HomeUncategorizedಬರದ ವಿರುದ್ಧ ಜನಾಂದೋಲನದ ವಾಟರ್‌ ಕಪ್: ಯಾರೂ ಸೋಲದ ಆಟ...

ಬರದ ವಿರುದ್ಧ ಜನಾಂದೋಲನದ ವಾಟರ್‌ ಕಪ್: ಯಾರೂ ಸೋಲದ ಆಟ…

25 ಜನರಿಂದ ಪ್ರಾರಂಭವಾದ ಈ ಸಂಸ್ಥೆಯಲ್ಲಿ ಈಗ 450ಕ್ಕೂ ಹೆಚ್ಚು ಸಿಬ್ಬಂದಿಗಳು, ಸಾವಿರಾರು ಕಾರ್ಯಕರ್ತರು ಹಾಗೂ ಸುಮಾರು 2 ಲಕ್ಷಕ್ಕೂ ಮೀರಿ ಸ್ವಯಂಸೇವಕರು ಕೆಲಸ ಮಾಡುತ್ತಿದ್ದಾರೆ. 2016 ರಲ್ಲಿ 3 ತಾಲ್ಲೂಕಿನ 116 ಹಳ್ಳಿಯಲ್ಲಿ ನಡೆದ ಈ ಪ್ರಯೋಗ ಈಗ ಊಹೆಗೆ ಮೀರಿ ಬೆಳೆದಿದೆ.

- Advertisement -
- Advertisement -

ಕರ್ನಾಟಕಕ್ಕೆ ಸತತವಾಗಿ ತಗುಲಿದ ಬರಗಾಲ ಹಾಗೂ ನೆರೆಯಿಂದಾಗಿ ಅಪಾರ ನಷ್ಟವಾಗಿದೆ. ರೈತರು ಜನಸಾಮಾನ್ಯರು ಕಷ್ಟದಲ್ಲಿರುವ ಈ ಹೊತ್ತಿನಲ್ಲಿ ಕರ್ನಾಟಕಕ್ಕೆ ಒಂದು ಲಕ್ಷ ಕೋಟಿ ಪರಿಹಾರ ಪ್ಯಾಕೇಜ್ ನೀಡಬೇಕು ಎಂಬ ನ್ಯಾಯಯುತವಾದ ಹಕ್ಕೊತ್ತಾಯವನ್ನು ರೈತ ಸಂಘಟನೆಗಳು, ಕನ್ನಡಪರ ಸಂಘಟನೆಗಳು ಕೇಂದ್ರ ಸರ್ಕಾರದ ಮುಂದಿಟ್ಟಿವೆ…

ಕರ್ನಾಟಕದಂತೆಯೇ ಹೆಚ್ಚು ಬರಗಾಲ ಹಾಗೂ ರೈತರ ಆತ್ಮಹತ್ಯೆಗೆ ಕುಖ್ಯಾತಿಯನ್ನು ಹೊಂದಿರುವ ರಾಜ್ಯ ಮಹಾರಾಷ್ಟ್ರ. 2015 ರಲ್ಲಿ ಮಹಾರಾಷ್ಟ್ರದ ಸರ್ಕಾರದ ಪ್ರಕಾರ ಶೇ. 60% ಹಳ್ಳಿಗಳು ಬರಕ್ಕೆ ತುತ್ತಾಗಿದ್ದವು. ಶೇ 50% ಇಳುವರಿ ಕಡಿಮೆಯಾಗಿತ್ತು. ಈ ಸಮಯದಲ್ಲಿ ಖಾಸಗಿ ವಾಹಿನಿಯೊಂದರಲ್ಲಿ ಸತ್ಯಮೇವ ಜಯತೆ ಎಂಬ ಕಾರ್ಯಕ್ರಮ ನಡೆಸಿಕೊಡುತ್ತಿದ್ದ ಅಮೀರ್ ಖಾನ್ ಮತ್ತು ಕಾರ್ಯಕ್ರಮದ ತಂಡ ಪಾನಿ ಫೌಂಡೇಷನ್ ಅನ್ನು ಶುರು ಮಾಡಿತ್ತು. 2016 ರಲ್ಲಿ ಪ್ರಾರಂಭವಾದ ಈ ಸಂಸ್ಥೆಗೆ ಸತ್ಯಮೇವ ಜಯತೆ ಕಾರ್ಯಕ್ರಮದ ಮುಖ್ಯಸ್ಥರಾದ ಸತ್ಯಜಿತ್ ಬಟ್ಕಳ್ ಅವರೇ ಪಾನಿ ಫೌಂಡೇಷನ್ ನ ಮುಖ್ಯಸ್ಥರಾದರು. ಅಮೀರ್ ಖಾನ್ ಹಾಗೂ ಸಿನೆಮಾ ಬರಹಗಾರರು, ನಿರ್ದೇಶಕರು ಆಗಿರುವ ಕಿರಣ್ ರಾವ್ (ಅಮೀರ್ ಖಾನ್‍ರ ಹೆಂಡತಿ) ಅವರುಗಳು ಇದರ ಸಂಸ್ಥಾಪಕರಾದರು. ಪಾನಿ ಫೌಂಡೇಷನ್ ನ ಮುಖ್ಯ ಉದ್ದೇಶ ಮಳೆ ಬಂದಾಗ ನೀರು ಹರಿದು ಪೋಲಾಗದಂತೆ ತಡೆದು ವೈಜ್ಞಾನಿಕ ವಿಧಾನದಲ್ಲಿ ಸಂಗ್ರಹಿಸಿ ಬಳಸುವುದಾಗಿದೆ. ಈ ಬಗ್ಗೆ ಜನರಲ್ಲಿ ಅರಿವು ಮೂಡಿಸುವುದಕ್ಕಾಗಿ  ಪ್ರತಿ ವರ್ಷ “ಸತ್ಯಮೇವ ಜಯತೆ ವಾಟರ್ ಕಪ್ ಸ್ಫರ್ಧೆ”ಯನ್ನು ನಡೆಸುತ್ತಿದೆ.

ಸತ್ಯಮೇವ ಜಯತೆ ಕಾರ್ಯಕ್ರಮವನ್ನು ಮಾಡುವಾಗ ತಳಮಟ್ಟದಲ್ಲಿ ಬಹಳಷ್ಟು ಜನರು ಕೆಲಸ ಮಾಡುತ್ತಿದ್ದಾರೆ ಮತ್ತು ಅಂತಹ ಕೆಲಸಗಳು ಮತ್ತಷ್ಟು ಆಗಬೇಕಿದೆ ಎಂದು ನನಗೆ ಅನಿಸಿತು. ಬೇಕಾದಷ್ಟು ಬೋರ್‍ವೆಲ್‌ಗಳನ್ನು ಕೊರೆದು ನೀರನ್ನು ಹೀರುತ್ತಾ ಅಂತರ್ಜಲವನ್ನು ನಾವು ಸಾಕಷ್ಟು ಬಳಸಿಕೊಂಡಿದ್ದೇವೆ. ಮುಂದಿನ ಪೀಳಿಗೆಗೆ ನಾವು ನೀರು ಇಲ್ಲದಂತೆ ಮಾಡುತ್ತಿದ್ದೇವೆ. ಹಾಗಾಗಿ ನಾವು ನೀರು ಉಳಿಸುವ ಕೆಲಸವನ್ನು ಮಾಡಬೇಕಿದೆ ಎಂದು ಈ ಸಂಸ್ಥೆಯನ್ನು ಪ್ರಾರಂಭಿಸಿದೆವು ಎನ್ನುತ್ತಾರೆ ಅಮೀರ್ ಖಾನ್.

“ಸತ್ಯಮೇವ ಜಯತೆ ವಾಟರ್ ಕಪ್ ಸ್ಫರ್ಧೆ”

ಈ ಬಾರಿ ವಾಟರ್‌ಕಪ್‌ ಸ್ಪರ್ಧೆಯ ವಿಜೇತರಿಗೆ ಬಹುಮಾನ ನೀಡಲು ಅಮೀರ್‌ ಖಾನ್‌ ಹಾಜರಿರಲಿಲ್ಲ. ಜ್ವರದಿಂದ ಬಳಲುತ್ತಿದ್ದ ಅವರ ಬದಲಿಗೆ ಅವರ ಸ್ನೇಹಿತ ಬಾಲಿವುಡ್ ನಟ ಶಾರೂಕ್‌ ಖಾನ್‌ ಪ್ರಶಸ್ತಿ ವಿತರಿಸಿದರು. ಮಹಾರಾಷ್ಟ್ರ ಸರ್ಕಾರ ಪಾನಿ ಫೌಂಡೇಷನ್‌ಗೆ ಅಭಾರಿಯಾಯಿತು.

2016 ರಿಂದ ಶುರುವಾಗಿರುವ ಈ ಸ್ಫರ್ಧೆಯಲ್ಲಿ ವಿಜೇತವಾದ ಹಳ್ಳಿಗಳಿಗೆ ಮೊದಲ ಬಹುಮಾನ 50ಲಕ್ಷ, ದ್ವಿತೀಯ ಬಹುಮಾನ 30 ಲಕ್ಷ ಮತ್ತು ತೃತೀಯ ಬಹುಮಾನ 20 ಲಕ್ಷ ನೀಡಲಾಗುತ್ತದೆ. ಇದನ್ನು “ಬರದ ವಿರುದ್ಧ ಜನಾಂದೋಲನ” ಎಂದು ಕರೆಯಲಾಗುತ್ತದೆ. ಇದೊಂದು ‘ವಾಟರ್ ಗೇಮಿಂಗ್’ ಎನ್ನಬಹುದು. ಈ ಸ್ಫರ್ಧೆಯಲ್ಲಿ ಬೇರೆ ಬೇರೆ ಹಳ್ಳಿಗಳು ಭಾಗವಹಿಸಬಹುದು. ತಮ್ಮ ಹಳ್ಳಿಯಲ್ಲಿ ಅಂತರ್ಜಲ ಹೆಚ್ಚಿಸಲು ನೀರು ಸಂಗ್ರಹ ಮಾಡುವುದು ಈ ಆಟದ ನಿಯಮ. ಸುಸಜ್ಜಿತವಾಗಿ ಹೆಚ್ಚು ನೀರು ಸಂಗ್ರಹ ಮಾಡುವ ಹಳ್ಳಿಗೆ ಬಹುಮಾನ ನೀಡಲಾಗುತ್ತದೆ. ಈ ಸ್ಫರ್ಧೆ ಪ್ರತಿ ವರ್ಷ ಬೇಸಿಗೆಯ ಮಾರ್ಚ್ ಏಪ್ರಿಲ್ ನಿಂದ ಆರಂಭವಾಗಿ ಮಳೆಗಾಲ ಪ್ರಾರಂಭದ ಜೂನ್ ತಿಂಗಳಲ್ಲಿ ಮುಗಿಯುತ್ತದೆ.

ಸ್ಫರ್ಧೆಗೆ ಮುನ್ನ ತರಬೇತಿ: ಈ ಸ್ಫರ್ಧೆಯಲ್ಲಿ ಭಾಗವಹಿಸುವ ಗ್ರಾಮಸ್ಥರಿಗೆ ನೀರು ಶೇಖರಣ ವಲಯವನ್ನು ಹೇಗೆ ನಿರ್ಮಿಸಬೇಕು ಎನ್ನುವುದರ ಕುರಿತು ತಾಂತ್ರಿಕ ವಿಚಾರಗಳ ತರಬೇತಿ ಹಾಗೂ ಸಾಮಾಜಿಕ ನಾಯಕತ್ವದ ತರಬೇತಿಯನ್ನು ನೀಡಲಾಗುತ್ತದೆ. ಈ ತರಬೇತಿ ಪಡೆದವರನ್ನು ‘ಜಲಧೂತ’ ಎಂದು ಕರೆಯಲಾಗುತ್ತದೆ.

ಸ್ಫರ್ಧೆಯಲ್ಲಿ ಭಾಗವಹಿಸುವ ಗ್ರಾಮಸ್ಥರಲ್ಲಿ ತರಬೇತಿ ಪಡೆಯಲು ಬಂದಾಗ ಕನಿಷ್ಠ ಇಬ್ಬರು ಮಹಿಳೆಯರು ಇರಬೇಕು ಎಂಬ ನಿಯಮವೂ ಇದೆ. ತರಬೇತಿ ಪಡೆದವರು ವಾಪಸು ಹಳ್ಳಿಗಳಿಗೆ ತೆರಳಿ ಜನರನ್ನು ಸಂಘಟಿಸಿ ಸ್ಫರ್ಧೆಯಲ್ಲಿ ಭಾಗವಹಿಸುವಂತೆ ಉತ್ತೇಜನ ನೀಡಬೇಕಿರುತ್ತದೆ. ಈ ಕಾರ್ಯಕ್ಕೆ ಪಾನಿ ಫೌಂಡೇಷನ್ ನಿಂದ ತರಬೇತಿ ಮತ್ತು ಯಂತ್ರೋಪಕರಣಗಳಿಗೆ ಹಣ ನೀಡಲಾಗುತ್ತದೆ. ಇನ್ನುಳಿದಂತೆ ಯಂತ್ರಗಳ ನಿರ್ವಹಣೆ, ತೈಲ, ಇತ್ಯಾದಿಗಳಿಗೆ ಗ್ರಾಮಸ್ಥರೇ ಹಣ ಸಂಗ್ರಹ ಮಾಡಿಕೊಳ್ಳಬೇಕಿರುತ್ತದೆ. ಸರ್ಕಾರ ಅಥವಾ ಖಾಸಗಿ ಸಂಸ್ಥೆಗಳಿಂದ ಸಹಾಯವನ್ನು ಗ್ರಾಮಸ್ಥರು ಪಡೆಯಬಹುದಾಗಿರುತ್ತದೆ. ಈ ಸ್ಫರ್ಧೆಯ ಮುಖ್ಯ ಒತ್ತು ಶ್ರಮಧಾನ ಆಗಿರುತ್ತದೆ.

ಹೆಮ್ಮರವಾಗಿ ಬೆಳೆಯುತ್ತಿರುವ ಬೀಜ: 25 ಜನರಿಂದ ಪ್ರಾರಂಭವಾದ ಈ ಸಂಸ್ಥೆಯಲ್ಲಿ ಈಗ 450ಕ್ಕೂ ಹೆಚ್ಚು ಸಿಬ್ಬಂದಿಗಳು, ಸಾವಿರಾರು ಕಾರ್ಯಕರ್ತರು ಹಾಗೂ ಸುಮಾರು 2 ಲಕ್ಷಕ್ಕೂ ಮೀರಿ ಸ್ವಯಂಸೇವಕರು ಕೆಲಸ ಮಾಡುತ್ತಿದ್ದಾರೆ. 2016 ರಲ್ಲಿ 3 ತಾಲ್ಲೂಕಿನ 116 ಹಳ್ಳಿಯಲ್ಲಿ ನಡೆದ ಈ ಪ್ರಯೋಗ ಈಗ ಊಹೆಗೆ ಮೀರಿ ಬೆಳೆದಿದೆ.

ಈ ಸ್ಪರ್ಧೆಯಲ್ಲಿ 2017 ರಲ್ಲಿ 30 ತಾಲ್ಲೂಕಿನ 1321 ಹಳ್ಳಿಗಳು ಭಾಗಿಯಾದರೆ, 2018 ರಲ್ಲಿ 75 ತಾಲ್ಲೂಕಿನ 4,025 ಹಳ್ಳಿಗಳನ್ನು ತಲುಪಿತ್ತು. 2019ರಲ್ಲಿ 9.15 ಕೋಟಿ ರೂಪಾಯಿಯ ಬಹುಮಾನದೊಂದಿಗೆ 24 ಜಿಲ್ಲೆಯ 76 ತಾಲ್ಲೂಕಿನ 4 ಸಾವಿರಕ್ಕೂ ಹೆಚ್ಚು ಹಳ್ಳಿಗಳನ್ನು ಪಾನಿ ಫೌಂಡೇಷನ್ ತಲುಪಿದೆ. 2016-17ರ ಒಂದು ವರ್ಷದ ಹೊತ್ತಿಗೆ ಸ್ಫರ್ಧೆಯಲ್ಲಿ ಭಾಗವಹಿಸಿದ ಹಳ್ಳಿಗಳಿಂದ 10 ಸಾವಿರ ಕೋಟಿ ಲೀಟರ್ ನೀರು ಸಂಗ್ರಹ ಪ್ರದೇಶವನ್ನು ಸೃಷ್ಟಿ ಮಾಡಿತ್ತು. ಅಂದಾಜು ಶೇ. 90% ರಷ್ಟು ಬರಪ್ರದೇಶಗಳನ್ನು ಪಾನಿ ಫೌಂಡೇಷನ್ ತಲುಪಿದೆ.

ನಗರ ನಿವಾಸಿಗಳು ಭಾಗಿ: 2017 ರಲ್ಲಿ ‘ಚಲಾ ಗಾವಿ’ (ಹಳ್ಳಿಗೆ ಹೋಗೋಣ) ಎಂಬ ಕರೆ ಕೊಟ್ಟು ಕಾರ್ಯಕ್ರಮ ರೂಪಿಸಿದಾಗ ಸುಮಾರು 25,000 ನಗರವಾಸಿಗಳು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಊಟದ ವ್ಯವಸ್ಥೆಯನ್ನು ಜನರೇ ಮಾಡಿಕೊಂಡಿದ್ದರು. ಮೇ 1 ಕಾರ್ಮಿಕ ದಿನದಂದು ಹಳ್ಳಿಗಳಿಗೆ ಹೋಗಿ ಸ್ವಯಂಸೇವಕರಾಗಿ ಕೆಲಸ ಮಾಡಲು ‘ಜಲ್ ಮಿತ್ರಾ’ (ನೀರಿನ ಸ್ನೇಹಿತ) ಎಂಬ ಕರೆ ನೀಡಿದಾಗ 1.3 ಲಕ್ಷ ಜನರು ಸ್ವಯಂಪ್ರೇರಿತರಾಗಿ ಶ್ರಮಧಾನದಲ್ಲಿ ಭಾಗಿಯಾಗಿದ್ದರು. ಇನ್ನೂ ಸಾವಿರಾರು ಜನರು ನಾವು ಕೇಳದೇ ಇದ್ದರೂ ಸ್ವಯಂಸೇವಕರಾಗಿ ದುಡಿಯುತ್ತಿದ್ದಾರೆ ಎನ್ನುತ್ತಾರೆ ಸಂಸ್ಥಾಪಕರು.

ಬಾಲಿವುಡ್‌ನ ಘಟಾನುಘಟಿ ಸ್ಟಾರ್‌ಗಳಲ್ಲಿ ಬಹುತೇಕರು ಪಾನಿ ಫೌಂಡೇಶನ್‌ ಚಟುವಟಿಕೆಗಳೊಂದಿಗೆ ಕೈ ಜೋಡಿಸಿದ್ದಾರೆ.

ಯಾರೂ ಸೋಲದ ಆಟ: ರಾಜ್ಯ, ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದಲ್ಲಿ ವರ್ಷಕ್ಕೆ ಸುಮಾರು 9 ಕೋಟಿಗೂ ಹೆಚ್ಚು ಹಣದ ಬಹುಮಾನವನ್ನು ಕೆಲವು ಹಳ್ಳಿಗಳಿಗೆ ನೀಡುತ್ತಿದೆ ಆದರೂ ಸ್ಫರ್ಧೆಯಲ್ಲಿ ಬಹುಮಾನ ಪಡೆಯದೇ ಇರುವವರು ಯಾರೂ ಸೋಲುವುದಿಲ್ಲ. ಯಾಕೆಂದರೆ ಆ ಹಳ್ಳಿಯಲ್ಲಿ ನೀರು ಶೇಖರಣೆ ಪ್ರದೇಶ ನಿರ್ಮಾಣವಾಗಿರುತ್ತದೆ. ಹಲವು ಹಳ್ಳಿಗಳು ಈಗಾಗಲೇ ಟ್ಯಾಂಕರ್ ಮುಕ್ತವಾಗಿದ್ದು, ಅಂತರ್ಜಲ ಹೆಚ್ಚು ಮಾಡಿಕೊಂಡಿವೆ. ಈ ರೀತಿ ನೀರು ಸಂಗ್ರಹಸಿದ್ದರಿಂದ ಹಲವು ಹಳ್ಳಿಗಳು ಇದೀಗ ವರ್ಷಕ್ಕೆ ಮೂರು ಬೆಳೆಗಳನ್ನೂ ತೆಗೆಯುತ್ತಿವೆ.

ಒಮ್ಮೆ ನೆರೆ ಮತ್ತೊಮ್ಮೆ ಬರಗಾಲಕ್ಕೆ ನೈಸರ್ಗಿಕ ಕಾರಣಗಳು ಹಾಗೂ ಮಾನವ ನಿರ್ಮಿತ ಕಾರಣಗಳು ಇರಡೂ ಇದ್ದೇಯಿದೆ. ಮಳೆಯ ಜೊತೆಗಿನ ರೈತರ ಜೂಜಿನಾಟದಲ್ಲಿ ರೈತರ ಸೋಲು ಸಾವಿನವರಗೂ ಕರೆದುಕೊಂಡು ಹೋಗುತ್ತಿದೆ. ಇದನ್ನು ಸುಧಾರಿಸುವ ಕೆಲಸದಲ್ಲಿ ಪ್ರತಿಯೊಬ್ಬರ ಜವಾಬ್ದಾರಿ ಬಹಳ ಮುಖ್ಯವಾಗಿರುತ್ತದೆ. ಅದೊಂದು ಸಂಘಟಿತ ಕೆಲಸವಾಗಿರಬೇಕು. ಸರ್ಕಾರಗಳು ಮಾಡಬೇಕಿರುವ ಕೆಲಸಗಳನ್ನು ಪಾನಿ ಫೌಂಡೇಷನ್ ನಂತಹ ಸಂಸ್ಥೆಗಳು ದೇಶದಾದ್ಯಂತ ಮಾಡಲು ಸಾಧ್ಯವಿಲ್ಲ. ರೈತರ ಸಾಲ ಮನ್ನಾ, ವೈಜ್ಞಾನಿಕ ಬೆಲೆ, ಸ್ವಾಮಿನಾಥನ್ ಆಯೋಗದ ಶೀಪಾರಸ್ಸಿನ ಜಾರಿ ಇತ್ಯಾದಿ ಪಾಲಿಸಿ ವಿಚಾರಗಳು ಸರ್ಕಾರಗಳೇ ಮಾಡಬೇಕಿರುತ್ತದೆ. ಮಹಾರಾಷ್ಟ್ರದಲ್ಲಿ ಪಾನಿ ಫೌಂಡೇಷನ್‍ನ ಕೆಲಸಗಳನ್ನು ಅಭಿನಂದಿಸುತ್ತಲೇ ಸರ್ಕಾರದ ಜವಾಬ್ದಾರಿಯನ್ನು ನೆನಪಿಸುವ ಕೆಲಸಗಳನ್ನು ಜನರು ಮಾಡಬೇಕಿರುತ್ತದೆ..

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಬಂಗಾಳ SIR : ನ್ಯಾಯಮಂಡಳಿಗಳಿಂದ ಪರಿಹಾರ ಪಡೆದವರು ಕೇವಲ 0.01% ಜನ

ಪಶ್ಚಿಮ ಬಂಗಾಳದಲ್ಲಿ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಪ್ರಕ್ರಿಯೆಯ ನಂತರ ಮತದಾರರ ಪಟ್ಟಿಯಲ್ಲಿ ಉಂಟಾದ ವಿವಾದಗಳನ್ನು ಬಗೆಹರಿಸಲು ಮೇಲ್ಮನವಿ ನ್ಯಾಯಮಂಡಳಿಗಳನ್ನು ಸ್ಥಾಪಿಸಲಾಗಿದೆ. ಎಸ್‌ಐಆರ್ ಪ್ರಕ್ರಿಯೆಯ ನಂತರ ಮತದಾರರ ಪಟ್ಟಿಯಿಂದ ಹೆಸರುಗಳನ್ನು ಕೈಬಿಟ್ಟಿರುವುದರ ಅಥವಾ...

ಪ.ಬಂಗಾಳ ಎಸ್‌ಐಆರ್‌ : ದೇಶ ಕಾದ ಯೋಧನಿಂದ ತೀರ್ಪು ಕೊಟ್ಟ ನ್ಯಾಯಾಧೀಶರವರೆಗೆ.. ಮತ ಹಕ್ಕು ಕಳೆದುಕೊಂಡ ಲಕ್ಷಾಂತರ ಜನರು

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ದೇಶದಲ್ಲಿ ಪ್ರಸ್ತುತ ಚರ್ಚೆಯಲ್ಲಿರುವ ಪ್ರಮುಖ ವಿಚಾರ. ಹಲವು ಗೊಂದಲಗಳ ನಡುವೆ ಮೊದಲ ಹಂತದಲ್ಲಿ ಬಿಹಾರದಲ್ಲಿ ಎಸ್‌ಐಆರ್‌ ಪೂರ್ತಿಗೊಳಿಸಿದ ಚುನಾವಣಾ ಆಯೋಗ, ನಂತರ ಅಲ್ಲಿ ವಿಧಾನಸಭಾ...

ತೆಲಂಗಾಣ ಜಾತಿ ಸಮೀಕ್ಷೆ: ಜನರ ಆರ್ಥಿಕ ಭವಿಷ್ಯ ನಿರ್ಧರಿಸುತ್ತಿರುವ ಜಾತಿ ಹಿನ್ನೆಲೆ

ತೆಲಂಗಾಣದಲ್ಲಿರುವ ಎಲ್ಲಾ ಪರಿಶಿಷ್ಟ ಜಾತಿ ಕಾರ್ಮಿಕರಲ್ಲಿ ಸುಮಾರು ಅರ್ಧದಷ್ಟು ಜನರು ದಿನಗೂಲಿ ಕಾರ್ಮಿಕರು. ಆದರೆ, ಸಾಮಾನ್ಯ ಜಾತಿ ಕಾರ್ಮಿಕರಲ್ಲಿ 10 ರಲ್ಲಿ ಒಬ್ಬರು ಮಾತ್ರ ದಿನಗೂಲಿ ಮಾಡುತ್ತಾರೆ. ಬ್ರಾಹ್ಮಣರು ಎಸ್‌ಟಿ ಸಮುದಾಯದ ಕೋಲಂಗಿಂತ...

ಲೆಬನಾನ್‌ನಲ್ಲಿ ಯೇಸುವಿನ ಪ್ರತಿಮೆ ಧ್ವಂಸ ಮಾಡಿದ ಇಸ್ರೇಲಿ ಸೈನಿಕ; ಫೋಟೋ ವೈರಲ್

ಇಸ್ರೇಲಿ ಸೈನಿಕನೊಬ್ಬ ದಕ್ಷಿಣ ಲೆಬನಾನ್‌ನಲ್ಲಿ ಸ್ಲೆಡ್ಜ್ ಹ್ಯಾಮರ್‌ನಿಂದ ಯೇಸುಕ್ರಿಸ್ತನ ಪ್ರತಿಮೆಯನ್ನು ಧ್ವಂಸ ಮಾಡುತ್ತಿರುವುದನ್ನು ತೋರಿಸುವ ವೈರಲ್ ಚಿತ್ರದ ಸತ್ಯಾಸತ್ಯತೆಯನ್ನು ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್‌) ದೃಢಪಡಿಸಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಎಕ್ಸ್ ನಲ್ಲಿ 6.8...

TCS ನಾಸಿಕ್ ಪ್ರಕರಣ : ಮಾಧ್ಯಮಗಳ ಸುಳ್ಳು ಮತ್ತು ಕಂಪನಿ ಹೇಳಿದ ಸತ್ಯ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್‌) ಕಂಪನಿಯ ಬಿಪಿಒ ಘಟಕದಲ್ಲಿ ನಡೆದಿದೆ ಎನ್ನಲಾದ ಪ್ರಕರಣವೊಂದು ಪ್ರಸ್ತುತ ಇಡೀ ದೇಶದಾದ್ಯಂತ ಭಾರೀ ಚರ್ಚೆಯ ವಿಷಯವಾಗಿದೆ. ಈ ಪ್ರಕರಣದಲ್ಲಿ ಮುಖ್ಯವಾಗಿ ಲೈಂಗಿಕ ಕಿರುಕುಳ ಮತ್ತು...

‘ಅಮೆರಿಕದೊಂದಿಗೆ ಮಾತುಕತೆ ಇಲ್ಲ..’; ಇಸ್ಲಾಮಾಬಾದ್‌ ಸಭೆಯಲ್ಲಿ ಇರಾನ್ ಭಾಗವಹಿಸುವುದು ಅನುಮಾನ

ಯುನೈಟೆಡ್ ಸ್ಟೇಟ್ಸ್ (ಅಮೆರಿಕ) ಜೊತೆ ಹೊಸ ಸುತ್ತಿನ ಮಾತುಕತೆಗಾಗಿ ಇಸ್ಲಾಮಾಬಾದ್‌ಗೆ ಸಂಧಾನಕಾರರನ್ನು ಕಳುಹಿಸುವ ಯಾವುದೇ ಯೋಜನೆ ಇಲ್ಲ ಎಂದು ಇರಾನ್ ಸೂಚಿಸಿದೆ. ಕದನ ವಿರಾಮ ಮುಕ್ತಾಯಗೊಳ್ಳಲು 48 ಗಂಟೆಗಳ ಮೊದಲು ಯುದ್ಧ ನಿರತ...

ಇರಾನ್, ಇಸ್ರೇಲ್-ಅಮೆರಿಕ ಯುದ್ಧ : ವಿನಾಶದ ನಡುವೆಯೂ ಲಾಭ ಪಡೆದವರು ಯಾರು?

ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) 2026ರ ಜಾಗತಿಕ ಬೆಳವಣಿಗೆಯ ಅಂದಾಜನ್ನು ಶೇಕಡ 3.3 ರಿಂದ 3.1ಕ್ಕೆ ಇಳಿಸಿದೆ. ಇರಾನ್ ವಿರುದ್ಧದ ಅಮೆರಿಕ-ಇಸ್ರೇಲ್ ಯುದ್ಧದ ಪರಿಣಾಮ ಮತ್ತು ಹಾರ್ಮುಝ್ ಜಲಸಂಧಿಯನ್ನು ಮುಚ್ಚಿರುವುದು ವಿಶ್ವ ಆರ್ಥಿಕತೆಯ...

ಕ್ಷೇತ್ರ ಮರುವಿಂಗಡಣೆ ವಿರುದ್ಧ ದಕ್ಷಿಣದ ರಾಜ್ಯಗಳ ಪಟ್ಟು: ಭವಿಷ್ಯದ ಮರುಚಿಂತನೆಗೆ ಇದುವೇ ಸೂಕ್ತ ಕಾಲ

ಲೋಕಸಭೆಯಲ್ಲಿ 131 ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ತಿರಸ್ಕರಿಸಿರುವುದು ಭಾರತದ ಪ್ರಜಾಪ್ರಭುತ್ವ ಪಥದಲ್ಲಿ ಮಹತ್ವದ ಕ್ಷಣವಾಗಿದೆ. ಇದು ಕೇವಲ ಶಾಸಕಾಂಗದ ಹಿನ್ನಡೆಯನ್ನು ಮಾತ್ರವಲ್ಲ, ಒಕ್ಕೂಟ ವ್ಯವಸ್ಥೆಯ ಸೂಕ್ಷ್ಮ ಸಮತೋಲನವನ್ನು ಹಾಳುಮಾಡುವ ಅಪಾಯವನ್ನುಂಟುಮಾಡುವ ಪ್ರಸ್ತಾಪಗಳ...

ಮೋದಿ ಸರ್ಕಾರದ ಯೂಟರ್ನ್ : ಜನಸಂಖ್ಯಾ ಸ್ಫೋಟದ ಕಳವಳದಿಂದ ಹೆಚ್ಚು ಜನಸಂಖ್ಯೆಯ ರಾಜ್ಯಗಳಿಗೆ ಗಿಫ್ಟ್ ಕೊಡುವವರೆಗೆ

ಭಾರತದ ಜನಸಂಖ್ಯೆಯ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರ ನಿಜವಾಗಿಯೂ ಬಹಳ ಕಳವಳ ವ್ಯಕ್ತಪಡಿಸುತ್ತಿದೆ– ಅಥವಾ ಅವರು ನಮಗೆ ಆ ರೀತಿ ನಂಬುವಂತೆ ಮಾಡಿದ್ದಾರೆ. ಏಕೆಂದರೆ... 2019ರ ಸ್ವಾತಂತ್ರ್ಯ ದಿನಾಚರಣೆಯಂದು ಮೋದಿಯವರು,...

ದೇಶವನ್ನುದ್ದೇಶಿಸಿ ಮೋದಿ ಭಾಷಣ : ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ

ಕ್ಷೇತ್ರ ಮರುವಿಂಗಡನೆಗೆ ಉದ್ದೇಶಿಸಿದ್ದ ಸಂವಿಧಾನದ 131ನೇ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾದ ಬೆನ್ನಲ್ಲೇ ಶನಿವಾರ (ಏ.18) ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಸಂಸತ್ತಿನಲ್ಲಿ ವಿರೋಧ...