ರಾಜಕೀಯ ಪಕ್ಷಗಳು ಚುನಾವಣಾ ಬಾಂಡ್‌ಗಳ ಮೂಲಕ ಪಡೆದ ಹಣವನ್ನು ಮರುಪಡೆಯಲು ಅಧಿಕಾರಿಗಳಿಗೆ ನಿರ್ದೇಶಿಸಲು ನಿರಾಕರಿಸಿದ ಆಗಸ್ಟ್ 2 ರ ಆದೇಶದ ವಿರುದ್ಧ ಬುಧವಾರ ಸುಪ್ರೀಂ ಕೋರ್ಟ್‌ನಲ್ಲಿ ಪರಿಶೀಲನಾ ಅರ್ಜಿಯನ್ನು ಸಲ್ಲಿಸಲಾಗಿದೆ ಎಂದು ಲೈವ್ ಲಾ ವರದಿ ಮಾಡಿದೆ. ಚುನಾವಣಾ ಬಾಂಡ್
ಚುನಾವಣಾ ಬಾಂಡ್ ವಹಿವಾಟುಗಳು ಕ್ವಿಡ್ ಪ್ರೊ ಕೋ ವ್ಯವಸ್ಥೆಯ ಭಾಗವಾಗಿದೆ ಎಂದು ವಾದಿಸಿ ಖೇಮ್ ಸಿಂಗ್ ಭಾಟಿ ಎಂಬ ವಕೀಲರು ಈ ಅರ್ಜಿಯನ್ನು ಸಲ್ಲಿಸಿದ್ದಾರೆ. ಕ್ವಿಡ್ ಪ್ರೊ ಕ್ವೋ ವ್ಯವಸ್ಥೆ ಎಂದರೆ ಇಬ್ಬರ ನಡುವೆ ಪರಸ್ಪತ ಸರಕು, ಸೇವೆಗಳು ಅಥವಾ ಇತರ ಅನುಕೂಲಗಳ ವಿನಿಮಯ ಮಾಡಿಕೊಳ್ಳುವ ವ್ಯವಸ್ಥೆಯಾಗಿದೆ.
ಈ ಯೋಜನೆಯ ಮೂಲಕ ರಾಜಕೀಯ ಪಕ್ಷಗಳು ಮತ್ತು ಕಾರ್ಪೊರೇಟ್ ದಾನಿಗಳ ನಡುವೆ ಪ್ರಯೋಜನಗಳನ್ನು ವಿನಿಮಯ ಮಾಡಿಕೊಳ್ಳಲಾಗಿದೆ ಎಂದು ವಕೀಲ ಭಾಟಿ ಆರೋಪಿಸಿದ್ದಾರೆ. ಹಾಗಾಗಿ, ಯೋಜನೆಯ ಮೂಲಕ ರಾಜಕೀಯ ಪಕ್ಷಗಳು ಪಡೆದ ಮೊತ್ತವನ್ನು ಮುಟ್ಟುಗೋಲು ಹಾಕಿಕೊಳ್ಳುವಂತೆ ಕೇಂದ್ರ ಸರ್ಕಾರ, ಚುನಾವಣಾ ಆಯೋಗ ಮತ್ತು ಕೇಂದ್ರ ವಿಜಿಲೆನ್ಸ್ ಸಮಿತಿಗೆ ನಿರ್ದೇಶನ ನೀಡಬೇಕೆಂದು ಅವರು ಸುಪ್ರೀಂ ಕೋರ್ಟ್ ಅನ್ನು ಒತ್ತಾಯಿಸಿದ್ದಾರೆ.
ರಾಜಕೀಯ ಪಕ್ಷಗಳು ದಾನಿಗಳಿಗೆ ಒದಗಿಸಲಾಗಿದೆ ಎಂದು ಹೇಳಲಾದ ಅಕ್ರಮ ಪ್ರಯೋಜನಗಳ ಬಗ್ಗೆ ತನಿಖೆ ನಡೆಸಲು ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿಯ ನೇತೃತ್ವದಲ್ಲಿ ಸಮಿತಿಯನ್ನು ರಚಿಸುವಂತೆಯೂ ವಕೀಲರು ಕೋರಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
ಆಗಸ್ಟ್‌ನಲ್ಲಿ, ನಿವೃತ್ತ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ನೇತೃತ್ವದ ಮೂವರು ನ್ಯಾಯಾಧೀಶರ ಪೀಠವು ಬಾಂಡ್‌ಗಳ ಮೂಲಕ ಕ್ವಿಡ್ ಪ್ರೊ ಕೋ ವ್ಯವಸ್ಥೆಗಳ ಆರೋಪದ ಪ್ರಕರಣಗಳನ್ನು ತನಿಖೆ ಮಾಡಲು ವಿಶೇಷ ತನಿಖಾ ತಂಡವನ್ನು ಸ್ಥಾಪಿಸಲು ನಿರಾಕರಿಸಿತ್ತು. ಚುನಾವಣಾ ಬಾಂಡ್
ಚುನಾವಣಾ ಬಾಂಡ್‌ಗಳು ಎಂದರೆ, ನಾಗರಿಕರು ಅಥವಾ ಕಾರ್ಪೊರೇಟ್ ಗುಂಪುಗಳು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಿಂದ ಖರೀದಿಸಿ ರಾಜಕೀಯ ಪಕ್ಷಕ್ಕೆ ನೀಡಬಹುದಾದ ವಿತ್ತೀಯ ಬಾಂಡ್‌ಗಳಾಗಿದ್ದು, ನಂತರ ಅವುಗಳನ್ನು ಪುನಃ ಪಡೆದುಕೊಳ್ಳುತ್ತವೆ. ಈ ಯೋಜನೆಯನ್ನು ಜನವರಿ 2018 ರಲ್ಲಿ ಕೇಂದ್ರದಲ್ಲಿರುವ ಬಿಜೆಪಿ ಸರ್ಕಾರ ಪರಿಚಯಿಸಿತು.
ಖರೀದಿದಾರರು ಈ ಬಡ್ಡಿರಹಿತ ಬಾಂಡ್‌ಗಳ ಖರೀದಿಯನ್ನು ಘೋಷಿಸಬೇಕಾಗಿಲ್ಲ ಮತ್ತು ರಾಜಕೀಯ ಪಕ್ಷಗಳು ಹಣದ ಮೂಲವನ್ನು ತೋರಿಸಬೇಕಾಗಿಲ್ಲದ ಕಾರಣ ಸಂಪೂರ್ಣ ಪ್ರಕ್ರಿಯೆಯು ಅನಾಮಧೇಯವಾಗಿತ್ತು. ಆದಾಗ್ಯೂ, ಕೇಂದ್ರ ಸರ್ಕಾರವು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾವನ್ನು ನಿಯಂತ್ರಿಸುವುದರಿಂದ ದಾನಿಗಳ ಬಗ್ಗೆ ಮಾಹಿತಿಯನ್ನು ಪಡೆಯಲು ಅವಕಾಶವನ್ನು ಹೊಂದಿತ್ತು.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ 29 ಅಧಿಕೃತ ಶಾಖೆಗಳ ಮೂಲಕ ಚುನಾವಣಾ ಬಾಂಡ್‌ಗಳನ್ನು ವಿತರಿಸಲು ಮತ್ತು ನಗದೀಕರಿಸಲು ಅಧಿಕಾರವನ್ನು ಹೊಂದಿತ್ತು. ಅದಾಗ್ಯೂ, ಫೆಬ್ರವರಿಯಲ್ಲಿ ಸುಪ್ರೀಂ ಕೋರ್ಟ್ ಚುನಾವಣಾ ಬಾಂಡ್‌ಗಳ ಯೋಜನೆಯನ್ನು ಅಸಂವಿಧಾನಿಕ ಎಂದು ರದ್ದುಗೊಳಿಸಿತ್ತು.
ಈ ಯೋಜನೆಯು ಮಾಹಿತಿ ಹಕ್ಕು, ವಾಕ್ ಸ್ವಾತಂತ್ರ್ಯವನ್ನು ಉಲ್ಲಂಘಿಸುತ್ತದೆ ಮತ್ತು ದಾನಿಗಳು ಮತ್ತು ರಾಜಕೀಯ ಪಕ್ಷಗಳ ನಡುವೆ ಕ್ವಿಡ್ ಪ್ರೊ ಕ್ವೋ ವ್ಯವಸ್ಥೆಗಳಿಗೆ ಕಾರಣವಾಗಲಿದೆ ಎಂದು ಅಭಿಪ್ರಾಯಪಟ್ಟಿತ್ತು. ನಂತರ ಬಿಡುಗಡೆಯಾದ ಮಾಹಿತಿಯ ಪ್ರಕಾರ, ಚುನಾವಣಾ ಬಾಂಡ್‌ಗಳ ಮೂಲಕ ಆಡಳಿತಾರೂಢ ಬಿಜೆಪಿ ಬೇರೆ ಎಲ್ಲಾ ಪಕ್ಷಗಳಿಗಿಂತ ಹೆಚ್ಚು ಲಾಭವನ್ನು ಪಡೆದಿದೆ ಎಂದು ಬಹಿರಂಗವಾಗಿತ್ತು.
ಇದನ್ನೂಓದಿ: ಕೋಲ್ಕತ್ತಾ ಅತ್ಯಾಚಾರ ಪ್ರಕರಣ – ಅಪರಾಧಿಗೆ ಮರಣದಂಡನೆ ಕೋರಿ ಹೈಕೋರ್ಟ್ ಮಟ್ಟಿಲೇರಿದ ಸಿಬಿಐ
ಕೋಲ್ಕತ್ತಾ ಅತ್ಯಾಚಾರ ಪ್ರಕರಣ – ಅಪರಾಧಿಗೆ ಮರಣದಂಡನೆ ಕೋರಿ ಹೈಕೋರ್ಟ್ ಮಟ್ಟಿಲೇರಿದ ಸಿಬಿಐ
ಇದನ್ನೂಓದಿ: ಕೋಲ್ಕತ್ತಾ ಅತ್ಯಾಚಾರ ಪ್ರಕರಣ – ಅಪರಾಧಿಗೆ ಮರಣದಂಡನೆ ಕೋರಿ ಹೈಕೋರ್ಟ್ ಮಟ್ಟಿಲೇರಿದ ಸಿಬಿಐ
ಕೋಲ್ಕತ್ತಾ ಅತ್ಯಾಚಾರ ಪ್ರಕರಣ – ಅಪರಾಧಿಗೆ ಮರಣದಂಡನೆ ಕೋರಿ ಹೈಕೋರ್ಟ್ ಮಟ್ಟಿಲೇರಿದ ಸಿಬಿಐ
ಇದನ್ನೂಓದಿ: ಕೋಲ್ಕತ್ತಾ ಅತ್ಯಾಚಾರ ಪ್ರಕರಣ – ಅಪರಾಧಿಗೆ ಮರಣದಂಡನೆ ಕೋರಿ ಹೈಕೋರ್ಟ್ ಮಟ್ಟಿಲೇರಿದ ಸಿಬಿಐ
ಕೋಲ್ಕತ್ತಾ ಅತ್ಯಾಚಾರ ಪ್ರಕರಣ – ಅಪರಾಧಿಗೆ ಮರಣದಂಡನೆ ಕೋರಿ ಹೈಕೋರ್ಟ್ ಮಟ್ಟಿಲೇರಿದ ಸಿಬಿಐ


