ಮಹಾರಾಷ್ಟ್ರ ಭೂಕುಸಿತ: ಸಾವಿನ ಸಂಖ್ಯೆ 112 ಏರಿಕೆ, 47 ಜನರು ಇನ್ನೂ ಕಾಣೆ | Naanu gauri

ಮಹಾರಾಷ್ಟ್ರ ದ ಕರಾವಳಿ ಪ್ರದೇಶಗಳಲ್ಲಿ ಉಂಟಾದ ಭೂಕುಸಿತದ ಪರಿಣಾಮ ಮತ್ತೆ ಎಪ್ಪತ್ತಮೂರು ಶವಗಳನ್ನು ಪತ್ತೆಹಚ್ಚಲಾಗಿದೆ, ಇನ್ನೂ 47 ಜನರು ಕಾಣೆಯಾಗಿದ್ದಾರೆ ಎಂದು ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆ ಪಡೆ (ಎನ್‌ಡಿಆರ್‌ಎಫ್) ಭಾನುವಾರ ಸ್ಪಷ್ಟಪಡಿಸಿದೆ.

ಫೆಡರಲ್ ಪಡೆಗಳ ಮಹಾನಿರ್ದೇಶಕ (ಡಿಜಿ) ಎಸ್.ಎನ್. ಪ್ರಧಾನ್ ಅವರು ಭಾನುವಾರ ಮಧ್ಯಾಹ್ನ ರಾಯಗಡ, ರತ್ನಗಿರಿ ಮತ್ತು ಸತಾರಾ ಜಿಲ್ಲೆಗಳಲ್ಲಿ ನಡೆಸುತ್ತಿರುವ ಕಾರ್ಯಾಚರಣೆಗಳ ಬಗ್ಗೆ ಟ್ವೀಟ್ ಮಾಡಿದ್ದಾರೆ. ಅವರ ಮಾಹಿತಿಯ ಪ್ರಕಾರ, ರಾಯಗಡ್‌‌ ಜಿಲ್ಲೆಯ ಮಹಾಡ್, ತಹಸಿಲ್, ತಾಲಿಯೆ ಪ್ರದೇಶಗಳಲ್ಲಿ ಅತೀ ಹೆಚ್ಚು ಜೀವ ಹಾನಿಯಾಗಿದೆ.

ಇದನ್ನೂ ಓದಿ: ಮಹಾರಾಷ್ಟ್ರದಲ್ಲಿ ಭಾರಿ ಮಳೆ: ಭೂಕುಸಿತದಲ್ಲಿ 36 ಜನರು ಸಾವು

ಮಹಾಡ್, ತಹಸಿಲ್, ತಾಲಿಯೆ ಪ್ರದೇಶಗಳಲ್ಲಿ ನಡೆದ ಕಾರ್ಯಾಚರಣೆಯಲ್ಲಿ ನಲವತ್ತನಾಲ್ಕು ಶವಗಳನ್ನು ಪತ್ತೆ ಹಚ್ಚಲಾಗಿದ್ದು, ಇನ್ನೂ 26 ಜನರು ಕಾಣೆಯಾಗಿದ್ದಾರೆ ಎಂದು ಹೇಳಿದ್ದಾರೆ.

ಭಾರಿ ಮಳೆಯಿಂದಾಗಿ ಈ ಪ್ರದೇಶಗಳಲ್ಲಿ ಭೂಕುಸಿತ ಉಂಟಾಗಿದ್ದು, ರಕ್ಷಣಾ ಪಡೆಗಳ 34 ತಂಡಗಳನ್ನು ಪರಿಹಾರ ಕಾರ್ಯ ಮತ್ತು ರಕ್ಷಣಾ ಕಾರ್ಯಾಚರಣೆಗಾಗಿ ನಿಯೋಜಿಸಲಾಗಿದೆ. ಈ ತಂಡಗಳು ಪ್ರಸ್ತುತ ರಾಯಗಡ್‌ನ ಭೂಕುಸಿತ ಪೀಡಿತ ತಾಲಿಯೆ, ರತ್ನಗಿರಿಯ ಪೊರೇಸ್ ಮತ್ತು ಸತಾರಾ ಜಿಲ್ಲೆಯ ಮಿರ್‌‌ಗಾಂವ್‌‌, ಅಂಬೇಘರ್ ಮತ್ತು ಧೋಕವಾಲೆಗಳಲ್ಲಿ ಕಾರ್ಯನಿರ್ವಹಿಸುತ್ತಿವೆ.

ಕರಾವಳಿ ಜಿಲ್ಲೆಯಾದ ರಾಯಗಡ್ ಜಿಲ್ಲೆಯ 52 ಸೇರಿದಂತೆ ಪುಣೆ ಮತ್ತು ಕೊಂಕಣ ಪ್ರದೇಶಗಳಲ್ಲಿ ಮಳೆ ಮತ್ತು ಭೂಕುಸಿತದಿಂದಾಗಿ ಉಂಟಾದ ಸಾವಿನ ಸಂಖ್ಯೆ 112 ಕ್ಕೆ ಏರಿದೆ. ಸಾಂಗ್ಲಿಯಲ್ಲಿ 78,111, ಕೊಲ್ಹಾಪುರದಲ್ಲಿ 40,882 ಸೇರಿದಂತೆ, ಇದುವರೆಗೂ 1,35,313 ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ.

ಇದನ್ನೂ ಓದಿ: ಯಡಿಯೂರಪ್ಪರನ್ನು ಹಾಡಿ ಹೊಗಳಿದ ಬಿಜೆಪಿ ರಾಷ್ಟ್ರಾಧ್ಯಕ್ಷ!

LEAVE A REPLY

Please enter your comment!
Please enter your name here