Homeಮುಖಪುಟಶವಾಗಾರದಲ್ಲಿ ಶವಗಳನ್ನು ನಿರ್ವಹಿಸುವ ಹುದ್ದೆಗೆ ಅರ್ಜಿ ಸಲ್ಲಿಸಿದ ಎಂಜಿನಿಯರ್‌, ಸ್ನಾತಕೋತ್ತರ ಪದವೀಧರರು!

ಶವಾಗಾರದಲ್ಲಿ ಶವಗಳನ್ನು ನಿರ್ವಹಿಸುವ ಹುದ್ದೆಗೆ ಅರ್ಜಿ ಸಲ್ಲಿಸಿದ ಎಂಜಿನಿಯರ್‌, ಸ್ನಾತಕೋತ್ತರ ಪದವೀಧರರು!

ಕನಿಷ್ಠ 8 ನೇ ತರಗತಿ ಪಾಸಾಗಿರುವುದು ಹುದ್ದೆಯ ಅರ್ಹತೆಯಾಗಿದ್ದು, ತಿಂಗಳಿಗೆ 15 ಸಾವಿರ ರೂ. ಸಂಭಾವನೆ ನೀಡಲಾಗುತ್ತದೆ

- Advertisement -
- Advertisement -

ಕೊಲ್ಕತ್ತಾದ ನೀಲ್ ರತನ್ ಸರ್ಕಾರಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ವಿಧಿವಿಜ್ಞಾನ ಔಷಧ ಮತ್ತು ವಿಷಶಾಸ್ತ್ರ ವಿಭಾಗದ ಆರು ಹುದ್ದೆಗಳಿಗೆ ಸುಮಾರು 8 ಸಾವಿರ ಜನರು ಅರ್ಜಿ ಸಲ್ಲಿಸಿದ್ದಾರೆ. ವಿಭಾಗದಲ್ಲಿ ಶವಗಳನ್ನು ನಿರ್ವಹಿಸಲು ಪ್ರಯೋಗಾಲಯ ಸಹಾಯಕರ ಹುದ್ದೆಗೆ ಅರ್ಜಿ ಕರೆಯಲಾಗಿತ್ತು. ಶವಗಾರದಲ್ಲಿ ಈ ಹುದ್ದೆಯನ್ನು ಸಾಮಾನ್ಯವಾಗಿ ‘ಡೊಮ್’ ಎಂದು ಕರೆಯಲಾಗುತ್ತದೆ.

ಅರ್ಜಿ ಸಲ್ಲಿಸಿದ 8,000 ಜನರಲ್ಲಿ 100 ಮಂದಿ ಎಂಜಿನಿಯರ್‌ಗಳು, 500 ಸ್ನಾತಕೋತ್ತರ ಪದವೀಧರರು ಮತ್ತು 2,200 ಪದವೀಧರರು ಸೇರಿದ್ದಾರೆ ಎಂದು ಅಧಿಕಾರಿ ಶನಿವಾರ ಹೇಳಿದ್ದಾರೆ.

ಇದನ್ನೂ ಓದಿ: ಕರ್ನಾಟಕವೇ ಮೊದಲ ರಾಜ್ಯ: ಸರ್ಕಾರಿ ಉದ್ಯೋಗಗಳಲ್ಲಿ ಟ್ರಾನ್ಸ್‌ಜೆಂಡರ್‌ ಸಮುದಾಯಕ್ಕೆ 1% ಮೀಸಲಾತಿ ಘೋಷಣೆ

ಒಟ್ಟು ಅರ್ಜಿಗಳಲ್ಲಿ 84 ಮಹಿಳೆಯರು ಸೇರಿದಂತೆ 784 ಜನರನ್ನು ಆಗಸ್ಟ್ 1 ರಂದು ಲಿಖಿತ ಪರೀಕ್ಷೆಗೆ ಕರೆಯಲಾಗಿದೆ ಎಂದು ಅವರು ಹೇಳಿದ್ದಾರೆ.

ಕಳೆದ ಡಿಸೆಂಬರ್‌ನಲ್ಲಿ ಈ ಹುದ್ದೆಗೆ ಅಧಿಸೂಚನೆ ಹೊರಡಿಸಲಾಗಿದ್ದು, ಕನಿಷ್ಠ 8 ನೇ ತರಗತಿ ಪಾಸು 18 ರಿಂದ 40 ವಯಸ್ಸಿನವರಿಗೆ ಅರ್ಜಿಗಳನ್ನು ಸಲ್ಲಿಸುವಂತೆ ಇದು ಕರೆ ನೀಡಿತ್ತು. ಹುದ್ದೆಗೆ ತಿಂಗಳಿಗೆ 15 ಸಾವಿರ ರೂ. ಸಂಭಾವನೆ ನೀಡಲಾಗುತ್ತದೆ.

“ಹಲವಾರು ಅರ್ಜಿದಾರರು ಕೆಲಸಕ್ಕೆ ಬೇಕಾಗುವ ಅರ್ಹತೆಗಿಂತ ಹೆಚ್ಚು ಅರ್ಹತೆ ಹೊಂದಿದ್ದಾರೆ. ಎಂಜಿನಿಯರ್‌ಗಳು, ಸ್ನಾತಕೋತ್ತರ ಪದವೀಧರರು ಮತ್ತು ಪದವೀಧರರು ಈ ಹುದ್ದೆಗೆ ಅರ್ಜಿ ಸಲ್ಲಿಸಿರುವುದು ಸಾಕಷ್ಟು ಆಘಾತಕಾರಿಯಾಗಿದೆ. ಇದು ಮೊದಲ ಬಾರಿಗೆ ಸಂಭವಿಸಿದೆ” ಎಂದು ಅಧಿಕಾರಿ ಹೇಳಿದ್ದಾರೆ.

ಇದನ್ನೂ ಓದಿ: ಕೊರೊನಾ ಪರಿಹಾರ ನಿಧಿಗೆ ಚಿನ್ನದ ಸರ ನೀಡಿದ್ದ ಯುವತಿಗೆ ಉದ್ಯೋಗ ನೀಡಿದ ತಮಿಳುನಾಡು ಸಿಎಂ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!

0
ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರ ವಿರುದ್ಧ ಮಾಡಿರುವ ದ್ವೇಷ ಭಾಷಣದ ಬಗ್ಗೆ ಮಾಧ್ಯಮವೊಂದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ವಿಚಾರ ಈಗ...