ದೆಹಲಿ ವಿಧಾನಸಭೆ ಚುನಾವಣೆಗೆ ದಿನಾಂಕವನ್ನು ಭಾರತೀಯ ಚುನಾವಣಾ ಆಯೋಗ (ಇಸಿಐ) ಇಂದು (ಜ.7) ಪ್ರಕಟಿಸಿದೆ.
ಫೆಬ್ರವರಿ 5ರಂದು ಒಂದೇ ಹಂತದಲ್ಲಿ ಮತದಾನ ನಡೆಯಲಿದೆ. ಫೆಬ್ರವರಿ 8 ರಂದು ಮತಗಳನ್ನು ಎಣಿಕೆ ಮಾಡಲಾಗುತ್ತದೆ.
ನಾಮಪತ್ರ ಸಲ್ಲಿಸಲು ಜನವರಿ 17 ಕೊನೆಯ ದಿನವಾಗಿದೆ. ಜ. 18ರಂದು ನಾಮಪತ್ರ ಪರಿಶೀಲನೆ ನಡೆಯಲಿದೆ. ನಾಮಪತ್ರ ಹಿಂಪಡೆಯಲು ಜ. 20 ಕೊನೆಯ ದಿನವಾಗಿದೆ.
Schedule for Single Phase #DelhiElections2025 & Bye-Elections.
🗓️Date of Poll : 05-02-2025
🗓️Date of Counting : 08-02-2025#ECI— Election Commission of India (@ECISVEEP) January 7, 2025
ದೆಹಲಿಯಲ್ಲಿ ಸಾಂಪ್ರದಾಯಿಕವಾಗಿ ಒಂದೇ ಹಂತದಲ್ಲಿ ವಿಧಾನಸಭಾ ಚುನಾವಣೆಗಳು ನಡೆದಿವೆ. ಅದು ಈ ಬಾರಿಯೂ ಮುಂದುವರೆದಿದೆ. ಈ ಬಾರಿ 83 ಲಕ್ಷ ಪುರುಷ ಹಾಗೂ 71 ಲಕ್ಷ ಮಹಿಳೆ ಸೇರಿ ಒಟ್ಟು 1.55 ಕೋಟಿ ಮತದಾರರು ಇದ್ದಾರೆ. 79 ಸಾವಿರ ವಿಕಲಚೇತನ ಮತದಾರರು ಹಾಗೂ 85 ವರ್ಷ ಮೇಲ್ಪಟ್ಟವರು ಒಂದು ಲಕ್ಷಕ್ಕೂ ಅಧಿಕ ಸಂಖ್ಯೆಯಲ್ಲಿದ್ದಾರೆ.
ಒಟ್ಟು 70 ಸದಸ್ಯ ಬಲದ ದೆಹಲಿಯ ಹಾಲಿ ವಿಧಾನಸಭೆಯ ಅವಧಿ ಫೆಬ್ರವರಿ 23 ರಂದು ಕೊನೆಗೊಳ್ಳಲಿದೆ.
ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಡಳಿತಾರೂಢ ಆಮ್ ಆದ್ಮಿ ಪಕ್ಷ (ಎಎಪಿ) ಸತತ ಮೂರನೇ ಅವಧಿಗೆ ಅಧಿಕಾರಕ್ಕೇರುವ ಪ್ರಯತ್ನದಲ್ಲಿದೆ. ಲೋಕಸಭೆ ಚುನಾವಣೆಯಲ್ಲಿ ಗೆದ್ದು ಬೀಗಿದ ಬಿಜೆಪಿ, ವಿಧಾನಸಭೆಯ ಚುನಾವಣೆಯಲ್ಲೂಗೆದ್ದು ರಾಜಧಾನಿಯ ಚುಕ್ಕಾಣಿ ಹಿಡಿಯುವ ತವಕದಲ್ಲಿದೆ.
ಕಾಂಗ್ರೆಸ್ ಸ್ಪರ್ಧಾ ಕಣದಲ್ಲಿರುವ ಪ್ರಮುಖ ಪಕ್ಷವಾಗಿದ್ದು, ಏಕಾಂಗಿಯಾಗಿ ಚುನಾವಣೆ ಎದುರಿಸಲಿದೆ. ಕಾಂಗ್ರೆಸ್‌ಗೆ ಬಿಜೆಪಿ ಜೊತೆಗೆ ಲೋಕಸಭೆ ಚುನಾವಣೆಯಲ್ಲಿ ತನ್ನ ಮೈತ್ರಿ ಪಾಲುದಾರ ಆಗಿದ್ದ ಎಎಪಿಯನ್ನೂ ಎದುರಿಸಬೇಕಿದೆ.
ಇದನ್ನೂ ಓದಿ : ಟಿಬೆಟ್ ಭೂಕಂಪನ| ಸಾವಿನ ಸಂಖ್ಯೆ 95ಕ್ಕೆ ಏರಿಕೆ; ಭಾರತ-ಭೂತಾನ್‌ನಲ್ಲೂ ನಡುಗಿದ ಕಟ್ಟಡಗಳು


