Homeಎಕಾನಮಿಅಸಂಘಟಿತ ವಲಯದ ಆರ್ಥಿಕತೆ ನಾಶ; ಜಿಡಿಪಿ ಶೇ.-23.9ಕ್ಕೆ ಕುಸಿತ: ಕೇಂದ್ರ ಸರ್ಕಾರದ ಮೇಲೆ ರಾಹುಲ್ ವಾಗ್ದಾಳಿ

ಅಸಂಘಟಿತ ವಲಯದ ಆರ್ಥಿಕತೆ ನಾಶ; ಜಿಡಿಪಿ ಶೇ.-23.9ಕ್ಕೆ ಕುಸಿತ: ಕೇಂದ್ರ ಸರ್ಕಾರದ ಮೇಲೆ ರಾಹುಲ್ ವಾಗ್ದಾಳಿ

'-23.9%'- ರಿಯಾ ಚಕ್ರವರ್ತಿಯವರ ವಾಟ್ಸಾಪ್ ಚಾಟ್‌ಗಳಲ್ಲಿಲ್ಲ.  '-23.9%'- ಮೋದಿಯ ನವಿಲು-ಭಂಗಿಗಳಲ್ಲಿಲ್ಲ '-23.9%'- ರಾಮ್ ಮಂದಿರಗಳಿಗೆ ಸಂಬಂಧಿಸಿಲ್ಲ. ಆದರೆ, '-23.9' = ಭಾರತೀಯ ಜಿಡಿಪಿಗೆ ಬಿಜೆಪಿಯ 'ವಿಕಾಸ್ ಮಾದರಿ'" ಎಂದು ಜಿಗ್ನೇಶ್ ಟ್ವೀಟ್ ಮಾಡಿದ್ದಾರೆ.

- Advertisement -
- Advertisement -

ಭಾರತದ ಜಿಡಿಪಿಯು ಏಪ್ರಿಲ್-ಜೂನ್ ಅವಧಿಯಲ್ಲಿ ಶೇ. -23.9 ರಷ್ಟು ಗಣನೀಯ ಇಳಿಕೆಯಾಗಿರುವುದನ್ನು ಉಲ್ಲೇಖಿಸಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತು ಪಿ ಚಿದಂಬರಂ ಸರ್ಕಾರದ ಮೇಲೆ ವಾಗ್ದಾಳಿ ನಡೆಸಿದ್ದಾರೆ.

ಕೊರೊನಾ ವೈರಸ್ ಆರ್ಥಿಕತೆಯ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಎಂಬ ತಜ್ಞರ ಎಚ್ಚರಿಕೆಯನ್ನು ಪದೇಪದೇ ನಿರ್ಲಕ್ಷಿಸಲಾಗಿದೆ ಎಂದು ಆರೋಪಿಸಿದರು.

ಅಸಂಘಟಿತ ವಲಯದ ಮೇಲೆ ಆಕ್ರಮಣ ಮಾಡುವ ಮೂಲಕ ಸರ್ಕಾರವು ಆರ್ಥಿಕತೆಯನ್ನು ನಾಶಪಡಿಸಿದೆ ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿರುವ ವೀಡಿಯೋವೊಂದರಲ್ಲಿ ಹೇಳಿದ್ದಾರೆ. ತಜ್ಞರು ಮತ್ತು ಇತರರ ಸೂಚನೆಗಳನ್ನು ನಿರ್ಲಕ್ಷಿಸಿರುವುದು ದುರದೃಷ್ಟಕರ ಎಂದು ಹೇಳಿದ್ದಾರೆ.

ಕಾಂಗ್ರೆಸ್ ಮುಖಂಡರಾದ ಪಿ.ಚಿದಂಬರಂ ವರ್ಚುವಲ್ ಪತ್ರಿಕಾ ಗೋಷ್ಟಿಯಲ್ಲಿ ಮಾತನಾಡಿ, “ತಜ್ಞರು ಇಂತಹ ಸನ್ನಿವೇಶಗಳ ಬಗ್ಗೆ ಎಚ್ಚರಿಸಿದ್ದರು. ಆದರೆ ಈಗ ಪರಿಸ್ಥಿತಿ ಕೈಮೀರಿದೆ. ಇದನ್ನು ಸರಿಪಡಿಸಲು ಹಲವು ತಿಂಗಳುಗಳೇ ಬೇಕಾಗಬಹುದು” ಎಂದು ಹೇಳುತ್ತಾ, ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರ ‘ಆರ್ಥಿಕ ಕುಸಿತಕ್ಕೆ ದೇವರ ಕಾರ್ಯವೇ ಕಾರಣ’ ಎಂಬ ಹೇಳಿಕೆಯನ್ನು ಟೀಕಿಸಿದರು.

“2019-20ರ ಅಂತ್ಯದ ವೇಳೆಗೆ ಒಟ್ಟು ದೇಶೀಯ ಉತ್ಪಾದನೆಯು ಶೇ.20 ರಷ್ಟು ಕುಸಿದಿತ್ತು. ಆದರೆ ಕೃಷಿ, ಅರಣ್ಯ ಮತ್ತು ಮೀನುಗಾರಿಕೆು ಕ್ಷೇತ್ರ ಮಾತ್ರ ಶೇ.3.4 ರಷ್ಟು ಏರಿಕೆ ಕಂಡಿತ್ತು. ಆರ್ಥಿಕ ಕುಸಿತಕ್ಕೆ ದೇವರನ್ನು ದೂಷಿಸುವ ನಿರ್ಮಲಾ ಸೀತಾರಾಮನ್, ಕೃಷಿಕರು ಮತ್ತು ಅವರಿಗೆ ಕೃಪೆ ತೋರಿದ ದೇವರನ್ನು ಶ್ಲಾಘಿಸಬೇಕು” ಎಂದು ಚಿದಂಬರಂ ಹೇಳಿದರು.

“ಆರ್ಥಿಕತೆಯ ಇತರೆ ಎಲ್ಲಾ ಕ್ಷೇತ್ರಗಳೂ ಕುಸಿತವಾಗಿವೆ. ಇದು ಅವರಿಗೆ ಆಶ್ಚರ್ಯವಾಗದಿರಬಹುದು. ಆದರೆ ಈ ಕುಸಿತವನ್ನು ತಗ್ಗಿಸಲು ಪರಿಣಾಮಕಾರಿ ಮತ್ತು ಸೂಕ್ತವಾದ ಕಲ್ಯಾಣಕ್ರಮಗಳನ್ನು ತೆಗೆದುಕೊಳ್ಳದ, ಅಕ್ಷರಶಃ ಏನೂ ಮಾಡಲಾಗದ ಸರ್ಕಾರಕ್ಕೆ ನಿಜಕ್ಕೂ ಇದು ಅವಮಾನಕರವಾಗಿದೆ” ಎಂದು ಮಾಜಿ ಹಣಕಾಸು ಸಚಿವ ಪಿ.ಚಿದಂಬರಂ ಹೇಳಿದರು.

ಇದನ್ನೂ ಓದಿ: ನಿಜವಾದ ಜಿಡಿಪಿ 1.5% ಮಾತ್ರವೇ ಇದೆ: ಪಿ ಚಿದಂಬರಂ

ಆರ್‌ಬಿಐ ಸೇರಿದಂತೆ ಇತರೆ ತಜ್ಞರು ಈ ಕುಸಿತವನ್ನು ಊಹಿಸಿ, ಎಚ್ಚರಿಸಿದ್ದರು. ಈ ಸರ್ಕಾರವು ತನ್ನ ತಪ್ಪುಗಳನ್ನು ಒಪ್ಪಿಕೊಳ್ಳುವುದಿಲ್ಲ. ಜೊತೆಗೆ ಆಶಾಾಭವನೆಯ ಭರವಸೆಯನ್ನೂ ಸಹ ಮೂಡಿಸುವುದಿಲ್ಲ ಎಂದು ಚಿದಂಬರಂ ಹೇಳಿದರು.

ಗುಜರಾತ್ ನ ಸ್ವತಂತ್ರ ಶಾಸಕ ಜಿಗ್ನೇಶ್ ಮೇವಾನಿ ಕೂಡ ಟ್ವೀಟ್ ಮಾಡಿದ್ದು, “-23.9%: ಈ ಸಂಖ್ಯೆಯನ್ನು ಕಂಡುಹಿಡಿಯಲು ಮತ್ತು ನೆನಪಿಟ್ಟುಕೊಳ್ಳಲು ಪ್ರಯತ್ನಿಸಿ. ಏಕೆಂದರೆ ನಿಮ್ಮ ಮಾಧ್ಯಮ ಮತ್ತು ವಾಟ್ಸಾಪ್ ವಿಶ್ವವಿದ್ಯಾಲಯದ ಪಿಎಚ್‌ಡಿ ಇದನ್ನು ನಿಮಗೆ ಹೇಳುವುದಿಲ್ಲ! ‘-23.9%’- ರಿಯಾ ಚಕ್ರವರ್ತಿಯವರ ವಾಟ್ಸಾಪ್ ಚಾಟ್‌ಗಳಲ್ಲಿಲ್ಲ.  ‘-23.9%’- ಮೋದಿಯ ನವಿಲು-ಭಂಗಿಗಳಲ್ಲಿಲ್ಲ ‘-23.9%’- ರಾಮ್ ಮಂದಿರಗಳಿಗೆ ಸಂಬಂಧಿಸಿಲ್ಲ. ಆದರೆ, ‘-23.9’ = ಭಾರತೀಯ ಜಿಡಿಪಿಗೆ ಬಿಜೆಪಿಯ ‘ವಿಕಾಸ್ ಮಾದರಿ'” ಎಂದು ಅವರು ಹೇಳಿದ್ದಾರೆ.

ಭಾರತವು ತ್ರೈಮಾಸಿಕ ಅಂಕಿ ಅಂಶಗಳನ್ನು ಪ್ರಕಟಿಸಲು ಪ್ರಾರಂಭಿಸಿದ 1996 ರಿಂದೀಚೆಗೆ ಇದೇ ಮೊದಲ ಭಾರಿಗೆ ಆರ್ಥಿಕತೆ ಈ ಪ್ರಮಾಣದ ಇಳಿಕೆ ದಾಖಲಾಗಿದೆ. ಅಷ್ಟೇ ಅಲ್ಲದೆ ಏಷ್ಯಾದ ಪ್ರಮುಖ ಆರ್ಥಿಕತೆಯಲ್ಲಿ ಇದು ಅತ್ಯಂತ ಕೆಟ್ಟದಾದ ಆರ್ಥಿಕ ಕುಸಿತವಾಗಿದೆ.

2019–20 ರ ಇದೇ ಅವಧಿಯಲ್ಲಿ ದೇಶದ ಜಿಡಿಪಿ ಶೇ 5.2 ರಷ್ಟು ಬೆಳವಣಿಗೆ ಕಂಡಿತ್ತು ಎಂದು ಎನ್‌ಎಸ್‌ಒ ಅಂಕಿ ಅಂಶ ಹೇಳಿದೆ.

2019–2020 ನೇ ಆರ್ಥಿಕ ವರ್ಷದ 1 ನೇ ತ್ರೈಮಾಸಿಕದಲ್ಲಿ ಭಾರತದ ಜಿಡಿಪಿ ಬೆಳವಣಿಗೆ 5.2% ದಾಖಲಾಗಿತ್ತು. 2ನೇ ತ್ರೈಮಾಸಿಕದಲ್ಲಿ 4.4 % ದಾಖಲಾದರೆ, 3ನೇ ತ್ರೈಮಾಸಿಕದಲ್ಲಿ 4.1% ದಾಖಲಾಗಿ, 4ನೇ ತ್ರೈಮಾಸಿಕದ ಹೊತ್ತಿಗೆ 3.1% ಬೆಳವಣಿಗೆ ದಾಖಲಾಗಿತ್ತು.

ಆದರೆ 2020–21 ನೇ ಆರ್ಥಿಕ ವರ್ಷದ 1 ನೇ ತ್ರೈಮಾಸಿಕದಲ್ಲೇ -23.9% ದಷ್ಟು ಇಳಿಯಾಗಿದೆ. ಈ ಇಳಿಕೆ ಎರಡನೆ ತ್ರೈಮಾಸಿಕದಲ್ಲೂ ಮುಂದುವೆರೆಯಲಿದೆ ಎನ್ನಲಾಗಿದೆ.

ಮೇ ತಿಂಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ದೇಶದ ಜಿಡಿಪಿಯ ಶೇಕಡಾ 10 ಕ್ಕೆ ಸಮನಾದ ಪ್ರಚೋದಕ ಪ್ಯಾಕೇಜ್ ಅನ್ನು ಘೋಷಿಸಿದ ಹೊರತಾಗಿಯು ಬೇಡಿಕೆ ಮತ್ತು ಉತ್ಪಾದನೆ ಇನ್ನೂ ಚೇತರಿಸಿಕೊಂಡಿಲ್ಲ.

ದೇಶದಲ್ಲಿ ಕೊರೊನಾ ಪ್ರಾರಂಭವಾಗುವುದಕ್ಕೆ ಮುಂಚೆ, ಆರ್ಥಿಕತೆಯು ನಿಧಾನಗತಿಯ ಬೆಳವಣಿಗೆ ಮತ್ತು ಕಡಿಮೆ ಬೇಡಿಕೆಯ ಹೊರತಾಗಿಯೂ, ಆರ್ಥಿಕತೆಯನ್ನು ಅಂದಾಜು 2.8 ಟ್ರಿಲಿಯನ್ ಡಾಲರ್‌‌ನಿಂದ, 2024 ರವೇಳೆಗೆ 5 ಟ್ರಿಲಿಯನ್‌ ಡಾಲರ್‌ ಪರಿವರ್ತಿಸುವ ಗುರಿಯನ್ನು ಹೊಂದಿದೆ ಎಂದು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಹೇಳಿತ್ತು.


ಇದನ್ನೂ ಓದಿ: ಮೋದಿ ಬಂದಮೇಲೆ ಭಾರತದ ಸಾಲದ ಪ್ರಮಾಣ ಇಳಿಕೆಯಾಗಿದೆಯೇ? ಈ ವರ್ಷ ಜಿಡಿಪಿ 10% ಗೆ ಏರಲಿದೆಯೇ? ಸುಳ್ಳು ಹೇಳಿದ ಪೋಸ್ಟ್‌ ಕಾರ್ಡ್‌..

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK: ಜಾತಿ ಗಣತಿ ಕುರಿತ ರಾಹುಲ್ ಗಾಂಧಿಯ ವೈರಲ್ ಕ್ಲಿಪ್ ಎಡಿಟೆಡ್

0
ಸಾಮಾಜಿಕ-ಆರ್ಥಿಕ ಮತ್ತು ಜಾತಿ ಗಣತಿಗೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮಾಡಿರುವ ಭಾಷಣದ ಕ್ಲಿಪ್‌ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಅನೇಕ ಬಾರಿ ಸುಳ್ಳು ಸುದ್ದಿಗಳನ್ನು ಹಂಚಿಕೊಂಡಿರುವ ಬಲ ಪಂಥೀಯ ಎಕ್ಸ್...