ಫ್ಯಾಕ್ಟ್ ಚೆಕ್
ಟೈಮ್ಸ್ ನೌ, ರಿಪಬ್ಲಿಕ್ ಟಿವಿ, ದಿ ಪ್ರಿಂಟ್ ಮತ್ತು ಎಬಿಪಿ ನ್ಯೂಸ್ ಸೇರಿದಂತೆ ಹಲವಾರು ಮುಖ್ಯವಾಹಿನಿಯ ಸುದ್ದಿವಾಹಿನಿಗಳು ಈ ಸುದ್ದಿ ಪ್ರಕಟಿಸಿದ್ದಾರೆ. ಜಾಮಿಯತ್ ಉಲಮಾ-ಇ-ಹಿಂದ್ ಸಂಘಟನೆಯು ಸೋನಿಯಾಗೆ ಪತ್ರ ಬರೆದಿದ್ದು, ಮಹಾರಾಷ್ಟ್ರದಲ್ಲಿ ಶಿವಸೇನೆ, ಎನ್‌ಸಿಪಿ ಮತ್ತು ಕಾಂಗ್ರೆಸ್ ನಡುವಿನ ಸರ್ಕಾರ ರಚನೆ ಬೇಡವೆಂದು ಒತ್ತಾಯಿಸಿದೆ ಎಂದಿದ್ದಾರೆ. ಜಾಮಿಯತ್ ಅಧ್ಯಕ್ಷ ಅರ್ಷದ್ ಮದನಿ ಹೆಸರಿನಲ್ಲಿ ಪತ್ರ ಇದೆ.
ಮಹಾರಾಷ್ಟ್ರದಲ್ಲಿ ಸದ್ಯ ರಾಷ್ಟ್ರಪತಿ ಆಡಳಿತವಿದ್ದು ಇನ್ನು ಯಾವ ಪಕ್ಷಗಳು ಅಧಿಕಾರ ಹಿಡಿಯುವಲ್ಲಿ ವಿಫಲವಾಗಿರುವ ಸಂದರ್ಭದಲ್ಲಿ ಈ ಪ್ರತಕ್ಕೆ ಸಾಕಷ್ಟು ಮಹತ್ವ ಬಂದಿದ್ದು ವೈರಲ್ ಆಗಿದೆ.

“ಮಹಾರಾಷ್ಟ್ರದ ಕೆಟ್ಟ ರಾಜಕೀಯದ ಬಗ್ಗೆ ನಿಮ್ಮ ಗಮನವನ್ನು ಸೆಳೆಯಲು ನಾನು ಬಯಸುತ್ತೇನೆ, ಮತ್ತು ನೀವು ಶಿವಸೇನ ಅವರನ್ನು ಬೆಂಬಲಿಸಲು ಯೋಚಿಸುತ್ತಿರುವುದು ನಿಜಕ್ಕೂ ದುರದೃಷ್ಟಕರ, “ಇದು ಕಾಂಗ್ರೆಸ್ ಪಕ್ಷಕ್ಕೆ ಬಹಳ ಅಪಾಯಕಾರಿ ಮತ್ತು ಹಾನಿಕಾರಕ ಹೆಜ್ಜೆಯಾಗಿದೆ” ಎಂಬುದಾಗಿ ಪತ್ರದಲ್ಲಿದೆ.\
ನಿಜವೇನು?
ಆದರೆ ಅದು ಫೇಕ್ ಪತ್ರವಾಗಿದೆ ಎಂದು ಜಮಿಯತ್ ಉಲಾಮಾ-ಇ-ಹಿಂದ್ ಅವರು ನವೆಂಬರ್ 18, 2019 ರಂದು ಟ್ವೀಟ್ ಮಾಡಿದ್ದಾರೆ. ಹಾಗೆಯೇ ಅದರ ಉಪಾಧ್ಯಕ್ಷರಾದ ಮೌಲನಾ ಅಮಾನುಲ್ಲಾರವರು ಸಹ ಆ ರೀತಿಯ ಯಾವ ಪತ್ರವನ್ನು ನಾವು ಬರೆದಿಲ್ಲ. ಅದು ಸುಳ್ಳು ಪತ್ರ ಎಂದು ಸ್ಪಷ್ಟಪಡಿಸಿದ್ದಾರೆ.
ಯಾರೋ ಕಿಡಿಗೇಡಿ ಮದನಿಯವರ ಹೆಸರಿನಲ್ಲಿ ಸುಳ್ಳುಪತ್ರ ಪ್ರಕಟಿಸಿದ್ದಾರೆ ಅಷ್ಟೇ. ಈ ಮೂಲಕ ಜನರಲ್ಲಿ ಗೊಂದಲ ಮೂಡಿಸುವುದು ಕಿಡಿಗೇಡಿಗಳ ತಂತ್ರವಾಗಿದೆ.


