Homeಮುಖಪುಟಮಾನವ ನಿರ್ಮಿತ ವಿಪತ್ತುಗಳಿಗಾಗಿ ದೇವರನ್ನು ದೂಷಿಸಬೇಡಿ: ಪಿ.ಚಿದಂಬರಂ

ಮಾನವ ನಿರ್ಮಿತ ವಿಪತ್ತುಗಳಿಗಾಗಿ ದೇವರನ್ನು ದೂಷಿಸಬೇಡಿ: ಪಿ.ಚಿದಂಬರಂ

ಆರ್‌ಬಿಐ ಸೇರಿದಂತೆ ಇತರೆ ತಜ್ಞರು ಈ ಕುಸಿತವನ್ನು ಊಹಿಸಿ, ಎಚ್ಚರಿಸಿದ್ದರು. ಈ ಸರ್ಕಾರವು ತನ್ನ ತಪ್ಪುಗಳನ್ನು ಒಪ್ಪಿಕೊಳ್ಳುವುದಿಲ್ಲ. ಜೊತೆಗೆ ಆಶಾಭಾವನೆಯ ಭರವಸೆಯನ್ನೂ ಸಹ ಮೂಡಿಸುವುದಿಲ್ಲ ಎಂದು ಚಿದಂಬರಂ ಹೇಳಿದರು

- Advertisement -
- Advertisement -

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಆಕ್ಟ್ ಆಫ್ ಗಾಡ್ (ದೇವರ ಕಾರ್ಯ) ಹೇಳಿಕೆಗೆ ಕಾಂಗ್ರೆಸ್ ಮುಖಂಡ ಪಿ.ಚಿದಂಬರಂ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಾನವ ನಿರ್ಮಿತ ತಪ್ಪುಗಳಿಗೆ ದೇವರನ್ನು ದೂಷಿಸಬೇಡಿ ಎಂದಿದ್ದಾರೆ.

ಕೊರೊನಾ ವೈರಸ್ ಆರ್ಥಿಕತೆ ಮೇಲೆ ಬೀರಿರುವ ಪರಿಣಾಮದ ಬಗ್ಗೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ’ಕೊರೊನಾ ಸಾಂಕ್ರಾಮಿಕವು ದೇವರ ಕಾರ್ಯ. ಹಾಗಾಗಿಯೇ ಜಿಎಸ್‌ಟಿ ಸಂಗ್ರಹದಲ್ಲಿ ಕುಸಿತವಾಗಿದೆ’ ಎಂದು ಹೇಳಿ ವಿವಾದಕ್ಕೊಳಗಾಗಿದ್ದಾರೆ.

ಕೊರೋನಾ ಸೋಂಕು ಸಾಂಕ್ರಾಮಿಕ ರೋಗವು ನೈಸರ್ಗಿಕ ವಿಪತ್ತು ನಿಜ, ಆದರೆ ನೀವು ನೈಸರ್ಗಿಕ ವಿಪತ್ತನ್ನು ಮಾನವ ನಿರ್ಮಿತ ವಿಪತ್ತಿನೊಂದಿಗೆ ಸಂಯೋಜಿಸುತ್ತಿದ್ದೀರಿ ಎಂದಿದ್ದಾರೆ. ಎನ್‌ಡಿಟಿವಿಗೆ ನೀಡಿದ ಸಂದರ್ಶನದಲ್ಲಿ ಅವರು ಮಾತನಾಡಿದ್ದಾರೆ.

ಇನ್ನು ಮುಖ್ಯ ಆರ್ಥಿಕ ಸಲಹೆಗಾರ ಕೆ.ವಿ.ಸುಬ್ರಮಣ್ಯನ್ ಅವರ ವಿ-ಆಕಾರದ ಚೇತರಿಕೆಯನ್ನು ಟೀಕಿಸಿದ್ದಾರೆ. ಮುಖ್ಯ ಆರ್ಥಿಕ ಸಲಹೆಗಾರರ ಮಾತುಗಳನ್ನು ಗಂಭೀರವಾಗಿ ಪರಿಗಣಿಸುವವರಿಲ್ಲ. ಅವರು ಪ್ರಧಾನಿಗಳನ್ನು ಭೇಟಿ ಮಾಡಿ ಸಂಭಾಷಣೆ ನಡೆಸಿ ತುಂಬಾ ದಿನಗಳಾಗಿವೆ ಎಂದಿದ್ದಾರೆ.

2019-20ರ ಅಂತ್ಯದ ವೇಳೆಗೆ ಒಟ್ಟು ದೇಶೀಯ ಉತ್ಪಾದನೆಯು ಶೇ.20 ರಷ್ಟು ಕುಸಿದಿತ್ತು. ಆದರೆ ಕೃಷಿ, ಅರಣ್ಯ ಮತ್ತು ಮೀನುಗಾರಿಕೆು ಕ್ಷೇತ್ರ ಮಾತ್ರ ಶೇ.3.4 ರಷ್ಟು ಏರಿಕೆ ಕಂಡಿತ್ತು. ಆರ್ಥಿಕ ಕುಸಿತಕ್ಕೆ ದೇವರನ್ನು ದೂಷಿಸುವ ನಿರ್ಮಲಾ ಸೀತಾರಾಮನ್, ಕೃಷಿಕರು ಮತ್ತು ಅವರಿಗೆ ಕೃಪೆ ತೋರಿದ ದೇವರನ್ನು ಶ್ಲಾಘಿಸಬೇಕು” ಎಂದು ಚಿದಂಬರಂ ಹೇಳಿದರು.

ಇದನ್ನೂ ಓದಿ: ಅಸಂಘಟಿತ ವಲಯದ ಆರ್ಥಿಕತೆ ನಾಶ; ಜಿಡಿಪಿ ಶೇ.-23.9ಕ್ಕೆ ಕುಸಿತ: ಕೇಂದ್ರ ಸರ್ಕಾರದ ಮೇಲೆ ರಾಹುಲ್ ವಾಗ್ದಾಳಿ

ಆರ್‌ಬಿಐ ಸೇರಿದಂತೆ ಇತರೆ ತಜ್ಞರು ಈ ಕುಸಿತವನ್ನು ಊಹಿಸಿ, ಎಚ್ಚರಿಸಿದ್ದರು. ಈ ಸರ್ಕಾರವು ತನ್ನ ತಪ್ಪುಗಳನ್ನು ಒಪ್ಪಿಕೊಳ್ಳುವುದಿಲ್ಲ. ಜೊತೆಗೆ ಆಶಾಭಾವನೆಯ ಭರವಸೆಯನ್ನೂ ಸಹ ಮೂಡಿಸುವುದಿಲ್ಲ ಎಂದು ಚಿದಂಬರಂ ಹೇಳಿದರು.

ಸದ್ಯದ ಆರ್ಥಿಕ ಚೇತರಿಕೆಗೆ ಸರ್ಕಾರ ಭಾರಿ ಸಾಲವನ್ನು ಪಡೆಯಬೇಕು ಅಥವಾ ಕೊರತೆಯ ಭಾಗವನ್ನು ಸರಿದೂಗಿಸಲು ಹಣವನ್ನು ಮುದ್ರಿಸಬೇಕು ಎಂಬ ಸಲಹೆಯನ್ನು ಮಾಜಿ ಹಣಕಾಸು ಸಚಿವ ಚಿದಂಬರಂ ಹೇಳಿದ್ದಾರೆ.

ದೇಶದ ಜಿಡಿಪಿಯಲ್ಲಿ ಶೇಕಡಾ 23.9 ರಷ್ಟು ಕುಸಿತ ಕಂಡಿರುವುದಕ್ಕೆ ಕೇಂದ್ರ ಸರ್ಕಾರದ ಆತ್ಮ ನಿರ್ಭರ್ ಭಾರತ್ ಪ್ಯಾಕೇಜ್ ಅನ್ನು ಪಿ.ಚಿದಂಬರಂ ಅದೊಂದು ತಮಾಷೆ ಎಂದು ಕರೆದಿದ್ದಾರೆ.


ಇದನ್ನೂ ಓದಿ: ದೇವರ ಸಂದೇಶವಾಹಕರೆ, ಆರ್ಥಿಕ ತಪ್ಪು ನಿರ್ವಹಣೆಗೆ ಕಾರಣರ್ಯಾರು? ಪಿ.ಚಿದಂಬರಂ ಪ್ರಶ್ನೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

2023ರಲ್ಲಿ ತೀವ್ರ ಹಸಿವಿನಿಂದ ತತ್ತರಿಸಿದ 282 ಮಿಲಿಯನ್ ಜನರು: ಆಹಾರದ ಅಭಾವಕ್ಕೆ ವಿಶ್ವಸಂಸ್ಥೆ ಉಲ್ಲೇಖಿಸಿದ...

0
ಕಳೆದ ವರ್ಷ ಪ್ರಪಂಚದಾದ್ಯಂತ ಆಹಾರ ಅಭದ್ರತೆ ಸ್ಥಿತಿ ಭಾರೀ ಹದಗೆಟ್ಟಿದೆ, 2023ರಲ್ಲಿ ಸುಮಾರು 282 ಮಿಲಿಯನ್ ಜನರು ತೀವ್ರ ಹಸಿವಿನಿಂದ ಬಳಲಿದ್ದಾರೆ, ಇದರಲ್ಲಿ ವಿಶೇಷವಾಗಿ ಯುದ್ಧಪೀಡಿತ ಗಾಝಾ ಮತ್ತು ಸುಡಾನ್‌ನಲ್ಲಿ ಹೆಚ್ಚಿನ ಜನರು...