ಚಾಲಕ ಮತ್ತು ಕಂಡಕ್ಟರ್ ಸೇರಿದಂತೆ ನಾಲ್ವರು ವ್ಯಕ್ತಿಗಳು ಅಶ್ಲೀಲ ಹೇಳಿಕೆ ನೀಡಿ ಅನುಮಾನಾಸ್ಪದವಾಗಿ ವರ್ತಿಸಿದ ಕಾರಣಕ್ಕೆ ಭಯಭೀತರಾದ 9ನೇ ತರಗತಿಯಲ್ಲಿ ಕಲಿಯುತ್ತಿರುವ ಇಬ್ಬರು ಬಾಲಕಿಯರು ಚಲಿಸುತ್ತಿದ್ದ ಬಸ್‌ನಿಂದ ಹಾರಿರುವ ಘಟನೆ ಮಧ್ಯಪ್ರದೇಶದ ದಾಮೋಹ್‌ನಲ್ಲಿ ಸೋಮವಾರ ಬೆಳಿಗ್ಗೆ ನಡೆದಿದೆ. ಘಟನೆಯಲ್ಲಿ ಬಾಲಕಿಯರು ಗಾಯಗೊಂಡಿದ್ದು, ಜಿಲ್ಲಾ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
“ಇಬ್ಬರು ಬಾಲಕಿಯರು ಟೋರಿಯ ಶಾಲೆಯಲ್ಲಿ ಓದುತ್ತಿದ್ದು, ಪರೀಕ್ಷೆ ಬರೆಯಲು ಅಧೋರೋಟದಿಂದ ಬಸ್‌ನಲ್ಲಿ ಹೋಗುತ್ತಿದ್ದರು. ಬಸ್‌ನಲ್ಲಿ ಚಾಲಕ ಮತ್ತು ಕಂಡಕ್ಟರ್ ಸೇರಿದಂತೆ ನಾಲ್ವರು ಇದ್ದರು. ಆರೋಪಿಗಳು ಅಶ್ಲೀಲ ಹೇಳಿಕೆಗಳನ್ನು ನೀಡಿದ್ದು, ಈ ವೇಳೆ ಹುಡುಗಿಯರು ಬಸ್ ನಿಲ್ಲಿಸುವಂತೆ ಕೇಳಿಕೊಂಡಿದ್ದಾರೆ. ಆದರೆ, ಆರೋಪಿಗಳು ಇದಕ್ಕೆ ನಿರಾಕರಿಸಿದರು” ಎಂದು ಪೊಲೀಸ್ ಉಪ ವರಿಷ್ಠಾಧಿಕಾರಿ ಭಾವನಾ ದಂಗಿ ಹೇಳಿದ್ದಾರೆ. ಚಾಲಕ
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
“ಆರೋಪಿಗಳು ಅವರನ್ನು ದಿಟ್ಟಿಸಿ ನೋಡುವುದರ ಜೊತೆಗೆ ವಾಹನದ ಹಿಂಭಾಗದ ಬಾಗಿಲನ್ನು ಮುಚ್ಚಿದಾಗ ಬಾಲಕಿಯರಿಗೆ ಅನುಮಾನ ಬಂತು. ಈ ವೇಳೆ ತಮ್ಮ ಸುರಕ್ಷತೆಯ ಬಗ್ಗೆ ಭಯಭೀತರಾದ ಇಬ್ಬರು ಬಾಲಕಿಯರು ಚಲಿಸುವ ಬಸ್ ನಿಂದ ಹೊರಗೆ ಹಾರಿದ್ದಾರೆ” ಎಂದು ದಂಗಿ ಹೇಳಿದ್ದಾರೆ.
ಆರೋಪಿಗಳಾದ ಚಾಲಕ ಮೊಹಮ್ಮದ್ ಆಶಿಕ್, ಕಂಡಕ್ಟರ್ ಬನ್ಶಿಲಾಲ್ ಮತ್ತು ಹುಕುಮ್ ಸಿಂಗ್, ಮಾಧವ್ ಅಸತಿ ಎಂಬ ಇನ್ನಿಬ್ಬರನ್ನು ಭಾರತೀಯ ನ್ಯಾಯ ಸಂಹಿತಾ ಮತ್ತು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆಯಡಿ ಬಂಧಿಸಲಾಗಿದೆ ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸಂದೀಪ್ ಮಿಶ್ರಾ ತಿಳಿಸಿದ್ದಾರೆ.


