ಮಾಧ್ಯಮಗಳು ಈ ವಿಚಾರವನ್ನು ಇಟ್ಟುಕೊಂಡು ರೈತ ಹೊರಾಟವನ್ನು ಹಣಿಯಲು ಮುಂದಾಗಿದೆ.
ಇದನ್ನೂ ಓದಿ: ರೈತರನ್ನು ಗೌರವಿಸದ ದೇಶ ದೇಶವೇ ಅಲ್ಲ: ಮಾಜಿ ಸ್ಪೀಕರ್ ರಮೇಶ್ ಕುಮಾರ್
ಗುರುವಾರದಿಂದ ಗಾಜಿಪುರ ಮತ್ತು ಟಿಕ್ರಿಯಲ್ಲಿ ಗೊಂದಲಗಳು ಸೃಷಿಯಾಗಿದೆ. ಗಾಜಿಪುರದಲ್ಲಿ ಉತ್ತರ ಪ್ರದೇಶದ ಪೊಲೀಸರು ಪ್ರತಿಭಟನೆಯನ್ನು ಖಾಲಿ ಮಾಡಿ ಎಂದು ಪ್ರತಿಭಟನಾ ನಿರತ ರೈತರನ್ನು ಬೆದರಿಸಿತ್ತು. ಅಲ್ಲದೆ ಉತ್ತರ ಪ್ರದೇಶ ಸರ್ಕಾರ ನೀರು ಮತ್ತು ವಿದ್ಯುತ್ತನ್ನು ಕಡಿತ ಮಾಡಿತ್ತು. ಟಿಕ್ರಿ ಗಡಿಯಲ್ಲಿ ಸಂಘಪರಿವಾರದ ಜನರು ಕಲ್ಲು ತೂರಾಟ ಸೇರಿದಂತೆ ಪ್ರತಿಭಟನಾ ನಿರತ ರೈತರ ವಸ್ತುಗಳಿಗೆ ಹಾನಿ ಮಾಡಿದ್ದರು.
ಹೋರಾಟದ ಬಗ್ಗೆ ಶುಕ್ರವಾರ ಪತ್ರಿಕಾಗೋಷ್ಠಿ ನಡೆಸಿರುವ ರಾಹುಲ್ ಗಾಂಧಿ, “ಕೇಂದ್ರ ಸರ್ಕಾರ ರೈತರು ಪ್ರತಿಭಟನೆಯನ್ನು ಕೈಬಿಡುತ್ತಾರೆ ಎಂದುಕೊಂಡಿದೆ, ಆದರೆ ರೈತರು ಪ್ರತಿಭಟನಾ ಸ್ಥಳದಿಂದ ತೆರಳುವುದಿಲ್ಲ. ಸರ್ಕಾರ ರೈತರ ಮೇಲೆ ದಬ್ಬಾಳಿಕೆ ನಡೆಸುತ್ತಿದ್ದು, ಕೃಷಿ ಕಾನೂನುಗಳನ್ನು ವಾಪಸ್ ಪಡೆಯುವುದೇ ಸಮಸ್ಯೆಗೆ ಪರಿಹಾರ” ಎಂದು ಹೇಳಿದ್ದಾರೆ.
“ಕೆಂಪು ಕೋಟೆಗೆ ಗೂಂಡಾಗಳನ್ನು ಬಿಟ್ಟಿದ್ದು ಯಾರು ಮತ್ತು ಯಾಕೆ? ಎಂಬ ಪ್ರಶ್ನೆಗಳಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಉತ್ತರಿಸಬೇಕು. ರೈತರು ತಮ್ಮ ಹೋರಾಟದಿಂದ ಒಂದೇ ಒಂದು ಇಂಚು ಹಿಂದೆ ಸರಿಯಬೇಡಿ. ನಾವು ನಿಮ್ಮ ಜೊತೆಗೆ ಇದ್ದೇವೆ” ಎಂದು ರಾಹುಲ್ ಗಾಂಧಿ ಭರವಸೆ ನೀಡಿದ್ದಾರೆ.
ಇದನ್ನೂ ಓದಿ: ರೈತ ಹೋರಾಟ ಮುಗಿಸಲು ಕೇಂದ್ರದ ಸಂಚು: ಕ್ರೊನೊಲಜಿ ಹೀಗಿದೆ



The congress spoiled the entire farming community by treating them as vote bank.The lian waiver of 2008 concieved by corrupt cynical Chidambaram paved way for loss of repayment ethics by farmers.Even in thus agitation it is clear as crystal that Rahul aka Pappu is thinking of exploiting the situation tomake a comeback.
Raitarige ಊಟ yella supply madtirodu ನೀವು adhikarakke baralu congi plan
ಗೋಲಿಬಾರ್ ನಡೆದು ಒಂದೇ ಒಂದು ರೈತನ ಹೆಣ ಬಿಳೋದನ್ನ ರಣಹದ್ದುಗಳಂತೆ ಕಾಯ್ದು ಕುಳಿತಿದ್ದರು. ಇವರ ನಿರೀಕ್ಷೆ ಹುಸಿಯಾಯಿತು. ಅದಕ್ಕೆ ಪ್ರತಿಭಟನೆಗೆ ಮತ್ತೆ ಎಕ್ಸಲೇಟರ್ ಕೊಡ್ತಿದ್ದಾರೆ.