ಯೂರೋಪಿಯನ್ ಒಕ್ಕೂಟ ದೇಶಗಳಿಂದ ಜಮ್ಮುಕಾಶ್ಮೀರಕ್ಕೆ ಭೇಟಿ ನೀಡುತ್ತಿರುವವರೆಲ್ಲರೂ ತೀವ್ರವಾದಿ ಬಲಪಂಥೀಯರಾಗಿದ್ದು ಬಿಜೆಪಿಗೆ ಬೆಂಬಲ ನೀಡುವವರಾಗಿದ್ದಾರೆ ಎಂದು ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ ಟೀಕಾ ಪ್ರಹಾರ ನಡೆಸಿದ್ದಾರೆ.
ಟ್ವೀಟ್ ಮಾಡಿರುವ ಅವರು ಇದೊಂದು ಅನಧಿಕೃತ ಗುಂಪು. ಫ್ಯಾಸಿಸ್ಟ್ ಧೋರಣೆಯ ಪಕ್ಷಗಳ ಮುಖಂಡರನ್ನು ಕಾಶ್ಮೀರಕ್ಕೆ ಆಹ್ವಾನಿಸಿರುವುದು ನಾಚಿಕೆಗೇಡಿನ ಸಂಗತಿ ಎಂದಿದ್ದಾರೆ.
This unofficial group is overwhelmingly from ultra-right wing pro-fascist parties having relations with BJP. This explains why our MPs aren’t allowed but Modi welcomes them. 3 ex-CMs and 1000s others are jailed & this group of MEPs is preferred over Indian political parties? https://t.co/fGYdCwj87k
— Sitaram Yechury (@SitaramYechury) October 28, 2019
ಜಮ್ಮು ಮತ್ತು ಕಾಶ್ಮೀರದ ಮೂವರು ಮಾಜಿ ಮುಖ್ಯಮಂತ್ರಿಗಳು ಮತ್ತು ಸಾವಿರಕ್ಕೂ ಹೆಚ್ಚು ಮುಖಂಡರನ್ನು ಜೈಲಿನಲ್ಲಿಟ್ಟು ವಿದೇಶಿಯರಿಗೆ ಕಾಶ್ಮೀರ ಪ್ರವೇಶಕ್ಕೆ ಅನುಮತಿ ನೀಡುವ ಅಗತ್ಯವೇನಿತ್ತು ಎಂದು ಪ್ರಶ್ನಿಸಿದ್ದಾರೆ.
ಭಾರತದ ಮುಖ್ಯವಾಹಿನಿಯ ರಾಜಕೀಯ ಪಕ್ಷಗಳ ನಾಯಕರನ್ನು ನಿರ್ಲಕ್ಷ್ಯ ಮಾಡಲಾಗಿದೆ. ವಿದೇಶಿಯರಿಗೆ ಕೆಂಪು ಹಾಸಿನ ಮೂಲಕ ಸ್ವಾಗತಿಸಲಾಗಿದೆ. ಅವರೆಲ್ಲರೂ ಕಟ್ಟರ್ ಬಲಪಂಥೀಯರು ಎಂದು ಹೇಳಿದ್ದಾರೆ.
ನಿಹ ಮಸೀಹ್ ಟ್ವೀಟ್ ಮಾಡಿ ಫ್ರೆಂಚ್ 6 ಸಂಸದರು ಲೀ ಪೆನ್ ರಾಷ್ಟ್ರೀಯ ರಂಗಕ್ಕೆ ಸೇರಿದವರು. ಅವರೆಲ್ಲರು ಪೋಲೆಂಡ್ ಭಾಷೆ ಮಾತನಾಡುವವರು. ನಾಲ್ವರು ಬ್ರಿಟನ್ ಬ್ರೆಕ್ಸಿಟ್ ಪಾರ್ಟಿ ಸಂಸದರು. ಇವರಿಂದ ಏನನ್ನು ನಿರೀಕ್ಷಿಸಲು ಸಾಧ್ಯ ಎಂದು ಪ್ರಶ್ನಿಸಿದ್ದಾರೆ.
Another point to note abt EU delegation to Kashmir: Barring three, all MPs belong to the far-right parties of their countries. All 6 French MPs are from Le Pen’s National Front, all 6 Polish MPs are from ruling far-right party, 4 British MPs are from Brexit Party. https://t.co/byeJ18RgzD
— Niha Masih (@NihaMasih) October 28, 2019
ಇನ್ನೊಂದೆಡೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೂಡ ಯೂರೋಪಿಯನ್ನರ ಕಾಶ್ಮಿರ ಭೇಟಿಯನ್ನು ತೀವ್ರವಾಗಿ ಖಂಡಿಸಿದ್ದಾರೆ. ಭಾರತದ ಸಂಸದರಿಗೆ ಕಾಶ್ಮೀರಕ್ಕೆ ಪ್ರವೇಶವಿಲ್ಲದಿದ್ದಾಗ ಯೂರೋಪಿಯನ್ ಸಂಸದರಿಗೆ ಮಾತ್ರ ಪ್ರವಾಸಕ್ಕೆ ಅವಕಾಶವಿದೆ. ಇದರಲ್ಲೇನೋ ದೊಡ್ಡ ಹುನ್ನಾರವಿದೆ ಎಂದು ಆರೋಪಿಸಿದ್ದಾರೆ.
MPs from Europe are welcome to go on a guided tour of Jammu & #Kashmir while Indian MPs are banned & denied entry.
There is something very wrong with that.https://t.co/rz0jffrMhJ
— Rahul Gandhi (@RahulGandhi) October 28, 2019



Euro wash.