ಕೇರಳ ಸ್ಥಳೀಯ ಚುಣಾವಣಾ ಫಲಿತಾಂಶ ದಿನದಂದು ಪಾಲಕ್ಕಾಡ್ ಪುರಸಭೆ ಕಚೇರಿಯ ಮೇಲೆ ಬಿಜೆಪಿ ಕಾರ್ಯಕರ್ತರು ’ಜೈಶ್ರೀರಾಮ್’ ಎಂದು ಬರೆದಿರುವ ಬ್ಯಾನರ್ ಹಾರಿಸಿರುವುದನ್ನು ವಿರೋಧಿಸಿ ಸಿಪಿಐ(ಎಂ)ನ ಯುವ ಸಂಘಟನೆಯಾದ ಡಿವೈಎಫ್‌ಐ ಕಾರ್ಯಕರ್ತರು ಅದೇ ಸ್ಥಳದಲ್ಲಿ ರಾಷ್ಟ್ರಧ್ವಜವನ್ನು ಹಾರಿಸಿ ಕೋಮುವಾದದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪಾಲಕ್ಕಾಡ್‌ನಲ್ಲಿ ಬಿಜೆಪಿ ಸತತ ಎರಡನೇ ಗೆಲುವು ಸಾಧಿಸಿರುವ ಸಂಭ್ರಮಾಚರಣೆಯಲ್ಲಿ ಪಕ್ಷದ ಕಾರ್ಯಕರ್ತರು ಈ ಕೃತ್ಯವನ್ನು ಎಸಗಿದ್ದು, ಪೊಲೀಸರು ಅವರ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ.
ಇದನ್ನೂ ಓದಿ: ಕೇರಳ ಪುರಸಭೆ ಕಟ್ಟಡ ಮೇಲೆ ಜೈ ಶ್ರೀರಾಮ್ ಪೋಸ್ಟರ್: ಎಫ್‌ಐಆರ್ ದಾಖಲು
DYFI ತಮ್ಮ ಕಾರ್ಯವನ್ನು ಸಮರ್ಥಿಸಿಕೊಂಡಿದ್ದು, ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಸಿಕ್ಕ ಗೆಲುವಿಗೆ ಬಿಜೆಪಿಯು ಕೋಮು ಬಣ್ಣ ನೀಡುವ ಪ್ರಯತ್ನವನ್ನು ವಿರೋಧಿಸಿ ರಾಷ್ಟ್ರ ಧ್ವಜವನ್ನು ಪ್ರದರ್ಶಿಸಿರುವುದಾಗಿ ಹೇಳಿದೆ.
ಡಿವೈಎಫ್‌ಐ ಕಾರ್ಯಕರ್ತರ ಪ್ರತಿಭಟನೆಯ ವಿಡಿಯೋ ಇಲ್ಲಿದೆ
ಇದರ ನಡುವೆ ಯೂತ್ ಕಾಂಗ್ರೆಸ್ ಮತ್ತು ಕೆಎಸ್‌ಯು ಕಾರ್ಯಕರ್ತರು “ಸಂವಿಧಾನ ರಕ್ಷಣಾ ಜಾಥಾ” ಭಾಗವಾಗಿ ರಾಷ್ಟ್ರ ಧ್ವಜದೊಂದಿಗೆ ಮೆರವಣಿಗೆ ಆಯೋಜಿಸಿದ್ದರು.
2015 ರಲ್ಲಿ ಪಾಲಕ್ಕಾಡ್ ಪುರಸಭೆಯಲ್ಲಿ ಬಿಜೆಪಿಯು ಮೊದಲ ಬಾರಿಗೆ ಅಧಿಕಾರ ಹಿಡಿದಿದ್ದು, ಪಕ್ಷದ ಅಭ್ಯರ್ಥಿಯೊಬ್ಬರು ಪುರಸಭೆಯ ಅಧ್ಯಕ್ಷರಾಗಿದ್ದಾರೆ. ಅಲ್ಲದೆ ಇತ್ತೀಚಿನ ಸ್ಥಳೀಯ ಚುನಾವಣೆಯಲ್ಲಿ ಬಿಜೆಪಿಯು ಈ ಪುರಸಭೆಯನ್ನು ಮತ್ತೆ ಉಳಿಸಿಕೊಂಡಿದೆ.
This is not RSS Karyalay, this is municipal office.
This is not Guajarat, This is Kerala. pic.twitter.com/7eKOqAv4cg— Halla Bol (@e_salam) December 18, 2020
ಇದನ್ನೂ ಓದಿ: ಕೇರಳದಲ್ಲಿ ಮತ್ತೊಮ್ಮೆ LDF ?- ಸ್ಥಳೀಯ ಸಂಸ್ಥೆ ಚುನಾವಣಾ ಫಲಿತಾಂಶಗಳ ಸೂಚನೆಯೇನು?


