Homeನಿಜವೋ ಸುಳ್ಳೋವೋಟು ವ್ಯತ್ಯಾಸಕ್ಕೂ ನಮಗೂ ಸಂಬಂಧವಿಲ್ಲ : ಚುನಾವಣಾ ಆಯೋಗ

ವೋಟು ವ್ಯತ್ಯಾಸಕ್ಕೂ ನಮಗೂ ಸಂಬಂಧವಿಲ್ಲ : ಚುನಾವಣಾ ಆಯೋಗ

ಉತ್ತರಪ್ರದೇಶದ ಮಥುರಾ  ಕ್ಷೇತ್ರದಲ್ಲಿ ಆಯೋಗವು ಹೇಳುವ ಪ್ರಕಾರ, 10,86,206 ಮತಗಳು ಇವಿಯಂನಲ್ಲಿ ವೋಟ್ ಮಾಡಲ್ಪಟ್ಟಿದ್ದರೆ, ಏಣಿಕೆಯಾಗಿದ್ದು 10,98,112 ಮತಗಳು! ಈ ಹೆಚ್ಚುವರಿ 9,906 ಮತಗಳು ಎಲ್ಲಿಂದ ಬಂದವು? ಆಯೋಗದ ಬಳಿ ಉತ್ತರವಿಲ್ಲ!

- Advertisement -
- Advertisement -

ದಿ ಕ್ವಿಂಟ್ ಪೋರ್ಟಲ್‍ನವರು ಮೊದಲ ನಾಲ್ಕು ಹಂತಗಳಲ್ಲಿ ನಡೆದ ಮತದಾನ ಪ್ರಮಾಣ ಮತ್ತು ಏಣಿಕೆಯಾದ ಮತಗಳ ಸಂಖ್ಯೆಯನ್ನು ಕೂಲಂಕುಶವಾಗಿ ಪರಿಗಣಿಸಿದಾಗ ದಿಗ್ಭ್ರಮೆಗೊಳಿಸುವ ವಿಚಾರ ಹೊರಬಂದಿದೆ. 373 ಕ್ಷೇತ್ರಗಳಲ್ಲಿ ವೋಟ್ ಆದ ಮತಗಳಿಗೂ, ಎಣಿಕೆ ಆದ ಮತಗಳಿಗೂ ಸಾಕಷ್ಟು ವ್ಯತ್ಯಾಸ ಕಂಡುಬಂದಿದೆ. ಆದರೆ ಇಲ್ಲಿವರೆಗೆ ಈ ಕುರಿತು ಸ್ಪಷ್ಟನೆ ನೀಡದ ಚುನಾವಣಾ ಆಯೋಗ, ತನ್ನ ವೆಬ್‍ಸೈಟಿನಿಂದ ಮಾಹಿತಿ-ಅಂಕಿಅಂಶಗಳನ್ನೇ ತೆಗೆದು ಹಾಕುವ ದುಸ್ಸಾಹಸ ಮಾಡುವ ಮೂಲಕ ಮತ್ತಷ್ಟು ಸಂಶಯಗಳಿಗೆ ಕಾರಣವಾಗಿದೆ…..

ಚುನಾವಣಾ ಅಯೋಗವೇ ಅಧಿಕೃತವಾಗಿ ಸಾರ್ವಜನಿಕರಿಗೆಂದೇ ತನ್ನ ವೆಬ್‍ಸೈಟಿನಲ್ಲಿ ಪ್ರಕಟಿಸಿದ ಎರಡು ಸೆಟ್ ಅಂಕಿ-ಸಂಖ್ಯೆಗಳನ್ನು ತೆಗೆದುಕೊಂಡು ಈ ವ್ಯತ್ಯಾಸಗಳನ್ನು ಪತ್ತೆ ಮಾಡಲಾಗಿದೆ. ಮೊದಲ ನಾಲ್ಕು ಹಂತಗಳಲ್ಲಿ ನಡೆದ 373 ಕ್ಷೇತ್ರಗಳಲ್ಲಿ ಜನರು ವೋಟ್ ಮಾಡಿದ್ದ ಮತಗಳು ಮತ್ತು ಮೇ 23ರಂದು ಕೌಂಟ್ ಆದ ಮತಗಳಲ್ಲಿ ಸಾಕಷ್ಟು ವ್ಯತ್ಯಾಸ ಕಣ್ಣಿಗೆ ಹೊಡೆಯುವಂತೆ ಕಾಣುತ್ತಿದೆ.

ತಮಿಳುನಾಡಿನ ಕಂಚೀಪುರಂ ಕ್ಷೇತ್ರದಲ್ಲಿ ಆಯೋಗವು ಹೇಳುವ ಪ್ರಕಾರ, 12,14,036 ಮತಗಳು ಇವಿಯಂನಲ್ಲಿ ವೋಟ್ ಮಾಡಲ್ಪಟ್ಟಿದ್ದರೆ, ಏಣಿಕೆಯಾಗಿದ್ದು 12,32,417 ಮತಗಳು! ಈ ಹೆಚ್ಚುವರಿ 18,331 ಮತಗಳು ಎಲ್ಲಿಂದ ಬಂದವು? ಆಯೋಗದ ಬಳಿ ಉತ್ತರವಿಲ್ಲ!

ತಮಿಳುನಾಡಿನ ಧರ್ಮಪುರಿ ಕ್ಷೇತ್ರದಲ್ಲಿ ಆಯೋಗವು ಹೇಳುವ ಪ್ರಕಾರ, 11,94, 440 ಮತಗಳು ಇವಿಯಂನಲ್ಲಿ ವೋಟ್ ಮಾಡಲ್ಪಟ್ಟಿದ್ದರೆ, ಏಣಿಕೆಯಾಗಿದ್ದು 12,12,311 ಮತಗಳು! ಈ ಹೆಚ್ಚುವರಿ 17,871 ಮತಗಳು ಎಲ್ಲಿಂದ ಬಂದವು? ಆಯೋಗದ ಬಳಿ ಉತ್ತರವಿಲ್ಲ!

ತಮಿಳುನಾಡಿನ ಪೆರಂಬದೂರು ಕ್ಷೇತ್ರದಲ್ಲಿ ಆಯೋಗವು ಹೇಳುವ ಪ್ರಕಾರ, 13,88,666 ಮತಗಳು ಇವಿಯಂನಲ್ಲಿ ವೋಟ್ ಮಾಡಲ್ಪಟ್ಟಿದ್ದರೆ, ಏಣಿಕೆಯಾಗಿದ್ದು 14,03,178 ಮತಗಳು! ಈ ಹೆಚ್ಚುವರಿ 14,512 ಮತಗಳು ಎಲ್ಲಿಂದ ಬಂದವು? ಆಯೋಗದ ಬಳಿ ಉತ್ತರವಿಲ್ಲ!

ಉತ್ತರಪ್ರದೇಶದ ಮಥುರಾ  ಕ್ಷೇತ್ರದಲ್ಲಿ ಆಯೋಗವು ಹೇಳುವ ಪ್ರಕಾರ, 10,86,206 ಮತಗಳು ಇವಿಯಂನಲ್ಲಿ ವೋಟ್ ಮಾಡಲ್ಪಟ್ಟಿದ್ದರೆ, ಏಣಿಕೆಯಾಗಿದ್ದು 10,98,112 ಮತಗಳು! ಈ ಹೆಚ್ಚುವರಿ 9,906 ಮತಗಳು ಎಲ್ಲಿಂದ ಬಂದವು? ಆಯೋಗದ ಬಳಿ ಉತ್ತರವಿಲ್ಲ!

ಇವು ಮೊದಲ ಹಂತದಲ್ಲಿ ನಡೆದ 373 ಕೇತ್ರಗಳಲ್ಲಿ ಅತಿ ಹೆಚ್ಚು ಪ್ರಮಾಣದ ವ್ಯತ್ಯಾಸ ತೋರಿಸಿದ 4 ಕ್ಷೇತ್ರಗಳು. ಹೀಗೇ ಇನ್ನು 220 ಕ್ಷೇತ್ರಗಳಲ್ಲಿ ಹೆಚ್ಚುವರಿ ಮತಗಳು ‘ಉದ್ಭವಿಸಿದರೆ’, ಉಳಿದ ಕ್ಷೇತ್ರಗಳಲ್ಲಿ ಅವು ವೋಟ್ ಆಗಿದ್ದಕ್ಕಿಂತ ಕಡಿಮೆ ಸಂಖ್ಯೆಯನ್ನು ತೋರಿಸುತ್ತಿವೆ!

ಆಯೋಗದ ವೆಬ್‍ಸೈಟಿನಿಂದ ‘ಡೇಟಾ’ ಮಾಯ!

ಚುನಾವಣಾ ಆಯೋಗವು ಮೊದಲ ನಾಲ್ಕು ಹಂತಗಳ ಡೇಟಾವನ್ನು ಪ್ರಕಟಿಸಿ, ಇವು ಪರಿಪೂರ್ಣ ಅಂಕಿಅಂಶಗಳು ಎಂದು ಸಾರಿತ್ತು. ಹಾಗಾಗಿ ಕ್ವಿಂಟ್ ಪೋರ್ಟಲ್ ಈ ಡೇಟಾದ ಆಧಾರದಲ್ಲೇ ಪರೀಕ್ಷೆ ನಡೆಸಿತು. ಯಾವಾಗ ದೊಡ್ಡ ವ್ಯತ್ಯಾಸಗಳು ಕಂಡವೋ, ಕ್ವಿಂಟ್ ಈ ಕುರಿತಾಗಿ ಆಯೋಗವನ್ನು ಪ್ರಶ್ನಿಸಿತು. ಇದಕ್ಕೆ ಉತ್ತರಿಸದ ಆಯೋಗವು, ತನ್ನ ವೆಬ್‍ಸೈಟಿನಿಂದ ಈ ಎಲ್ಲ ಅಂಕಿಅಂಶಗಳನ್ನು ತೆಗೆದು ಹಾಕುವ ಮೂಲಕ ಜನರ ಸಂಶಯವನ್ನು ಇನ್ನಷ್ಟು ಹೆಚ್ಚಿಸಿದೆ.

ಕ್ವಿಂಟ್ ತಾನು ಆಯೋಗದ ವೆಬ್‍ಸೈಟಿನಿಂದ ಡೌನ್‍ಲೋಡ್ ಮಾಡಿದ ಅಂಕಿಅಂಶಗಳು ಮತ್ತು ಪತ್ತೆ ಮಾಡಿದ ವ್ಯತ್ಯಾಸಗಳ ಕಾಪಿಗಳನ್ನು ಮೇಲ್ ಮೂಲಕ ಇನ್ನೊಮ್ಮೆ ಆಯೋಗಕ್ಕೆ ಕಳಿಸಿತು. ಈವರೆಗೂ ಆಯೋಗದಿಂದ ಉತ್ತರವೇ ಇಲ್ಲ!

ಮೇ 23ರ ಚುನಾವಣೆ ಮುಗಿದು 6-7 ದಿನಗಳಾದರೂ (ಮೇ 27ರಂದು) ಉಳಿದೆಲ್ಲ ಕ್ಷೇತ್ರಗಳ ವೋಟ್ ಆದ ಡೇಟಾವನ್ನು ಕಂಪೈಲ್ ಮಾಡಲಾಗಿಲ್ಲ ಎಂಬ ಸಬೂಬನ್ನೂ ಆಯೋಗ ನೀಡಿದೆ. ಯಾಕೆ ಸಂಪೂರ್ಣ ಮತ ಎಣಿಕೆ ಮುಗಿದ ಏಳು ದಿನವಾದರೂ ಡೇಟಾವನ್ನು ಕಂಪೈಲ್ ಮಾಡಲಿಲ್ಲ ಎಂಬ ಪ್ರಶ್ನೆ ಸಹಜವಾಗಿ ಉದ್ಭವಿಸುತ್ತದೆ.

ಈ ಕುರಿತಂತೆ ಕ್ವಿಂಟ್ ಜೊತೆ ಮಾತಾಡಿರುವ ಮಾಜಿ ಚುನಾವಣಾ ಆಯುಕ್ತ ರಾವತ್ ಅವರು. ‘ಇದೊಂದು ಗಂಭೀರ ವಿಷಯ. ನಾನು ಆಯುಕ್ತನಾಗಿದ್ದಾಗ ಇಂಥದ್ದು ಎಂದೂ ಸಂಭವಿಸರಲೇ ಇಲ್ಲ. ಆಯೋಗ ಇದಕ್ಕೆ ಸ್ಪಷ್ಟನೆ ನೀಡಲೇಬೇಕು’ ಎಂದು ಒತ್ತಾಯಿಸಿದ್ದಾರೆ. ಇತರ ಮಾಜಿ ಆಯುಕ್ತರಾದ ಗೋಪಾಲಸ್ವಾಮಿ, ಖುರೇಶಿ ಮತ್ತು ಬ್ರಹ್ಮಾ ಅವರು ಕೂಡ ಆಯೋಗ ಇದಕ್ಕೆಲ್ಲ ಕೂಡಲೇ ಸ್ಪಷ್ಟನೆ ನೀಡಬೇಕೆಂದು ಒತ್ತಾಯಿಸಿದ್ದಾರೆ.

ಇದನ್ನು ಓದಿ: ಚಲಾವಣೆಯಾದ ಮತಗಳಿಗಿಂತ ಕೌಂಟ್ ಆದ ಮತಗಳೆ ಹೆಚ್ಚು 

ಇಲ್ಲಿ ಆಯೋಗ ಈ ನಾಲ್ಕು ಪ್ರಶ್ನೆಗಳಿಗೆ ಸ್ಪಷ್ಟ ಉತ್ತರ ನೀಡುವ ಹೊಣೆ ಹೊರಬೇಕು:

ಮೊದಲ 4 ಹಂತದ ಮತದಾನದಲ್ಲಿ ಮತದಾನವಾದ ಅಂತಿಮ ಅಂಕಿಅಂಶಗಳು ಎಂದು ಆಯೋಗ ತನ್ನ ವೆಬ್‍ಸೈಟಿನಲ್ಲಿ ಅಪ್‍ಲೋಡ್ ಮಾಡಿದ್ದು ಏಕೆ?
ದಿಡೀರ್ ಎಂದು ಈ ಡೇಟಾವನ್ನು ವೆಬ್‍ಸೈಟಿನಿಂದ ತೆಗೆದದ್ದು ಏಕೆ?
ಈ ಗಂಭಿರ ವ್ಯತ್ಯಾಸಗಳ ಕುರಿತು ಆಯೋಗ ಏಕೆ ಉತ್ತರಿಸುತ್ತಿಲ್ಲ? ಅದಕ್ಕೆ ಇದರಲ್ಲಿ ಮುಚ್ಚಿಡುವಂತಾದ್ದು ಏನಾದರೂ ಇದೆಯೇ?
ಈ ದೊಡ್ಡ ವ್ಯತ್ಯಾಸಗಳು ಕಂಡುಬರಲು ಕಾರಣವೇನು? ಇವಿಎಂಗಳು ದೋಷಪೂರಿತವಾಗಿವೆಯೇ?

(ಆಧಾರ: ದಿ ಕ್ವಿಂಟ್)

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ಯಾಲೆಸ್ತೀನ್‌ ಪರ ಪ್ರತಿಭಟನೆ: ಅಮೆರಿಕದಲ್ಲಿ ಭಾರತೀಯ ಮೂಲದ ವಿದ್ಯಾರ್ಥಿನಿ ಬಂಧನ

0
ಪ್ಯಾಲೆಸ್ತೀನ್‌ ಪರ ಪ್ರತಿಭಟನೆಯಲ್ಲಿ ಭಾಗವಹಿಸಿದ ಆರೋಪದಲ್ಲಿ ಭಾರತೀಯ ಮೂಲದ ವಿದ್ಯಾರ್ಥಿನಿ ಅಚಿಂತ್ಯ ಶಿವಲಿಂಗಂ ಅವರನ್ನು ಅಮೆರಿಕದಲ್ಲಿ ಬಂಧಿಸಲಾಗಿದೆ. ಪ್ರಿನ್ಸ್ ಟನ್ ವಿಶ್ವವಿದ್ಯಾನಿಲಯದ ಆವರಣದಲ್ಲಿ ವಿದ್ಯಾರ್ಥಿಗಳ ನೇತೃತ್ವದ ಪ್ಯಾಲೆಸ್ತೀನ್‌ ಪರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಭಾರತೀಯ ಮೂಲದ...