Homeಅಂಕಣಗಳುಮನ ಮುಟ್ಟುವ ಪತ್ರಿಕೋದ್ಯಮದ ಹಾದಿಯಲ್ಲಿ ಇನ್ನೊಂದು ಹೆಜ್ಜೆ

ಮನ ಮುಟ್ಟುವ ಪತ್ರಿಕೋದ್ಯಮದ ಹಾದಿಯಲ್ಲಿ ಇನ್ನೊಂದು ಹೆಜ್ಜೆ

- Advertisement -
- Advertisement -

| ಸಂಪಾದಕೀಯ ತಂಡ |

ಮಾಧ್ಯಮಗಳು ಪ್ರಜಾತಂತ್ರದ ನಾಲ್ಕನೆಯ ಅಂಗವೆಂದು ಹೇಳುವುದು ಕೇವಲ ಕ್ಲೀಷೆಯಷ್ಟೇ ಅಲ್ಲ, ಅದೀಗ ಅಪಹಾಸ್ಯದ ವಸ್ತುವಾಗುತ್ತಿದೆ. ಒಂದೆಡೆ ನಿರ್ಭೀತ ಪತ್ರಕರ್ತರು ಅಲ್ಲಲ್ಲಿ ದಾಳಿಗೊಳಗಾಗಿ ಕೊಲೆಯಾಗುತ್ತಿದ್ದರೆ, ಇನ್ನೊಂದೆಡೆ ಕರ್ನಾಟಕದ ಕೆಲವು ಪತ್ರಕರ್ತರು ಬ್ಲಾಕ್‍ಮೇಲ್, ವಂಚನೆ ಇತ್ಯಾದಿ ಪ್ರಕರಣಗಳಲ್ಲಿ ಜೈಲು ಸೇರುತ್ತಿದ್ದಾರೆ. ರಾಜಕಾರಣಿಗಳನ್ನು ಓಲೈಸುವ ಸರಣಿ ಸರಣಿ ಕಾರ್ಯಕ್ರಮ ಮಾಡುವ ಪತ್ರಕರ್ತರು, ಐಸಿಯುಗೆ ನುಗ್ಗಿ ಮೆದುಳು ಜ್ವರ ಪೀಡಿತ ಮಕ್ಕಳಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರ ಮೇಲೆ ವಾಗ್ದಾಳಿ ನಡೆಸುತ್ತಾರೆ. ಕಾಲ ಸರಿಯುತ್ತಿದ್ದ ಹಾಗೆ, ಹೆಚ್ಚೆಚ್ಚು ಮಾಧ್ಯಮ ಸಂಸ್ಥೆಗಳು ಬೆರಳೆಣಿಕೆಯ ಕಾರ್ಪೋರೇಟ್ ಕುಳಗಳ ಆಸ್ತಿಗಳಾಗುತ್ತಿವೆ.
ದೇಶದ ಅತೀ ದೊಡ್ಡ ಮಾಧ್ಯಮ ಸಂಸ್ಥೆಗಳಲ್ಲಿ ಒಂದಾದ ಟೈಮ್ಸ್ ಗುಂಪಿನ ಹಿರಿಯ ಸ್ಥಾನದಲ್ಲಿರುವ ವ್ಯಕ್ತಿ, ನೊಬೆಲ್ ಪುರಸ್ಕøತ ಅರ್ಥಶಾಸ್ತ್ರಜ್ಞ ಅಮತ್ರ್ಯಸೆನ್‍ರ ಕುರಿತ ಸುಳ್ಳುಗಳನ್ನು ಖುದ್ದು ಪ್ರಚಾರ ಮಾಡುತ್ತಾರೆ. ಅದರ ಕುರಿತು ಮಾತನಾಡಿದ ಸೆನ್, ಇಷ್ಟು ಪುಟ್ಟ ಲೇಖನದೊಳಗೆ ಅಷ್ಟೊಂದು ಸುಳ್ಳುಗಳನ್ನು ಪೇರಿಸಿರುವ ಅವರ ಸಾಮಥ್ರ್ಯವನ್ನು ಅಭಿನಂದಿಸಬೇಕು ಎಂದರಂತೆ. ಇನ್ನೂ ಯಾವ್ಯಾವ ಬಗೆಯ ಕಿರೀಟಗಳನ್ನು ದೇಶದ ಮಾಧ್ಯಮಗಳು ಪಡೆದುಕೊಳ್ಳುತ್ತವೋ ಗೊತ್ತಿಲ್ಲ.
ಪರಿಸ್ಥಿತಿ ಹೀಗಿರುವಾಗ, 2 ದಶಕಕ್ಕೂ ಹೆಚ್ಚು ಕಾಲ ದೆಹಲಿಯಲ್ಲಿದ್ದ ಕರ್ನಾಟಕದ ಪತ್ರಕರ್ತರೊಬ್ಬರು ನಮ್ಮಲ್ಲಿ ವಿಸ್ಮಯ ಮೂಡಿಸಿದರು. ಗೌರಿ ಲಂಕೇಶರ ಆಶಯಗಳ ಮುಂದುವರಿಕೆಯ ನ್ಯಾಯಪಥ ಪತ್ರಿಕೆಗೆ ಮಾರ್ಗದರ್ಶನ ಮಾಡಬೇಕೆಂದು ಅವರಲ್ಲಿ ಟ್ರಸ್ಟ್‍ನ ಹಿರಿಯರು ಮನವಿ ಮಾಡಿದರು. ಅದಕ್ಕೆ ಅವರು ವಿಧಿಸಿದ ಷರತ್ತುಗಳು ಆಶ್ಚರ್ಯಕರವಾಗಿತ್ತು. ಅದರಲ್ಲಿ ಮುಖ್ಯವಾದುದು, ತನ್ನ ಆಸ್ತಿ ವಿವರಗಳನ್ನು ಟ್ರಸ್ಟ್‍ನ ಹಿರಿಯರು ಖುದ್ದಾಗಿ ಕೇಳಿಸಿಕೊಳ್ಳಬೇಕು ಮತ್ತು ತಾನು ಇದುವರೆಗೆ ‘ಮಾಡಿರಬಹುದಾದ’ ತಪ್ಪುಗಳ ಕುರಿತ ವರದಿಯನ್ನು ಒಪ್ಪಿಸುತ್ತೇನೆ. ಆ ನಂತರ ಟ್ರಸ್ಟ್‍ಗೆ ಒಪ್ಪಿಗೆಯಿದ್ದರೆ, ಇದರೊಂದಿಗೆ ಕೆಲಸ ಮಾಡುತ್ತೇನೆ ಎಂದು ಅವರು ಹೇಳಿದರು. ಡಿ.ಉಮಾಪತಿಯವರನ್ನು ಬಲ್ಲ ಯಾರಿಗೂ ಇಂತಹ ವಿಚಾರಗಳಲ್ಲಿ ಯಾವ ಹುಳುಕೂ ಇರುವುದಿಲ್ಲ ಎಂಬ ಖಚಿತ ವಿಶ್ವಾಸವಿತ್ತು. ಆದರೂ ಅಪಾರ ಮುಜುಗರ, ಕಟು ಪ್ರಾಮಾಣಿಕತೆಯ ಅವರು ಸಂಪೂರ್ಣ ಪಾರದರ್ಶಕವಾಗಿ ತಮ್ಮ ಅನಿಸಿಕೆಗಳನ್ನು ಮುಂದಿಟ್ಟರು. ಅದು ಅವರ ಬಗ್ಗೆ ವಿಶ್ವಾಸ ಹೆಚ್ಚಿಸಿದ್ದಷ್ಟೇ ಅಲ್ಲದೇ, ಇತರರಿಗೂ ಒಂದು ಮಾದರಿ ನಿರ್ಮಾಣವಾದಂತಾಯಿತು.
ಈ ‘ಪ್ರಕ್ರಿಯೆ’ ಪೂರ್ಣಗೊಂಡ ನಂತರವೇ ಡಿ.ಉಮಾಪತಿಯವರು ಇದರ ‘ಕನ್ಸಲ್ಟಿಂಗ್ ಎಡಿಟರ್’ ಆಗಲು ಒಪ್ಪಿಕೊಂಡರು. ಹೊಸ ಕಾಲದ ಮತ್ತು ಹೊಸ ಬಗೆಯ ಮಾಧ್ಯಮದ ವಿದ್ಯಾರ್ಥಿಯೆನ್ನುವಷ್ಟು ವಿನಯವನ್ನೂ, ದೀರ್ಘಕಾಲದ ಪತ್ರಿಕೋದ್ಯಮದ ಅನುಭವವನ್ನೂ ಎಲ್ಲಕ್ಕಿಂತ ಮುಖ್ಯವಾಗಿ ಮೌಲ್ಯಗಳಿಗೆ ಬದ್ಧತೆ ಹಾಗೂ ಪ್ರಾಮಾಣಿಕತೆಗಳನ್ನು ಮೈಗೂಡಿಸಿಕೊಂಡಿರುವ ಅವರು ನಮ್ಮ ಸಂಪಾದಕೀಯ ತಂಡದ ಮಾರ್ಗದರ್ಶಕರಾಗಿರುವುದು ಹೆಮ್ಮೆಯ ಸಂಗತಿ. ಕರ್ನಾಟಕದ ಮೂರು ಪ್ರಮುಖ ದಿನಪತ್ರಿಕೆಗಳಲ್ಲಿ (ಕನ್ನಡಪ್ರಭ, ವಿಜಯಕರ್ನಾಟಕ ಮತ್ತು ಪ್ರಜಾವಾಣಿ) ದೆಹಲಿ ವರದಿಗಾರರಾಗಿ ಕೆಲಸ ಮಾಡಿರುವ ಉಮಾಪತಿಯವರು, ಕಳೆದ ಕೆಲ ಕಾಲದಿಂದ ಬರೆದ ಅಂಕಣ ಬರಹಗಳು ರಾಜ್ಯದ ಪ್ರಜ್ಞಾವಂತರನ್ನು ತಟ್ಟಿರುವ ಪರಿ ಅನನ್ಯವಾದುದು.
ಇದರೊಂದಿಗೆ, ಪತ್ರಿಕೆಯ ಜವಾಬ್ದಾರಿಯಲ್ಲಿ ಇನ್ನೂ ಕೆಲವು ಬದಲಾವಣೆಗಳು ಆಗುತ್ತಲಿವೆ. ಹಲವು ಹಿರಿಯರು ಬೇರೆ ಬೇರೆ ರೀತಿಯಲ್ಲಿ ಇದರ ಜೊತೆಗೂಡಲಿದ್ದಾರೆ. ಮುಂಬರುವ ಸಂಚಿಕೆಗಳಲ್ಲಿ ಅಧಿಕೃತವಾಗಿ ನಿಮ್ಮೊಂದಿಗೆ ಅದನ್ನು ವಿಸ್ತøತವಾಗಿ ಹಂಚಿಕೊಳ್ಳಲಿದ್ದೇವೆ.
ಹೊಸ ಕಾಲದ ಜನಪರ ಮಾಧ್ಯಮದ ಹಲವು ಪ್ರಯೋಗಗಳು ದೇಶಾದ್ಯಂತ ಜಾರಿಯಲ್ಲಿದೆ. ‘80ರ ದಶಕದಲ್ಲಿ ಕರ್ನಾಟಕದ ರಾಜಕಾರಣ, ಸಾಹಿತ್ಯ ಸಂಸ್ಕøತಿಗಳನ್ನು ಮತ್ತು ಯುವತಲೆಮಾರನ್ನು ಗಾಢವಾಗಿ ಪ್ರಭಾವಿಸಿದ ಲಂಕೇಶ್ ಪತ್ರಿಕೆಯು ಈ ನಾಡಿನ ವಿಶಿಷ್ಟ ಟ್ಯಾಬ್ಲಾಯ್ಡ್ ಆಗಿತ್ತು. ಇಂದು ಅದೇ ಬಗೆಯ ಟ್ಯಾಬ್ಲಾಯ್ಡ್ ಅದೇ ರೀತಿಯ ಪಾತ್ರ ನಿರ್ವಹಿಸಲಾರದು. ಮುದ್ರಣ ಮಾಧ್ಯಮದ ಸಾಧ್ಯತೆಗಳು ಇನ್ನೂ ಮುಗಿದು ಹೋಗಿಲ್ಲ; ಆದರೆ, ವೆಬ್ ಮೀಡಿಯಾದಲ್ಲಿ ಅಪಾರವಾದ ಸಾಧ್ಯತೆಗಳು ತೆರೆದುಕೊಂಡಿವೆ. ಇವೆಲ್ಲವನ್ನೂ ಬೆಸೆದು, ಹೊಸ ನುಡಿಗಟ್ಟು, ಭಾಷೆ-ಪರಿಭಾಷೆಗಳೊಂದಿಗೆ ಈ ಕಾಲದ ಯುವತಲೆಮಾರನ್ನು ಒಳಗೊಳ್ಳುವ ರೀತಿ-ನೀತಿಗಳನ್ನು ರೂಪಿಸುವ ಹಂತದಲ್ಲಿ ನಾವಿದ್ದೇವೆ. ಅದಕ್ಕಾಗಿ ಪ್ರಯೋಗಗಳು ನಡೆಯುತ್ತಿವೆ. ಇದರಲ್ಲಿ ನೀವೆಲ್ಲರೂ ಪಾಲುದಾರರು.
ಈ ಪತ್ರಿಕೆಯು ಒಂದು ಗುಂಪಿನ, ಒಂದು ಪಂಥದ, ಒಂದು ಸೈದ್ಧಾಂತಿಕ ಧಾರೆಯ ಮುಖವಾಣಿಯಲ್ಲ; ದೇಶ ಮತ್ತು ಜನಪರ ಹಿತಾಸಕ್ತಿಯ ಹೊರತಾಗಿ ಬೇರೆ ಆಸಕ್ತಿಗಳೂ ಇಲ್ಲ. ಪ್ರಜಾತಂತ್ರ ಮತ್ತು ಜೀವಪರತೆಯ ಆಶಯಗಳುಳ್ಳ ಎಲ್ಲ ಪಂಥಗಳೂ ಒಟ್ಟುಗೂಡಿ ಒಂದು ಪಂಥವಾಗಲಿ ಎಂಬ ಆಶಯವಷ್ಟೇ ನಮ್ಮದು.
ಇವತ್ತಿನ ಜಾಣಜಾಣೆಯರನ್ನು ಒಳಗೊಳ್ಳುವ ರಂಜನೆ, ಬೋಧನೆ, ಪ್ರಚೋದನೆಗಳು ಎಂದಿನಂತೆ ಪತ್ರಿಕೆಯ ಹೂರಣ ಹಾಗೂ ಸ್ವರೂಪವನ್ನು ನಿರ್ಧರಿಸಬೇಕು. ಹಾಗಾಗಿ ಪತ್ರಿಕೆಯು ನಿಮ್ಮೆಲ್ಲರ ಅಭಿವ್ಯಕ್ತಿಯ ವೇದಿಕೆಯೂ ಆಗಲಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ವೆನೆಜುವೆಲಾದ ತೈಲ ಖರೀದಿಗೆ ಅಮೆರಿಕದ ಅನುಮತಿ ಪಡೆಯಲು ರಿಲಯನ್ಸ್ ಮಾತುಕತೆ : ವರದಿ

ಭಾರತದ ರಿಲಯನ್ಸ್ ಇಂಡಸ್ಟ್ರೀಸ್ ವೆನೆಜುವೆಲಾದ ಕಚ್ಚಾ ತೈಲ ಖರೀದಿಯನ್ನು ಪುನರಾರಂಭಿಸಲು ಅಮೆರಿಕದ ಅನುಮೋದನೆಯನ್ನು ಕೋರುತ್ತಿದೆ ಎಂದು ಈ ವಿಷಯದ ಬಗ್ಗೆ ಗೊತ್ತಿರುವ ಎರಡು ಮೂಲಗಳು ಶುಕ್ರವಾರ ತಿಳಿಸಿವೆ ಎಂದು ಸುದ್ದಿ ಸಂಸ್ಥೆ ರಾಯಿಟರ್ಸ್...

ಐ-ಪ್ಯಾಕ್‌ ಮೇಲೆ ದಾಳಿ | ಇಡಿ ಅಧಿಕಾರಿಗಳ ವಿರುದ್ಧ ತನಿಖೆ ಪ್ರಾರಂಭಿಸಿದ ಕೋಲ್ಕತ್ತಾ ಪೊಲೀಸರು : ಸುಪ್ರೀಂ ಕೋರ್ಟ್‌ನಲ್ಲಿ ಕೇವಿಯಟ್ ಸಲ್ಲಿಸಿದ ಪ. ಬಂಗಾಳ ಸರ್ಕಾರ

ಐ-ಪ್ಯಾಕ್ ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ದಾಳಿ ನಡೆಸಿದ ಸಂದರ್ಭದಲ್ಲಿ ದಾಖಲೆಗಳ ಕಳ್ಳತನದ ಆರೋಪದ ಮೇಲೆ ಕೋಲ್ಕತ್ತಾ ಪೊಲೀಸರು ಶನಿವಾರ (ಜ.10)...

ಟ್ರಂಪ್ ಸಂಚಿಗೆ ತಿರುಗೇಟು : ನಾವು ಯಾರ ಅಡಿಯಾಳಾಗಲು ಸಿದ್ದರಿಲ್ಲ ಎಂದ ಗ್ರೀನ್‌ಲ್ಯಾಂಡ್‌ನ ರಾಜಕೀಯ ಪಕ್ಷಗಳು

ವೆನೆಜುವೆಲಾ ಬಳಿಕ ಖನಿಜ-ಸಮೃದ್ಧ ಡ್ಯಾನಿಶ್ (ಡೆನ್ಮಾರ್ಕ್‌) ಸ್ವಾಯತ್ತ ಪ್ರದೇಶವಾದ ಗ್ರೀನ್‌ ಲ್ಯಾಂಡ್‌ ಮೇಲೆ ಬಲಪ್ರಯೋಗ ಮಾಡಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಯೋಜಿಸುತ್ತಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಗ್ರೀನ್‌ಲ್ಯಾಂಡ್‌ನ ರಾಜಕೀಯ ಪಕ್ಷಗಳು...

ಮತ್ತೆ ಒಂದಾದ ಎನ್‌ಸಿಪಿ ಬಣಗಳು : ಸುಪ್ರಿಯಾ ಸುಳೆ ಜೊತೆ ವೇದಿಕೆ ಹಂಚಿಕೊಂಡ ಅಜಿತ್ ಪವಾರ್, ಜಂಟಿ ಪ್ರಣಾಳಿಕೆ ಬಿಡುಗಡೆ

ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿ ಮತ್ತು ಅವರ ಚಿಕ್ಕಪ್ಪ ಶರದ್ ಪವಾರ್ ನೇತೃತ್ವದ ಎನ್‌ಸಿಪಿ (ಎಸ್‌ಪಿ) ಶನಿವಾರ (ಜ.10) ಪುಣೆ ಮಹಾನಗರ ಪಾಲಿಕೆಗೆ ನಡೆಯಲಿರುವ ಚುನಾವಣೆಗೆ ಜಂಟಿ ಪ್ರಣಾಳಿಕೆಯನ್ನು ಬಿಡುಗಡೆ...

ಮಹಾರಾಷ್ಟ್ರ : ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿಯನ್ನು ಕೌನ್ಸಿಲರ್ ಮಾಡಿದ ಬಿಜೆಪಿ

ಬದ್ಲಾಪುರ ಲೈಂಗಿಕ ದೌರ್ಜನ್ಯ ಪ್ರಕರಣದ ಸಹ ಆರೋಪಿ ಮತ್ತು ಶಾಲೆಯೊಂದರ ಮಾಜಿ ಕಾರ್ಯದರ್ಶಿ ತುಷಾರ್ ಆಪ್ಟೆ ಎಂಬಾತನನ್ನು ಥಾಣೆ ಜಿಲ್ಲೆಯ ಕುಲ್ಗಾಂವ್-ಬದ್ಲಾಪುರ ಮುನ್ಸಿಪಲ್ ಕೌನ್ಸಿಲ್‌ಗೆ ಬಿಜೆಪಿ ನಾಮನಿರ್ದೇಶನ ಮಾಡಿದೆ. ಮುನ್ಸಿಪಲ್ ಕೌನ್ಸಿಲ್ ಅಧ್ಯಕ್ಷೆ ರುಚಿತಾ...

ಕಳ್ಳನೆಂದು ಸುಳ್ಳಾರೋಪ ಹೊರಿಸಿ ಜೈಲಿಗಟ್ಟಿದ ಪೊಲೀಸರು : ಸಂತ್ರಸ್ತಗೆ 14 ಲಕ್ಷ ರೂ. ಪರಿಹಾರ ನೀಡಲು ಕೋರ್ಟ್ ಆದೇಶ

ಕಳ್ಳನೆಂದು ಸುಳ್ಳಾರೋಪ ಹೊರಿಸಿ ಪೊಲೀಸರು ಜೈಲಿಗಟ್ಟಿದ ವ್ಯಕ್ತಿಗೆ 14 ಲಕ್ಷ ರೂಪಾಯಿ ಪರಿಹಾರ ಒದಗಿಸುವಂತೆ ಕೇರಳ ಸರ್ಕಾರಕ್ಕೆ ಹೈಕೋರ್ಟ್ ಆದೇಶಿಸಿದೆ. ಕಣ್ಣೂರು ಮೂಲದ ವಿ.ಕೆ ತಾಜುದ್ದೀನ್ ಕಾನೂನು ಹೋರಾಟದಲ್ಲಿ ಗೆದ್ದು ಪರಿಹಾರ ಪಡೆದ ವ್ಯಕ್ತಿ....

ಇರಾನ್‌ನಲ್ಲಿ ತೀವ್ರಗೊಂಡ ಆಡಳಿತ ವಿರೋಧಿ ಪ್ರತಿಭಟನೆ : ಟ್ರಂಪ್ ಮಧ್ಯಪ್ರವೇಶ ಕೋರಿದ ಮಾಜಿ ದೊರೆಯ ಮಗ

ಇರಾನ್‌ನಲ್ಲಿ ಭುಗಿಲೆದ್ದಿರುವ ಆಡಳಿತ ವಿರೋಧಿ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದೆ. 2025ರ ಡಿಸೆಂಬರ್ 28ರಂದು ಪ್ರಾರಂಭಗೊಂಡ ಪ್ರತಿಭಟನೆಗಳು ಹಿಂಸಾಚಾರ ರೂಪ ಪಡೆದುಕೊಂಡು 13ನೇ ದಿನವೂ ಮುಂದುವರಿದಿದೆ. ಆರ್ಥಿಕ ಬಿಕ್ಕಟ್ಟಿನ ವಿರುದ್ದ (ರಿಯಾಲ್ ಕರೆನ್ಸಿ ಮೌಲ್ಯ...

ಮತದಾರರ ಹೆಸರು ಅಳಿಸಲು ಯತ್ನ : ಬಿಜೆಪಿ ವಿರುದ್ಧ 5 ವಿಪಕ್ಷಗಳಿಂದ ದೂರು ದಾಖಲು

ಅಸ್ಸಾಂನ ಐದು ವಿರೋಧ ಪಕ್ಷಗಳು ಶುಕ್ರವಾರ (ಜ.9) ಪೊಲೀಸ್ ದೂರು ದಾಖಲಿಸಿದ್ದು, ಆಡಳಿತಾರೂಢ ಭಾರತೀಯ ಜನತಾ ಪಾರ್ಟಿ (ಬಿಜೆಪಿ) ರಾಜ್ಯದ ಮತದಾರರ ಪಟ್ಟಿಯಿಂದ ಹೆಚ್ಚಿನ ಸಂಖ್ಯೆಯ ನಿಜವಾದ ಮತದಾರರ ಹೆಸರನ್ನು ಅಳಿಸಲು ಸಂಚು...

ಐ-ಪ್ಯಾಕ್ ಮೇಲೆ ದಾಳಿ ಪ್ರಕರಣ: ಮಮತಾ ಬ್ಯಾನರ್ಜಿ ದೂರಿನ ಬೆನ್ನಲ್ಲೇ ಜಾರಿ ನಿರ್ದೇಶನಾಲಯದ ವಿರುದ್ಧ ಎಫ್‌ಐಆರ್

ಕೋಲ್ಕತ್ತಾ: ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ ನಡೆಸಿದ ದಾಳಿಗೆ ಸಂಬಂಧಿಸಿದಂತೆ ಟಿಎಂಸಿ ಅಧ್ಯಕ್ಷೆ ಮಮತಾ ಬ್ಯಾನರ್ಜಿ...

‘ಭ್ರಷ್ಟ ಜನತಾ ಪಾರ್ಟಿ’: ಬಿಜೆಪಿ ಡಬಲ್ ಎಂಜಿನ್ ಆಡಳಿತದ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ

ನವದೆಹಲಿ: ವಿವಿಧ ರಾಜ್ಯಗಳಲ್ಲಿ ಬಿಜೆಪಿಯ ಡಬಲ್ ಎಂಜಿನ್ ಸರ್ಕಾರಗಳ ವಿರುದ್ಧ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.  ತಮ್ಮ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ರಾಹುಲ್, ಉತ್ತರಾಖಂಡದಲ್ಲಿ ಅಂಕಿತ...