ಮತದಾರರ ಪಟ್ಟಿಗಳನ್ನು ಹುಡುಕಲು ಸಾಧ್ಯವಾಗುವಂತೆ ಮಾಡುವುದು ಮತ್ತು ಎಲೆಕ್ಟ್ರಾನಿಕ್ ವೋಟರ್ ಯಂತ್ರಗಳ (ಇವಿಎಂ) ಮೂಲ ಕೋಡ್ ಅನ್ನು ಬಿಡುಗಡೆ ಮಾಡುವುದರಿಂದ ಚುನಾವಣಾ ವ್ಯವಸ್ಥೆಯಲ್ಲಿ ಸಾರ್ವಜನಿಕರ ವಿಶ್ವಾಸವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ ಎಂದು ನಾಗರಿಕರ ಹಕ್ಕುಗಳ ಸಂಘಟನೆಯೊಂದು ಶುಕ್ರವಾರ ಚುನಾವಣಾ ಆಯೋಗಕ್ಕೆ ತಿಳಿಸಿದೆ.
ಕೇವಲ 28% ಭಾರತೀಯರು ಮಾತ್ರ ಚುನಾವಣಾ ಆಯೋಗದಲ್ಲಿ ನಂಬಿಕೆ ಹೊಂದಿದ್ದಾರೆ ಎಂಬ ಸಮೀಕ್ಷೆಯೊಂದರ ಹಿನ್ನಲೆಯಲ್ಲಿ ‘Vote for Democracy” ಎಂಬ ಹೆಸರಿನ 83 ಜನರ ಈ ನಾಗರಿಕ ಹಕ್ಕುಗಳ ಗುಂಪು ಚುನಾವಣಾ ಆಯೋಗಕ್ಕೆ ಆರು ಸಲಹೆಗಳನ್ನು ನೀಡಿದೆ. ಚುನಾವಣಾ ಆಯೋಗದ ಮೇಲೆ ನಂಬಿಕೆ ಕಳೆದುಕೊಳ್ಳುವುದು “ಪ್ರಜಾಪ್ರಭುತ್ವದ ಹಿನ್ನಡೆಯ ಆತಂಕಕಾರಿ ಸೂಚನೆ” ಎಂದು ಅದು ಹೇಳಿದೆ.
ಹುಡುಕಿ ಕಂಡುಕೊಳ್ಳಬಹುದಾದ ಡೇಟಾಬೇಸ್ ಇಲ್ಲದೆ, ಎಲ್ಲಾ ಅರ್ಹ ನಿವಾಸಿಗಳನ್ನು ಮತದಾರರಾಗಿ ಪಟ್ಟಿ ಮಾಡಲಾಗಿದೆಯೇ ಅಥವಾ ಮರಣ ಹೊಂದಿದವರನ್ನು ಅಧಿಕೃತ ಮತದಾರರ ಪಟ್ಟಿಯಿಂದ ತೆಗೆದುಹಾಕಲಾಗಿದೆಯೇ ಎಂದು ನಾಗರಿಕರು ಸ್ವತಂತ್ರವಾಗಿ ಪರಿಶೀಲಿಸಲು ಈಗ ಯಾವುದೇ ಮಾರ್ಗವಿಲ್ಲ ಎಂದು ನಾಗರಿಕ ಹಕ್ಕುಗಳ ಗುಂಪು ವಾದಿಸಿದೆ. “ನಮ್ಮ ಈ ಬೇಡಿಕೆಯನ್ನು ಪೂರೈಸುವಲ್ಲಿ ವಿಫಲವಾದರೆ, ಚುನಾವಣಾ ಆಯೋಗವು ತಾಂತ್ರಿಕವಾಗಿ ಹಾಗೆ ಒದಗಿಸಲು ಸಜ್ಜಾಗಿಲ್ಲ ಎಂದರ್ಥ” ಎಂದು ಅವರ ಮನವಿ ಪತ್ರವು ಹೇಳಿದೆ.
ಮತದಾನ ಯಂತ್ರಗಳ ಮೂಲ ಕೋಡ್ ಸಾರ್ವಜನಿಕವಾಗಿ ಲಭ್ಯವಿಲ್ಲ ಎಂಬ ವಿಚಾರವನ್ನು ಎತ್ತಿತೋರಿಸಿರುವ ಅವರು, “ಬ್ಯಾಲೆಟ್ ಯೂನಿಟ್‌ನ ಬಟನ್‌ಗಳಲ್ಲಿ ಪ್ರತಿ ಅಭ್ಯರ್ಥಿಗೆ ಮತಗಳನ್ನು ದಾಖಲಿಸುವುದು ಮತ್ತು ಮತಗಳನ್ನು ಎಣಿಸುವುದು ಸೇರಿದಂತೆ ಮುಂತಾದ ಯಾವುದೆ ತೊಂದರೆ ಇಲ್ಲದ ಕೆಲಸ ಮಾಡುವ ಒಂದು ಸರಳ ಮೂಲ ಕೋಡ್‌ನ ಸುತ್ತ ಏಕೆ ಇಂತಹ ಗೌಪ್ಯತೆ ಇದೆ?” ಎಂದು ಮನವಿ ಪತ್ರವು ಕೇಳಿದೆ.
ಇದೆಲ್ಲದೆ, ಎಲ್ಲಾ ಬೂತ್‌ಗಳು ಮತ್ತು ಕ್ಷೇತ್ರಗಳಿಂದ ಹುಡುಕಿ ಕಂಡುಕೊಳ್ಳಬಹುದಾದ ಸ್ವರೂಪದಲ್ಲಿ ಫಾರ್ಮ್ 17C ಡೇಟಾವನ್ನು ಮತ್ತು ಒಟ್ಟು ಮತ ಎಣಿಕೆಗಳನ್ನು ಸಾರ್ವಜನಿಕ ಪರಿಶೀಲನೆಗಾಗಿ ಸಾರ್ವಜನಿಕವಾಗಿ ಅಪ್‌ಲೋಡ್ ಮಾಡಲು ಗುಂಪು ಕರೆ ನೀಡಿದೆ.
ಮತಗಟ್ಟೆಗಳಲ್ಲಿ ಚುನಾವಣಾ ಆಯೋಗವನ್ನು ಅಲ್ಲಿನ ಪ್ರೆಸೀಡಿಂಗ್ ಆಫೀಸರ್ ಪ್ರತಿನಿಧಿಸುತ್ತಾರೆ. ಮತದಾನ ಕೇಂದ್ರದಲ್ಲಿ ಮತದಾನ ಮುಗಿದ ನಂತರ, ಈ ಪ್ರೆಸೀಡಿಂಗ್ ಅಧಿಕಾರಿ ಫಾರ್ಮ್ 17C ಅನ್ನು ಭರ್ತಿ ಮಾಡುತ್ತಾರೆ. ಇದು ಮತಗಟ್ಟೆಯಲ್ಲಿ ನೋಂದಾಯಿಸಲಾದ ಮತದಾರರ ಸಂಖ್ಯೆ ಮತ್ತು ಎಲೆಕ್ಟ್ರಾನಿಕ್ ಮತದಾನ ಯಂತ್ರದಲ್ಲಿ ದಾಖಲಾದ ಮತಗಳ ಸಂಖ್ಯೆ ಮತ್ತು ಮತ ಚಲಾಯಿಸಿದ ಮತದಾರರ ಲಿಂಗವಾರು ವಿಂಗಡಣೆಯಂತಹ ವಿವರಗಳನ್ನು ಹೊಂದಿರುತ್ತದೆ.
ಪಾರದರ್ಶಕತೆಗಾಗಿ ಮತ್ತು ಹುಡುಕಿ ಪಡೆಯಲು ಡೇಟಾಬೇಸ್‌ನಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ನಮೂನೆಗಳು – ಫಾರ್ಮ್ 9, 10, 11, 11A, ಮತ್ತು 11B – ಕೂಡಾ ಸಾರ್ವಜನಿಕರಿಗೆ ಲಭ್ಯ ಇರಬೇಕು ಎಂದು ನಾಗರಿಕ ಗುಂಪು ಒತ್ತಾಯಿಸಿದೆ. ಹೆಚ್ಚುವರಿಯಾಗಿ, ಚುನಾವಣೆಗಳಲ್ಲಿ ಬಳಸಲಾಗುವ ಪ್ರತಿಯೊಂದು ಚಿಹ್ನೆಯನ್ನು ಲೋಡಿಂಗ್ ಘಟಕದಿಂದ ಸಂಪೂರ್ಣ ಡೇಟಾವನ್ನು ಬಿಡುಗಡೆ ಮಾಡಲು ಗುಂಪು ಒತ್ತಾಯಿಸಿದೆ ಮತ್ತು ಪ್ರತಿ ಚುನಾವಣೆಯಲ್ಲಿ ಎಲ್ಲಾ ಇವಿಎಂಗಳಿಗೆ ಮತದಾರರ ಪರಿಶೀಲಿಸಿದ ಪೇಪರ್ ಆಡಿಟ್ ಟ್ರೇಲ್‌ಗಳನ್ನು ರಚಿಸುವಂತೆ ಒತ್ತಾಯಿಸಿದೆ.
VVPAT ಚೀಟಿಗಳನ್ನು ಮತದಾರರಿಗೆ ನೀಡಬೇಕು, ನಂತರ ಅವರು ಅವುಗಳನ್ನು ಪ್ರತ್ಯೇಕ ಮತಪೆಟ್ಟಿಗೆಯಲ್ಲಿ ಇಡಬೇಕಾಗುತ್ತದೆ ಎಂದು ಅವರು ಒತ್ತಾಯಿಸಿದ್ದಾರೆ. ಒಂದು ಕ್ಷೇತ್ರದಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳ ಹೆಸರುಗಳು ಮತ್ತು ಚಿಹ್ನೆಗಳನ್ನು ವೋಟರ್ ವೆರಿಫೈಡ್ ಪೇಪರ್ ಆಡಿಟ್ ಟ್ರಯಲ್ (VVPAT) ಘಟಕದಲ್ಲಿ ಅಪ್‌ಲೋಡ್ ಮಾಡಲು ಸಿಂಬಲ್ ಲೋಡಿಂಗ್ ಘಟಕವನ್ನು ಬಳಸಲಾಗುತ್ತದೆ. ನಂತರ ಅದನ್ನು ಎಲೆಕ್ಟ್ರಾನಿಕ್ ಮತ ಯಂತ್ರಗಳ ಮೂಲಕ ಚಲಾಯಿಸಿದ ಮತಗಳನ್ನು ಪರಿಶೀಲಿಸಲು ಬಳಸಲಾಗುತ್ತದೆ.
ಎಲೆಕ್ಟ್ರಾನಿಕ್ ಮತ ಯಂತ್ರಗಳು ತಾಂತ್ರಿಕ ದುರ್ಬಲವಾಗಿದ್ದರೆ ಮತ್ತು ಕಾರ್ಯವಿಧಾನದ ಲೋಪಗಳಿಂದ ಕೂಡಿದ್ದರೆ ಅವುಗಳ ವಿಶ್ವಾಸಾರ್ಹತೆಗೆ ಧಕ್ಕೆಯಾಗುತ್ತವೆ ಎಂದು ಗುಂಪು ಆರೋಪಿಸಿದೆ. ಆದಾಗ್ಯೂ, ಈ ಶಿಫಾರಸುಗಳನ್ನು ಅನುಸರಿಸಿದರೆ, ಕಾಗದದ ಮತಪತ್ರಗಳಲ್ಲಿ ಮತದಾನ ಮಾಡುವ ಅಗತ್ಯವಿಲ್ಲ ಎಂದು ಅವರು ಹೇಳಿದ್ದು, ಒಂದು ವೇಳೆ VVPAT ಯಂತ್ರಗಳನ್ನು ಬಲಪಡಿಸಲು ಸಾಧ್ಯವಾಗದಿದ್ದರೆ ಕಾಗದದ ಮತಪತ್ರಗಳು ಯೋಗ್ಯವಾಗಿರುತ್ತದೆ ಎಂದು ಅವರು ವಾದಿಸಿದ್ದಾರೆ.
ಈ ಮನವಿ ಪತ್ರವನ್ನು ಅನುಮೋದಿಸಿದವರಲ್ಲಿ ಮಾಜಿ ಭಾರತೀಯ ಆಡಳಿತ ಸೇವಾ ಅಧಿಕಾರಿ ಎಂ.ಜಿ. ದೇವಸಹಾಯಂ, ಮಾಜಿ ಹೈಕೋರ್ಟ್ ನ್ಯಾಯಮೂರ್ತಿ ಡಿ. ಹರಿಪರಂತಮನ್ ಮತ್ತು ಬಿ.ಜಿ. ಕೋಲ್ಸೆ ಪಾಟೀಲ್ ಮತ್ತು ಹೋರಾಟಗಾರ್ತಿ ತೀಸ್ತಾ ಸೆಟಲ್ವಾಡ್ ಇದ್ದಾರೆ. ಇವಿಎಂ ಮೂಲ ಕೋಡ್
ಇಲ್ಲಿ ಕ್ಲಿಕ್ ಮಾಡಿ
ಇದನ್ನೂಓದಿ: ಛತ್ತೀಸ್‌ಗಢ | ಪ್ರೇಮ ಸಂಬಂಧ ಆರೋಪಿಸಿ ದಲಿತ ಯುವಕನನ್ನು ವಿವಸ್ತ್ರಗೊಳಿಸಿ ಹಲ್ಲೆ
ಛತ್ತೀಸ್‌ಗಢ | ಪ್ರೇಮ ಸಂಬಂಧ ಆರೋಪಿಸಿ ದಲಿತ ಯುವಕನನ್ನು ವಿವಸ್ತ್ರಗೊಳಿಸಿ ಹಲ್ಲೆ

