Homeಚಳವಳಿಅತ್ಯಾಚಾರ ತಡೆಗೆ ದೆಹಲಿಯಲ್ಲಿ ಹುಡುಗರಿಗೆ ಅರಿವು ಮತ್ತು ಪ್ರತಿಜ್ಞೆ: ಕೇಜ್ರಿವಾಲ್‌

ಅತ್ಯಾಚಾರ ತಡೆಗೆ ದೆಹಲಿಯಲ್ಲಿ ಹುಡುಗರಿಗೆ ಅರಿವು ಮತ್ತು ಪ್ರತಿಜ್ಞೆ: ಕೇಜ್ರಿವಾಲ್‌

- Advertisement -
- Advertisement -

ನಿರ್ಭಯ ಅತ್ಯಾಚಾರದ ಆರೋಪಿಗಳಿಗೆ ಗಲ್ಲು ಶಿಕ್ಷೆ ಸನಿಹವಾಗಿದೆ. ಹೈದರಾಬಾದ್‌ ಪಶುವೈದ್ಯೆಯ ಅತ್ಯಾಚಾರ, ಕೊಲೆ ಆರೋಪಿಗಳನ್ನು ಗುಂಡಿಟ್ಟು ಕೊಲ್ಲಲಾಗಿದೆ. ಆಂಧ್ರದಲ್ಲಿ ದಿಶಾ ಮಸೂದೆ ಜಾರಿಗೊಳಿಸಲಾಗಿದೆ. ಇದೇ ನಿಟ್ಟಿನಲ್ಲಿ ದೆಹಲಿಯಲ್ಲಿಯೂ ಸಹ ಅತ್ಯಾಚಾರ ತಡೆಗೆ ಬೃಹತ್‌ ಅಭಿಯಾನಕ್ಕೆ ಅರವಿಂದ್‌ ಕೇಜ್ರಿವಾಲ್‌ ನೇತೃತ್ವದ ಆಮ್‌ ಆದ್ಮಿ ಸರ್ಕಾರ ನಿರ್ಧರಿಸಿದೆ.

ಮಹಿಳೆಯರ ಮೇಲಿನ ದೌರ್ಜನ್ಯಗಳ ಹೆಚ್ಚಳವು ಮಾನಸಿಕ ಅಧಃಪತನದ ಸಂಕೇತವಾಗಿದೆ. ಆದ್ದರಿಂದ, ಮಹಿಳೆಯರುಮ ಹೆಣ್ಣು ಮಕ್ಕಳೊಂದಿಗೆ ಕೆಟ್ಟದಾಗಿ ವರ್ತಿಸಬಾರದು ಎಂಬ ಅರಿವನ್ನು ಪ್ರತಿ ಶಾಲೆ ಮತ್ತು ಕಾಲೇಜುಗಳಲ್ಲಿನ ಹುಡಗರಿಗೆ ಮೂಡಿಸಲು ಮುಂದಾಗಿದ್ದೇವೆ. ಆ ವಿಚಾರದ ಕುರಿತು ಹುಡುಗರಿಗೆ ಮಹಿಳೆಯರೊಂದಿಗೆ ಅಸಭ್ಯವಾಗಿ ವರ್ತಿಸುವುದಿಲ್ಲ ಎಂಬ ಪ್ರತಿಜ್ಞೆ ಸಹ ಬೋದಿಸಲಿದ್ದೇವೆ ಎಂದು ಸಿಎಂ ಅರವಿಂದ್‌ ಕೇಜ್ರಿವಾಲ್‌ ತಿಳಿಸಿದ್ದಾರೆ.

ಇದನ್ನು ಓದಿ: 14ದಿನಗಳಲ್ಲಿ ವಿಚಾರಣೆ, 21 ದಿನಗಳಲ್ಲಿ ಶಿಕ್ಷೆ ಪ್ರಕಟ: ಅತ್ಯಾಚಾರದ ವಿರುದ್ಧ ದಿಶಾ ಮಸೂದೆಗೆ ಆಂಧ್ರ ಅಸ್ತು

ಈ ಅಭಿಯಾನವು ದೆಹಲಿಯಾದ್ಯಂತ ನಿರಂತರವಾಗಿ ನಡೆಯಲಿದೆ. ಇದು ಹುಡುಗರಿಗೆ ತಮ್ಮ ಜವಾಬ್ದಾರಿಗಳನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ ಎಂದು ಅವರು ತಿಳಿಸಿದ್ದಾರೆ. ಒಂದು ರೀತಿಯಲ್ಲಿ ಚಿಕ್ಕ ಮಕ್ಕಳಿನಲ್ಲಿಯೇ ಯಾವುದು ಸರಿ, ಯಾವುದು ತಪ್ಪು ಎಂದು ಅರಿವು ಮೂಡಿಸಲು ಈ ವಿಧಾನವೂ ಸೂಕ್ತವಾಗಿದೆ. ಇದು ಮಕ್ಕಳನ್ನು ಹೆಣ್ಣು ಮಕ್ಕಳ ಕುರಿತು ಸೂಕ್ಷ್ಮತೆಯನ್ನು ಬೆಳೆಸುತ್ತದೆ.

ಎಲ್ಲಾ ಹುಡುಗಿಯರನ್ನು ತಮ್ಮ ಸಹೋದರರೊಂದಿಗೆ ಮಾತನಾಡಲು ಕೇಳಲಾಗುತ್ತದೆ. ಮತ್ತು ಅವರು ಯಾವುದೇ ಮಹಿಳೆಯೊಂದಿಗೆ ಕೆಟ್ಟದಾಗಿ ವರ್ತಿಸುವುದಿಲ್ಲ ಎಂದು ತಿಳಿಸಿ, ಮತ್ತು ಅವರ ಸಹೋದರರು ಪ್ರಮಾಣ ವಚನ ಸ್ವೀಕರಿಸುವಂತೆ ಮಾಡುತ್ತಾರೆ. ಮತ್ತು ಅವನು ಏನಾದರೂ ತಪ್ಪು ಮಾಡಿದರೆ, ‘ನಾನು ನಿಮ್ಮೊಂದಿಗೆ ಎಲ್ಲ ಸಂಬಂಧಗಳನ್ನು ಮುರಿಯುತ್ತಿದ್ದೇನೆ’ ಎಂದು ಹುಡುಗಿ ತನ್ನ ಸಹೋದರನಿಗೆ ಹೇಳಬೇಕು ಎಂದು ಅರವಿಂದ್‌ ಕೇಜ್ರಿವಾಲ್‌ ತಿಳಿಸಿದ್ದಾರೆ.

ಇದನ್ನೂ ಓದಿ: 14ದಿನಗಳಲ್ಲಿ ವಿಚಾರಣೆ, 21 ದಿನಗಳಲ್ಲಿ ಶಿಕ್ಷೆ ಪ್ರಕಟ: ಅತ್ಯಾಚಾರದ ವಿರುದ್ಧ ದಿಶಾ ಮಸೂದೆಗೆ ಆಂಧ್ರ ಅಸ್ತು

ಈ ಅಭಿಯಾನವನ್ನು ಬಹಳಷ್ಟು ಮಹಿಳಾ ಸಂಘಟನೆಗಳು ಸ್ವಾಗತಿಸುವ ನಿರೀಕ್ಷೆಯಿದೆ. ಏಕೆಂದರೆ ಬಹಳಷ್ಟು ಅತ್ಯಾಚಾರ ಮತ್ತು ಲೈಂಗಿಕ ಹಿಂಸೆಗಳಿಗೆ ಪರಿಹಾರಗಲು ತಳಮಟ್ಟದಲ್ಲಿರುತ್ತವೆ. ಸಾಕಷ್ಟು ಬಾರಿ ಅತ್ಯಾಚಾರಕ್ಕೊಳಗಾಗಿ ಹೆಣ್ಣು ಮಗಳೇ ಅದಕ್ಕೆ ಕಾರಣ, ಅವಳ ಬಟ್ಟೆ ಕಾರಣ, ಅವಳ ನಡತೆ ಕಾರಣ ಎಂದು ದೂರುವ ಕೆಟ್ಟ ಪರಿಪಾಠ ರೂಡಿಯಲ್ಲಿದೆ. ಅದಕ್ಕೆ ಬದಲಾಗಿ ಹೆಣ್ಣು ಮಕ್ಕಳನ್ನು ಗಂಡು ಮಕ್ಕಳು ನೋಡುವ ದೃಷ್ಟಿಕೋನವನ್ನು ಶಿಕ್ಷಣದ ಮೂಲಕ ಬದಲಿಸಬೇಕಾಗಿದೆ.

ಹಾಗಾಗಿ ಗಂಡು ಮಕ್ಕಳು ಉತ್ತಮ ಶಿಕ್ಷಣ ಪಡೆದು ಹೆಣ್ಣು ಮಕ್ಕಳನ್ನು ಸಹ ಸಮಾನಳೆಂದು ನೋಡಿದ್ದಲ್ಲಿ, ಅತ್ಯಾಚಾರ ಅತ್ಯಂತ ಘೋರ ಪಾಪ ಎಂದು ಅರಿತುಕೊಂಡಲ್ಲಿ ಅವುಗಳ ಪ್ರಮಾಣ ಕಡಿಮೆಯಾಗಬಹುದೆಂದು ನಿರೀಕ್ಷಿಸಲಾಗಿದೆ. ಈ ನಿಟ್ಟಿನಲ್ಲಿ ಕ್ರಮಕ್ಕೆ ಮುಂದಾಗಿರುವ ದೆಹಲಿ ಸರ್ಕಾರಕ್ಕೆ ಅಭಿನಂದನೆಗಳನ್ನು ತಿಳಿಸುತ್ತಲೇ ಉಳಿದ ರಾಜ್ಯಗಳು ಸಹ ಇದನ್ನು ಅನುಸರಿಸಿದರೆ ಒಳ್ಳೆಯದು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಅಮೆರಿಕದ ‘ಪಿತ್ರಾರ್ಜಿತ ಆಸ್ತಿ ತೆರಿಗೆ’ ಬಗ್ಗೆ ಸ್ಯಾಮ್ ಪಿತ್ರೋಡಾ ಕೊಟ್ಟಿದ್ದ ವಿವರಣೆಯನ್ನು ‘ರಾಜಕೀಯ ಅಸ್ತ್ರ’...

0
ಲೋಕಸಭೆ ಚುನಾವಣೆ ಹಿನ್ನೆಲೆ ಪ್ರಧಾನಿ ಮೋದಿ ಹಾದಿಯಾಗಿ ಬಿಜೆಪಿ ನಾಯಕರು ವಿವಾದಾತ್ಮಕ ಹೇಳಿಕೆ ಮೂಲಕ ಕಾಂಗ್ರೆಸ್‌ ಪಕ್ಷವನ್ನು ಮತ್ತು ಕಾಂಗ್ರೆಸ್‌ನ ಪ್ರಣಾಳಿಕೆ ವಿರುದ್ಧ ವಾಗ್ಧಾಳಿ ನಡೆಸುತ್ತಾ ಬಂದಿದ್ದಾರೆ. ಈ ಮಧ್ಯೆ ಭಾರತೀಯ ಸಾಗರೋತ್ತರ...