ಚುನಾವಣಾ ಆಯೋಗವು ಮತದಾನ ಪ್ರಕ್ರಿಯೆಯ ವೀಡಿಯೊ ದೃಶ್ಯಾವಳಿಗಳು ಮತ್ತು ಛಾಯಾಚಿತ್ರಗಳ ಧಾರಣ ಅವಧಿಯನ್ನು 45 ದಿನಗಳಿಗೆ ಇಳಿಸಿದೆ ಎಂದು ದಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ. 45 ದಿನಗಳ ಅವಧಿಯ ನಂತರ ಯಾವುದೇ ಚುನಾವಣಾ ಅರ್ಜಿಯನ್ನು ಸಲ್ಲಿಸದಿದ್ದರೆ ಈ ಡೇಟಾವನ್ನು ಅಳಿಸಬಹುದು ಎಂದು ಚುನಾವಣಾ ಆಯೋಗ ಹೇಳಿದೆ ಎಂದು ವರದಿ ತಿಳಿಸಿದೆ. ಮತದಾನದ ವೀಡಿಯೊ
ವೀಡಿಯೊ ದೃಶ್ಯಾವಳಿಗಳು ಮತ್ತು ಛಾಯಾಚಿತ್ರಗಳ “ಇತ್ತೀಚಿನ ದುರುಪಯೋಗ”ವನ್ನು ಉಲ್ಲೇಖಿಸಿ, ಮೇ 30 ರಂದು ರಾಜ್ಯ ಮುಖ್ಯ ಚುನಾವಣಾ ಅಧಿಕಾರಿಗಳಿಗೆ ನೀಡಿದ ನೋಟಿಸ್‌ನಲ್ಲಿ, ಮತದಾನದ ವೀಡಿಯೊಗ್ರಫಿ ಮತ್ತು ಛಾಯಾಗ್ರಹಣವನ್ನು ಕಾನೂನಿನಿಂದ ಕಡ್ಡಾಯಗೊಳಿಸಲಾಗಿಲ್ಲ, ಆದರೆ ಅವುಗಳನ್ನು “ಆಂತರಿಕ ನಿರ್ವಹಣಾ ಸಾಧನ”ವಾಗಿ ಬಳಸಲಾಗಿದೆ ಎಂದು ಆಯೋಗ ಹೇಳಿದೆ ಎಂದು ಪತ್ರಿಕೆ ವರದಿ ಮಾಡಿದೆ.
ಚುನಾವಣೆಯಲ್ಲಿ ಅಭ್ಯರ್ಥಿಯ ಆಯ್ಕೆಯನ್ನು ಪ್ರಶ್ನಿಸಿ 45 ದಿನಗಳ ಅವಧಿಯಲ್ಲಿ ಯಾವುದೇ ಚುನಾವಣಾ ಅರ್ಜಿಯನ್ನು ಸಲ್ಲಿಸದಿದ್ದರೆ ಡೇಟಾವನ್ನು ಅಳಿಸಬಹುದು ಎಂದು ಆಯೋಗ ಹೇಳಿದೆ.
2024 ರಲ್ಲಿ, ಚುನಾವಣಾ ಪ್ರಕ್ರಿಯೆಯ ಹಂತಗಳ ವೀಡಿಯೊ ದೃಶ್ಯಾವಳಿಗಳನ್ನು ಸಂಗ್ರಹಿಸಲು ಚುನಾವಣಾ ಆಯೋಗವು ಮೂರು ತಿಂಗಳಿಂದ ಒಂದು ವರ್ಷದವರೆಗೆ ಸಮಯಾವಧಿಯನ್ನು ನಿಗದಿಪಡಿಸುವ ಸೂಚನೆಗಳನ್ನು ನೀಡಿತ್ತು ಎಂದು ಪತ್ರಿಕೆ ವರದಿ ಮಾಡಿದೆ.
ನಾಮನಿರ್ದೇಶನ ಪೂರ್ವ ಅವಧಿಯ ದೃಶ್ಯಾವಳಿಗಳನ್ನು ಮೂರು ತಿಂಗಳವರೆಗೆ ಉಳಿಸಿಕೊಳ್ಳಬೇಕು ಎಂದು ಮಾರ್ಗಸೂಚಿಗಳು ಆದೇಶಿಸಿವೆ. ನಾಮಪತ್ರ ಸಲ್ಲಿಕೆ ಹಂತ, ಪ್ರಚಾರದ ಅವಧಿ, ಮತದಾನ ಮತ್ತು ಎಣಿಕೆಯ ದಾಖಲೆಗಳನ್ನು ಆರು ತಿಂಗಳಿಂದ ಒಂದು ವರ್ಷದವರೆಗಿನ ಅವಧಿಯವರೆಗೆ ಸಂರಕ್ಷಿಸಬೇಕು ಎಂದು ಅದು ಹೇಳಿದೆ.
ಮೇ 30 ರ ತನ್ನ ಸೂಚನೆಯಲ್ಲಿ, “ಇತ್ತೀಚೆಗೆ ಸ್ಪರ್ಧಿಗಳಲ್ಲದವರು ಸಾಮಾಜಿಕ ಮಾಧ್ಯಮದಲ್ಲಿ ತಪ್ಪು ಮಾಹಿತಿ ಮತ್ತು ದುರುದ್ದೇಶಪೂರಿತ ನಿರೂಪಣೆಗಳನ್ನು ಹರಡಲು ಆಯ್ದ ಮತ್ತು ಸಂದರ್ಭಕ್ಕೆ ಹೊರತಾದ ವಿಷಯವನ್ನು ಬಳಸುವುದರಿಂದ ಯಾವುದೇ ಕಾನೂನು ಫರಿಹಾರ ಸಿಗುವುದಿಲ್ಲ. ಹಾಗಾಗಿ ಈ ಕಾನೂನನ್ನು ಪರಿಶೀಲನೆಗೆ ಒಳಪಡಿಸಿದ್ದೇವೆ” ಎಂದು ಚುನಾವಣಾ ಆಯೋಗ ಹೇಳಿದೆ.
“ಒಂದು ನಿರ್ದಿಷ್ಟ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಯಾವುದೇ ಚುನಾವಣಾ ಅರ್ಜಿ ಸಲ್ಲಿಕೆಯಾಗದಿದ್ದರೆ, ಹೇಳಲಾದ ಡೇಟಾವನ್ನು ನಾಶಪಡಿಸಬಹುದು” ಎಂದು ಅದು ಹೇಳಿದೆ. ಹೊಸ ಸೂಚನೆಗಳೊಂದಿಗೆ, ದೃಶ್ಯಗಳನ್ನು ಸಂಗ್ರಹಿಸುವ ಸಮಯವು ಚುನಾವಣಾ ಅರ್ಜಿಯನ್ನು ಸಲ್ಲಿಸಲು 45 ದಿನಗಳ ಅವಧಿಗೆ ಹೊಂದಿಕೆಯಾಗುತ್ತದೆ ಎಂದು ದಿ ಇಂಡಿಯನ್ ಎಕ್ಸ್‌ಪ್ರೆಸ್ ಉಲ್ಲೇಖಿಸಿದೆ.
ಕೇಂದ್ರ ಸರ್ಕಾರವು ಡಿಸೆಂಬರ್‌ನಲ್ಲಿ ಚುನಾವಣಾ ನಿಯಮಗಳ ನಿಯಮ 93(2)(ಎ) ಅನ್ನು ತಿದ್ದುಪಡಿ ಮಾಡಿತ್ತು. ಅದಕ್ಕೂ ಮುಂಚೆ, ಈ ನಿಯಮವು, “ಚುನಾವಣೆಗೆ ಸಂಬಂಧಿಸಿದ ಎಲ್ಲಾ ಇತರ ದಾಖಲೆಗಳು ಸಾರ್ವಜನಿಕ ಪರಿಶೀಲನೆಗೆ ಮುಕ್ತವಾಗಿರಬೇಕು” ಎಂದು ಇತ್ತು. ಆದರೆ, ಅದನ್ನು “ಚುನಾವಣೆಗೆ ಸಂಬಂಧಿಸಿದ ಈ ನಿಯಮಗಳಲ್ಲಿ ನಿರ್ದಿಷ್ಟಪಡಿಸಿದ ಎಲ್ಲಾ ಇತರ ದಾಖಲೆಗಳು ಸಾರ್ವಜನಿಕ ಪರಿಶೀಲನೆಗೆ ಮುಕ್ತವಾಗಿರುತ್ತವೆ.” ಎಂದು ತಿದ್ದುಪಡಿ ಮಾಡಿ ಬದಲಾಯಿಸಲಾಯಿತು.
ಈ ಬದಲಾವಣೆಯೊಂದಿಗೆ ಎಲ್ಲಾ ಮತದಾನ ಸಂಬಂಧಿತ ದಾಖಲೆಗಳನ್ನು ಸಾರ್ವಜನಿಕರು ಪರಿಶೀಲಿಸಲು ಸಾಧ್ಯವಿಲ್ಲ. ಚುನಾವಣಾ ನಡವಳಿಕೆ ನಿಯಮಗಳಲ್ಲಿ ನಿರ್ದಿಷ್ಟಪಡಿಸಿದ ದಾಖಲೆಗಳನ್ನು ಮಾತ್ರ ಪರಿಶೀಲಿಸಬಹುದಾಗಿದೆ. ಈ ತಿದ್ದುಪಡಿಯಿಂದಾಗಿ ನ್ಯಾಯಾಲಯಗಳು ಕೂಡಾ ಚುನಾವಣಾ ಸಂಬಂಧಿತ ಎಲ್ಲಾ ದಾಖಲೆಗಳನ್ನು ಸಾರ್ವಜನಿಕ ಪರಿಶೀಲನೆಗೆ ಒದಗಿಸುವಂತೆ ಚುನಾವಣಾ ಆಯೋಗಕ್ಕೆ ನಿರ್ದೇಶಿಸಲು ಸಾಧ್ಯವಾಗುವುದಿಲ್ಲ. ಅದಾಗ್ಯೂ, ಈ ನಿಯಮಗಳ ಬದಲಾವಣೆಯನ್ನು ಕಾಂಗ್ರೆಸ್ ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿದೆ. ಮತದಾನದ ವೀಡಿಯೊ
ಇಲ್ಲಿ ಕ್ಲಿಕ್ ಮಾಡಿ
ಇದನ್ನೂಓದಿ: ಉತ್ತರಪ್ರದೇಶ: ಶ್ರಾವಸ್ತಿಯಲ್ಲಿ 65 ವರ್ಷ ಹಳೆಯ ಮದರಸಾ ನೆಲಸಮ: ವ್ಯಾಪಕ ಆಕ್ರೋಶ-ವೀಡಿಯೋ
ಉತ್ತರಪ್ರದೇಶ: ಶ್ರಾವಸ್ತಿಯಲ್ಲಿ 65 ವರ್ಷ ಹಳೆಯ ಮದರಸಾ ನೆಲಸಮ: ವ್ಯಾಪಕ ಆಕ್ರೋಶ-ವೀಡಿಯೋ

