ತಮಿಳುನಾಡು ರಾಜ್ಯಪಾಲ ಆರ್‌ಎನ್ ರವಿ ಮುಖ್ಯ ಅಥಿಯಾಗಿ ಭಾಗವಹಿಸಿದ್ದ ಕಾರ್ಯಕ್ರಮದಲ್ಲಿ ನಾಡಗೀತೆ (ತಮಿಳ್ ತಾಯಿ ವಝುತ್ತು) ಹಾಡುವಾಗ, ಅದರಲ್ಲಿನ ‘ದ್ರಾವಿಡ’ ಪದವಿರುವ ವಾಕ್ಯವನ್ನು ಕೈ ಬಿಟ್ಟಿರುವುದು ಭಾರೀ ಆಕ್ರೋಶಕ್ಕೆ ಕಾರಣವಾಗಿದೆ.
ಶುಕ್ರವಾರ (ಅ.18) ಚೆನ್ನೈನ ದೂರದರ್ಶನ ಕೇಂದ್ರದಲ್ಲಿ ‘ಹಿಂದಿ ಮಾಸಾಚಾರಣೆಯ ಸಮಾರೋಪ ಕಾರ್ಯಕ್ರಮ’ದಲ್ಲಿ ತಮಿಳು ನಾಡಗೀತೆ ಹಾಡುವಾಗ, ಅದರಲ್ಲಿನ ದ್ರಾವಿಡ ನೆಲದ ಹಿರಿಮೆಯನ್ನು ಉಲ್ಲೇಖಿಸುವ ‘ತೆಕ್ಕನಮುಮುಂ ಅಧಿರ್‌ಸಿರಂಧ ದ್ರಾವಿಡ ನಾಲ್ ತಿರುನಾಡುಂ” ಎಂಬ ವಾಕ್ಯವನ್ನು ಉದ್ದೇಶಪೂರ್ವಕವಾಗಿ ಕೈಬಿಡಲಾಗಿದೆ ಎಂದು ಆರೋಪಿಸಲಾಗಿದೆ.
ತಮಿಳುನಾಡು ಸರ್ಕಾರ ಮತ್ತು ಅಲ್ಲಿನ ಜನರ ವಿರುದ್ದ ಭಾವನೆ ಹೊಂದಿರುವ ರಾಜ್ಯಪಾಲರು ಬೇಕಂತಲೇ ದ್ರಾವಿಡ ಪದ ತೆಗೆಸಿದ್ದಾರೆ ಎಂದು ಅನೇಕರು ಆರೋಪಿಸಿದ್ದಾರೆ. ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ಅವರು ರಾಜ್ಯಪಾಲರನ್ನು ವಾಪಸ್ ಕರೆಸಿಕೊಳ್ಳಿ ಎಂದು ಕೇಂದ್ರ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.
ஆளுநரா? ஆரியநரா?
திராவிடம் என்ற சொல்லை நீக்கி, தமிழ்த்தாய் வாழ்த்தைப் பாடுவது தமிழ்நாட்டின் சட்டத்தை மீறுவதாகும்!
சட்டப்படி நடக்காமல், இஷ்டப்படி நடப்பவர் அந்தப் பதவி வகிக்கவே தகுதியற்றவர்.
இந்தியைக் கொண்டாடும் போர்வையில் நாட்டின் ஒருமைப்பாட்டையும் இந்த மண்ணில் வாழும் பல்வேறு… pic.twitter.com/NzS2O7xDTz
— M.K.Stalin (@mkstalin) October 18, 2024
“ರಾಜ್ಯಪಾಲ ರವಿ ಅವರು ರಾಷ್ಟ್ರಗೀತೆಯಿಂದ ಒಂದು ವಾಕ್ಯ ಅಥವಾ ಪದವನ್ನು ಬಿಟ್ಟು ಬಿಡುವ ಧೈರ್ಯ ಮಾಡುತ್ತಾರೆಯೇ? ಎಂದು ಪ್ರಶ್ನಿಸಿರುವ ಸಿಎಂ ಸ್ಟಾಲಿನ್, ನಾಡ ಗೀತೆಯಿಂದ ‘ದ್ರಾವಿಡ’ ಪದವಿರುವ ಸಾಲನ್ನು ಕೈ ಬಿಟ್ಟಿರುವುದು ತಮಿಳುನಾಡು ಮತ್ತು ತಮಿಳು ಭಾಷೆಗೆ ಮಾಡಿದ ಅವಮಾನ. ರಾಜ್ಯಪಾಲ ರವಿ ಅವರಿಗೆ ‘ದ್ರಾವಿಡ ಅಲರ್ಜಿ’ ಇದೆ” ಎಂದಿದ್ದಾರೆ.
“ದ್ರಾವಿಡ’ ಪದವನ್ನು ಕೈ ಬಿಟ್ಟು ತಮಿಳು ನಾಡಗೀತೆ ಹಾಡುವುದು ತಮಿಳುನಾಡಿನ ಕಾನೂನಿಗೆ ವಿರುದ್ಧವಾಗಿದೆ. ಕಾನೂನಿನ ಪ್ರಕಾರ ನಡೆಯದೆ, ತನ್ನ ಇಚ್ಛೆಗೆ ತಕ್ಕಂತೆ ವರ್ತಿಸುವ ವ್ಯಕ್ತಿಯು ರಾಜ್ಯಪಾಲ ಹುದ್ದೆಯನ್ನು ಅಲಂಕರಿಸಲು ಯೋಗ್ಯನಲ್ಲ. ಭಾರತವನ್ನು ಆಚರಿಸುವ ನೆಪದಲ್ಲಿ, ರಾಜ್ಯಪಾಲರು ದೇಶದ ಏಕತೆ ಮತ್ತು ಈ ನೆಲದಲ್ಲಿ ವಾಸಿಸುವ ವಿವಿಧ ಜನಾಂಗದ ಜನರನ್ನು ಅವಮಾನಿಸುತ್ತಿದ್ದಾರೆ” ಎಂದು ಸ್ಟಾಲಿನ್ ಕಿಡಿಕಾರಿದ್ದಾರೆ.
ಎಲ್ಲೆಡೆಯಿಂದ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ ಪ್ರಕಟಣೆ ಹೊರಡಿಸಿರುವ ರಾಜ್ಯಪಾಲ ಕಚೇರಿ “ರಾಜ್ಯಪಾಲರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರಷ್ಟೆ, ನಾಡಗೀತೆಯಿಂದ ಒಂದು ಸಾಲು ಕೈಬಿಟ್ಟಿರುವ ವಿಷಯದಲ್ಲಿ ಅವರ ಪಾತ್ರವೇನು ಇಲ್ಲ. ರಾಜ್ಯಪಾಲರು ತಮಿಳುನಾಡು ಮತ್ತು ಇಲ್ಲಿನ ಜನರ ಮೇಲೆ ಉನ್ನತ ಗೌರವನ್ನು ಹೊಂದಿದ್ದಾರೆ. ಅದನ್ನು ಉಳಿಸಿಕೊಳ್ಳಲಿದ್ದಾರೆ” ಎಂದಿದೆ.
ಸಿಎಂ ಸ್ಟಾಲಿನ್ ವಿರುದ್ದ ರಾಜ್ಯಪಾಲ ರವಿ ಕಿಡಿಕಾರಿದ್ದು, ಅವರನ್ನು ‘ಜನಾಂಗೀಯ ವಾದಿ’ ಎಂದು ಕರೆದಿದ್ದಾರೆ. “ನಾನು ಪ್ರತಿ ಕಾರ್ಯಕ್ರಮಗಳಲ್ಲಿ ತಮಿಳು ನಾಡಗೀತೆಯನ್ನು ಸಂಪೂರ್ಣವಾಗಿ ಹಾಡಿಸುತ್ತೇನೆ. ದೂರದರ್ಶನದ ಕಾರ್ಯಕ್ರಮದಲ್ಲಿ ‘ದ್ರಾವಿಡ’ ಪದ ಕೈ ಬಿಡಲಾಗಿದೆ ಎಂದು ಸಿಎಂ ಸುಳ್ಳಾರೋಪ ಮಾಡಿದ್ದಾರೆ. ನನಗೆ ತಮಿಳು ನಾಡಗೀತೆಯ ಬಗ್ಗೆ ಗೌರವ ಇದೆ” ಎಂದಿದ್ದಾರೆ.
ಹಿಂದಿ ಮಾಸಾಚರಣೆಗೆ ಸ್ಟಾಲಿನ್ ಖಂಡನೆ
ಚೆನ್ನೈ ದೂರದರ್ಶನದ ಸುವರ್ಣ ಮಹೋತ್ಸವದ ಜೊತೆ ಹಿಂದಿ ಮಾಸಾಚರಣೆ ಸಮಾರೋಪ ಸಮಾರಂಭ ಆಯೋಜಿಸಿದ್ದನ್ನು ಕೂಡ ಸಿಎಂ ಎಂ.ಕೆ ಸ್ಟಾಲಿನ್ ತೀವ್ರವಾಗಿ ಖಂಡಿಸಿದ್ದಾರೆ.
ಈ ಕುರಿತು ಪ್ರಧಾನಿ ಮೋದಿಯವರಿಗೆ ಟ್ಯಾಗ್ ಮಾಡಿ ಎಕ್ಸ್‌ನಲ್ಲಿ ಪೋಸ್ಟ್ ಹಾಕಿರುವ ಸ್ಟಾಲಿನ್ “ಚೆನ್ನೈ ದೂರದರ್ಶನದ ಸುವರ್ಣ ಮಹೋತ್ಸವದ ಸಂಭ್ರಮಾಚರಣೆಯ ಜೊತೆಗೆ ಹಿಂದಿ ತಿಂಗಳ ಸಮಾರೋಪ ಸಮಾರಂಭ ಆಯೋಜಿಸಿದ್ದನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ.
I strongly condemn the celebration of Hindi Month valedictory function along with the Golden Jubilee celebrations of Chennai Doordarshan.
Hon’ble @PMOIndia,
The Constitution of India does not grant national language status to any language. In a multilingual nation, celebrating…
— M.K.Stalin (@mkstalin) October 18, 2024
ಮಾನ್ಯ ಪ್ರಧಾನಿಯವರೇ..ಭಾರತದ ಸಂವಿಧಾನವು ಯಾವುದೇ ಭಾಷೆಗೆ ರಾಷ್ಟ್ರೀಯ ಭಾಷಾ ಸ್ಥಾನಮಾನವನ್ನು ನೀಡಿಲ್ಲ. ಬಹುಭಾಷಾ ರಾಷ್ಟ್ರದಲ್ಲಿ, ಹಿಂದಿಯೇತರ ರಾಜ್ಯಗಳಲ್ಲಿ ಹಿಂದಿ ಮಾಸವನ್ನು ಆಚರಿಸುವುದು ಇತರ ಭಾಷೆಗಳನ್ನು ಕೀಳಾಗಿ ಕಾಣುವ ಪ್ರಯತ್ನವಾಗಿದೆ.
ಆದ್ದರಿಂದ, ಹಿಂದಿಯೇತರ ರಾಜ್ಯಗಳಲ್ಲಿ ಇಂತಹ ಹಿಂದಿ ಆಧಾರಿತ ಕಾರ್ಯಕ್ರಮಗಳನ್ನು ನಡೆಸುವುದನ್ನು ನಿಲ್ಲಿಸಿ, ಬದಲಿಗೆ ಆಯಾ ರಾಜ್ಯಗಳಲ್ಲಿ ಸ್ಥಳೀಯ ಭಾಷಾ ತಿಂಗಳ ಆಚರಣೆಯನ್ನು ಪ್ರೋತ್ಸಾಹಿಸಬೇಕು ಎಂದು ನಾನು ಸಲಹೆ ನೀಡುತ್ತೇನೆ ಎಂದಿದ್ದಾರೆ.
ಇದನ್ನೂ ಓದಿ : ಮಹಿಳೆಯರ ಅಕ್ರಮ ಬಂಧನ ಆರೋಪ : ಇಶಾ ಫೌಂಡೇಶನ್ ವಿರುದ್ದದ ಪ್ರಕರಣ ವಜಾ



C M is right in his statement.