Homeಚಳವಳಿಸರ್ಕಾರವನ್ನು ಪ್ರಶ್ನಿಸಬೇಕೆ ಹೊರತು ವಿರೋಧ ಪಕ್ಷಗಳನ್ನಲ್ಲ: ಮಂಗಳೂರಿನಲ್ಲಿ ಕನ್ಹಯ್ಯ ಕುಮಾರ್ ಭಾಷಣ

ಸರ್ಕಾರವನ್ನು ಪ್ರಶ್ನಿಸಬೇಕೆ ಹೊರತು ವಿರೋಧ ಪಕ್ಷಗಳನ್ನಲ್ಲ: ಮಂಗಳೂರಿನಲ್ಲಿ ಕನ್ಹಯ್ಯ ಕುಮಾರ್ ಭಾಷಣ

- Advertisement -
- Advertisement -

ಬಿ.ವಿ. ಕಕ್ಕಿಲ್ಲಾಯ ಜನ್ಮಶತಾಬ್ದಿ ಕಾರ್ಯಕ್ರಮವು ಮಂಗಳೂರಿನ ಬಲ್ಮಠ ಸಹೋದಯ ಸಭಾಂಗಣದಲ್ಲಿ ನಡೆಯಿತು. ಎ.ಐ.ಎಸ್.ಎಫ್ ನ ವಿದ್ಯಾರ್ಥಿ ನಾಯಕ ಡಾ. ಕನ್ನಯ ಕುಮಾರ್ ಕಾರ್ಯಕ್ರಮದಲ್ಲಿ ಭಾಗಿಯಾಗಿ ‘ಕವಲು ದಾರಿಯಲ್ಲಿ ಭಾರತದ ಯುವಜನರು’ ವಿಷಯದ ಕುರಿತು ಮಾತನಾಡಿದರು. ಅವರ ಭಾಷಣದ ವಿವರ ಇಲ್ಲಿದೆ.

ದೇಶದ ಹಲವು ರಾಜ್ಯಗಳಲ್ಲಿ ಪ್ರವಾಹಕ್ಕೆ ತುತ್ತಾಗ ಜನರಿಗೆ ಶ್ರದ್ದಾಂಜಲಿಯನ್ನು ಸಲ್ಲಿಸುತ್ತೇನೆ. ಬಿ.ವಿ. ಕಕ್ಕಿಲ್ಲಾಯರವರಿಗೆ ಗೌರವಗಳನ್ನು ಸಲ್ಲಿಸುತ್ತೇನೆ. ಕವಲು ದಾರಿಯಲ್ಲಿ ಭಾರತದ ಯುವಜನರು ಎಂಬ ವಿಷಯದ ಬಗ್ಗೆ ನಾನೀಗ ಮಾತಾಡಲಿದ್ದೇನೆ. ಅದಕ್ಕಿಂತ ಮುಂಚೆ ನಿಮ್ಮ ಅನುಮತಿಯೊಂದಿಗೆ ಹಿಂದಿಯಲ್ಲಿ ಮಾತಾಡುತ್ತೇನೆ. ಏಕೆಂದರೆ ನನಗೆ ಇಂಗ್ಲಿಷ್ ಅಷ್ಟು ಚೆನ್ನಾಗಿ ಮಾತನಾಡಲು ಬರುವುದಿಲ್ಲ.

ನಾನು ಖಂಡಿತಾ ಹಿಂದಿಯನ್ನು ನಿಮ್ಮ ಮೇಲೆ ಹೇರುವುದಿಲ್ಲ. ನಾನು ನನ್ನ ಮಾತೃಭಾಷೆಯಲ್ಲಿ ಮಾತನಾಡುತ್ತೇನೆ ಅಷ್ಟೇ. ಅದಕ್ಕಾಗಿ ನಿಮ್ಮಲ್ಲಿ ಕ್ಷಮೆ ಕೇಳುತ್ತೇನೆ. ನಮ್ಮ ಪೀಳೀಗೆಯ ಯುವಜನರ ಸಮಸ್ಯೆ ಇತಿಹಾಸವನ್ನು ಸರಿಯಾಗಿ ಓದಿಲ್ಲದಿರುವುದು. ಸ್ವಾತಂತ್ರ್ಯ ಪೂರ್ವದಲ್ಲಿ ಇದೇ ಮಂಗಳೂರಿನಲ್ಲಿ ಮಸ್ಲೊಂಕಿ ಎಂಬುವ ಎ.ಐ.ಎಸ್.ಎಫ್ ನ ವಿದ್ಯಾರ್ಥಿ ನಾಯಕ ಮತ್ತು ಆತನ ಸಂಗಾತಿಗಳನ್ನು ಒಂದು ಪ್ರತಿಭಟನೆಯ ನಂತರ ಬ್ರಿಟಿಷ್ ಪೊಲೀಸರು ಬಂಧಿಸಿ ದೇಶದ್ರೋಹಿ ಎಂಬ ಕೇಸನ್ನು ದಾಖಲಿಸಿದ್ದರು. ನನಗೂ ಅವನಿಗೂ ಒಳ್ಳೇಯ ಸಂಬಂಧವಿದೆ ಅನ್ನಿಸಿತು. ಈಗಲೂ ನಮ್ಮ ದೇಶದಲ್ಲಿ ವಿದ್ಯಾರ್ಥಿಗಳು ತಮ್ಮ ಹಕ್ಕುಗಳಿಗಾಗಿ ಹೋರಾಟ ಮಾಡಿದರೆ ಅವರನ್ನು ಬಂಧಿಸಿ ದೇಶದ್ರೋಹಿ ಎಂಬ ಕೇಸನ್ನು ದಾಖಲಿಸಿದ್ದಾರೆ. 70 ವರ್ಷದಲ್ಲಿ ಹಾಗೆಯೇ ಇದೆ. ಈಗ ಬ್ರಿಟಿಷ್ ಪೊಲೀಸರ ಬದಲಾಗಿ ನಮ್ಮದೇ ಸೈನಿಕರಿದ್ದಾರೆ ಅಷ್ಟೇ.

ಎ.ಐ.ಎಸ್.ಎಫ್ ಭಾರತದ ಮೊದಲ ವಿದ್ಯಾರ್ಥಿ ಸಂಘಟನೆಯಾಗಿದೆ. 1936ರಲ್ಲಿಯೇ ಪ್ರಾರಂಭವಾಗಿದೆ. ಇದು ಈ ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದೆ. ಬ್ರಿಟಿಷರೊಡನೆ ಹೋರಾಟ ಮಾಡಿದೆ. 1952 ರಲ್ಲಿ ನಡೆದ ಮೊದಲ ಚುನಾವಣೆಯಲ್ಲಿಯೂ ಭಾಗವಹಿಸಿದದ ಇತಿಹಾಸ ಇದೆ. ದೇಶ ನಿರ್ಮಾನದಲ್ಲಿ ತೊಡಗಿಸಿಕೊಂಡಿದೆ. ಸಿನೆಮಾ, ವಿಜ್ಞಾನ, ಕಲೆ, ಸಾಹಿತ್ಯ, ತಂತ್ರಜ್ಞಾನ, ಸಂಸ್ಕೃತಿ ಈ ಎಲ್ಲಾ ಕ್ಷೇತ್ರಗಳಲ್ಲಿ ಎ.ಐ.ಎಸ್.ಎಫ್ ನ ಹೆಸರು ಇದೆ.

ಆಗ ಅದು ಭಾರತದಲ್ಲಿ ಎಲ್ಲರಿಗೂ ಸಮಾನ ಹಕ್ಕುಗಳಿರಬೇಕು. ಎಲ್ಲರಿಗೂ ಗೌರದ ಉದ್ಯೋಗ ಸಿಗಬೇಕು. ನಮ್ಮ ದೇಶದ ವೈವಿಧ್ಯತೆಯನ್ನು ಸ್ಪೀಕರಿಸಬೇಕು. ಭಾರತದ ಪರಿಕಲ್ಪನೆಯಲ್ಲ ಜಾತಿ, ಲಿಂಗ, ಭಾಷೆ, ಧರ್ಮದ ಆಧಾರದಲ್ಲಿ ತಾರತಮ್ಯ ಇರಬಾರದು ಎಂಬ ಕನಸು ಕಂಡಿತು. ನಾನು ಹಲವು ಪ್ರಗತಿಪರರನ್ನು ಭೇಟಿಯಾಗುತ್ತಿದ್ದೇನೆ. ಅವರು ಬೇಸರದಿಂದ ಮಾತಾಡುತ್ತಿದ್ದಾರೆ, ಎಲ್ಲಾ ಹಾಳಾಗುತ್ತಿದೆ, ಏನು ಬದಲಾವಣೆ ಆಗುತ್ತಿಲ್ಲವೆನ್ನುವುದು ಅವರ ಆರೋಪ. 70 ವರ್ಷದಲ್ಲಿ ಏನು ಆಗಿಲ್ಲ ಎಂದು. ನಾನು ಹೇಳುತ್ತೇನೆ ಈ 70 ವರ್ಷದಲ್ಲಿ ಬಹಳಷ್ಟು ಆಗಿದೆ. ಪ್ರಜಾಪ್ರಭುತ್ವ ಸ್ಪಲ್ಪ ಪ್ರಬುದ್ಧಗೊಂಡಿದೆ. ಹಲವು ಸಂವಿಧಾನದ ತಿದ್ದುಪಡಿಗಳಾಗಿವೆ. ಆದರೆ ಎಷ್ಟು ಬದಲಾವಣೆಗಳಾಗಬೇಕಿತ್ತೋ ಅಷ್ಟು ಬದಲಾಗಿಲ್ಲ. ಜೊತೆಗೆ ಕೆಲವು ವಿಷಯಗಳಲ್ಲಿ ಮುಂದೆ ಸಾಗುವ ಬದಲು ನಾವು ಹಿಂದೆ ಚಲಿಸುತ್ತಿದ್ದೇವೆ. ಇಂದು ನಾನು ಇಲ್ಲಿ ಯುವಜನರು ಮತ್ತು ಪ್ರಸ್ತುತ ಪರಿಸ್ಥಿತಿಯ ಕುರಿತು ಮಾತನಾಡುವಾಗ ನನಗನಿಸುತ್ತದೆ ದೇಶದಲ್ಲಿ ಪ್ರಗತಿಯಾಗುತ್ತಿಲ್ಲ. ನಾವು ಮುದೆ ಸಾಗುವ ಬದಲು ಹಿಂದೆ ಚಲಿಸುತ್ತಿದ್ದೇವೆ.

ಬಾಲ್ಯನಲ್ಲಿ ನಮಗೆ ಹೇಳುತ್ತಿದ್ದು ರಾಜಕಾರಣಿ ಬಹಳ ಕೆಟ್ಟದ್ದು ಅಂತ. ಯಾರಾದರೂ ರಾಜಕಾರಣಿಗಳು ಒಳ್ಳೆಯದು ಮಾಡಲು ಹೊರಟರೆ ಅವರನ್ನು ಮುಗಿಸಿಬಿಡುತ್ತಾರೆ ಎಂದು. ಅದಕ್ಕಾಗಿಯೇ ಇಂದು ಹಲವು ಮಧ್ಯಮವರ್ಗದ ಪೋಷಕರು ತಮ್ಮ ಮಕ್ಕಳು ರಾಜಕಾರಣಿಗಳಾಗಬೇಕೆಂದು ಬಯಸುವುದಿಲ್ಲ. ಬದಲಿಗೆ ವೈದ್ಯರೋ, ಇಂಜಿನಿಯರ್, ಆಟಗಾರರೋ ಆಗಬೇಕು ಎನ್ನುತ್ತಾರೆ. ಏನಾದರೂ ಆಗಲಿ ರಾಜಕಾರಣಿಯಾಗುವುದು ಬೇಡ ಎಂಬುದು ಸಾಮಾನ್ಯವಾಗಿದೆ. ಈ ಸಾಮಾಜಿಕ ಪರಿಸ್ಥಿಯಲ್ಲಿ ನಮ್ಮ ಹಕ್ಕುಗಳೇನು? ಎಂಬುದು ಯಾರಿಗೆ ಗೊತ್ತಿದೆ. ನಿನ್ನ ಹಕ್ಕುಗಳಿಗಾಗಿ ಹೋರಾಡು ಎಂದು ಯಾವ ಪೋಷಕರು ಹೇಳುವುದಿಲ್ಲ. ಹಾಗಾಗಿ ಯುವಜನರಿಗೆ ರಾಜನೀತಿ ಅರ್ಥವಾಗುತ್ತಿಲ್ಲ ಮಾತ್ರವಲ್ಲ ಅವರು ಯಾರನ್ನ ಪ್ರಶ್ನಿಸುತ್ತಿಲ್ಲ.

ಬದಲಿಗೆ ನಿನ್ನ ಆಸಕ್ತಿಯ ವಿಷಯ ಆಯ್ಕೆ ಮಾಡಿಕೊಂಡು ಚೆನ್ನಾಗಿ ಓದು, ಕೆರೀರ್ ರೂಪಿಸಿಕೊ ಎಂದು ಹೇಳುತ್ತಾರೆ. ಮಾರುಕಟ್ಟೆಯಲ್ಲಿ ಯಾವುದು ಡಿಮಾಂಡ್ ಇದೆಯೋ ಅದನ್ನು ಓದು ಎನ್ನುತ್ತಾರೆ. ಈ ರೀತಿ ಕೆರೀರ್ ಒತ್ತಡ ಹಾಕಿ ನಮ್ಮನ್ನು ಮೇಶಿನ್ ರೀತಿ ಮಾಡುತ್ತಿದ್ದಾರೆ. ಹಾಗಾಗಿ ಯುವಜನರಿಗೆ ರಾಜಕೀಯ ಪ್ರಬುದ್ಧತೆ ಬಂದಿಲ್ಲ.

ಬಿಜೆಪಿ ಅಧಿಕಾರಕ್ಕೆ ಬಂದಿರುವುದು ಬೇಸರಪಟ್ಟುಕೊಳ್ಳಬೇಕಿಲ್ಲ. ಇದರಿಂದಲೇ ನಮಗೆ ಜಾತ್ಯಾತೀತತೆಯ ಅರ್ಥ ಮತ್ತು ಮಹತ್ವ ಗೊತ್ತಾಗಿದೆ. ವೈವಿಧ್ಯತೆ ಮತ್ತು ಪ್ರಜಾಪ್ರಭುತ್ವ ಮಹತ್ವ ಮನವರಿಕೆಯಾಗಿದೆ. ದೇಶದ ಹಲವು ಸಮಸ್ಯೆಗಳು ಮುನ್ನಲೆಗೆ ಬಂದಿವೆ. ರಾಜಕೀಯ ಪ್ರಶ್ನೆಗಳು ಕೇಳಿಬರುತ್ತಿವೆ. ಇದರಿಂದಾಗಿ ಮುಂದೊಂದು ದಿನ ನೈಜ ರಾಜಕೀಯ ಅರಿವು ಎಲ್ಲರಿಗೂ ದಕ್ಕಲು ಸಾಧ್ಯ.

ಅರ್ಥಶಾಸ್ತ್ರದ ಮೇಲೆ ಧರ್ಮಶಾಸ್ತ್ರ ಬಂದು ಕುಳಿತಿದೆ. ಹಾಗಾಗಿ ಇಂದು ದೊಡ್ಡ ಮಟ್ಟದ ಆರ್ಥಿಕ ಕುಸಿತ ಎದುರಾಗಿದ್ದರೂ ಪ್ರಧಾನಿ ಏನೂ ಮಾಡಲಾಗುತ್ತಿಲ್ಲ. ಆದ್ದರಿಂದ ಅವರು ಮತ್ತಷ್ಟು ಧರ್ಮದ ಮೊರೆ ಹೋಗುತ್ತಿದ್ದಾರೆ.

ಇಂದು ದೇಶಭಕ್ತಿಯ ಹೆಸರಿನಲ್ಲಿ ಅಂಧಭಕ್ತಿಯನ್ನು ತುರುಕಲಾಗುತ್ತಿದೆ. ದೇಶವನ್ನು ಹಾಳುಮಾಡುತ್ತಿರುವ ಬಲಾಢ್ಯರನ್ನು ಪ್ರಶ್ನಿಸಿದರೆ ಅದು ದೇಶಪ್ರೇಮ. ಅದು ಬಿಟ್ಟು ಅಮಾಯಕರನ್ನು, ದುರ್ಬಲರನ್ನು ಪ್ರಶ್ನಿಸುವುದಲ್ಲ. ಸರ್ಕಾರವನ್ನು ಪ್ರಶ್ನಿಸಬೇಕೆ ಹೊರತು ವಿರೋಧ ಪಕ್ಷಗಳನ್ನಲ್ಲ.

ಪ್ರಶ್ನಿಸುವ ಮನೋಭಾವ ನಮ್ಮ ಮನೆಗಳಿಂದಲೇ ಆರಂಭವಾಗಬೇಕು. ಶಿಕ್ಷಣ, ಉದ್ಯೋಗ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಪ್ರಜಾಪ್ರಭುತ್ವ ವಾತವರಣವನ್ನು ಸೃಷ್ಟಿಸಬೇಕಿದೆ. ಎಲ್ಲರನ್ನು ಪ್ರಶ್ನಿಸುವ ಮನೋಭಾವವಿದ್ದಾಗ ಪ್ರಜಾಪ್ರಭುತ್ವ ಮತ್ತು ಸಂವಿಧಾನಕ್ಕೆ ಗೌರವ ಎಂದರು.

 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

2 COMMENTS

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!

0
ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರ ವಿರುದ್ಧ ಮಾಡಿರುವ ದ್ವೇಷ ಭಾಷಣದ ಬಗ್ಗೆ ಮಾಧ್ಯಮವೊಂದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ವಿಚಾರ ಈಗ...