ಅಸ್ಸಾಂನ ಬರಾಕ್ ಕಣಿವೆ ಪ್ರದೇಶದ ಕರೀಂಗಂಜ್ ಜಿಲ್ಲೆಯ ಬಿಜೆಪಿ ಅಭ್ಯರ್ಥಿಗೆ ಸೇರಿದ ಕಾರಿನಲ್ಲಿ ಚುನಾವಣಾ ಅಧಿಕಾರಿಗಳು ಇವಿಎಂ ಜೊತೆ ಪ್ರಯಾಣಿಸಿದ್ದನ್ನು ವಿರೋಧಿಸಿ ಅಸ್ಸಾಂ ಕಾಂಗ್ರೆಸ್ ಶನಿವಾರ ಗುವಾಹಟಿಯಲ್ಲಿ ಪ್ರತಿಭಟನೆ ನಡೆಸಿದೆ.
ಪ್ರತಿಭಟನೆಯಲ್ಲಿ ಮಾತನಾಡಿದ ಪಕ್ಷದ ನಾಯಕಿ ಸುಷ್ಮಿತಾ ದೇವ್, “ಎಲ್ಲಾ ಬಿಜೆಪಿ ಅಭ್ಯರ್ಥಿಗಳು ಅಕ್ರಮ ಮಾರ್ಗಗಳನ್ನು ಆಶ್ರಯಿಸುತ್ತಿದ್ದಾರೆ. ಜನರು ನಮ್ಮೊಂದಿಗಿದ್ದಾರೆ, ಬಿಜೆಪಿಯು ಗೊಂದಲಕ್ಕೊಳಗಾಗಿದೆ. ಕೃಷ್ಣೇಂದು ಪಾಲ್ ವಿರುದ್ಧ ಚುನಾವಣಾ ಆಯೋಗ ಯಾವ ಕ್ರಮ ಕೈಗೊಂಡಿದೆ. ಯಾಕೆಂದರೆ ಅವರ ವಾಹನದಲ್ಲಿ ಇವಿಎಂ ಕಂಡುಬಂದಿದೆ?” ಎಂದು ಪ್ರಶ್ನಿಸಿದ್ದಾರೆ.
Congress leaders & workers protest in Guwahati against Assam EVM issue. Party leader Sushmita Dev says, "All BJP candidates are resorting to illegal means. People are with us, BJP is perturbed. What action did EC take against Krishnendu Pal, in whose vehicle EVM was found?" pic.twitter.com/oVJUxrQxmk
— ANI (@ANI) April 3, 2021
ಇದನ್ನೂ ಓದಿ: ಅಸ್ಸಾಂ ಚುನಾವಣಾ ಅಧಿಕಾರಿಗಳು, ಇವಿಎಂ ಜೊತೆ ಬಿಜೆಪಿ ಅಭ್ಯರ್ಥಿ ಕಾರಿನಲ್ಲಿ: ಗಲಭೆಗೆ ತಿರುಗಿದ ವಿವಾದ
ಕರೀಂಗಂಜ್ ಜಿಲ್ಲೆಯ ಬಿಜೆಪಿ ಅಭ್ಯರ್ಥಿಗೆ ಸೇರಿದ ಕಾರಿನಲ್ಲಿ ಚುನಾವಣಾ ಅಧಿಕಾರಿಗಳು ಇವಿಎಂ ಜೊತೆ ಹೋಗುತ್ತಿದ್ದನ್ನು ಪ್ರತಿಪಕ್ಷದ ಕಾರ್ಯಕರ್ತರು ತಡೆದು ಘೇರಾವ್ ಹಾಕಿದ್ದರು. ಉದ್ರಿಕ್ತ ಜನರ ಗುಂಪು ನಿಯಂತ್ರಿಸಲು ಪೊಲೀಸರು ಗಾಳಿಯಲ್ಲಿ ಗುಂಡು ಹಾರಿಸಿ, ಲಾಠೀಚಾರ್ಜ್ ನಡೆಸಿದ್ದು, ಆಗ ಹಿಂಸೆಗೆ ತಿರುಗಿತ್ತು.
ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವಿನ ಹಿಂಸಾಚಾರದ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಚುನಾವಣಾ ಆಯೋಗ ಪೂರ್ಣವಾಗಿ ಬಿಜೆಪಿಯೊಂದಿಗೆ ಶಾಮೀಲಾಗಿದೆ. ಈ ಚುನಾವಣೆಗೆ ಅರ್ಥವಿಲ್ಲ ಎಂದು ಪ್ರತಿಭಟನಾಕಾರರು ಕಿಡಿಕಾರಿದ್ದರು.
Live from Guwahati https://t.co/qD0XOlDfDr
— Assam Congress (@INCAssam) April 3, 2021
ಬಿಜೆಪಿ ಅಭ್ಯರ್ಥಿಯ ಕಾರಿನಲ್ಲಿ ಪ್ರಯಾಣಿಸಿದ್ದ ನಾಲ್ವರು ಅಧಿಕಾರಿಗಳನ್ನು ಕರ್ತವ್ಯಲೋಪದ ಆರೋಪದ ಮೇಲೆ ಅಮಾನತು ಮಾಡಲಾಗಿದೆ. ಘಟನೆ ನಡೆದ ಕ್ಷೇತ್ರದಲ್ಲಿ ಮರುಮತದಾನ ನಡೆಸುವಂತೆ ಚುನಾವಣಾ ಆಯೋಗ ಆದೇಶ ನೀಡಿದೆ.
ಅದೇ ಸಂದರ್ಭದಲ್ಲಿ ಪ್ರತಿಭಟನೆ ಮತ್ತು ಘೇರಾವ್ ನಡೆಸಿದ ಪ್ರತಿಪಕ್ಷಗಳ ಕಾರ್ಯಕರ್ತರ ಮೇಲೆ ಕೂಡಾ ಚುನಾವಣಾ ಆಯೋಗ ಪ್ರಕರಣ ದಾಖಲಿಸಿದೆ.
ಇದನ್ನೂ ಓದಿ: ಅಸ್ಸಾಂನಲ್ಲಿ ಬಿಜೆಪಿ ಇವಿಎಂಗಳನ್ನು ಕದಿಯುತ್ತಿದೆ: ಪ್ರತಿಪಕ್ಷಗಳ ಗಂಭೀರ ಆರೋಪ


