- Advertisement -
- Advertisement -
ಫಿಲಿಪೈನ್ಸ್ ದೇಶದ ಮಧ್ಯಭಾಗದಲ್ಲಿ ಮಂಗಳವಾರ ರಾತ್ರಿ 9.39ಕ್ಕೆ ಭೂಕಂಪ ಸಂಭವಿಸಿದ್ದು ರಿಕ್ಟರ್ ಮಾಪಕದಲ್ಲಿ 6.9 ತೀರ್ವತೆಯಲ್ಲಿ ಕಂಪನ ದಾಖಲಾಗಿದೆ ಎಂದು ಫಿಲಿಪೈನ್ಸ್ ಸರ್ಕಾರ ಪ್ರಕಟಣೆ ಹೊರಡಿಸಿದೆ. ಫಿಲಿಪೈನ್ಸ್‌ನ ರಾಷ್ಟ್ರೀಯ ವಿಪತ್ತು ಅಪಾಯ ಕಡಿತ ಮತ್ತು ನಿರ್ವಹಣಾ ಮಂಡಳಿಯು ಪ್ರಕಟಣೆ ಹೊರಡಿಸಿದೆ. ಫಿಲಿಪೈನ್ಸ್ ನ ಬೊಗೊ ದ್ವೀಪದ ಉತ್ತರ ಭಾಗದಲ್ಲಿ ಭಾರಿ ಪ್ರಮಾಣದ ಭೂಕಂಪನಕ್ಕೆ 90 ಸಾವಿರ ಜನರು ಆತಂಕಕ್ಕೀಡಾಗಿದ್ದಾರೆ ಎಂದು ತಿಳಿಸಿದೆ. ಭೂಕಂಪನದಿಂದಾಗಿ 26 ಜನರು ಸಾವಿಗೀಡಾಗಿದ್ದಾರೆ, 147 ಜನರು ಗಾಯಕ್ಕೀಡಾಗಿದ್ದಾರೆ ಎಂದು ವರದಿ ಮಾಡಿದೆ. ಅಲ್ಲದೆ 22 ಕಟ್ಟಡಗಳು ಭೂಕಂಪನದಿಂದಾಗಿ ಹಾನಿಯಾಗಿವೆ ಎಂದು ವರದಿಯಲ್ಲಿ ತಿಳಿಸಿದೆ.
ಭೂಕಂಪನದಿಂದಾಗಿ ಹಾನಿಗೀಡಾದ ಕಟ್ಟಡಗಳ ಕೆಳಗೆ ಇನ್ನೂ ಹಲವು ಜನರು ಸಿಲುಕಿರುವ ಸಾಧ್ಯತೆ ಇದ್ದು ಅವರ ರಕ್ಷಣೆಗಾಗಿ ಶೋಧ ಕಾರ್ಯ ನಡೆಯುತ್ತಿದೆ ಎಂದು ತಿಳಿಸಲಾಗಿದೆ. ಅಲ್ಲದೆ 6.9 ತೀರ್ವತೆಯಲ್ಲಿ ಕಂಪಿಸಿದ ಭೂಕಂಪನದಿಂದಾಗಿ ಸುನಾಮಿ ಸಂಭವಿಸುವ ಸಾಧ್ಯತೆಯಿದೆ ಎಂದು ಅಂದಾಜಿಸಲಾಗಿದೆ.


