Homeಅಂತರಾಷ್ಟ್ರೀಯಪೂರ್ವ ಆಫ್ರಿಕಾ: ಭೀಕರ ಬರದಿಂದಾಗಿ ಬೀದಿಯಲ್ಲಿ ಸಾಯುತ್ತಿರುವ ವನ್ಯಜೀವಿ ಮತ್ತು ಜಾನುವಾರುಗಳು

ಪೂರ್ವ ಆಫ್ರಿಕಾ: ಭೀಕರ ಬರದಿಂದಾಗಿ ಬೀದಿಯಲ್ಲಿ ಸಾಯುತ್ತಿರುವ ವನ್ಯಜೀವಿ ಮತ್ತು ಜಾನುವಾರುಗಳು

- Advertisement -
- Advertisement -

ಆಫ್ರಿಕಾ ಖಂಡದ ಪೂರ್ವ ತುದಿ (ಹಾರ್ನ್ ಆಫ್ ಆಫ್ರಿಕಾ)ಯ ದೇಶಗಳಾದ ಇಥಿಯೋಪಿಯಾ, ಕೀನ್ಯಾ ಮತ್ತು ಸೊಮಾಲಿಯಾದಲ್ಲಿ ಕಡಿಮೆ ಮಳೆಯಿಂದಾದ ಬರದಿಂದಾಗಿ ಕನಿಷ್ಠ 2.6 ಕೋಟಿ ಜನರು ಆಹಾರಕ್ಕಾಗಿ ಹೆಣಗಾಡುತ್ತಿದ್ದಾರೆ ಎಂದು ಬಿಬಿಸಿ ನ್ಯೂಸ್ ವರದಿ ಮಾಡಿದೆ. ಬಿಬಿಸಿ ನ್ಯೂಸ್‌ ಇದರ ಬಗ್ಗೆ ಎರಡು ನಿಮಿಷಗಳ ಡಾಕ್ಯುಮೆಂಟರಿ ಮಾಡಿದ್ದು, ಬರಪೀಡಿತ ಪ್ರದೇಶಗಳ ದೃಶ್ಯಗಳನ್ನು ಪರಿಣಾಮಕಾರಿಯಾಗಿ ಸೆರೆ ಹಿಡಿದಿದೆ.

ಉತ್ತರ ಕೀನ್ಯಾ, ಸೊಮಾಲಿಯಾ ಮತ್ತು ದಕ್ಷಿಣ ಇಥಿಯೋಪಿಯಾದ ಹೆಚ್ಚಿನ ಪ್ರದೇಶಗಳಲ್ಲಿನ ಈ ಬರ ಪರಿಸ್ಥಿತಿಗಳು ಕನಿಷ್ಠ 2022 ರ ಮಧ್ಯಭಾಗದವರೆಗೆ ಮುಂದುವರಿಯುತ್ತದೆ ಎಂದು ಊಹಿಸಲಾಗಿದೆ. ಈ ಬರವು ಅಲ್ಲಿನ ಜನರ ಜೀವಗಳನ್ನೇ ಅಪಾಯಕ್ಕೆ ತಳ್ಳುತ್ತದೆ ಎಂದು ಬಿಬಿಸಿ ಉಲ್ಲೇಖಿಸಿದೆ.

ಅಲ್ಲಿನ ಪರಿಸ್ಥಿತಿ ಈಗಾಗಲೇ ಪರಿಸ್ಥಿತಿ ಎಷ್ಟು ಕೆಟ್ಟದಾಗಿದೆ ಎಂದರೆ ಕಾಡು ಪ್ರಾಣಿಗಳು ನೂರಾರು ಸಂಖ್ಯೆಯಲ್ಲಿ ಸಾಯುತ್ತಿವೆ. ಇಷ್ಟೇ ಅಲ್ಲದೆ, ದನಗಾಹಿಗಳು ತಮ್ಮ ಜಾನುವಾರುಗಳ ಪೈಕಿ 70% ದಷ್ಟು ನಷ್ಟವನ್ನು ಅನುಭವಿಸಿದ್ದಾಗಿ ಹೇಳಿದ್ದಾರೆಂದು ಬಿಬಿಸಿ ತನ್ನ ವಿಡಿಯೊ ವರದಿಯಲ್ಲಿ ಹೇಳಿದೆ.

ಬಿಬಿಸಿಯ ಆಫ್ರಿಕಾದ ಹಿರಿಯ ವರದಿಗಾರ್ತಿ ಅನ್ನಿ ಸೋಯ್ ಉತ್ತರ ಕೀನ್ಯಾದ ವಾಜಿರ್‌ನಿಂದ ಈ ವರದಿ ಮಾಡಿದ್ದು, ಸತ್ತ ಜಿರಾಫೆಗಳು ಮತ್ತು ದನಕರುಗಳು ಅಲ್ಲಿನ ಬೀದಿ ಬೀದಿಗಳಲ್ಲಿ ಬಿದ್ದಿರುವುದನ್ನು ವಿಡಿಯೊ ತೋರಿಸಿದೆ.

ಬಿಬಿಸಿ ವರದಿ ಮಾಡಿರುವ ವಿಡಿಯೊ ನೋಡಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಸಿಲಿನ ತಾಪವಿದ್ದರೂ ಬಿಜೆಪಿ ಒತ್ತಡದಿಂದ ಬಂಗಾಳದಲ್ಲಿ 7 ಹಂತದ ಚುನಾವಣೆ: ಅಭಿಷೇಕ್ ಬ್ಯಾನರ್ಜಿ

0
ಪಶ್ಚಿಮ ಬಂಗಾಳದಲ್ಲಿ ಸಾಕಷ್ಟು ಬಿಸಿಲಿನ ತಾಪವಿದ್ದರೂ, ಏಳು ಹಂತಗಳಲ್ಲಿ ಲೋಕಸಭೆ ಚುನಾವಣೆ ಆಯೋಜಿಸುವಂತೆ ಬಿಜೆಪಿ ಚುನಾವಣಾ ಆಯೋಗವನ್ನು ಒತ್ತಾಯಿಸಿದೆ ಎಂದು ಟಿಎಂಸಿಯ ನಾಯಕ ಅಭಿಷೇಕ್ ಬ್ಯಾನರ್ಜಿ ಮಂಗಳವಾರ ಆರೋಪಿಸಿದ್ದಾರೆ. ಟಿಎಂಸಿಯ ಡಾರ್ಜಿಲಿಂಗ್ ಅಭ್ಯರ್ಥಿ ಗೋಪಾಲ್...