“ಜನರು ಮುಸ್ಲಿಮರು ಮತ್ತು ಕಾಶ್ಮೀರದ ಜನತೆಯ ವಿರುದ್ಧ ಇರಬೇಕೆಂದು ನಾವು ಬಯಸುವುದಿಲ್ಲ, ನಮಗೆ ಶಾಂತಿ ಬೇಕು, ನಮಗೆ ನ್ಯಾಯ ಬೇಕು” ಎಂದು ಏಪ್ರಿಲ್ 22ರಂದು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಭಯೋತ್ಪಾದಕರ ಗುಂಡಿಗೆ ಬಲಿಯಾದ ನೌಕಾಪಡೆ ಅಧಿಕಾರಿ ವಿನಯ್ ನರ್ವಾಲ್ ಅವರ ಪತ್ನಿ ಹಿಮಾಂಶಿ ನರ್ವಾಲ್ ಮಾಧ್ಯಮಗಳ ಮುಂದೆ ಹೇಳಿದ್ದಾರೆ.
ಗುರುವಾರ (ಮೇ 1) ದಿವಗಂತ ವಿನಯ್ ನರ್ವಾಲ್ ಅವರ 27ನೇ ವರ್ಷದ ಜನ್ಮದಿನವಾಗಿತ್ತು. ಆದರೆ, ಅವರು ಅಗಲಿರುವ ಕಾರಣ, ಸ್ಮರಣಾರ್ಥವಾಗಿ ಹರಿಯಾಣದ ಕರ್ನಾಲ್‌ನಲ್ಲಿ ರಕ್ತದಾನ ಶಿಬಿರ ಆಯೋಜಿಸಲಾಗಿತ್ತು.
ಸರ್ಕಾರೇತರ ಸಂಸ್ಥೆ ನ್ಯಾಷನಲ್ ಇಂಟರ್‌ಗ್ರೇಟೆಡ್ ಫೋರಂ ಆಫ್ ಆರ್ಟಿಸ್ಟ್ ಅಂಡ್ ಆಕ್ಟಿವಿಸ್ಟ್ (ಎನ್‌ಐಎಫ್‌ಎಎ) ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಹಿಮಾಂಶಿ ಅವರು, “ಈ ಘಟನೆಗೆ ಕಾರಣರಾದವರನ್ನು ಶಿಕ್ಷಿಸಬೇಕು, ಆದರೆ ದ್ವೇಷ ಇರಬಾರದು” ಎಂದಿದ್ದಾರೆ.
This is a slap to Right Wing hatemongers by Himanshi, wife of Indian Navy Lieutenant Vinay Narwal, who was killed in the Pahalgam terror attack. "We don't want people going against Muslims or Kashmiris. We want peace and only peace. Of course, we want justice," pic.twitter.com/gcDpMpWss3
— Mohammed Zubair (@zoo_bear) May 1, 2025
ವಿನಯ್ ನರ್ವಾಲ್ ಅವರ ತಾಯಿ ಮತ್ತು ಸಹೋದರಿ ಸೇರಿದಂತೆ ಅವರ ಕುಟುಂಬಸ್ಥರು ಕಾರ್ಯಕ್ರಮದಲ್ಲಿ ಹಾಜರಿದ್ದರು. ಸಹೋದರಿ ಸೃಷ್ಟಿ ಮಾಧ್ಯಮಗಳೊಂದಿಗೆ ಮಾತನಾಡಿ, ರಕ್ತದಾನ ಶಿಬಿರದಲ್ಲಿ ಭಾಗವಹಿಸಿದ ಎಲ್ಲರಿಗೂ ಧನ್ಯವಾದ ಅರ್ಪಿಸಿದ್ದಾರೆ. ಜನರು ಮತ್ತು ಸರ್ಕಾರದಿಂದ ನಮಗೆ ದೊಡ್ಡ ಮಟ್ಟದ ಬೆಂಬಲ ಸಿಕ್ಕಿದೆ ಎಂದಿದ್ದಾರೆ.
ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಎನ್‌ಐಎಫ್‌ಎಎ ಅಧ್ಯಕ್ಷೆ ಪ್ರೀತ್ಪಾಲ್ ಸಿಂಗ್ ಪನ್ನು, “ವರ್ಷಗಳ ಕಾಲ ಸೇವೆ ಸಲ್ಲಿಸಿದ್ದ ಯುವ ಅಧಿಕಾರಿಯೊಬ್ಬರು ಭಯೋತ್ಪಾದನೆಗೆ ಬಲಿಯಾದರು. ಸೈನಿಕರು ಯುದ್ಧಭೂಮಿಯಲ್ಲಿ ರಕ್ತ ಸುರಿಸಿದರೆ, ಅವರ ನೆನಪಿಗಾಗಿ ನಾವು ಇಂದು ರಕ್ತದಾನ ಮಾಡುತ್ತಿದ್ದೇವೆ- ಜೀವಗಳನ್ನು ಉಳಿಸಲು” ಎಂದು ಹೇಳಿದ್ದಾರೆ.
ರಕ್ತದಾನ ಶಿಬಿರದಲ್ಲಿ ಸ್ಥಳೀಯ ಶಾಸಕ ಜಗಮೋಹನ್ ಆನಂದ್ ಮತ್ತು ಇತರರು ರಕ್ತದಾನ ಮಾಡಿದ್ದಾರೆ. “ಯಾವುದೇ ಗೌರವವು ಶೂನ್ಯವನ್ನು ತುಂಬಲು ಸಾಧ್ಯವಿಲ್ಲ. ವಿನಯ್ ನರ್ವಾಲ್ ಅವರ ತ್ಯಾಗವನ್ನು ಗೌರವಿಸಲು ನಾವು ಮಾಡಬಹುದಾದ ಕನಿಷ್ಠ ಕೆಲಸ ಇದು” ಎಂದು ಶಿಬಿರದಲ್ಲಿ ಪಾಲ್ಗೊಂಡವರು ಹೇಳಿದ್ದಾರೆ.
ದಲಿತ ದೌರ್ಜನ್ಯ ಪ್ರಕರಣ: ಧರ್ಮಪುರಿಯಲ್ಲಿ ಪರಿಶಿಷ್ಟ ಜಾತಿ ಬಾಲಕನ ಮೇಲೆ ಹಲ್ಲೆ