Homeಮುಖಪುಟ"ಡಾ.ಸಿಂಗ್‌ ಇಸ್‌ ಎಕಾನಮಿ ಕಿಂಗ್‌" DrSinghEconomyKing ಟ್ವಿಟ್ಟರ್‌ನಲ್ಲಿ ಟ್ರೆಂಡಿಂಗ್‌

“ಡಾ.ಸಿಂಗ್‌ ಇಸ್‌ ಎಕಾನಮಿ ಕಿಂಗ್‌” DrSinghEconomyKing ಟ್ವಿಟ್ಟರ್‌ನಲ್ಲಿ ಟ್ರೆಂಡಿಂಗ್‌

- Advertisement -
- Advertisement -

ಕುಸಿಯುತ್ತಿರುವ ಆರ್ಥಿಕತೆಯ ಸಂದರ್ಭದಲ್ಲಿ ಮಾಜಿ ಪ್ರಧಾನಿ ಡಾ. ಮನಮೋಹನ್‌ ಸಿಂಗ್‌ ಅವರ ಸಲಹೆಗಳು ಅತ್ಯಮೂಲ್ಯ ಎಂದು ಟ್ವಿಟ್ಟರ್‌ನಲ್ಲಿ ಟ್ರೆಂಡಿಂಗ್‌ ಆಗಿವೆ. ವಿತ್ತಸಚಿವೆ ನಿರ್ಮಲಾ ಸೀತಾರಾಮನ್‌ ಪಿಎಂಸಿ ಬ್ಯಾಂಕ್‌ ಅವ್ಯವಹಾರಕ್ಕೆ ಡಾ. ಮನಮೋಹನ್‌ ಸಿಂಗ್‌ ಕಾರಣವೆಂದ ಹೇಳಿಕೆಗೆ ಭಾರೀ ವಿರೋಧ ವ್ಯಕ್ತವಾಗಿದ್ದು ಇಂದು ಡಾ.ಸಿಂಗ್‌ ಪತ್ರಿಕಾಗೋಷ್ಠಿಯಲ್ಲಿ ತಿರುಗೇಟು ನೀಡಿದ್ದಾರೆ. ಆನಂತರ ಟ್ವಿಟ್ಟರ್‌ನಲ್ಲಿ “ಡಾ.ಸಿಂಗ್‌ ಇಸ್‌ ಎಕಾನಮಿ ಕಿಂಗ್‌” DrSinghEconomyKing ಎಂಬ ಹ್ಯಾಷ್‌ ಟ್ಯಾಗ್‌ ಟ್ರೆಂಡ್‌ ಆಗಿದೆ.

ಡಾ. ಮನಮೋಹನ್‌ ಸಿಂಗ್‌ರವರ ಯುಪಿಎ ಸರ್ಕಾರದ ಅಡಿಯಲ್ಲಿ ಸುಮಾರು 28ಕೋಟಿ ಜನರು ಬಡತನದಿಂದ ಹೊರಬಂದಿದ್ದಾರೆ.

ಡಾ. ಮನಮೋಹನ್‌ ಸಿಂಗ್‌ ಆಡಳಿತದಲ್ಲಿದ್ದಾಗ ಜಾಗಿತಿಕ ಹಸಿವಿನ ಸೂಚ್ಯಂಕದಲ್ಲಿ ಭಾರತ 55 ನೇ ಸ್ಥಾನದಲ್ಲಿದ್ದರೆ ಇಂದು ಮೋದಿ ಆಡಳಿತದಲ್ಲಿ ಹೋಲಿಕೆ ಮಾಡಲಾಗದ ರೀತಿ ಭಾರತ 102 ನೇ ಸ್ಥಾನಕ್ಕೆ ಕುಸಿದಿದೆ.

ಮೋದಿ ಸಂಪೂರ್ಣ ವೈಫಲ್ಯ ಕಂಡಿದ್ದು ಡಾ. ಮನಮೋಹನ್‌ ಸಿಂಗ್‌ ನಿರ್ವಿವಾದವಾಗಿ ಯಶಸ್ಸು ಸಾಧಿಸಿದ್ದಾರೆ ಎಂದು ಸಂಘಮಿತ್ರ ಎಂಬುವವರು ಟ್ವೀಟ್ ಮಾಡಿದ್ದಾರೆ.

ಇಂದಿನ ಸಮಾರಂಭದಲ್ಲಿ “ಪ್ರೇಕ್ಷಕರೊಬ್ಬರು ಡಾ. ಮನಮೋಹನ್‌ ಸಿಂಗ್ ಅವರಿಗೆ “ನೀವು ದೇಶವು ಹೊಂದಿದ್ದ ಅತ್ಯುತ್ತಮ ಅರ್ಥಶಾಸ್ತ್ರಜ್ಞರು” ಎಂದು ಹೇಳಿದರು ಮತ್ತು ಜನರ ಸಂಕಷ್ಟವನ್ನು ನಿವಾರಿಸಲು ಆರ್‌ಬಿಐ ಗವರ್ನರ್, ಮತ್ತು ಭಾರತ ಸರ್ಕಾರದೊಂದಿಗೆ ಮಾತನಾಡಿ ಎಂದು ಸಿಂಗ್‌ ಬಳಿ ವಿನಂತಿಸಿದರು. ಎಂದು ರುಚಿರ ಚರ್ತುವೇದಿಯವರು ಟ್ವೀಟ್‌ ಮಾಡಿದ್ದಾರೆ.

“ರಕ್ಷಣಾ ಮಂತ್ರಿ ಮತ್ತು ಭಾರತದ ಹಣಕಾಸು ಮಂತ್ರಿಯಾಗಿ ನಿರ್ಮಲಾ ಸೀತಾರಾಮನ್‌ರವರ ಅಸಾಧಾರಣ ಕರುಣಾಜನಕ ಕಾರ್ಯಕ್ಷಮತೆಯು, ಭಾರತ ಮತ್ತು ಭಾರತದ ಜನರ ಮೇಲೆ ಬಹಳ ಕೆಟ್ಟದಾಗಿ ಪರಿಣಾಮ ಬೀರಿದೆ. ಹಾಗಾಗಿ ದಯವಿಟ್ಟು ಅವರನ್ನು ಬಿಜೆಪಿ ಪಕ್ಷದ ಅಧ್ಯಕ್ಷ ಹುದ್ದೆಗೆ ನೇಮಿಸಿ ಮತ್ತು ಭಾರತವನ್ನು ಉಳಿಸಿ ಎಂದು ನಾನು ಶಿಫಾರಸು ಮಾಡುತ್ತೇನೆ” ಎಂದು ಸ್ಪರ್ತನ್‌ ಎಂಬುವವರು ಟ್ವೀಟ್ ಮಾಡಿ ಚಾಟಿಯೇಟು ನೀಡಿದ್ದಾರೆ.

ಸರ್ಕಾರದಿಂದ ಯಾವುದೇ ಭರವಸೆ ಸಿಗದ ನಂತರ, ಪಂಜಾಬ್ ಮತ್ತು ಮಹಾರಾಷ್ಟ್ರ ಸಹಕಾರ ಬ್ಯಾಂಕ್ ಖಾತೆದಾರರು ಈಗ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಮನೆ ಬಾಗಿಲು ಬಡಿದಿದ್ದಾರೆ. ಮನಮೋಹನ್‌ ಸಿಂಗ್‌ರವರು ಮಧ್ಯಪ್ರವೇಶಿಸಿ ಅವರಿಗೆ ಸಹಾಯ ಮಾಡಬೇಕೆಂದು ಅವರು ಬಯಸುತ್ತಿದ್ದಾರೆ ಎಂದು ಅಖಿಲ ಭಾರತ ಮಹಿಳಾ ಕಾಂಗ್ರೆಸ್‌ ಟ್ವೀಟ್‌ ಮಾಡಿದೆ…

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಸಿದ್ದರಾಮಯ್ಯ ಸರ್ಕಾರ ಮುಸ್ಲಿಮರನ್ನು ಒಬಿಸಿ ಪಟ್ಟಿಗೆ ಸೇರಿಸಿದ್ದು ನಿಜಾನಾ?

0
ಕರ್ನಾಟಕದಲ್ಲಿ ಮುಸ್ಲಿಮರನ್ನು ಹಿಂದುಳಿದ ವರ್ಗಕ್ಕೆ ಸೇರಿಸುವ ಮೂಲಕ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಹಿಂದುಳಿದ ವರ್ಗಗಳ 36 ಜಾತಿಗಳಿಗೆ ಅನ್ಯಾಯ ಮಾಡಿದೆ ಎಂದು ಬಿಜೆಪಿ ಆರೋಪಿಸಿದೆ. ಸಿದ್ದರಾಮಯ್ಯ ಸರ್ಕಾರ ಹಿಂದುಳಿದ ವರ್ಗಗಳಿಗೆ...