ನೈಋತ್ಯ ದೆಹಲಿಯ ವಸಂತ್ ವಿಹಾರ್‌ನಲ್ಲಿ ಆಸ್ತಿ ವ್ಯಾಪಾರಿಯೊಬ್ಬರು ಒಬ್ಬರು ಚಲಾಯಿಸುತ್ತಿದ್ದರು ಎನ್ನಲಾದ ಐಷಾರಾಮಿ ಆಡಿ ಕಾರು ಹರಿದ ಪರಿಣಾಮ ಫುಟ್‌ಪಾತ್‌ನಲ್ಲಿ ಮಲಗಿದ್ದ ಎಂಟು ವರ್ಷದ ಬಾಲಕಿ ಸೇರಿದಂತೆ ಐವರು ತೀವ್ರವಾಗಿ ಗಾಯಗೊಂಡಿದ್ದಾರೆ. ಜುಲೈ 9ರಂದು ನಸುಕಿನಲ್ಲಿ ಈ ಘಟನೆ ನಡೆದಿದೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.
ಘಟನೆ ನಡೆದ ಬೆನ್ನಲ್ಲೇ ಚಾಲಕ 40 ವರ್ಷದ ಉತ್ಸವ್ ಶೇಖರ್ ಅವರನ್ನು ಬಂಧಿಸಲಾಗಿದೆ. ದೆಹಲಿ ಪೊಲೀಸರ ಪ್ರಕಾರ, ಶೇಖರ್ ಅವರು ಮದ್ಯಪಾನ ಮಾಡಿ ದ್ವಾರಕದ ತನ್ನ ಮನೆ ಕಡೆಗೆ ಕಾರಿನಲ್ಲಿ ತೆರಳುತ್ತಿದ್ದರು. ಈ ವೇಳೆ ತಡರಾತ್ರಿ 1.45ರ ಸುಮಾರಿಗೆ ಶಿವಕ್ಯಾಂಪ್ ಬಳಿ ಅವಘಡ ಸಂಭವಿಸಿದೆ.
“ಪ್ರತ್ಯಕ್ಷದರ್ಶಿಗಳ ಹೇಳಿಕೆ ಪಡೆದುಕೊಳ್ಳಲಾಗಿದೆ. ತಾವು ಫುಟ್‌ಪಾತ್‌ನಲ್ಲಿ ಮಲಗಿದ್ದಾಗ ಬಿಳಿ ಬಣ್ಣದ ಆಡಿ ಕಾರು ಹರಿದಿದೆ ಎಂಬುವುದಾಗಿ ಅವರು ಹೇಳಿದ್ದಾರೆ” ಎಂದು ಉಪ ಪೊಲೀಸ್ ಆಯುಕ್ತ (ನೈಋತ್ಯ) ಅಮಿತ್ ಗೋಯಲ್ ತಿಳಿಸಿದ್ದಾರೆ.
ಗಾಯಗೊಂಡವರು ಲಾಧಿ (40), ಬಿಮ್ಲಾ (8), ಸಬಾಮಿ (45), ನಾರಾಯಣಿ (35), ಮತ್ತು ರಾಮ್ ಚಂದರ್ (45) ಎಂದು ತಿಳಿದು ಬಂದಿದೆ. ಇವರೆಲ್ಲರೂ ರಾಜಸ್ಥಾನದ ನಿವಾಸಿಗಳು. ಇತ್ತೀಚೆಗೆ ದೆಹಲಿಗೆ ಆಗಮಿಸಿದ್ದರು ಮತ್ತು ಪ್ರಸ್ತುತ ನಿರುದ್ಯೋಗಿಗಳಾಗಿದ್ದಾರೆ. ಎಲ್ಲರಿಗೂ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಫುಟ್‌ಪಾತ್‌ನಲ್ಲಿ ಮಲಗಿದ್ದವರ ಮೇಲೆ ಕಾರು ಹರಿಸಿದ ಆರೋಪಿ ಶೇಖರ್, ಆ ಬಳಿಕ 200 ಮುಂದಕ್ಕೆ ಹೋಗಿ ಟ್ರಕ್ ಒಂದಕ್ಕೆ ಡಿಕ್ಕಿ ಹೊಡೆದಿದ್ದರು. ನಂತರ ಅವರನ್ನು ಬಂಧಿಸಲಾಗಿದೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಹೇಳಿದೆ.
ಚೆನ್ನೈ। ತಿರುವಳ್ಳೂರು ಬಳಿ ಕಚ್ಚಾ ತೈಲ ಸಾಗಣೆ ರೈಲಿನಲ್ಲಿ ಬೆಂಕಿ ಅವಘಡ: ರೈಲು ಸೇವೆಗಳಲ್ಲಿ ವ್ಯತ್ಯಯ