Homeಚಳವಳಿ14ದಿನಗಳಲ್ಲಿ ವಿಚಾರಣೆ, 21 ದಿನಗಳಲ್ಲಿ ಶಿಕ್ಷೆ ಪ್ರಕಟ: ಅತ್ಯಾಚಾರದ ವಿರುದ್ಧ ದಿಶಾ ಮಸೂದೆಗೆ ಆಂಧ್ರ ಅಸ್ತು

14ದಿನಗಳಲ್ಲಿ ವಿಚಾರಣೆ, 21 ದಿನಗಳಲ್ಲಿ ಶಿಕ್ಷೆ ಪ್ರಕಟ: ಅತ್ಯಾಚಾರದ ವಿರುದ್ಧ ದಿಶಾ ಮಸೂದೆಗೆ ಆಂಧ್ರ ಅಸ್ತು

- Advertisement -
- Advertisement -

ದೇಶವನ್ನೇ ಬೆಚ್ಚಿ ಬೀಳಿಸಿದ ಹೈದರಾಬಾದ್‌ ಪಶುವೈದ್ಯೆಯ ಅತ್ಯಾಚಾರ ಮತ್ತು ಕೊಲೆ ಪ್ರಕರಣ, ಒಂದು ವಾರದಲ್ಲಿಯೇ ಆರೋಪಿಗಳ ಎನ್‌ಕೌಂಟರ್‌ ಪ್ರಕರಣಗಳ ಹಿನ್ನೆಲೆಯಲ್ಲಿ ಮಹಿಳಾ ಸುರಕ್ಷತೆಯ ಚರ್ಚೆಗಳು ದೇಶಾದ್ಯಂತ ನಡೆಯುತ್ತಿವೆ.

ಇದೇ ಸಂದರ್ಭದಲ್ಲಿ ಆಂಧ್ರಪ್ರದೇಶ ವಿಧಾನಸಭೆಯು ಅತ್ಯಾಚಾರಗಳನ್ನು ತಡೆಗಟ್ಟುವಿಕೆಗಾಗಿ ರಚಿಸಿದ ಆಂಧ್ರ ಪ್ರದೇಶ ಅಪರಾಧ ಕಾನೂನು (ತಿದ್ದುಪಡಿ)ಯ, (ದಿಶಾ ಮಸೂದೆ) ಯನ್ನು ಪಾಸು ಮಾಡಿದೆ. ಅದರಂತೆ ಅತ್ಯಾಚಾರ, ಆಸಿಡ್‌ ದಾಳಿ, ಅತ್ಯಾಚಾರ ಮತ್ತು ಕೊಲೆಯ ಸಂದರ್ಭಗಳಲ್ಲಿ 14ದಿನಗಳಲ್ಲಿ ವಿಚಾರಣೆ ನಡೆಸಬೇಕು ಮತ್ತು 21 ದಿನಗಳಲ್ಲಿ ತಪ್ಪಿತಸ್ಥರಿಗೆ ಗಲ್ಲುಶಿಕ್ಷೆ ಪ್ರಕಟವಾಗಬೇಕು ಎಂಬ ನಿಯಮಗಳು ಸೇರಿವೆ.

ಈ ರೀತಿಯ ಪ್ರಕರಣಗಳನ್ನು ತ್ವರಿತ ವಿಚಾರಣೆ ನಡೆಸಲು ಪ್ರತ್ಯೇಕ ಕೋರ್ಟ್‌ಗಳನ್ನು ರಚಿಸಬೇಕು ಎಂಬಂತಹ ನಿಯಮಗಳುಳ್ಳ ಮಸೂದೆಗೆ ನಿನ್ನೆಯೇ ಜಗನ್‌ ಮೋಹನ್‌ ರೆಡ್ಡಿ ನೇತೃತ್ವದ ಸಂಪುಟ ಸಭೆ ಒಪ್ಪಿಗೆ ನೀಡಿತ್ತು. ಇಂದು ಆಂಧ್ರ ವಿಧಾನಸಭೆಯು ಆ ಮಸೂದೆಗೆ ಒಪ್ಪಿಗೆ ನೀಡಿ ಅಂಗೀಕರಿಸಿದೆ.

ದಿಶಾ ಮಸೂದೆಗೆ ಚಿತ್ರನಟ ಚಿರಂಜೀವಿ ಸೇರಿದಂತೆ ಹಲವು ಜನರು ಬೆಂಬಲ ನೀಡಿದ್ದಾರೆ. ಇದರಿಂದ ಅತ್ಯಾಚಾರಗಳನ್ನು ತಡೆಗಟ್ಟಬಹುದು ಎಂಬ ಅಭಿಪ್ರಾಯಪಟ್ಟಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಶಿವಸೇನೆಯನ್ನು ವಿಭಜಿಸಿ, ಇಲ್ಲವೇ ಬಂಧನ ಎದುರಿಸಿ ಎಂದು ಏಕನಾಥ್ ಶಿಂದೆಗೆ ಕೇಂದ್ರ ಸರ್ಕಾರ ಬೆದರಿಕೆ...

0
ಉದ್ಧವ್ ಠಾಕ್ರೆ ನೇತೃತ್ವದ ಮಹಾ ವಿಕಾಸ್ ಅಘಾಡಿ ಸರ್ಕಾರದಲ್ಲಿ ಏಕನಾಥ್ ಶಿಂದೆ ಸಚಿವರಾಗಿದ್ದಾಗ, ಅವರನ್ನು ಬಂಧಿಸಲು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಯೋಜಿಸಿತ್ತು ಎಂದು ಮಂಗಳವಾರ ಶಿವಸೇನೆ (ಯುಬಿಟಿ) ನಾಯಕ...