Homeನೂರರ ನೋಟಮತದಾರರ ಆಲೋಚನಾ ಶಕ್ತಿಯನ್ನು ಕಸಿದುಕೊಂಡ ಮೋದಿ: ಎಚ್ ಎಸ್ ದೊರೆಸ್ವಾಮಿ

ಮತದಾರರ ಆಲೋಚನಾ ಶಕ್ತಿಯನ್ನು ಕಸಿದುಕೊಂಡ ಮೋದಿ: ಎಚ್ ಎಸ್ ದೊರೆಸ್ವಾಮಿ

ಯುವಕರಿಗೆ ವರ್ಷಕ್ಕೆ 2ಕೋಟಿ ಉದ್ಯೋಗ ಸೃಷ್ಟಿಸುವುದಾಗಿ ಹೇಳಿ ಓಟು ಕಿತ್ತುಕೊಂಡರು. ಈಗಲಾದರೂ ಯುವ ಮತದಾರರು ಎಚ್ಚೆತ್ತುಕೊಳ್ಳಬೇಡವೆ?

- Advertisement -
- Advertisement -

ಭಾರತೀಯ ಮತದಾರರಲ್ಲಿ ಕೆಲವರು ಜಾತಿಗೆ, ದುಡ್ಡಿಗೆ, ಹೆಂಡಕ್ಕೆ ತಮ್ಮನ್ನು ಮಾರಾಟ ಮಾಡಿಕೊಂಡರೂ, ಒಟ್ಟಿನಲ್ಲಿ ಅವರು ಜಾಣರಾಗಿದ್ದರು. ಒಮ್ಮೆ ಕಾಂಗ್ರೆಸ್ಸಿಗೆ ಅತ್ಯಧಿಕ ಮತ ನೀಡಿ ಗೆಲ್ಲಿಸುತ್ತಿದ್ದರು. ಅವರು ಸರಿಯಾಗಿ ಸರ್ಕಾರ ನಿರ್ವಹಿಸಿಲ್ಲ ಎಂದಾದರೆ ಮುಂದಿನ ಚುನಾವಣೆಯಲ್ಲಿ ಎಲ್ಲ ಮತದಾರರೂ ಕುಳಿತು ಮಾತಾಡಿಕೊಂಡು, ತೀರ್ಮಾನ ಕೈಗೊಂಡಹಾಗೆ ಮುಂದಿನ ಚುನಾವಣೆಯಲ್ಲಿ ಮತ್ತೊಂದು ಪಕ್ಷಕ್ಕೆ ಬಹುಮತ ನೀಡಿ ಹಿಂದಿನ ಸರ್ಕಾರವನ್ನು ಉರುಳಿಸುತ್ತಿದ್ದರು. ಇದು ಸ್ವಾತಂತ್ರ್ಯ ಪ್ರಾಪ್ತವಾದ 30 ವರ್ಷಗಳ ಮೇಲೆ ಮತದಾರರಲ್ಲಿ ಆದ ಬದಲಾವಣೆ. ಮತದಾರರು ಹೆಚ್ಚು ಓದಿಲ್ಲದಿರಬಹುದು. ಆದರೆ ಅವರಿಗೆ ವ್ಯವಹಾರ ಜ್ಞಾನ ಬಹಳಷ್ಟಿತ್ತು. ಯಾವುದು ಒಳ್ಳೆಯ ಆಡಳಿತ, ಕೆಟ್ಟ ಆಡಳಿತ ಯಾವುದು ಎನ್ನುವುದನ್ನು ಗ್ರಹಿಸುವಷ್ಟು ತಿಳಿವಳಿಕೆ ಇತ್ತು. ಆದರೆ ಅವರಿಗಿದ್ದ ಅವಕಾಶ ಸೀಮಿತ. ಸ್ಪರ್ಧಿಸಿರುವ ರಾಜಕೀಯ ಪಕ್ಷಗಳಲ್ಲಿ ಒಂದನ್ನು ಆಯ್ಕೆ ಮಾಡುವ ಹಕ್ಕು ಮಾತ್ರ ಇದ್ದು ಆದ್ದರಿಂದ ಅವರು ಈ ಜವಾಬ್ದಾರಿ ನಿರ್ವಹಿಸುತ್ತಿದ್ದರು.

ಮೋದಿಯವರು ಅಧಿಕಾರಕ್ಕೆ ಬಂದಮೇಲೆ ಎಲ್ಲಾ ತಲೆಕೆಳಗಾಯಿತು. ಮತದಾರ ತನ್ನ ಆಲೋಚನಾ ಶಕ್ತಿಯನ್ನು ಕಳೆದುಕೊಂಡ. ದೇಶ ಮತ್ತು ತನ್ನ ಭವಿಷ್ಯದ ಬಗ್ಗೆ ಕಾಳಜಿ ವಹಿಸುತ್ತಿದ್ದ ಮತದಾರ ಈಗ ಮೋದಿ, ಅವರ ಪೊಳ್ಳು ಘೋಷಣೆಗೆ ಬಲಿಯಾಗುತ್ತಿದ್ದಾನೆ. ಸ್ವಂತಿಕೆಯ ಗುಣ ಏಕೆ ಕಳೆದುಕೊಂಡ ಎಲ್ಲದರ ಕುರಿತು ಗಂಭೀರವಾಗಿ ವಿಚಾರ ಮಾಡಬೇಕೆಂದು ಮತದಾರರಲ್ಲಿ ವಿನಂತಿಮಾಡಿಕೊಳ್ಳುತ್ತೇನೆ. ಆವೇಶಕ್ಕೆ ಎಡೆಮಾಡದೆ ಮತದಾರ ದೇಶದ ಪರಿಸ್ಥಿತಿಯ ಬಗೆಗೆ ಗಮನ ಕೊಡಬೇಕು. ಅಬ್ಬರದ ಪ್ರಚಾರ ಭಾಷಣಗಳು, ಪೊಳ್ಳು ಘೋಷಣೆಗಳು, ಯುದ್ಧದ ಮಾತನಾಡಿ ತನ್ನಿಂದಲೇ ಈ ದೇಶದ ರಕ್ಷಣೆ ಸಾಧ್ಯ, ಹಿಂದಿನವರು ಏನೂ ಮಾಡದೆ ನಿಷ್ಕ್ರೀಯರಾಗಿದ್ದರು ನಾನು ದೇವದೂತ ಅವತರಿಸಿ ಬಂದಿದ್ದೇನೆ ಎಂಬ ರೀತಿಯಲ್ಲಿ ಮೋದಿಯವರು ಮಾತನಾಡುತ್ತಾರೆ. ಹಿಂದೆ ಸರ್ಕಾರ ನಡೆಸಿದವರು ಪಾಕಿಸ್ತಾನದ ಮೇಲೆ 2 ಸಾರಿ ಯುದ್ಧದಲ್ಲಿ ಗೆದ್ದಿದ್ದಾರೆ ಎಂಬುದನ್ನು ಮೋದಿ ತಿಳಿಯಬೇಕು. ನೆಹರು ಕಾಲದಲ್ಲಿ ಚೀನೀಯರು ಭಾರತ ಭಾಯಿ ಭಾಯಿ ಎಂದು ಸ್ಲೋಗನ್ ಹಾಕುತ್ತ ಏಮಾರಿಸಿ ಭಾರತದ ಮೇಲೆ ಏಕಾಏಕಿ ಯುದ್ಧ ಹೂಡಿದರು. ಚೀನೀಯರು ನಂಬಿಕೆದ್ರೋಹಿಗಳು ಎಂಬುದನ್ನು ಸಾಬೀತುಮಾಡಿಕೊಟ್ಟರು. ಯುದ್ಧದ ಸುಳಿವು ಕೂಡ ಕೊಡದೆ ಹಠಾತ್ತಾಗಿ ಮೇಲೆ ಏರಗಿದರು. ಭಾರತೀಯ ಸೈನ್ಯ ಯುದ್ಧದ ಮೂಡಿನಲ್ಲೇ ಇರಲಿಲ್ಲ. ಆದರೆ ಮೋದಿಯವರು, ಜವಾಹರ್‌ಲಾಲ್‌ರನ್ನು ಹಂಗಿಸಲು ಚೈನಾದ ವಿಚಾರ ಪ್ರಸ್ತಾಪ ಮಾಡುತ್ತಾರೆ. ಯಾವ ಸರ್ಕಾರ ಬರಲಿ ದೇಶ ರಕ್ಷಣೆ ಮಾಡಬೇಕಾದದ್ದು ಅವರ ಕರ್ತವ್ಯ. ಅದನ್ನು ಅವರು ಮಾಡೇ ಮಾಡುತ್ತಾರೆ. ಭಾರತ ಸೈನ್ಯವನ್ನು ಮೊದಲ ಬಾರಿಗೆ ಮೋದಿ ಬಂದು ಸಂಘಟಿಸಲಿಲ್ಲ ಭಾರತೀಯ ಸೈನ್ಯ ಮೊದಲಿನಿಂದಲೂ ಬಲಿಷ್ಠವಾಗಿದೆ. ಸುಸಂಘಟಿತವಾಗಿದೆ. ಇದನ್ನು ನಮ್ಮ ಮತದಾರರು ತಿಳಿಯಬೇಕು. ಆವೇಶ ತೋರುವವರಿಗೆ ನಮಗೂ ಭಾರತೀಯ ಸೈನ್ಯದ ಬಲದ ಬಗೆಗೆ ಅರಿವಿದೆ, ನೀವು ಉತ್ಪ್ರೇಕ್ಷೆ ಮಾಡಿ ಸುಳ್ಳು ಪ್ರಚಾರ ಮಾಡಬೇಡಿ ಎಂದು ಖಡಕ್ಕಾಗಿ ಹೇಳಬೇಕು.

ಮೋದಿಯವರು ಅಧಿಕಾರಕ್ಕೆ ಬಂದು 6 ವರ್ಷ ಆಯಿತು. ಈ 6 ವರ್ಷದಲ್ಲಿ ಏನೇನು ನಡೆಯಿತು ಎಂಬುದನ್ನು ಮತದಾರರು ಗಮನಿಸಬೇಕು. 1000, 500ರೂಗಳ ಹಳೇ ನೋಟುನ್ನು ರದ್ದು ಮಾಡಿದ್ದರಿಂದ ಕಪ್ಪು ಹಣ ಹೊರಬರಲಿಲ್ಲ, ಭ್ರಷ್ಟಾಚಾರ ಕಡಿಮೆಯಾಗಲಿಲ್ಲ. ಅದರ ಬದಲು ಬ್ಯಾಂಕ್ ಅಧಿಕಾರಿಗಳು, ರಾಜಕಾರಣಿಗಳು ಕೂಡಿಕೊಂಡು ಲಕ್ಷಾಂತರ ಕಪ್ಪುಹಣವನ್ನೆಲ್ಲ ಬಿಳೀದು ಮಾಡಿಕೊಂಡರು. ಪಟ್ಟಭದ್ರರ ಹಿತಕಾಯ್ದರು.

ಮೋದಿಯ ನೋಟು ಅಮಾನ್ಯೀಕರಣದ ಅಮಾನವೀಯತೆ

ಯುವಕರಿಗೆ ವರ್ಷಕ್ಕೆ 2ಕೋಟಿ ಉದ್ಯೋಗ ಸೃಷ್ಟಿಸುವುದಾಗಿ ಹೇಳಿ ಓಟು
ಕಿತ್ತುಕೊಂಡರು. ಈಗಲಾದರೂ ಯುವ ಮತದಾರರು ಎಚ್ಚೆತ್ತುಕೊಳ್ಳಬೇಡವೆ?

109 ರೈಲು ಮಾರ್ಗಗಳನ್ನು ಖಾಸಗಿಯವರಿಗೆ ವಹಿಸುವ, ಕಲ್ಲಿದ್ದಲು ಗಣಿಗಳನ್ನು ಖಾಸಗಿಯವರಿಗೆ ಹರಾಜು ಮಾಡುವ ಸರ್ಕಾರದ ಷೇರುಗಳನ್ನು ಮಾರಿಹಾಕುತ್ತ ಇಂತಹ ಎಷ್ಟೋ ಅವಿವೇಕದ ಕೆಲಸಗಳನ್ನು ಮೋದಿ ಕೈಗೆತ್ತಿಕೊಂಡಿದ್ದಾರೆ. ದೊಡ್ಡ ಬಹುಮತ ಇದೆಯೆಂದು ಜನದ್ರೋಹಿ ಕೆಲಸಗಳನ್ನು ಎಗ್ಗಿಲ್ಲದೆ ಮಾಡುತ್ತಿದ್ದಾರೆ. ಕೊರೊನಾದಿಂದ ಜನ ಒಂದೇಸಮನೆ ಸಾಯುತ್ತಿದ್ದರೆ, ಜನಪರ ಕಾಯ್ದೆಗಳಿಗೆ ತಮಗೆ ಬೇಕಾದಂತೆ ತಿದ್ದುಪಡಿ ತಂದು ಸುಗ್ರೀವಾಜ್ಞೆ ಹೊರಡಿಸುವುದರಲ್ಲಿ ಮೋದಿ ಮಗ್ನರಾಗಿದ್ದಾರೆ. ಇದನ್ನು ಪ್ರಶ್ನಿಸಿದರೆ ಅಂಥವರ ಧ್ವನಿಯನ್ನು ಅಡಗಿಸಲಾಗುತ್ತದೆ.

ಕಾಶ್ಮೀರಕ್ಕೆ ಸಂಬಂಧಪಟ್ಟ 371ನೇ ವಿಧಿಯನ್ನು ಸಂವಿಧಾನ ಬದಲಾಯಿಸಿದೆ ರದ್ದುಗೊಳಿಸಲಾಗಿದೆ. ಕಾಶ್ಮೀರದ ಜನತೆಯಲ್ಲಿ ಈ ವಿಚಾರ ಪ್ರಸ್ತಾಪಿಸದೆ ಸರ್ವಾಧಿಕಾರಿ ಮನೋಭಾವದಿಂದ ಈ ವಿಧಿಯನ್ನು ರದ್ದು ಮಾಡಲಾಗಿದೆ. ವಿಶ್ವವಿದ್ಯಾಲಯಗಳ ಕುಲಪತಿಗಳನ್ನಾಗಿ ಹಿಂದುತ್ವ ಪ್ರತಿಪಾದಕರನ್ನೇ ನೇಮಿಸಲಾಗುತ್ತಿದೆ. ನಾಯಕರನ್ನು ಪ್ರಶ್ನಿಸಬಾರದು ಅವರು ಹೇಳಿದಂತೆ ಕೇಳಿಕೊಂಡಿರಬೇಕು ಎಂದು ಆರ್‌ಎಸ್‌ಎಸ್ ಸಿದ್ಧಾಂತ ಹೇಳುತ್ತದೆ. ಅದನ್ನೇ ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳಿಗೂ ಅನ್ವಯಿಸುವ ಕೆಲಸ ಆರಂಭವಾಗಿದೆ. ಸಾರ್ವಜನಿಕ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ. ಸಂವಿಧಾನದ ಮೇಲೆ ದಾಳಿ ನಡೆಸಿ ಪೌರತ್ವ(ತಿದ್ದುಪಡಿ) ಶಾಸನವನ್ನು ಜಾರಿಗೊಳಿಸಲು ಪ್ರಯತ್ನಿಸುತ್ತಿದೆ. ಇದಕ್ಕೆ ಸಾಕಷ್ಟು ಪ್ರತಿಭಟನೆ ನಡೆದಿದೆ. ವೈಚಾರಿಕ ಚಿಂತನೆ ಮಾಡುವವರ ಮೇಲೆ ದಾಳಿ ನಡೆಸಲಾಗಿದೆ. ಈ 6 ವರ್ಷಗಳಲ್ಲಿ 200 ಪತ್ರಕರ್ತರ ಮೇಲೆ ದಾಳಿ ನಡೆದಿದೆ. ಒಂದೆರಡು ಪ್ರಕರಣಗಳನ್ನು ಬಿಟ್ಟರೆ ಯಾವುದರ ವಿಚಾರಣೆಯೂ ಆಗಿಲ್ಲ. ಇದೆಲ್ಲವನ್ನೂ ಮತದಾರರು ಪ್ರಶ್ನಿಸದಿದ್ದಲ್ಲಿ ಮುಂದೆ ಭಾರೀ ಅನಾಹುತ ಎದುರಿಸಬೇಕಾಗುತ್ತದೆ.

  • ಎಚ್.ಎಸ್ ದೊರೆಸ್ವಾಮಿ, ಹಿರಿಯ ಸ್ವಾತಂತ್ರ್ಯ ಹೋರಾಟಗಾರರು, ಜನಪರ ಚಿಂತಕರು.

ಇದನ್ನೂ ಓದಿ: ಊಟ, ಉದ್ಯೋಗ, ಸ್ವಾವಲಂಬನೆ ಎಲ್ಲರ ಹಕ್ಕಾಗಲಿ: 103ನೇ ಜನ್ಮದಿನದಂದು HS ದೊರೆಸ್ವಾಮಿಯವರ ಆಶಯ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಜಾರ್ಖಂಡ್‌ನಲ್ಲಿ ಮತ್ತೊಂದು ಗುಂಪುಹತ್ಯೆ: ದನ ಕಳ್ಳತನದ ಶಂಕೆಯಲ್ಲಿ ಮುಸ್ಲಿಂ ವ್ಯಕ್ತಿಯನ್ನು ಥಳಿಸಿ ಕೊಂದ ಗುಂಪು

ಜಾರ್ಖಂಡ್‌ನ ಗೊಡ್ಡಾ ಜಿಲ್ಲೆಯಲ್ಲಿ ಬುಧವಾರ ದನಗಳನ್ನು ಕದ್ದಿದ್ದಾನೆ ಎಂಬ ಶಂಕೆಯಲ್ಲಿ 45 ವರ್ಷದ ಮುಸ್ಲಿಂ ವ್ಯಕ್ತಿಯನ್ನು ಅಪರಿಚಿತ ಜನರ ಗುಂಪೊಂದು ಹೊಡೆದು ಕೊಂದಿದೆ ಎಂದು ಪಿಟಿಐ ವರದಿ ಮಾಡಿದೆ. ಪೊಲೀಸ್ ಅಧಿಕಾರಿಗಳನ್ನು ಉಲ್ಲೇಖಿಸಿ ವರದಿ...

ನ್ಯಾಷನಲ್ ಹೆರಾಲ್ಡ್ ಜಾಹೀರಾತು ವಿವಾದ: ಹಣಕಾಸಿನ ದಾಖಲೆ ಕೇಳಿ ಡಿಕೆ ಸಹೋದರರಿಗೆ ನೋಟಿಸ್  

ಕಾಂಗ್ರೆಸ್ ನೇತೃತ್ವದ ಕರ್ನಾಟಕ ಸರ್ಕಾರದಿಂದ ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ಬೇರೆ ಯಾವುದೇ ರಾಷ್ಟ್ರೀಯ ದಿನಪತ್ರಿಕೆಗಿಂತ ಹೆಚ್ಚಿನ ಜಾಹೀರಾತು ನಿಧಿ ದೊರೆತಿದೆ ಎಂದು ವರದಿಯಾಗಿದೆ, ಇದು ಸಾರ್ವಜನಿಕ ಹಣದ ಬಳಕೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ....

ಬಿಹಾರ: ಸರ್ಕಾರಿ ಶಾಲಾ ಶಿಕ್ಷಕರಿಗೆ ಬೀದಿ ನಾಯಿಗಳನ್ನು ಎಣಿಸುವ ಹೆಚ್ಚುವರಿ ಕರ್ತವ್ಯ ವಹಿಸಿದ ಪುರಸಭೆ  

ಪಾಟ್ನಾ: ಸುಪ್ರೀಂ ಕೋರ್ಟ್ ಬೀದಿ ನಾಯಿಗಳ ವಿಚಾರದಲ್ಲಿ ಮಹತ್ವದ ಆದೇಶ ನೀಡಿದೆ. ಸಾರ್ವಜನಿಕ ರಸ್ತೆಗಳು, ಬೀದಿಗಳು ಬೀದಿನಾಯಿ ಮುಕ್ತವಾಗಿರಬೇಕು ಎಂದು ಹೇಳಿದೆ. ಆದರೆ ಈ ಆದೇಶ ಸರ್ಕಾರಿ ಶಾಲಾ ಶಿಕ್ಷಕರ ಪಾಲಿಗೆ ದೊಡ್ಡ...

ಮಮತಾ ಬ್ಯಾನರ್ಜಿಯ ರಾಜಕೀಯ ಸಲಹಾ ಸಂಸ್ಥೆ ಐ-ಪ್ಯಾಕ್, ಅದರ ಮುಖ್ಯಸ್ಥ ಪ್ರತೀಕ್ ಜೈನ್ ಮನೆ ಮೇಲೆ ಇಡಿ ದಾಳಿ

ಗುರುವಾರ (ಜ.8) ಬೆಳಿಗ್ಗೆ ಕೋಲ್ಕತ್ತಾದ ಸಾಲ್ಟ್ ಲೇಕ್‌ನಲ್ಲಿರುವ ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ದಾಳಿ...

ಉತ್ತರಪ್ರದೇಶ: ಕಬ್ಬಿನ ಗದ್ದೆಯಲ್ಲಿ ಸುಟ್ಟ, ಅರೆನಗ್ನ ಮಹಿಳೆಯ ಮೃತದೇಹ ಪತ್ತೆ: ಅತ್ಯಾಚಾರ ಮಾಡಿ ಬೆಂಕಿ ಹಚ್ಚಿರುವ ಶಂಕೆ

ಹಾಪುರ್: ಉತ್ತರ ಪ್ರದೇಶದ ಹಾಪುರ್ ಜಿಲ್ಲೆಯಲ್ಲಿ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದ್ದು, ಬಹದ್ದೂರ್‌ಗಢ ಪೊಲೀಸ್ ಠಾಣೆ ವ್ಯಾಪ್ತಿಯ ಲಹಾದ್ರಾ ಗ್ರಾಮದ ಇಟ್ಟಿಗೆ ಗೂಡುಗಳ ಹಿಂದಿನ ಕಬ್ಬಿನ ಗದ್ದೆಯಲ್ಲಿ ಸುಮಾರು 30 ವರ್ಷ ವಯಸ್ಸಿನ...

ಗೋಮಾಂಸ ಸೇವನೆ ಶಂಕೆಯಲ್ಲಿ ಮಾನಸಿಕ ಅಸ್ವಸ್ಥ ವ್ಯಕ್ತಿಯ ಮೇಲೆ ಕ್ರೂರ ಹಲ್ಲೆ : ಮೂವರು ದುಷ್ಕರ್ಮಿಗಳ ಬಂಧನ

ಸಾರ್ವಜನಿಕವಾಗಿ ಹಸುವನ್ನು ಕೊಂದು, ಅದರ ಮಾಂಸವನ್ನು ತಿಂದಿದ್ದಾರೆ ಎಂದು ಆರೋಪಿಸಿ ಮಾನಸಿಕ ಅಸ್ವಸ್ಥ ವ್ಯಕ್ತಿ ಮೇಲೆ ಸ್ವಘೋಷಿತ ಗೋರಕ್ಷಕರು ಕ್ರೂರವಾಗಿ ಹಲ್ಲೆ ನಡೆಸಿದ ಘಟನೆ ರಾಜಸ್ಥಾನದ ಝಾಲಾವರ್ ಜಿಲ್ಲೆಯ ಅಕ್ಲೇರಾ ತಾಲೂಕಿನ ಕಿಶನ್‌ಪುರ...

‘ನಿಮ್ಮನ್ನು ನಂಬಿ ಬಂದ ನಕ್ಸಲ್ ಕಾರ್ಯಕರ್ತರಿಗೆ ಕೊಟ್ಟ ಮಾತು ಉಳಿಸಿಕೊಳ್ಳಿ’: ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದ ಶಾಂತಿಗಾಗಿ ನಾಗರೀಕ ವೇದಿಕೆ

ಬೆಂಗಳೂರು: ‘ಮುಖ್ಯವಾಹಿನಿಗೆ ಬಂದ ಏಳೂ ಜನ ನಕ್ಸಲೀಯರು ಜೈಲಿನಲ್ಲೇ ಇದ್ದಾರೆ. ಬಹಳ ಸೊರಗಿದ್ದಾರೆ. ತೀವ್ರ ದೈಹಿಕ ಹಾಗೂ ಮಾನಸಿಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಅವರನ್ನು ಹೋಗಿ ಕಾಣುವುದೇ ನಮ್ಮ ಪಾಲಿಗೆ ದೊಡ್ಡ ಹಿಂಸೆಯಾಗಿದೆ ಎಂದು...

ಕೋಗಿಲು ಮನೆಗಳ ನೆಲಸಮ : ಪ್ರತಿಭಟಿಸಿದ ಹೋರಾಟಗಾರರ ಮೇಲೆ ಎಫ್‌ಐಆರ್

ಕೋಗಿಲು ಬಡಾವಣೆಯಲ್ಲಿ ಬಡವರ ಮನೆಗಳ ನೆಲಸಮ ವೇಳೆ ಬಿಗುವಿನ ವಾತಾವರಣ ಸೃಷ್ಟಿಸಿದ್ದಾರೆ ಎಂಬ ಆರೋಪದ ಮೇಲೆ ಹೋರಾಟಗಾರರ ವಿರುದ್ದ ಯಲಹಂಕ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಜನಪರ ವೇದಿಕೆಯ ಮುಖಂಡರಾದ ಗೌರಮ್ಮ ಮತ್ತು ಮನೋಹರ್,...

17 ವರ್ಷದ ಮಹಿಳಾ ಅಥ್ಲೀಟ್ ಮೇಲೆ ಲೈಂಗಿಕ ದೌರ್ಜನ್ಯ ಆರೋಪ: ರಾಷ್ಟ್ರೀಯ ಶೂಟಿಂಗ್ ತರಬೇತುದಾರ ಅಮಾನತು

ಫರಿದಾಬಾದ್‌ನ ಹೋಟೆಲ್‌ನಲ್ಲಿ 17 ವರ್ಷದ ರಾಷ್ಟ್ರಮಟ್ಟದ ಮಹಿಳಾ ಶೂಟರ್ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಹರಿಯಾಣ ಪೊಲೀಸರು ಪ್ರಕರಣ ದಾಖಲಿಸಿದ ನಂತರ ರಾಷ್ಟ್ರೀಯ ಶೂಟಿಂಗ್ ತರಬೇತುದಾರ ಅಂಕುಶ್ ಭಾರದ್ವಾಜ್ ಅವರನ್ನು...

ಸುಪ್ರೀಂ ಕೋರ್ಟ್‌ನಿಂದ ಜಾಮೀನು : ಗುಲ್ಫಿಶಾ ಫಾತಿಮಾ ಸೇರಿದಂತೆ ನಾಲ್ವರು ಜೈಲಿನಿಂದ ಬಿಡುಗಡೆ

ಈಶಾನ್ಯ ದೆಹಲಿಯ 2020ರ ಗಲಭೆ ಪಿತೂರಿ ಆರೋಪದಲ್ಲಿ ಬಂಧಿತರಾಗಿದ್ದ ನಾಲ್ವರು ವಿದ್ಯಾರ್ಥಿ ಹೋರಾಟಗಾರರು ಬುಧವಾರ (ಜ.7) ಜೈಲಿನಿಂದ ಹೊರ ಬಂದಿದ್ದಾರೆ. ಗುಲ್ಫಿಶಾ ಫಾತಿಮಾ, ಮೀರಾನ್ ಹೈದರ್, ಶಿಫಾ ಉರ್ ರೆಹಮಾನ್ ಮತ್ತು ಮೊಹಮ್ಮದ್ ಸಲೀಮ್...