Homeಮುಖಪುಟ1 ನೇ ಆರ್ಥಿಕ ತ್ರೈಮಾಸಿಕ ಜಿಡಿಪಿ 23.9% ಇಳಿಕೆ; ಐತಿಹಾಸಿಕ ಇಳಿಕೆ ಕಂಡ ಭಾರತ

1 ನೇ ಆರ್ಥಿಕ ತ್ರೈಮಾಸಿಕ ಜಿಡಿಪಿ 23.9% ಇಳಿಕೆ; ಐತಿಹಾಸಿಕ ಇಳಿಕೆ ಕಂಡ ಭಾರತ

ಮೇ ತಿಂಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ದೇಶದ ಜಿಡಿಪಿಯ ಶೇಕಡಾ 10 ಕ್ಕೆ ಸಮನಾದ ಪ್ರಚೋದಕ ಪ್ಯಾಕೇಜ್ ಅನ್ನು ಘೋಷಿಸಿದ ಹೊರತಾಗಿಯು ಬೇಡಿಕೆ ಮತ್ತು ಉತ್ಪಾದನೆ ಇನ್ನೂ ಚೇತರಿಸಿಕೊಂಡಿಲ್ಲ.

- Advertisement -
- Advertisement -

ಕೊರೊನಾ ವೈರಸ್ ಸಾಂಕ್ರಾಮಿಕದ ನಿರಂತರ ಲಾಕ್‌‌ಡೌನ್‌ನಿಂದಾಗಿ ಪ್ರಮುಖ ಕೈಗಾರಿಕೆಗಳು ಸ್ಥಗಿತಗೊಂಡ ಪರಿಣಾಮ ಹಾಗೂ ಲಕ್ಷಾಂತರ ಜನರ ನಿರುದ್ಯೋಗಿಗಳು ನಷ್ಟವಾಗಿದ್ದರಿಂದ, ಏಪ್ರಿಲ್-ಜೂನ್ ಅವಧಿಯಲ್ಲಿ ಭಾರತದ ಒಟ್ಟು ದೇಶೀಯ ಉತ್ಪನ್ನ (ಜಿಡಿಪಿ) ಶೇಕಡಾ 23.9 ರಷ್ಟು ಇಳಿಕೆಯಾಗಿದೆ.

ಭಾರತವು ತ್ರೈಮಾಸಿಕ ಅಂಕಿ ಅಂಶಗಳನ್ನು ಪ್ರಕಟಿಸಲು ಪ್ರಾರಂಭಿಸಿದ 1996 ರಿಂದೀಚೆಗೆ ಇದೇ ಮೊದಲ ಭಾರಿಗೆ ಆರ್ಥಿಕತೆ ಈ ಪ್ರಮಾಣದ ಇಳಿಕೆ ದಾಖಲಾಗಿದೆ. ಅಷ್ಟೇ ಅಲ್ಲದೆ ಏಷ್ಯಾದ ಪ್ರಮುಖ ಆರ್ಥಿಕತೆಯಲ್ಲಿ ಇದು ಅತ್ಯಂತ ಕೆಟ್ಟದಾದ ಆರ್ಥಿಕ ಕುಸಿತವಾಗಿದೆ.

2019–20 ರ ಇದೇ ಅವಧಿಯಲ್ಲಿ ದೇಶದ ಜಿಡಿಪಿ ಶೇ 5.2 ರಷ್ಟು ಬೆಳವಣಿಗೆ ಕಂಡಿತ್ತು ಎಂದು ಎನ್‌ಎಸ್‌ಒ ಅಂಕಿ ಅಂಶ ಹೇಳಿದೆ.

ಇದನ್ನೂ ಓದಿ: ಕೋವಿಡ್‌ನಿಂದ ನೆಲಕಚ್ಚಿರುವ ಆರ್ಥಿಕತೆಯನ್ನು ಮೇಲೆತ್ತಲು ಸರ್ಕಾರ ಮಾಡಬೇಕಾದುದ್ದೇನು?

ಬ್ಲೂಂಬರ್ಗ್‌ ಆರ್ಥಿಕ ತಜ್ಞರ ಲೆಕ್ಕಚಾರದ ಪ್ರಕಾರ ಭಾರತದ ಆರ್ಥಿಕತೆ ಶೇ. 15 ರಿಂದ ಶೇ. 25.9 ರ ನಡುವೆ ಕುಸಿಯಬಹುದು ಎಂಬ ಅಭಿಪ್ರಾಯ ವ್ಯಕ್ತವಾಗಿತ್ತು. ಪ್ರಸ್ತುತ ಆರ್ಥಿಕ ಕುಸಿತವು ಎರಡನೇ ತ್ರೈಮಾಸಿಕದಲ್ಲೂ ಮುಂದುವರಿಯಲಿದೆ ಎಂದು ಅಂದಾಜಿಸಲಾಗಿದೆ.

2019–2020 ನೇ ಆರ್ಥಿಕ ವರ್ಷದ 1 ನೇ ತ್ರೈಮಾಸಿಕದಲ್ಲಿ ಭಾರತದ ಜಿಡಿಪಿ ಬೆಳವಣಿಗೆ 5.2% ದಾಖಲಾಗಿತ್ತು. 2ನೇ ತ್ರೈಮಾಸಿಕದಲ್ಲಿ 4.4 % ದಾಖಲಾದರೆ, 3ನೇ ತ್ರೈಮಾಸಿಕದಲ್ಲಿ 4.1% ದಾಖಲಾಗಿ, 4ನೇ ತ್ರೈಮಾಸಿಕದ ಹೊತ್ತಿದೆ 3.1% ಬೆಳವಣಿಗೆ ದಾಖಲಾಗಿತ್ತು.

ಆದರೆ 2020–21 ನೇ ಆರ್ಥಿಕ ವರ್ಷದ 1 ನೇ ತ್ರೈಮಾಸಿಕದಲ್ಲೇ 23.9% ದಷ್ಟು ಇಳಿಯಾಗಿದೆ. ಈ ಇಳಿಕೆ ಎರಡನೆ ತ್ರೈಮಾಸಿಕದಲ್ಲೂ ಮುಂದುವೆರೆಯಲಿದೆ ಎನ್ನಲಾಗಿದೆ.

ಇದನ್ನೂ ಓದಿ: ಮೋದಿ 2.1: ಆರ್ಥಿಕ ಸಮಸ್ಯೆಗೆ ಪರಿಹಾರ ಕಾಣದ ಕೇಂದ್ರ ಸರ್ಕಾರಕ್ಕೆ ಕೊರೊನಾ ನೆಪ!

ಮೇ ತಿಂಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ದೇಶದ ಜಿಡಿಪಿಯ ಶೇಕಡಾ 10 ಕ್ಕೆ ಸಮನಾದ ಪ್ರಚೋದಕ ಪ್ಯಾಕೇಜ್ ಅನ್ನು ಘೋಷಿಸಿದ ಹೊರತಾಗಿಯು ಬೇಡಿಕೆ ಮತ್ತು ಉತ್ಪಾದನೆ ಇನ್ನೂ ಚೇತರಿಸಿಕೊಂಡಿಲ್ಲ.

ದೇಶದಲ್ಲಿ ಕೊರೊನಾ ಪ್ರಾರಂಭವಾಗುವುದಕ್ಕೆ ಮುಂಚೆ, ಆರ್ಥಿಕತೆಯು ನಿಧಾನಗತಿಯ ಬೆಳವಣಿಗೆ ಮತ್ತು ಕಡಿಮೆ ಬೇಡಿಕೆಯ ಹೊರತಾಗಿಯೂ, ಆರ್ಥಿಕತೆಯನ್ನು ಅಂದಾಜು 2.8 ಟ್ರಿಲಿಯನ್ ಡಾಲರ್‌‌ನಿಂದ 2024 ರವೇಳೆಗೆ 5 ಟ್ರಿಲಿಯನ್‌ ಡಾಲರ್‌ ಪರಿವರ್ತಿಸುವ ಗುರಿಯನ್ನು ಹೊಂದಿದೆ ಎಂದು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಹೇಳಿತ್ತು.

ಕಳೆದವಾರ ಕೇಂದ್ರ ಹಣಕಾಸು ಮಂತ್ರಿ ನಿರ್ಮಲಾ ಸೀತಾರಾಮ್, ‘ಕೊರೊನಾ ಸಾಂಕ್ರಾಮಿಕವು ದೇವರ ಕಾರ್ಯ. ಹಾಗಾಗಿಯೇ ಜಿಎಸ್‌ಟಿ ಸಂಗ್ರಹದಲ್ಲಿ ಕುಸಿತವಾಗಿದೆ’ ಎಂದು ಜಿಎಸ್‌ಟಿ ಕುಸಿತದ ಬಗ್ಗೆ ಹೇಳಿದ್ದರು.


ಇದನ್ನೂ ಓದಿ: ದೇವರ ಸಂದೇಶವಾಹಕರೆ, ಆರ್ಥಿಕ ತಪ್ಪು ನಿರ್ವಹಣೆಗೆ ಕಾರಣರ್ಯಾರು? ಪಿ.ಚಿದಂಬರಂ ಪ್ರಶ್ನೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ಸರ್ಕಾರ 5ಜಿ ಮೆಗಾ ಹಗರಣವನ್ನು ರೂಪಿಸುತ್ತಿದೆ: ಎಎಪಿ ಮುಖಂಡ ಸಂಜಯ್ ಸಿಂಗ್

0
2ಜಿ ಸ್ಪೆಕ್ಟ್ರಮ್ ಪ್ರಕರಣದಲ್ಲಿ 2012ರ ತೀರ್ಪನ್ನು ಮಾರ್ಪಾಡು ಮಾಡುವಂತೆ ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಮನವಿ ಸಲ್ಲಿಸಿದ ನಂತರ ಆಮ್ ಆದ್ಮಿ ಪಕ್ಷದ (ಎಎಪಿ) ಸಂಸದ ಸಂಜಯ್ ಸಿಂಗ್ ಅವರು ಪ್ರಧಾನಿ ನರೇಂದ್ರ...