Homeಮುಖಪುಟ‘ಕೆಲವು ಜನರ ಅಹಂ ತಣಿಸಲು ಹೊರಗಡೆ ಮಾಂಸಾಹಾರ ಮಾರಾಟ ಮಾಡಬೇಡಿ ಎನ್ನುತ್ತೀರಿ’: ಚಾಟಿ ಬೀಸಿದ ಗುಜರಾತ್‌...

‘ಕೆಲವು ಜನರ ಅಹಂ ತಣಿಸಲು ಹೊರಗಡೆ ಮಾಂಸಾಹಾರ ಮಾರಾಟ ಮಾಡಬೇಡಿ ಎನ್ನುತ್ತೀರಿ’: ಚಾಟಿ ಬೀಸಿದ ಗುಜರಾತ್‌ ಹೈಕೋರ್ಟ್‌

`ನಾನು ಹೊರಗೆ ಏನು ತಿನ್ನಬೇಕು ಎಂದು ನೀವು ಹೇಗೆ ನಿರ್ಧರಿಸುತ್ತೀರಿ’ ಎಂದು ಮಾಂಸಾಹಾರಿ ಸ್ಟಾಲ್‌ಗಳ ತೆರವಿಗೆ ಹೈಕೋರ್ಟ್‌ ಪ್ರತಿಕ್ರಿಯಿಸಿದೆ

- Advertisement -
- Advertisement -

ಮಾಂಸಾಹಾರಿ ಆಹಾರವನ್ನು ಮಾರಾಟ ಮಾಡುವ ಬೀದಿ ವ್ಯಾಪಾರಿಗಳನ್ನು ಗುರಿಯಾಗಿಸಿಕೊಂಡಿದ್ದಕ್ಕಾಗಿ ಅಹಮದಾಬಾದ್ ಮುನ್ಸಿಪಲ್‌ ಕಾರ್ಪೋರೇಷನ್‌ಗೆ ಗುಜರಾತ್ ಹೈಕೋರ್ಟ್ ಗುರುವಾರ ಎಚ್ಚರಿಕೆ ನೀಡಿದ್ದು, ಅಂತಹ ಯಾವುದೇ ನಿರ್ಧಾರವನ್ನು ಜಾರಿಗೆ ತರಬಾರದು ಎಂದು ಎಚ್ಚರಿಸಿದೆ. ಸಂತ್ರಸ್ತ ಬೀದಿ ವ್ಯಾಪಾರಿಗಳು ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯವು, “ಕೆಲವು ಜನರ ಅಹಂಕಾರ”ವನ್ನು ತೃಪ್ತಿಪಡಿಸಲು ಅಥವಾ “ಅಧಿಕಾರದಲ್ಲಿರುವ ಪಕ್ಷ ನಿರ್ದಿಷ್ಟ ಆಹಾರದ ವಿರುದ್ಧ ಇದೆ” ಎಂಬ ಕಾರಣಕ್ಕಾಗಿ ಇಂತಹ ನಿರ್ಧಾರವನ್ನು ಕೈಗೊಳ್ಳದಂತೆ ಮುನ್ಸಿಪಲ್‌‌ಗೆ ಗುರುವಾರ ಚಾಟಿ ಬೀಸಿದೆ.

ಅಹಮದಾಬಾದ್ ಮುನ್ಸಿಪಲ್ ಕಾರ್ಪೊರೇಷನ್ ತಮ್ಮ ಗಾಡಿಗಳನ್ನು ವಶಪಡಿಸಿಕೊಂಡಿದೆ ಎಂದು 25 ಬೀದಿ ವ್ಯಾಪಾರಿಗಳು ಗುಜರಾತ್‌ ಹೈಕೋರ್ಟ್‌ಗೆ ಮನವಿ ಸಲ್ಲಿಸಿದ್ದರು. ಬೀದಿ ವ್ಯಾಪಾರಿಗಳ ಮನವಿ ಆಲಿಸಿದ ಆಲಿಸಿದ ಗುಜರಾತ್ ಹೈಕೋರ್ಟ್, ಮುನ್ಸಿಪಲ್‌ ಕಾರ್ಪೋರೇಷನ್‌‌ ಅನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ. ಪ್ರಕರಣಗಳನ್ನು ತ್ವರಿತವಾಗಿ ಪರಿಗಣಿಸುವಂತೆ ಸೂಚನೆ ನೀಡಿದ ನ್ಯಾಯಾಲಯ, ಬೀದಿ ವ್ಯಪಾರಿಗಳು ತಮ್ಮ ಸರಕುಗಳನ್ನು ಬಿಡುಗಡೆ ಮಾಡಲು ಸಂಪರ್ಕಿಸಿದರೆ 24 ಗಂಟೆಗಳ ಒಳಗೆ ಅದನ್ನು ಅವರಿಗೆ ನೀಡಬೇಕು ಎಂದು ನಿರ್ದೇಶನ ನೀಡಿದೆ.

ಇದನ್ನೂ ಓದಿ:ಗುಜರಾತ್‌: ಬೀದಿಬದಿ ವ್ಯಾಪಾರಿಗಳ ಹೊಟ್ಟೆ ಮೇಲೆ ಹೊಡೆದ ‘ಮಾಂಸಾಹಾರ ಮಳಿಗೆ ತೆರವು’ ಕಾರ್ಯಾಚರಣೆ

ವಿಚಾರಣೆಯ ಸಂದರ್ಭದಲ್ಲಿ, ನ್ಯಾಯಮೂರ್ತಿ ಬಿರೇನ್ ವೈಷ್ಣವ್, “ಮಾಂಸಾಹಾರದಿಂದ ನಗರಸಭೆಗೆ ಏನು ತೊಂದರೆಯಾಗುತ್ತದೆ?” ಎಂದು ಪ್ರಶ್ನಿಸಿದ್ದಾರೆ.

ಸರ್ಕಾರಿ ವಕೀಲರನ್ನು ಉದ್ದೇಶಿಸಿ ನ್ಯಾಯಾಲಯವು , “ನಿಮ್ಮ ಸಮಸ್ಯೆ ಏನು? ಮಾಂಸಾಹಾರ ನಿಮಗೆ ಇಷ್ಟವಿಲ್ಲ, ಅದು ನಿಮ್ಮ ಇಷ್ಟ. ಆದರೆ ನಾನು ಹೊರಗೆ ಏನು ತಿನ್ನಬೇಕು ಎಂದು ನೀವು ಹೇಗೆ ನಿರ್ಧರಿಸುತ್ತೀರಿ…ಇದ್ದಕ್ಕಿದ್ದಂತೆ ಅಧಿಕಾರದಲ್ಲಿರುವವರು ಇದನ್ನೇ ಮಾಡಬೇಕೆಂದು ಹೇಳುತ್ತಾರೆ? ನಾಳೆ ನೀವು ನನ್ನ ಮನೆಯ ಹೊರಗೆ ನಾನು ಏನು ತಿನ್ನಬೇಕೆಂದು ನಿರ್ಧರಿಸಿ…ಕಬ್ಬಿನ ರಸ ಮಧುಮೇಹಕ್ಕೆ ಕಾರಣವಾಗುತ್ತದೆ ಅಥವಾ ಕಾಫಿ ಆರೋಗ್ಯಕ್ಕೆ ಹಾನಿಕಾರಕ ಎಂಬ ಕಾರಣದಿಂದ ನಾನು ಅವುಗಳನ್ನು ಸೇವಿಸಬಾರದು ಎಂದು ಅವರು ನನಗೆ ಹೇಳುತ್ತಾರೆ. ಪಾಲಿಕೆ ಆಯುಕ್ತರಿಗೆ ಫೋನ್ ಮಾಡಿ ನೀವು ಏನು ಮಾಡುತ್ತಿದ್ದೀರಿ ಎಂದು ಕೇಳಿ” ಎಂದು ಹೇಳಿದೆ.

ಯಾವುದೇ ಅಧಿಕೃತ ಆದೇಶವಿಲ್ಲದೆ ಮತ್ತು ವಡೋದರಾ, ಸೂರತ್, ಭಾವನಗರ, ಜುನಾಗಢ ಮತ್ತು ಅಹಮದಾಬಾದ್‌ನಲ್ಲಿನ ಮುನ್ಸಿಪಲ್‌ ಕಾರ್ಪೋರೇಷನ್‌ಗಳು ಈ ನಿರ್ಧಾರ ತೆಗೆದುಕೊಂಡು ಬೀದಿಬದಿ ವ್ಯಾಪಾರಿಗಳ ಗಾಡಿಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ವ್ಯಾಪಾರಿಗಳ ಪರವಾಗಿ ವಕೀಲ ರೋನಿತ್ ಜಾಯ್ ನ್ಯಾಯಾಲಯಕ್ಕೆ ಹೇಳಿಕೆ ನೀಡಿದರು.

ಕಳೆದ ತಿಂಗಳು ರಾಜ್‌ಕೋಟ್ ಮೇಯರ್ ಮಾಂಸಾಹಾರ ಮಾರಾಟ ಮಾಡುವ ಗಾಡಿಗಳು ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುತ್ತಿವೆ ಎಂದು ಹೇಳಿಕೆ ನೀಡಿದ್ದರು.

ಇದನ್ನೂ ಓದಿ:ಗುಜರಾತ್‌: ಮಾಂಸಾಹಾರ ಮಳಿಗೆಗಳಿಗೆ ನಿರ್ಬಂಧ; ಬಿಜೆಪಿ ನಾಯಕರಲ್ಲಿ ಭಿನ್ನಮತ

ಬೀದಿ ವ್ಯಾಪಾರಿಗಳ ಅರ್ಜಿಯ ಮೊದಲ ವಿಚಾರಣೆ ಮುಗಿದ ನಂತರ, ಅಹಮದಾಬಾದ್ ಮುನ್ಸಿಪಲ್ ಕಾರ್ಪೊರೇಶನ್‌ನ ಸ್ಥಾಯಿ ವಕೀಲ ಸತ್ಯಂ ಛಾಯಾ ಅವರಿಗೆ ನ್ಯಾಯಾಲಯವು ಹಾಜರಾಗುವಂತೆ ಸೂಚಿಸುವುದರೊಂದಿಗೆ, ಪ್ರಕರಣವನ್ನು ದ್ವಿತೀಯಾರ್ಧದಲ್ಲಿ ಹೆಚ್ಚಿನ ವಿಚಾರಣೆ ನ್ಯಾಯಾಲಯ ನಡೆಸಿತು.

ನಗರಸಭೆ ವಕೀಲ ಛಾಯಾ ಅವರು ನ್ಯಾಯಾಲಯಕ್ಕೆ, “ಕೆಲವು ತಪ್ಪು ಕಲ್ಪನೆಯಡಿಯಲ್ಲಿ ಮನವಿ ಸಲ್ಲಿಸಲಾಗಿದೆ. ಎಲ್ಲಾ ಮಾಂಸಾಹಾರದ ಗಾಡಿಗಳನ್ನು ತೆಗೆದುಹಾಕಬೇಕು ಎಂದು ಯಾವುದೇ ಸೂಚನೆ ನೀಡಿಲ್ಲ. ರಸ್ತೆಯ ಮೇಲಿನ ಅತಿಕ್ರಮಣ, ಇದು ಸಾರ್ವಜನಿಕ ಸಂಚಾರಕ್ಕೆ ಅಡ್ಡಿ ಅಥವಾ ಪಾದಚಾರಿಗಳಿಗೆ ತೊಂದರೆಯಾಗುವ ಗಾಡಿಗಳನ್ನು ತೆಗೆದು ಹಾಕಲಾಗಿದೆ” ಎಂದು ಹೇಳಿದ್ದಾರೆ.

ಆದರೆ, ಮಾಂಸಾಹಾರ ಮಾರಾಟಗಾರರನ್ನು ಗುರಿಯಾಗಿಸಿಕೊಂಡು ಅತಿಕ್ರಮಣ ತೆರವು ಕಾರ್ಯ ಕೈಗೊಳ್ಳಲಾಗುತ್ತಿದೆಯೇ ಎಂದು ನ್ಯಾಯಮೂರ್ತಿ ವೈಷ್ಣವ್ ಪ್ರಶ್ನಿಸಿದ್ದಾರೆ.

ಇದನ್ನೂ ಓದಿ:ವಡೋದರಾ: ಮಾಂಸಾಹಾರವನ್ನು ಬೀದಿಯಲ್ಲಿ ಪ್ರದರ್ಶಿಸದಂತೆ ಸೂಚನೆ!

ಛಾಯಾ ಅವರ ಹೇಳಿಕೆಯನ್ನು ಅನುಸರಿಸಿ, ನ್ಯಾಯಮೂರ್ತಿ ವೈಷ್ಣವ್, “ಏನನ್ನಾದರೂ ಅನುಷ್ಠಾನಗೊಳಿಸುವ ನೆಪದಲ್ಲಿ, ಉದಾಹರಣೆಗೆ, ವಸ್ತ್ರಪುರ ಕೆರೆಯ ಸುತ್ತಲೂ ರಾತ್ರಿ ಹೊತ್ತಲ್ಲಿ ಮೊಟ್ಟೆ ಮತ್ತು ಆಮ್ಲೆಟ್ ಮಾಡುವ ವ್ಯಾಪಾರಿಗಳಿದ್ದರೆ ಅಧಿಕಾರದಲ್ಲಿ ಇರುವ ಪಕ್ಷವು ಅದನ್ನು ತಿನ್ನಬಾರದು ಎಂದು ನಿರ್ಧರಿಸುತ್ತದೆ, ಅವುಗಳನ್ನು ನಿಲ್ಲಿಸಲು ಬಯಸುತ್ತವೆ…ನೀವು ಅವುಗಳನ್ನು ಎತ್ತಿಕೊಂಡು ತೆಗೆದುಕೊಂಡು ಹೋಗುತ್ತೀರಾ? ಪ್ರಾಮಾಣಿಕವಾಗಿ ಹೇಳಿ.” ಎಂದು ಹೇಳಿದ್ದಾರೆ.

“ನೀವು ಅದನ್ನು ಏಕೆ ಮಾಡುತ್ತೀರಿ? ನಿಮ್ಮ ಕಾರ್ಪೊರೇಷನ್ ಕಮಿಷನರ್ ಅವರನ್ನು ಇಲ್ಲಿಯೇ ಬರುವಂತೆ ಕೇಳಿ…ಜನರನ್ನು ಮನಬಂದಂತೆ ಎತ್ತಿಕೊಂಡು ಹೋಗುತ್ತೀರಲ್ಲ, ಎಷ್ಟು ಧೈರ್ಯ ನಿಮಗೆ?” ಎಂದು ನ್ಯಾಯಮೂರ್ತಿ ವೈಷ್ಣವ್‌ ಕಿಡಿ ಕಾರಿದ್ದಾರೆ.

ಆದರೆ ವಕೀಲ ಛಾಯಾ ಅವರು ನ್ಯಾಯಾಲಯದ ಮಾತನ್ನು ನಿರಾಕರಿಸಿ, ಫುಟ್‌ಪಾತ್‌ಗಳ ಫೋಟೋಗಳನ್ನು ಉಲ್ಲೇಖಿಸಿದ್ದಾರೆ. ಇದಕ್ಕೆ ಮತ್ತೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿ ವೈಷ್ಣವ್, “ಅತಿಕ್ರಮಣಗಳಿದ್ದರೆ, ಅದ್ನನು ತೆರವುಗೊಳಿಸಬೇಕು, ಆದರೆ ಜಪ್ತಿ ಮಾಡಬೇಡಿ. ಯಾಕೆಂದರೆ ಇಂದು ಬೆಳಿಗ್ಗೆ ಯಾರಾದರೂ, ‘ನಾಳೆಯಿಂದ ನನ್ನ ಸುತ್ತಲೂ ಮೊಟ್ಟೆಯ ತಿನಿಸುಗಳು ಬೇಡ’ ಎಂದು ಹೇಳಿಕೆ ನೀಡುತ್ತಾರೆ” ಎಂದು ಹೇಳಿದ್ದಾರೆ.

ಇದನ್ನೂ ಓದಿ: ಕೊರೊನ ವೈರಸ್ ಕೇವಲ ವೈರಸ್‌ ಅಲ್ಲ. ‘ಮಾಂಸಾಹಾರಿಗಳನ್ನು ಶಿಕ್ಷಿಸಲು’ ಬಂದ ಅವತಾರ ಎಂದ ಹಿಂದೂ ಮಹಾಸಭಾ ಮುಖ್ಯಸ್ಥ!

 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಜಾತಿ ತಾರತಮ್ಯ ತಡೆಗಟ್ಟುವ ಯುಜಿಸಿಯ ಹೊಸ ನಿಯಮಕ್ಕೆ ಸುಪ್ರೀಂ ಕೋರ್ಟ್ ತಡೆ

ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ಆಧಾರಿತ ತಾರತಮ್ಯವನ್ನು ತಡೆಗಟ್ಟಲು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಿಶ್ವವಿದ್ಯಾಲಯ ಅನುದಾನ ಆಯೋಗದ (ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಸಮಾನತೆಯ ಪ್ರಚಾರ) ನಿಯಮಗಳು, 2026ಕ್ಕೆ ಸುಪ್ರೀಂ ಕೋರ್ಟ್ ಗುರುವಾರ...

ರಾಜಸ್ಥಾನ| ಸಾರ್ವಜನಿಕ ಕಾರ್ಯಕ್ರಮದಲ್ಲಿ ವೃದ್ಧ ಮಹಿಳೆಯನ್ನು ಕಾಲಿನಿಂದ ಒದ್ದ ವ್ಯಕ್ತಿ

ರಾಜಸ್ಥಾನದ ಬಾರ್ಮರ್ ಜಿಲ್ಲೆಯಲ್ಲಿ ನಡೆಯುತ್ತಿದ್ದ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ವೃದ್ಧ ಮಹಿಳೆಯನ್ನು ಒದೆಯುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ವ್ಯಕ್ತಿಯನ್ನು ಬಂಧಿಸಲಾಗಿದೆ. ಆತನ ಕೃತ್ಯದ ವಿರುದ್ಧ ವ್ಯಾಪಕ ಆಕ್ರೋಶಕ್ಕೆ ವ್ಯಕ್ತವಾಗಿದೆ. ಜತೋನ್ ಕಾ...

ಅಜಿತ್ ಪವಾರ್ ವಿಮಾನ ದುರಂತ: ಅಪಘಾತ ಸ್ಥಳದಲ್ಲಿ ಬ್ಲಾಕ್ ಬಾಕ್ಸ್ ಪತ್ತೆ..!

ನವದೆಹಲಿ: ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಮತ್ತು ಇತರ ನಾಲ್ವರು ಸಾವನ್ನಪ್ಪಿದ ಬಾರಾಮತಿ ವಿಮಾನ ನಿಲ್ದಾಣದಲ್ಲಿ ಬುಧವಾರ ಸಂಭವಿಸಿದ ವಿಮಾನ ಅಪಘಾತದ ತನಿಖೆಯ ಕುರಿತು ನಾಗರಿಕ ವಿಮಾನಯಾನ ಸಚಿವಾಲಯ (MoCA) ಗುರುವಾರ ಹೇಳಿಕೆ...

ಮೀಸಲಾತಿಗಾಗಿ ಪ್ರಬಲ ಜಾತಿಯ ವ್ಯಕ್ತಿ ಬೌದ್ಧ ಧರ್ಮಕ್ಕೆ ಮತಾಂತರ : ಹೊಸ ಬಗೆಯ ವಂಚನೆ ಎಂದ ಸುಪ್ರೀಂ ಕೋರ್ಟ್

ಇಬ್ಬರು ಪ್ರಬಲ ಜಾತಿ ಅಭ್ಯರ್ಥಿಗಳು ಬೌದ್ಧ ಧರ್ಮಕ್ಕೆ ಮತಾಂತರಗೊಂಡಿರುವ ಬಗ್ಗೆ ಮಂಗಳವಾರ (ಜ.27) ಸುಪ್ರೀಂ ಕೋರ್ಟ್ ಗಂಭೀರ ಅನುಮಾನ ವ್ಯಕ್ತಪಡಿಸಿದ್ದು, ಈ ನಡೆಯು ಸ್ನಾತಕೋತ್ತರ ವೈದ್ಯಕೀಯ ಕೋರ್ಸ್‌ಗಳಿಗೆ ಅಲ್ಪಸಂಖ್ಯಾತ ಕೋಟಾದ ಅಡಿಯಲ್ಲಿ ಪ್ರವೇಶ...

ವಿಮಾನ ಪತನ : ಸಂಸದ ಸೇರಿ 15 ಜನರು ಸಾವು

ಬುಧವಾರ (ಜ.28) ಸರ್ಕಾರಿ ಸ್ವಾಮ್ಯದ ವಿಮಾನಯಾನ ಸಂಸ್ಥೆ ಸಟೇನಾ ನಿರ್ವಹಿಸುತ್ತಿದ್ದ ಸಣ್ಣ ಪ್ರಯಾಣಿಕ ವಿಮಾನವು ಈಶಾನ್ಯ ಕೊಲಂಬಿಯಾದ ಪರ್ವತ ಪ್ರದೇಶದಲ್ಲಿ ಪತನಗೊಂಡು ಎಲ್ಲಾ 15 ಪ್ರಯಾಣಿಕರು ಜನರು ಸಾವಿಗೀಡಾಗಿದ್ದಾರೆ. ದುರಂತದ ಕಾರಣ ಇನ್ನೂ ಸ್ಪಷ್ಟವಾಗಿಲ್ಲ....

‘ವಿಳಂಬವಾದರೂ ಸ್ವಾಗತಾರ್ಹ ಹೆಜ್ಜೆ..’; ಕೇಂದ್ರದ ಯುಜಿಸಿ ನಿಯಮಗಳನ್ನು ಪ್ರಶಂಸಿದ ಸಿಎಂ ಸ್ಟಾಲಿನ್

ಯುಜಿಸಿ (ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಈಕ್ವಿಟಿ ಪ್ರಚಾರ) ನಿಯಮಗಳು, 2026 "ಆಳವಾಗಿ ಬೇರೂರಿರುವ ತಾರತಮ್ಯ ಮತ್ತು ಸಾಂಸ್ಥಿಕ ನಿರಾಸಕ್ತಿಯಿಂದ ಬಳಲುತ್ತಿರುವ ಉನ್ನತ ಶಿಕ್ಷಣ ವ್ಯವಸ್ಥೆಯನ್ನು ಸುಧಾರಿಸುವಲ್ಲಿ ವಿಳಂಬವಾದರೂ ಸ್ವಾಗತಾರ್ಹ ಹೆಜ್ಜೆಯಾಗಿದೆ" ಎಂದು ತಮಿಳುನಾಡು...

ಹಿರಿಯ ಕಾರ್ಮಿಕ ಮುಖಂಡ ಅನಂತ ಸುಬ್ಬರಾವ್ ನಿಧನ

ಕಳೆದ ನಾಲ್ಕು ದಶಕಗಳಿಂದ ಸಾರಿಗೆ ಕ್ಷೇತ್ರದ ಕಾರ್ಮಿಕರ ಪರವಾಗಿ ಧ್ವನಿ ಎತ್ತುತ್ತಿದ್ದ, ಕಾರ್ಮಿಕರ ಹಿತರಕ್ಷಣೆಗಾಗಿ ನಿರಂತರ ಹೋರಾಟ ನಡೆಸುತ್ತಿದ್ದ ಹಿರಿಯ ಕಾರ್ಮಿಕ ಮುಖಂಡ ಎಚ್‌.ವಿ ಅನಂತ ಸುಬ್ಬರಾವ್ ಅವರು ಜನವರಿ 28ರಂದು, ನಿಧನರಾಗಿದ್ದಾರೆ....

ಮುಡಾ ಪ್ರಕರಣ: ಸಿದ್ದರಾಮಯ್ಯಗೆ ಬಿಗ್ ರಿಲೀಫ್, ಲೋಕಾಯುಕ್ತ ಬಿ ರಿಪೋರ್ಟ್ ಪುರಸ್ಕರಿಸಿದ ಕೋರ್ಟ್

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಪೊಲೀಸರು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಅವರ ಕುಟುಂಬದ ವಿರುದ್ಧ ಪುರಾವೆಗಳಿಲ್ಲ ಎಂದು ಹೇಳಿ ‘ಕ್ಲೀನ್ ಚೀಟ್’ ನೀಡಿ ‘ಬಿ’ ರಿಪೋರ್ಟ್ ಅನ್ನು ಸಲ್ಲಿಸಿತ್ತು....

ಪಿಟಿಸಿಎಲ್‌ ಕಾಯ್ದೆ ತಿದ್ದುಪಡಿ- ಕೋರ್ಟ್‌ಗಳಲ್ಲಿ ದಲಿತರಿಗೆ ಆಗುತ್ತಿರುವ ಅನ್ಯಾಯ ಖಂಡಿಸಿ ರಾಜ್ಯದಾದ್ಯಂತ ಪ್ರತಿಭಟನೆ

ಪಿಟಿಸಿಎಲ್‌ ಕಾಯ್ದೆ, 1978ರ 2023ರ ತಿದ್ದುಪಡಿ ಕಾಯ್ದೆಯ ವಿರೋಧಿಸಿ ಹಾಗೂ ಕಂದಾಯ ಇಲಾಖೆಯ ಎಸಿ, ಡಿಸಿ ನ್ಯಾಯಾಲಯಗಳು ಹಾಗೂ ಹೈಕೋರ್ಟ್, ಸುಪ್ರೀಂ ಕೋರ್ಟ್‌ಗಳಲ್ಲಿ ಆಗುತ್ತಿರುವ ಅನ್ಯಾಯವನ್ನು ಖಂಡಿಸಿ ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ...

ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಉಚ್ಚಾಟಿತ ಕಾಂಗ್ರೆಸ್ ಶಾಸಕ ರಾಹುಲ್ ಮಮ್‌ಕೂಟತಿಲ್‌ಗೆ ಜಾಮೀನು

ಪತ್ತನಂತಿಟ್ಟ: ಈ ತಿಂಗಳ ಆರಂಭದಲ್ಲಿ ಬಂಧಿಸಲ್ಪಟ್ಟ ಮೂರನೇ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಉಚ್ಚಾಟಿತ ಕಾಂಗ್ರೆಸ್ ಶಾಸಕ ರಾಹುಲ್ ಮಮ್‌ಕೂಟತಿಲ್ ಅವರಿಗೆ ಕೇರಳ ನ್ಯಾಯಾಲಯ ಬುಧವಾರ ಜಾಮೀನು ನೀಡಿದೆ. ಶಾಸಕರು ಸಲ್ಲಿಸಿದ್ದ ಮೇಲ್ಮನವಿಯನ್ನು ಪರಿಗಣಿಸಿದ್ದ ಪತ್ತನಂತಿಟ್ಟ...