Homeಮುಖಪುಟಡಬ್ಬಿಂಗ್: ತಾತ್ವಿಕ ನೆಲೆ ಹಾಗು ವಾಸ್ತವದ ಸೆಳಕು- ಅಮರ್ ಹೊಳೆಗದ್ದೆ

ಡಬ್ಬಿಂಗ್: ತಾತ್ವಿಕ ನೆಲೆ ಹಾಗು ವಾಸ್ತವದ ಸೆಳಕು- ಅಮರ್ ಹೊಳೆಗದ್ದೆ

ಮನೋರಂಜನಾ ವಲಯ ಹಲವರ ಹೊಟ್ಟೆ ತುಂಬಿಸುತ್ತದೆ. ಅಂತೆಯೇ, ಕೆಲವರನ್ನು ಆಗರ್ಬ ಶ್ರೀಮಂತರನ್ನಾಗಿಯೂ ಮಾಡುತ್ತದೆ. ಬಂಡವಾಳಶಾಹಿ ಹಾಗು ಕೆಲವೇ ವರ್ಗಗಳ ಸಾಂಸ್ಕ್ರುತಿಕ ಹೆಜಮೊನಿಯ ವ್ಯವಸ್ತೆಯನ್ನು ಯಾವತ್ತಿಗೋ ಅದು ತನ್ನದಾಗಿಸಿಕೊಂಡಿದೆ.

- Advertisement -
- Advertisement -

(ಇದನ್ನು ಹೊಸ ಬರಹದಲ್ಲಿ ಬರೆಯಲಾಗಿದ್ದು ಬೇಕಂತಲೇ ಮಹಾಪ್ರಾಣಗಳ ಬಳಕೆಯನ್ನು ಕೈಬಿಡಲಾಗಿದೆ)

ಡಬ್ಬಿಂಗ್ (ಉಲಿಮಾರು, ಮಾತು ಕೂರಿಸುವುದು) ಪರ ಹಾಗು ವಿರೋದದ ಚರ್ಚೆ ಮತ್ತೆ ಮುನ್ನೆಲೆಗೆ ಬಂದಿದೆ. ಕಾರಣ, ಕಳೆದ ಒಂದು ತಿಂಗಳಿನಿಂದ ಕನ್ನಡ ಕಿರುತೆರೆಯ ಮೇಲೆ ಕಾಣಿಸಿಕೊಳ್ಳುತ್ತಿರುವ ಸಾಲು ಸಾಲು ಡಬ್ಬಾದ ದಾರಾವಾಹಿಗಳು ಮತ್ತು, ಇವುಗಳ ವಿರುದ್ದ ನಾಡಿನ ಹಿರಿಯ ಕಲಾವಿದರು ಹಾಗು ನಿರ್ದೇಶಕರು, ಸಚಿವ ಆರ್. ಅಶೋಕ್ ಬಳಿ ಕೊಟ್ಟ ದೂರು. ದೂರು ನೀಡಿದವರು ಮತ್ತು ಅವರ ನಿಲುವನ್ನು ಬೆಂಬಲಿಸುವವರು ಒಡ್ಡುವ ಆತಂಕಗಳು ಪ್ರದಾನವಾಗಿ ಇಂತಿವೆ-

ಅ) ದಾರಾವಾಹಿಗಳ ಡಬ್ಬಿಂಗ್‍ನಿಂದಾಗಿ ಕನ್ನಡ ಮನೋರಂಜನೆಯ ವಲಯವು ಹೊರನಾಡಿನ ಮೂಲವಿರುವ ಕೆಲವೇ ಕಲವು ಉದ್ಯಮಪತಿಗಳ ಹಿಡಿತಕ್ಕೆ ಸಿಲುಕಿದೆ. ಅದರಲ್ಲೂ ಮೇಲ್ವರ್ಗದವರ ಹಿಡಿತವೇ ಬಿಗಿಯಾಗಿದೆ.

ಆ) ನಮ್ಮ ನಾಡಿನ ಕಲಾವಿದರು ಹಾಗು ಕಾರ್ಮಿಕರು ಕೆಲಸ ಕಳೆದುಕೊಳ್ಳುತ್ತಿದ್ದಾರೆ.

ಇ) ಡಬ್ಬ್ ಆದ ದಾರಾವಾಹಿಗಳು ಹೊರನಾಡಿನ ಸಂಸ್ಕ್ರುತಿಗಳನ್ನು ಹೇರುವುದರ ಮೂಲಕ ಹಾಗು, ಪುರಾಣಗಳ ಪ್ರತಿಗಾಮಿ ವ್ಯಾಕ್ಯಾನವನ್ನೇ ಎತ್ತಿ ತೋರಿಸುವುದರ ಮೂಲಕ (ಮಹಾಬಾರತ, ರಾದಾಕ್ರಿಶ್ಣ ಮುಂತಾದ ಸೀರಿಯೆಲ್‍ಗಳು) ಜನರನ್ನು ಈ ನೆಲದ ಬಹುಜನ ಸಂಸ್ಕ್ರುತಿ ಹಾಗು ಪುರೋಗಾಮಿತನದಿಂದ ವಿಮುಕರನ್ನಾಗಿ ಮಾಡುತ್ತಿವೆ.

ಮುಂಚಿನ ಡಬ್ಬಿಂಗ್ ವಿರೋದಿ ಹೋರಾಟಗಳಿಗಿಂತ ಈ ಸಲದ ಹೋರಾಟದ ದನಿಯಲ್ಲಿ ಎರಡು ವಿಶೇಶತೆಗಳು ಕಂಡು ಬರುತ್ತಿವೆ. ಒಂದು, ವಿರೋದಿ ಪಾಳಯದ ಹೆಚ್ಚಿನವರು ಡಬ್ಬಿಂಗ್ ಅನ್ನು ತಾತ್ವಿಕವಾಗಿ ಒಪ್ಪಿರುವುದು (ಅರಿವಿನ ಸರಕುಗಳನ್ನು ಉಣಿಸುವ ಡಿಸ್ಕವರಿ, ಅನಿಮಲ್ ಪ್ಲಾನೆಟ್ ಚ್ಯಾನೆಲ್ ಹಾಗು ಇತರೆ ಮನೋರಂಜನಾ ಸರಕುಗಳಾದ ಕಾರ್ಟೂನ್ ಗಳು ಡಬ್ಬಾಗಲು ತಾತ್ವಿಕವಾಗಿ ಒಪ್ಪಿರುವುದು). ಇನ್ನೊಂದು, ಇವರ ಸಂಸ್ಕ್ರುತಿಯ ವ್ಯಾಕ್ಯಾನದಲ್ಲಿ ಎಡಪಂತೀಯ ಹೊರಳು (ಸಮಾಜಮುಕಿ, ಸಬಾಲ್ಟ್ರನ್ ಸಂಸ್ಕ್ರುತಿಗಳ ಬಗ್ಗೆ ಕಾಳಜಿ). ವಿರೋದಿ ನೆಲೆಯಲ್ಲಿ ಮೂಡಿದ ಈ ವಿಶೇಶತೆಗಳನ್ನು ಗೌರವಿಸ್ತುತ್ತಲೇ, ಅವರಲ್ಲಿ ತಾತ್ವಿಕತೆ ತಂದೊಡ್ಡಿದ ನಿರೀಕ್ಶೆ ಹಾಗು ಅದರ ಪ್ರಾಯೋಗಿಕ ವಾಸ್ತವ ಉಂಟುಮಾಡಿದ ಬ್ರಮನಿರಸನವನ್ನು ಮೊದಲು ಅರಿತು, ಬಳಿಕ ಅವರ ಆತಂಕಗಳನ್ನು ಚರ್ಚಿಸುವುದು ಸೂಕ್ತ.

“ಲೋಕದ ಯಾವುದೇ ನುಡಿಯಲ್ಲಿ ಮೂಡಿದ ಅರಿವು ಹಾಗು ಮನೋರಂಜನೆಯನ್ನು ನನ್ನ ನುಡಿಯಲ್ಲಿ ಪಡೆಯುವ ಹಕ್ಕು ನನಗಿದೆ” ಎಂಬುವುದು ಡಬ್ಬಿಂಗ್ ಪರವಾದ ತಾತ್ವಿಕತೆ. ಇದು ವ್ಯಕ್ತಿನಿಶ್ಟ ಪಾತಳಿಯಿಂದ ರೂಪಿಸಲ್ಪಟ್ಟ ವಯಕ್ತಿಕ ಆಯ್ಕೆ ಸ್ವಾತಂತ್ರ್ಯವನ್ನು ಮುಂದುಮಾಡುವ ತಾತ್ವಿಕತೆ. ಇದು ಸಮುದಾಯದ ಮಟ್ಟಿಗೆ ವಿಸ್ತರಣೆಗೊಂಡಾಗ ನುಡಿಸಮಾನತೆಯ ತಾತ್ವಿಕತೆಯಾಗಿ ರೂಪಾಂತರಗೊಳ್ಳುತ್ತದೆ. ಇವಕ್ಕೆ ಸಂವಾದಿಯಾಗಿ, “ಜನಸಮೂಹದ ಬದುಕಿನ ಮುಂದೆ ವ್ಯಕ್ತಿ ಸ್ವಾಂತಂತ್ರ್ಯ ಗೌಣ”ವೆಂಬ ನಂಬಿಕೆಯಿಂದೇ, ತಾನು ಉಲ್ಲೇಕಿಸಿದ ಜನಸಮೂಹ ಬಾಳುತ್ತಿರುವ ಸಮಾಜದ ಓರೆಕೋರೆಗಳನ್ನು ನೇರ್ಪಡಿಸುವ ಹಾಗು, ಆ ಸಮುದಾಯದ ಸಂಸ್ಕ್ರುತಿ, ಚಿಂತನೆ, ಅನುಬವಗಳನ್ನು ಪ್ರದಾನ ಬೂಮಿಕೆಗೆ ತರುವ ಅಪೇಕ್ಶೆಯನ್ನು ತಾಳ್ದು ವಿಕಸನಗೊಂಡ ಜೀವಪರವೆನಿಸಿಕೊಳ್ಳವ ಸಮೂಹನಿಶ್ಟ ತಾತ್ವಿಕತೆ. ಈ ಮೂರು ವಿಬಿನ್ನ ನೆಲೆಗಳಲ್ಲಿ ನುಡಿಸಮಾನತೆಯು ಡಬ್ಬಿಂಗ್ ವಿರೋದಿಗಳಿಗೆ ಒಪ್ಪಿತವಾಗಿದೆ. ಸಂಗರ್ಶ ಏರ್ಪಟ್ಟಿರುವುದು ವ್ಯಕ್ತಿನಿಶ್ಟ ಹಾಗು ಸಮೂಹನಿಶ್ಟ ತಾತ್ವಿಕತೆಗಳ ಗ್ರಹಿಸುವ ಪರಿಯಲ್ಲಿ. ಡಬ್ಬಿಂಗ್ ಅನ್ನು ವ್ಯಕ್ತಿನಿಶ್ಟ ಪರಿಪ್ರೇಕ್ಶ್ಯದಲ್ಲಿ ಒಪ್ಪಿಯೂ, ಡಬ್ಬ್ ಆದ ಸಾಲು ಸಾಲು ಸೀರಿಯಲ್ಗಳು ತಾವು ನಂಬಿದ ಸಮೂಹನಿಶ್ಟ ತಾತ್ವಿಕತೆಯನ್ನು ಪ್ರಚುರಪಡಿಸದ ಕಾರಣ ಉಂಟಾದ ಬ್ರಮನಿರಸನವು ಡಬ್ಬಿಂಗ್ ವಿರೋದಕ್ಕೆ ಎಡೆಮಾಡಿಕೊಟ್ಟಿದೆ.

ಡಬ್ಬಿಂಗ್ ವಿರೋದಿಗಳ ಸಮೂಹಪರ ಕಾಳಜಿಯನ್ನು ಮೆಚ್ಚುತ್ತ, ತಾತ್ವಿಕ ಮಟ್ಟದಲ್ಲೇ ಅವರಲ್ಲುಂಟಾದ ಗೊಂದಲಗಳತ್ತ ಬೊಟ್ಟುಮಾಡಬೇಕಾಗಿದೆ. ಮೊದಲನೆಯದಾಗಿ, ಒಂದು ನಿರ್ದಿಶ್ಟ ತಾತ್ವಿಕತೆಯನ್ನು ಒಪ್ಪುವುದು ಎಂದರೆ, ಅದರ ಅನುಶ್ಟಾನದಲ್ಲಿ ಎದುರಾಗುವ ಎಲ್ಲಾ ಎಡರುತೊಡರುಗಳನ್ನು ಅಪ್ಪಿಯೂ ತತ್ವನಿಶ್ಟರಾಗಿರುವುದು ಹಾಗು ಆ ತಾತ್ವಿಕ ಚೌಕಟ್ಟನ್ನು ತ್ಯಜಿಸದೆ ಪರಿಹಾರವನ್ನು ಕಂಡುಕೊಳ್ಳುವುದು. ಹಾಗಾಗಿ, ಡಬ್ಬಿಂಗ್ ಅನ್ನು ತಾತ್ವಿಕವಾಗಿ ಒಪ್ಪಿ, ಅದರ ಅನುಶ್ಟಾನದ ಒಂದು ನಿರ್ದಶ್ಟ ಹಂತದಲ್ಲಿ ತೊಡಕುಗಳು ಕಾಣಿಸಿಕೊಂಡಾಗ ಡಬ್ಬಿಂಗನ್ನೇ ವಿರೋದಿಸುವುದು ಸರಿಗಾಣದು. ಇನ್ನು, ಡಬ್ಬಿಂಗ್‍ನಿಂದಾಗಿ ತಮ್ಮ ಸಮೂಹನಿಶ್ಟ ತಾತ್ವಿಕತೆಗೆ ಚ್ಯುತಿಯಾಯಿತೆಂಬ ವಾದವನ್ನು ಒಪ್ಪಿದರೆ, ಹಲವು ಕೇಳ್ವಿಗಳು ಎದುರಾಗುತ್ತವೆ. ಡಬ್ಬಿಂಗ್ ಪೂರ್ವ ಕನ್ನಡ ಸೀರಿಯಲ್‍ಗಳು ಸಮಾಜಮುಕಿ ಸಮೂಹನಿಶ್ಟ ತಾತ್ವಿಕತೆಯನ್ನೇ ಪ್ರತಿಪಾದಿಸುತ್ತಿದ್ದವೇ? ಈ ಸೀರಿಯಲ್‍ಗಳಲ್ಲಿ ಈ ನೆಲದ ಬಹುಸಂಸ್ಕ್ರುತಿ ಹಾಗು ವಯ್ಚಾರಿಕ ಪುರೋಗಾಮಿತನ ಕಂಡುಬಂದಿದ್ದವೇ? ಕನ್ನಾಡಿನ ಬಹುತೇಕ ವಾಹಿನಿಗಳ ಕೇಂದ್ರ ಸ್ತಾನ ಹೊರನಾಡುಗಳೇ ಆಗಿರುವಾಗ ಮತ್ತು, ಅದರ ಹಿಡಿತ ಕೆಲವೇ ಉದ್ಯಮಪತಿಗಳ ಕಯ್ಯಲ್ಲಿರುವಾಗ, ಡಬ್ಬಿಂಗ್ ಮುಂಚಿನ ದಾರಾವಾಹಿಗಳ ಹೆಜೆಮೊನಿಕ್ ಹಿಡಿತದಲ್ಲಿ ಏನಾದರು ವ್ಯತ್ಯಾಸವಿದ್ದಿತೇ? ಆ ದಾರಾವಾಹಿಗಳಲ್ಲೂ ಬೌದ್ದಿಕವಾಗಿ, ಆರ್ತಿಕವಾಗಿ, ಸಾಂಸ್ಕ್ರುತಿಕವಾಗಿ ಆಳಿ, ಲಾಬ ಮಾಡಿಕೊಂಡವರು ಮೇಲ್ವರ್ಗದವರೇ ಅಲ್ಲವೇ? ಹೆಣ್ಣನ್ನು ಬಿಂಬಿಸುವ ರೀತಿಯಲ್ಲಿ ನಮ್ಮ ಸೀರಿಯಲ್ಗಳಿಗೂ, ಡಬ್ಬ್ ಆದವುಗಳಿಗೂ ಏನಾದರೂ ವ್ಯತ್ಯಾಸವಿದೆಯೇ? ಇವಲ್ಲದೆ, ಡಬ್ಬಿಂಗ್ ಹಾಗು ಸಮೂಹನಿಶ್ಟ ತಾತ್ವಿಕತೆಯನ್ನು ಎದುರುಬದುರುಗೊಳಿಸದೆಯೂ, ಈ ಸಂದರ್ಬದಲ್ಲಿ ಎರಡು ಮೂಲಬೂತ ಕೇಳ್ವಿಗಳಿಗೆ ನಮ್ಮನ್ನು ನಾವು ತೆರೆದುಕೊಳ್ಳಬೇಕಾಗುತ್ತದೆ. ಮೊದಲನೆಯದು, ಮನೋರಂಜನಾ ವಲಯವು ಕಲಾಬಿವ್ಯಕ್ತಿಯ ತೆರಹೇ ಅತವಾ, ಅದೊಂದು ಉದ್ಯಮವೇ ಎಂಬುದು. ಎರಡನೆಯದು, ನೋಡುಗರಲ್ಲಿ ಅಪೇಕ್ಶಿಸುವ ಪುರೋಗಾಮಿತನವನ್ನು ಗಮನದಲ್ಲಿರಿಸಿಕೊಂಡು ಅವರ ಆಯ್ಕೆ ಸ್ವಾಂತಂತ್ರ್ಯವನ್ನು ಕಿತ್ತುಕೊಳ್ಳುವುದು, ಆ ಜನಸಾಮಾನ್ಯರನ್ನು ದಡ್ಡರೆಂದು, ಅರಿವಿನ ಹಂತದಲ್ಲಿ ಕೀಳಾಗಿರುವವರೆಂದು ಪರಿಗಣಿಸಿದ ಹಾಗಾಗುವುದಿಲ್ಲವೇ ಎಂಬುದು. (ಕೊರೋನಾ ಬೀತಿಯ ಹೊತ್ತಿನಲ್ಲಿ ಕುಟುಂಬಸಮೇತರಾಗಿ ಮಹಾಬಾರತ, ರಾದಾಕ್ರಿಶ್ಣ ಸೀರಿಯಲ್‍ಗಳನ್ನು ನೋಡುತ್ತ ಮಾನಸಿಕ ನೆಮ್ಮದಿ ಹಾಗು ಕೌಟುಂಬಿಕ ಸಾಮರಸ್ಯ ಕಂಡುಕೊಳ್ಳುತ್ತಿರುವ ಎಶ್ಟೋ ಸಂಸಾರಗಳನ್ನು ನಾವು ದಡ್ಡರೆಂದು ಪರಿಗಣಿಸಬೇಕೇ?).

“ನಾಗರಿಕ ಸಮಾಜದ ಸಾಮಾಜಿಕ ಸಂಸ್ತೆಗಳ ಮೂಲಕವೇ ಯಜಮಾನಿಕೆಯು ತನ್ನ ಕಾರ್ಯವನ್ನು ನಡೆಸುತ್ತದೆ. ತನ್ನ ಪ್ರಾಬಲ್ಯಕ್ಕಾಗಿ ನಾಗರಿಕ ಸಮಾಜಗಳಲ್ಲಿ ನಿರಂತರವಾಗಿ ಸಮ್ಮತಿಯನ್ನು ಅತ್ಯಂತ ಸಕ್ರಿಯವಾಗಿ ರೂಪಿಸುವ ಜರೂರತ್ತು ಅದಕ್ಕಿರುತ್ತದೆ” ಎಂಬ ಅಂತೋನಿಯೋ ಗ್ರಾಮ್ಶಿಯವರ ಮಾತುಗಳು (ಡಾ. ಮೇಟಿ ಮಲ್ಲಿಕಾರ್ಜುನ – ಪ್ರಸ್ತಾವನೆ (ಪುಟ 53) – “ತಾತ್ವಿಕತೆ” – ಕರ್ನಾಟಕ ಸಬಾಲ್ಟ್ರನ್ ಓದು ಮಾಲಿಕೆ – 01 – ಕರ್ನಾಟಕ ಸಾಹಿತ್ಯ ಅಕಾಡೆಮಿ) ಇಲ್ಲಿ ಉಲ್ಲೇಕಾರ್ಹ. ಡಬ್ಬಿಂಗ್ ಇರಲಿ, ಇಲ್ಲದಿರಲಿ ಮನೋರಂಜನಾವಲಯದಲ್ಲಿ ತನ್ನ ಬೌದ್ದಿಕ, ಆರ್ತಿಕ ಹಾಗು ಸಾಂಸ್ಕ್ರುತಿಕ ಒಡೆತನವನ್ನು ಒಂದು ಪ್ರಬಲ ವರ್ಗ ಸಾದಿಸುವುದು ನಡೆದೇ ಇರುತ್ತದೆ. ಸಮೂಹನಿಶ್ಟ ತಾತ್ವಿಕತೆಯ ಪಾತಳಿಯಿಂದ ಈ ಹೆಜೆಮೊನಿಯ ವಿರುದ್ದ ಹೂಡಬೇಕಾದ ಹೂಟ ಮತ್ತು ಹೋರಾಟದ ಪರಿಯನ್ನು ಚರ್ಚಿಸುವ ತುರ್ತು ಒದಗಿಬಂದಿದೆ, ನಿಜ. ಆದರೆ ಈ ಪರಿ ವ್ಯಕ್ತಿ ಹಾಗು ನುಡಿ ಸ್ವಾಂತಂತ್ರ್ಯದ ದನಿಯನ್ನು ಉಡುಗಿಸಬಾರದು. ಯಾಜಮಾನ್ಯ ವಿರೋದಿ ಹೋರಾಟವು ಡಬ್ಬಿಂಗ್ ವಿರೋದಿ ಹೋರಾಟಕ್ಕೆ ಬಂದು ನಿಂತಿರುವುದು ಒಂದು ವಿಪರ್ಯಾಸ. ಎರಡೂ ತಾತ್ವಿಕತೆಗಳ ಬಿನ್ನ ನೆಲೆ ಹಾಗು ದಕ್ಕಿಸಿಕೊಳ್ಳಲು ಸವೆಯಬೇಕಾದ ಬಿನ್ನ ದಾರಿಗಳ ಸ್ಪಶ್ಟ ಅರಿವು ಮೂಡಿದರೆ, ಮೊದಲ (ಅ) ಹಾಗು ಮೂರನೆಯ (ಇ) ಆತಂಕಗಳು ಡಬ್ಬಿಂಗ್ ಪರಿಪ್ರೇಕ್ಶ್ಯದಲ್ಲಿ ನಿರರ್ತಕವೆನಿಸುತ್ತವೆ.

ಕಲಾವಿದರ ಹಾಗು ಕಾರ್ಮಿಕರ ಕುರಿತಾದ ಆತಂಕ ಸಮಂಜಸವಾದದ್ದೇ. ಆದರೆ, ಸಾಲು ಸಾಲು ಡಬ್ಬಿಂಗ್ ದಾರಾವಾಹಿಗಳು ಮೂಡಿಬರುತ್ತಿರುವ ಈ ಕಾಲದ ಅವಸ್ತೆಯನ್ನು ಪರಿಗಣಿಸಬೇಕು. ಕೊರೋನಾ ಬೀತಿಯಲ್ಲಿ ಸರಿಸುಮಾರು ಎರಡು ತಿಂಗಳು ಚಿತ್ರೀಕರಣವೇ ನಿಂತಿದ್ದ ಸಂದರ್ಬದಲ್ಲಿ, ಸ್ತಳೀಯ ಮನೋರಂಜನಾ ಸರಕುಗಳಿಲ್ಲದೆ ವಾಹಿನಿಗಳು ಮುಚ್ಚಿದ ಎತ್ತುಗೆಗಳು ಇರುವಾಗ, ಉಸಿರಾಡಲಾದರೂ ಡಬ್ಬಿಂಗ್ ಸರಕುಗಳಿಗೆ ಕೆಲ ವಾಹಿನಿಗಳು ಮೊರೆಹೋಗಿದ್ದು ಸಹಜವೇ. ಚ್ಯಾನಲ್ಗಳೇ ಮುಚ್ಚಿ ಹೋದರೆ ನಾವೇ ತೆಗೆದ ದಾರಾವಾಹಿಗಳನ್ನು ಯಾವುದರಲ್ಲಿ ಪ್ರಸರಿಸುವುದು? ಹೇಳಿಕೊಳ್ಳುವಂತಹ ಒಂದು ವಾಹಿನಿಯೂ ನಮ್ಮ ಕಯ್ಯಲ್ಲಿ ಇಲ್ಲದಿರುವಾಗ! (ನಮ್ಮ ಕಯ್ಯಲ್ಲಿರಬೇಕು ಎಂದು ಬಯಸುವ ವಾಹಿನಿಯು ಕೆಲವೇ ಉದ್ಯಮಪತಿಗಳ ಹಿಡಿತಲ್ಲಿರುವಂತದ್ದೋ ಅತವಾ, ಸಾಮಾಜಿಕ ಒಡೆತನದಲ್ಲಿರುವಂತದ್ದೋ ಎಂಬ ಚರ್ಚೆಯೂ ಆಗಬೇಕು). ಆದರೆ, ಒಂದಂತೂ ದಿಟ. ಈ ಪರಿಸ್ತಿತಿಯು ಯಾವತ್ತಿಗೂ ಮುಂದುವರೆಯಲಾರದು ಎಂಬುದನ್ನು ನಾವು, ಡಬ್ಬಿಂಗ್‌ಅನ್ನು ಒಪ್ಪಿಕೊಂಡಿರುವ ನೆರೆಯ ತಮಿಳು ಹಾಗು ತೆಲುಗು ಮನೋರಂಜನಾ ವಾಹಿನಿಗಳನ್ನು ನೋಡಿ ಅರಿತುಕೊಳ್ಳಬಹುದು. ಹೊಸತೊಂದು ವಸ್ತು ಮಾರುಕಟ್ಟೆಯಲ್ಲಿ (ಈ ಪದ ಬಳಸದೆ ವಿದಿಯಿಲ್ಲ) ಬಂದಾಗ ಅದು ಸಂಚಲನ ಮೂಡಿಸುತ್ತದೆ. ಕೊರೋನಾ ಹಾಗು ಲಾಕ್‍ಡೌನ್ ಸಂದರ್ಬದಲ್ಲಿ ಅದು ಸಂಜೀವಿನಿಯಾಗಿಯೂ ಕಂಡಿರಬಹುದು. ಆದರೆ, ಚಿತ್ರೀಕರಣ ಮತ್ತೆ ಗರಿಗೆದರಿದೆ. ಡಬ್ಬಿಂಗ್ ದಾರಾವಾಹಿಗಳ ಎಣಿಕೆ ಕಡಿಮೆಗೊಂಡು ವಾಹಿನಿಗಳ ಸರಕುಗಳು ಒಂದು ಹದಕ್ಕೆ ತಲುಪುತ್ತವೆ. ಕಲಾವಿದರೂ, ಕಾರ್ಮಿಕರೂ ಕೆಲಸಗಳನ್ನು ಕಂಡುಕೊಳ್ಳುತ್ತಾರೆ. ಅಲ್ಲಿಯವರೆಗೆ ನಾವು, ಸಹಕಾರ ಸಂಸ್ತೆಗಳು ಹಾಗು ಸರಕಾರದ ಸಹಯೋಗದಲ್ಲಿ ಅವರಿಗೆ ನೆರವನೀಯಬೇಕಾಗುತ್ತದೆ. ಈಗಶ್ಟೇ ಕನ್ನಡ ದಾರಾವಾಹಿ ಜಗತ್ತಿಗೆ ಕಾಲಿಟ್ಟಿರುವ ಡಬ್ಬಿಂಗ್ ನ ಕುರಿತಾಗಿ ಈಗಲೇ ತೀರ್ಪು ನೀಡುವುದು ಆತುರದ ನಡೆಯಾದೀತು. ಡಬ್ಬಿಂಗ್ ಕುರಿತು ಮಿಕ್ಕೆಲ್ಲಾ ಆತಂಕಗಳಿಗೆ “ಬನವಾಸಿ ಬಳಗ”ದ ಜಿ. ಆನಂದ್ ಅವರ “ಡಬ್ಬಿಂಗ್ : ಇದು ಕನ್ನಡಪರ” ಪುಸ್ತಕ ಸೂಕ್ತ ಉತ್ತರಗಳನ್ನು ನೀಡಿರುತ್ತವೆ ಎಂದು ಬಾವಿಸಿದ್ದೇನೆ.

ಮನೋರಂಜನಾ ವಲಯ ಹಲವರ ಹೊಟ್ಟೆ ತುಂಬಿಸುತ್ತದೆ. ಅಂತೆಯೇ, ಕೆಲವರನ್ನು ಆಗರ್ಬ ಶ್ರೀಮಂತರನ್ನಾಗಿಯೂ ಮಾಡುತ್ತದೆ. ಬಂಡವಾಳಶಾಹಿ ಹಾಗು ಕೆಲವೇ ವರ್ಗಗಳ ಸಾಂಸ್ಕ್ರುತಿಕ ಹೆಜಮೊನಿಯ ವ್ಯವಸ್ತೆಯನ್ನು ಯಾವತ್ತಿಗೋ ಅದು ತನ್ನದಾಗಿಸಿಕೊಂಡಿದೆ. ಡಬಿಂಗ್‌ ಇಲ್ಲವೆ, ಇನ್ಯಾವುದೇ ಉಪವ್ಯವಸ್ತೆಗಳು ಮಯ್ದೋರಿದರೂ, ಅವುಗಳಿಂದ ಉಂಟಾಗುವ ಬಾದಕಗಳಿಗೆ ಆ ಪ್ರದಾನ ವ್ಯವಸ್ತೆಯೇ ಕಾರಣ. ಅದರ ವಿರುದ್ದದ ಸಾಂಗಿಕ ಹೋರಾಟದ ದಾರಿಯಿಂದ ಸಮೂಹನಿಶ್ಟ ತಾತ್ವಿಕತೆಯು ತನ್ನನ್ನು ತಾನು ವಿಸ್ತರಿಸಿಕೊಳ್ಳಬೇಕು. ವ್ಯಕ್ತಿ ಹಾಗು ನುಡಿ ಸ್ವಾಂತಂತ್ರ್ಯದ ತಾತ್ವಿಕತೆಯನ್ನು ಕುಬ್ಜಗೊಳಿಸುವ ದಾರಿಯಿಂದಲ್ಲ.


ಇದನ್ನು ಓದಿ: ಮತ್ತೆ ಗರಿಗೆದರಿದ ಡಬ್ಬಿಂಗ್ ವಿವಾದ: ಎರಡಲುಗಿನ ಖಡ್ಗದ ಎದುರು…! – ಬಿ.ಸುರೇಶ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಮಹಾರಾಷ್ಟ್ರದ ಉಪ ಮುಖ್ಯಮಂತ್ರಿಯಾಗಿ ಅಜಿತ್ ಪವಾರ್ ಪತ್ನಿ ಸುನೇತ್ರಾ ಪವಾರ್ ಪ್ರಮಾಣ ವಚನ ಸ್ವೀಕಾರ

ಜನವರಿ 28ರಂದು ವಿಮಾನ ಅಪಘಾತದಲ್ಲಿ ನಿಧನರಾದ ಎನ್‌ಸಿಪಿ ನಾಯಕ ಅಜಿತ್ ಪವಾರ್ ಅವರ ಪತ್ನಿ ಸುನೇತ್ರಾ ಪವಾರ್ ಅವರು ಮಹಾರಾಷ್ಟ್ರದ ಉಪಮುಖ್ಯಮಂತ್ರಿಯಾಗಿ ಶನಿವಾರ (ಜ.31) ಪ್ರಮಾಣವಚನ ಸ್ವೀಕರಿಸಿದರು. ಮುಂಬೈನ ಲೋಕಭವನದಲ್ಲಿ ನಡೆದ ಸರಳ ಸಮಾರಂಭದಲ್ಲಿ...

ಡೊನಾಲ್ಡ್ ಟ್ರಂಪ್, ಎಲಾನ್ ಮಸ್ಕ್‌ನಿಂದ ಬಿಲ್ ಗೇಟ್ಸ್‌ವರೆಗೆ : ಅಂತಿಮ ಎಪ್‌ಸ್ಟೀನ್‌ ಫೈಲ್‌ಗಳಲ್ಲಿ ಹಲವು ಪ್ರಮುಖರ ಹೆಸರು

ಅಮೆರಿಕದ ಸಂಸತ್ತು ಅಂಗೀಕರಿಸಿದ ಎಪ್‌ಸ್ಟೀನ್ ಫೈಲ್ಸ್ ಟ್ರಾನ್ಸ್‌ಪೆರೆನ್ಸಿ ಆಕ್ಟ್ (Epstein Files Transparency Act) ನಿಯಮದಂತೆ ಅಮೆರಿಕದ ನ್ಯಾಯ ಇಲಾಖೆ (ಡಿಒಜಿ) ಲೈಂಗಿಕ ದೌರ್ಜನ್ಯ ಪ್ರಕರಣದ ಅಪರಾಧಿ ಜೆಫ್ರಿ ಎಪ್‌ಸ್ಟೀನ್‌ಗೆ ಸಂಬಂಧಿಸಿದ ಅಂತಿಮ...

ಲಂಚ ಪ್ರಕರಣ : ಎಸ್‌ಇಸಿ ಸಮನ್ಸ್ ಸ್ವೀಕರಿಸಲು ಅದಾನಿ ಒಪ್ಪಿಗೆ

ಲಂಚ ಪ್ರಕರಣದಲ್ಲಿ ಅಮೆರಿಕದ ಸೆಕ್ಯುರಿಟೀಸ್ ಆ್ಯಂಡ್ ಎಕ್ಸ್‌ಚೇಂಜ್ ಕಮಿಷನ್ (ಎಸ್‌ಇಸಿ) ನ ಸಮನ್ಸ್‌ಗಳನ್ನು ಸ್ವೀಕರಿಸಲು ಉದ್ಯಮಿ ಗೌತಮ್ ಅದಾನಿ ಮತ್ತು ಅವರ ಸೋದರಳಿಯ ಸಾಗರ್ ಅದಾನಿ ಒಪ್ಪಿಕೊಂಡಿದ್ದಾರೆ ಎಂದು ವರದಿಯಾಗಿದೆ. ನ್ಯೂಯಾರ್ಕ್‌ನ ಬ್ರೂಕ್ಲಿನ್‌ನಲ್ಲಿರುವ ಫೆಡರಲ್...

ಬೀದರ್‌ : ಮೊಳಕೇರಾ ಗ್ರಾಮದಲ್ಲಿ ಸ್ಫೋಟ ಪ್ರಕರಣ ; ಸಮಗ್ರ ತನಿಖೆಗೆ ಸಚಿವ ಈಶ್ವರ್ ಖಂಡ್ರೆ ಆದೇಶ

ಬೀದರ್ ಜಿಲ್ಲೆ ಹುಮನಾಬಾದ್ ತಾಲೂಕಿನ ಮೊಳಕೇರಾ ಗ್ರಾಮದ ಮೋಳಗಿ ಮಾರಯ್ಯ ದೇವಸ್ಥಾನ ರಸ್ತೆಯಲ್ಲಿ ಅನುಮಾನಾಸ್ಪದ ವಸ್ತು ಸ್ಫೋಟಗೊಂಡು, ಶಾಲೆಗೆ ತೆರಳುತ್ತಿದ್ದ ಮಕ್ಕಳೂ ಸೇರಿ 6 ಜನರು ಗಾಯಗೊಂಡಿರುವ ಘಟನೆ ಬಗ್ಗೆ ಆಘಾತ ವ್ಯಕ್ತಪಡಿಸಿರುವ...

ಜೈಲಿನಲ್ಲಿರುವ ಹೋರಾಟಗಾರ ಸೋನಮ್ ವಾಂಗ್‌ಚುಕ್‌ಗೆ ಅನಾರೋಗ್ಯ : ಜೋಧ್‌ಪುರದ ಏಮ್ಸ್‌ನಲ್ಲಿ ವೈದ್ಯಕೀಯ ಪರೀಕ್ಷೆ

ನ್ಯಾಯಾಂಗ ಬಂಧನದಲ್ಲಿರುವ ಲಡಾಖ್‌ನ ಹೋರಾಟಗಾರ ಹಾಗೂ ವಿಜ್ಞಾನಿ ಸೋನಮ್ ವಾಂಗ್‌ಚುಕ್ ಅವರ ಆರೋಗ್ಯ ಹದೆಗೆಟ್ಟಿದ್ದು, ಸುಪ್ರೀಂ ಕೋರ್ಟ್ ನಿರ್ದೇಶನ ಅನುಸಾರ ಜೋಧ್‌ಪುರದ ಏಮ್ಸ್‌ನಲ್ಲಿ ಅವರಿಗೆ ವೈದ್ಯಕೀಯ ಪರೀಕ್ಷೆ ನಡೆಸಲಾಗಿದೆ. ಪೊಲೀಸರು ವಾಂಗ್‌ಚುಕ್ ಅವರನ್ನು ಜೋಧ್‌ಪುರ...

ಉತ್ತರಾಖಂಡ ಏಕರೂಪ ನಾಗರಿಕ ಸಂಹಿತೆ ತಿದ್ದುಪಡಿ : ಬಲವಂತದ ವಿವಾಹ, ಲಿವ್‌ಇನ್ ಸಂಬಂಧಕ್ಕೆ 7 ವರ್ಷ ಜೈಲು

ಉತ್ತರಾಖಂಡ ಏಕರೂಪ ನಾಗರಿಕ ಸಂಹಿತೆ (ತಿದ್ದುಪಡಿ) ಸುಗ್ರೀವಾಜ್ಞೆಗೆ ರಾಜ್ಯಪಾಲ ಹಾಗೂ ನಿವೃತ್ತ ಲೆಫ್ಟಿನೆಂಟ್ ಜನರಲ್ ಗುರ್ಮೀತ್ ಸಿಂಗ್ ಅವರು ಅಂಕಿತ ಹಾಕಿದ್ದಾರೆ. ಈ ತಿದ್ದುಪಡಿಯ ಪರಿಣಾಮ, ರಾಜ್ಯದಲ್ಲಿ ವಿವಾಹ ಹಾಗೂ ಲಿವ್‌ಇನ್ ಸಂಬಂಧಗಳಿಗೆ...

ಮಹಾರಾಷ್ಟ್ರದ ಡಿಸಿಎಂ ಆಗಿ ಅಜಿತ್ ಪವಾರ್ ಪತ್ನಿ ಸುನೇತ್ರಾ ಪವಾರ್ ಆಯ್ಕೆ : ಇಂದು ಸಂಜೆ ಪ್ರಮಾಣ ವಚನ ಸ್ವೀಕಾರ; ವರದಿ

ಅಜಿತ್ ಪವಾರ್ ಅವರ ಅಕಾಲಿಕ ಸಾವಿನಿಂದ ತೆರವಾದ ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಸ್ಥಾನಕ್ಕೆ ಅಜಿತ್ ಪವಾರ್ ಅವರ ಪತ್ನಿ ಸುನೇತ್ರಾ ಪವಾರ್ ಅವರನ್ನು ನೇಮಿಸಲು ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ (ಎನ್‌ಸಿಪಿ) ನಿರ್ಧರಿಸಿದೆ ಎಂದು ವರದಿಯಾಗಿದೆ....

ಶೂಟ್ ಮಾಡಿಕೊಂಡು ಪ್ರಾಣ ಬಿಟ್ಟ ಕಾನ್ಫಿಡೆಂಟ್ ಗ್ರೂಪ್ ಸಂಸ್ಥಾಪಕ ಸಿ.ಜೆ. ರಾಯ್: ಐಟಿ ದಾಳಿ ಒತ್ತಡದಿಂದ ಆತ್ಮಹತ್ಯೆ ಶಂಕೆ

ಬೆಂಗಳೂರು: ಖ್ಯಾತ ರಿಯಲ್ ಎಸ್ಟೇಟ್ ಉದ್ಯಮಿ, ಕಾನ್ಫಿಡೆಂಟ್ ಗ್ರೂಪ್ (Confident Group) ಅಧ್ಯಕ್ಷ ಡಾ. ಸಿ.ಜೆ. ರಾಯ್ ಅವರು ಶುಕ್ರವಾರ ಬೆಂಗಳೂರಿನ ತಮ್ಮ ಕಚೇರಿಯಲ್ಲಿ ಗನ್ ನಿಂದ ಶೂಟ್ ಮಾಡಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.  ಕೇರಳ...

ಕಾಂಗ್ರೆಸ್ ಆಳ್ವಿಕೆಯಲ್ಲಿ ನುಸುಳಲುಕೋರರು ಬಹುಸಂಖ್ಯಾತರಾದರು; ನುಸುಳುಕೋರರಿಂದ ಅಸ್ಸಾಂ ರಕ್ಷಿಸಲು ಬಿಜೆಪಿಗೆ ಮತ ಹಾಕಿ: ಅಮಿತ್ ಶಾ

ಧೇಮಾಜಿ (ಅಸ್ಸಾಂ): ಕಾಂಗ್ರೆಸ್ ಆಳ್ವಿಕೆಯಲ್ಲಿ ಅಸ್ಸಾಂನ ಜನಸಂಖ್ಯಾಶಾಸ್ತ್ರ ಬದಲಾಗಿದೆ ಎಂದು ಹೇಳಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ , ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ನೇತೃತ್ವದ ಸರ್ಕಾರ ಈ ಪ್ರವೃತ್ತಿಯನ್ನು...

ಕೊಲ್ಕತ್ತಾ ಅಗ್ನಿ ಅವಘಡ| ಈವರೆಗೆ ವಾವ್ ಮೊಮೋ ಕಂಪನಿ ಗೋದಾಮು ಸೇರಿದಂತೆ ಇತರೆಡೆ 21 ಜನರು ಸಾವನ್ನಪ್ಪಿರುವ ಮಾಹಿತಿ ಲಭ್ಯ  

ಜನವರಿ 26 ರ ಮುಂಜಾನೆ ಕೋಲ್ಕತ್ತಾದ ಆನಂದಪುರ ಪ್ರದೇಶದಲ್ಲಿ ಸಂಭವಿಸಿದ ಭೀಕರ ಬೆಂಕಿ ಅಪಘಾತದಲ್ಲಿ ಸಾವನ್ನಪ್ಪಿದವರ ಸಂಖ್ಯೆ ಗುರುವಾರ 21 ಕ್ಕೆ ಏರಿದ್ದು, 28 ಜನರು ಇನ್ನೂ ನಾಪತ್ತೆಯಾಗಿದ್ದಾರೆ.  ಬೆಂಕಿಯ ಅವಘಡದಲ್ಲಿ ಎರಡು ಗೋದಾಮುಗಳು...