Homeಕರ್ನಾಟಕನಾವೆಲ್ಲಾ ಕೋತಿಗಳಾಗುತ್ತಿರುವುದು ಹೇಗೆ? ವಿಕಾಸ ಮತ್ತು ಹಿಂಚಲನೆ... - ಅಭಿಜಿತ್ ಬ್ಯಾನರ್ಜಿ

ನಾವೆಲ್ಲಾ ಕೋತಿಗಳಾಗುತ್ತಿರುವುದು ಹೇಗೆ? ವಿಕಾಸ ಮತ್ತು ಹಿಂಚಲನೆ… – ಅಭಿಜಿತ್ ಬ್ಯಾನರ್ಜಿ

ನಮ್ಮ ದೇಶದಲ್ಲಿನ ಮುಕ್ತತೆಯ, ಕುತೂಹಲದ, ಸಂವಾದದ, ಅಮೂರ್ತತೆಯ, ಆತಿಥ್ಯದ ಮತ್ತು ಕಾರುಣ್ಯದ ಸಂಪ್ರದಾಯಗಳನ್ನು ಗೌರವಿಸಿ, ಮೆಚ್ಚುವ ಚಳುವಳಿಯೊಂದನ್ನು ಹುಟ್ಟುಹಾಕಬೇಕಾಗಿದೆ.

- Advertisement -
- Advertisement -

ವಿಕಾಸ ಮತ್ತು ಹಿಂಚಲನೆ : ಅಭಿಜಿತ್ ಬ್ಯಾನರ್ಜಿ
ಅನುವಾದ: ಟಿ ಎಸ್ ವೇಣುಗೋಪಾಲ್

ಕೋತಿ ಮನುಷ್ಯನಾಗೋದನ್ನು ನಾವ್ಯಾರೂ ನೋಡಿಲ್ಲ. ಆದರೆ ಮನುಷ್ಯರು ಮಂಗಗಳಾಗುವುದನ್ನು ಆಗೀಗ ನೋಡುತ್ತಿರುತ್ತೇವೆ. ತಾನು ಕಂಡೇ ಇಲ್ಲದ್ದನ್ನು, ಯಾರೂ ಯಾವತ್ತೂ ಕಾಣದ್ದನ್ನು ಕಲ್ಪಿಸಿಕೊಳ್ಳುವ ವಿಶಿಷ್ಟ ಸಾಮರ್ಥ್ಯ ಮನುಷ್ಯನಿಗೆ ಮಾತ್ರ ಸಾಧ್ಯ. ಚಿಂಪಾಂಜಿಗಳಿಗೆ ಕೆಲವು ಗುರುತುಗಳನ್ನು ಗ್ರಹಿಸಿಕೊಳ್ಳಲಿಕ್ಕೆ ಸಾಧ್ಯವಾಗಬಹುದು, ಕೆಲವು ಪದಗಳನ್ನೂ ಕಲಿಯಬಹುದು. ಆದರೆ ಯಾವುದೇ ಚಿಂಪಾಂಜಿಗೂ ಗಣೇಶನನ್ನೋ ಅಥವಾ ಒಂದು ಏಕಶೃಂಗಿಯನ್ನೋ ಕಲ್ಪಿಸಿಕೊಳ್ಳುವುದಕ್ಕೆ ಸಾಧ್ಯವೇ ಇಲ್ಲ.

ಇತ್ತೀಚಿನ ದಿನಗಳಲ್ಲಿ ಮನುಷ್ಯನ ಈ ಪ್ರಮುಖ ಗುಣವನ್ನು ಅಲ್ಲಗೆಳೆಯುವುದೇ ಜಗತ್ತಿನೆಲ್ಲೆಡೆ ಬಲಪಂಥೀಯ ಜನಪ್ರಿಯ ರಾಜಕೀಯದ ಪ್ರಮುಖ ಕಸುಬಾಗಿಬಿಟ್ಟಿದೆೆ. “ದಲಿತರು ಅಂದರೆ ಮಲ ತೆಗೆಯುವವರು. ಅವರ ವ್ಯವಹಾರ ಎಲ್ಲಾ ಏನಿದ್ದರೂ ಸತ್ತ ಪ್ರಾಣಿಗಳು, ಮನುಷ್ಯರ ಕಕ್ಕಸ್ಸಿನ ಜೊತೆಗೆ. ಅವರ ಕೈಯಲ್ಲಿ ನಾವು ನೀರೇ ಕುಡಿಯುವುದಿಲ್ಲ. ಇನ್ನು ಅವರಿಗೆ ಮಗಳನ್ನು ಕೊಡುವುದೇ?” “ಮುಸಲ್ಮಾನರು ಕಟುಕರು, ಮುಗ್ದ ಜನರನ್ನು ಬಾಂಬು ಹಾಕಿ ಕೊಲ್ಲೋ ಜನ. ಹಿಂಸೆ ಅವರ ಭಾಗವಾಗಿಬಿಟ್ಟಿದೆ,” “ಕರಿಯರು ಅಂದ್ರೆ ಡ್ರಗ್ಸ್ ಮಾರೋರು, ಅಪರಾಧಿಗಳು ಅಂತ ಯಾರಿಗೆ ತಾನೆ ಗೊತ್ತಿಲ್ಲ? ಜೈಲು ತುಂಬಾ ಅವರೇ ಇದ್ದಾರೆ. ಅವರು ನಮಗೆ ಸಮಾನರಾಗೋದಕ್ಕೆ ಹೇಗೆ ಸಾಧ್ಯ?” ಹೀಗೆಲ್ಲಾ ಮಾತನಾಡುತ್ತಾರೆ.

ದಲಿತರೇನು ಮಲ ತೆಗೆಯಬೇಕು ಅಂತ ಬಯಸಿಕೊಂಡು ತೆಗೆಯುತ್ತಿಲ್ಲ. ಹಾಗೆಯೇ ನೀಗ್ರೋಗಳು ತಮ್ಮದು ಗುಲಾಮಗಿರಿಯ ಹಾಗೂ ಅನ್ಯಾಯದ ಚರಿತ್ರೆ ಆಗಿರಲಿ ಅಂತ ಬಯಸಿರಲಿಲ್ಲ. ಹಿಂಸೆ ರಾಜಕೀಯ ಪ್ರತಿರೋಧದ ಒಂದು ರೂಪ. (ಸಾಮಾನ್ಯವಾಗಿ ಇಂತಹ ಹಿಂಸೆಯಲ್ಲಿ ಮುಗ್ದರೇ ಸಾಯುತ್ತಿದ್ದರು.) ಆ ಹಿಂಸೆಯ ಪರಂಪರೆಯನ್ನು ಇಂದು ಮುಸ್ಲಿಂ ಭಯೋತ್ಪಾದಕತೆ ಮುಂದುವರಿಸಿಕೊಂಡು ಹೋಗುತ್ತಿದೆ. ಹಲವು ಬಂಗಾಲಿಗಳು ಮತ್ತು ಮಹಾರಾಷ್ಟ್ರದ (ಹಿಂದುತ್ವದ ಪ್ರಬಲ ಪ್ರತಿಪಾದಕ ವಿನಾಯಕ ದಾಮೋದರ್ ಸಾರ್ವಕರ್‌ ಸೇರಿದಂತೆ) ಹಿಂದುಗಳು ಇದನ್ನು ಬ್ರಿಟಿಷರ ವಿರುದ್ಧ ಬಳಸಿದ್ದರು. ಯಹೂದಿ ನಾಗರಿಕ ಹೋರಾಟಗಾರರು ಬ್ರಿಟಿಷರ ವಿರುದ್ಧ ಬಳಸಿದ್ದರು. ಆಗ ಅದು ಪ್ಯಾಲೆಸ್ತೈನ್ ಆಗಿತ್ತು. ಐರಿಷ್ ಕ್ಯಾಥೊಲಿಕರು ಇತ್ತೀಚಿನ ಕೆಲವು ವರ್ಷಗಳವರೆಗೆ ತಮ್ಮ ಇಂಗ್ಲಿಷ್ ಧಣಿಗಳ ವಿರುದ್ಧ ಬಳಸಿದ್ದರು. ಈಗ ಆ ಚರಿತ್ರೆ ಹೆಚ್ಚು ಕಡಿಮೆ ಮರೆತೇಹೋಗಿದೆ. 2001ರ ನಂತರ ಕೇವಲ ಮುಸ್ಲಿಮರು ಮಾತ್ರ ಭಯೋತ್ಪಾದಕರು ಎಂದಾಗಿಬಿಟ್ಟಿದೆ.

ಹೀಗೆ ವಾಚ್ಯಾರ್ಥವನ್ನು ನಿರೂಪಿಸುವ ಈ ಪ್ರವೃತ್ತಿಯೇ ಭೂಮಿ ಚಪ್ಪಟೆಯಾಗಿದೆ ಎಂಬ ಚಳುವಳಿಗೂ ಸ್ಪೂರ್ತಿ ನೀಡಿದೆ. ಅಮೇರಿಕೆಯಲ್ಲಿ ಟ್ರಂಪ್ ಬೆಂಬಲಿಗರಲ್ಲಿ ಇದು ತುಂಬಾ ಜನಪ್ರಿಯವಾಗಿದೆ: “ನನಗೆ ಭೂಮಿ ಚಪ್ಪಟೆಯಾಗಿ ಕಾಣುತ್ತಿದೆ. ಅಷ್ಟೇ ಅಲ್ಲ ಬೈಬಲಿನಲ್ಲೂ ಹಾಗೆ ಹೇಳಿದೆ.” ಜೊತೆಗೆ ಈ ಬೈಬಲ್ ಗೆಳೆಯರು, ಹಾಗೂ ನಮ್ಮ ಹಿಂದಿ ವಲಯದವರು ಪಾಪ ಡಾರ್ವಿನ್ನನನ್ನು ಕೂಡ ಟೀಕಿಸುತ್ತಿದ್ದಾರೆ. ಡಾರ್ವಿನ್ ಹೇಳಿರೋದು ಅವರ ಧರ್ಮಗ್ರಂಥಗಳಿಗೆ ಅನುಗುಣವಾಗಿ ಇಲ್ಲವಂತೆ. ಹೀಗೆಲ್ಲಾ ವಾದಿಸೋದನ್ನು ಮೇಲ್‌ಸ್ತರದವರ ವಿಜ್ಞಾನ ಹಾಗೂ ಸಮಾಜವಿಜ್ಞಾನದ ಚಿಂತನೆಗಳನ್ನು ತಳಸಮುದಾಯದವರು ವಿರೋಧಿಸುವ ಕ್ರಮ ಅಂತ ಭಾವಿಸಿಬಿಡಬಹುದು. ಆದರೆ ಅದು ತಪ್ಪು. ಹಾಗೆ ಮಾಡೋತ್ತಾ ಹೋದರೆ ಕೊನೆಗೆ ತಳಸ್ತರದವರನ್ನು ಓಲೈಕೆ ಮಾಡಿದಂತೆ ಆಗುತ್ತದೆ.

ವಿಜ್ಞಾನ ಅಂತ ನೀವು ಹೇಳುತ್ತಿರೋದು ನನಗೆ ಕಾಣುತ್ತಿಲ್ಲ ಅಂತ ಒಬ್ಬ ಸಾಮಾನ್ಯ ಹೆಂಗಸು ಹೇಳೋದಿಲ್ಲ. ಅವಳಿಗೂ ನಮ್ಮ ನಾಯಕರಷ್ಟೇ ಅಥವಾ ಅವರಿಗಿಂತ ಹೆಚ್ಚು ಅಮೂರ್ತವಾದ ಕಲ್ಪನೆಗಳನ್ನು ಗ್ರಹಿಸಿಕೊಳ್ಳೋದಕ್ಕೆ ಸಾಧ್ಯ. ಯಾಕೆಂದರೆ ಅವಳು ಅಷ್ಟೊಂದು ಸಿನಿಕಲ್ ಆಗಿಲ್ಲ. ಅವಳು ದಿನ ಮೈಕ್ರೋವೇವ್ ಬಳಸುತ್ತಾಳೆ. ಬೆಂಕಿಯಿಲ್ಲದೆ ಶಾಖ ಹೇಗೆ ಬಂತು ಅಂತ ಅವಳು ಕೇಳೋಲ್ಲ. ಅವಳಿಗೆ ಅಷ್ಟು ಜಾಣತನ ಇದೆ. ವಿಜ್ಞಾನದ ಎಷ್ಟೋ ಕೆಲಸಗಳು ಹಿನ್ನೆಲೆಯಲ್ಲಿ ನಡೆಯುತ್ತಿರುತ್ತವೆ. ಅವು ಕಣ್ಣಿಗೆ ಕಾಣಿಸೋದಿಲ್ಲ ಅನ್ನೋದು ಅವಳಿಗೆ ಗೊತ್ತು. ವಿಕಾಸ ಅನ್ನೋದು ನನ್ನ ಕಣ್ಣ ಮುಂದೆ ನಡೆಯಬೇಕು ಅಂತ ಅವಳು ಕೇಳುವುದಿಲ್ಲ.

ಮುಸ್ಲಿಮರನ್ನು ದ್ವೇಷಿಸುವುದಕ್ಕೆ ಆಗಲಿ, ದಲಿತರನ್ನು ಕೀಳಾಗಿ ಕಾಣುವುದಕ್ಕೇ ಆಗಲಿ ನಮ್ಮ ನೇರ ಅನುಭವ ಕಾರಣ ಅಲ್ಲ. ನಮ್ಮಲ್ಲಿ ಬಹುಪಾಲು ಮಂದಿಗೆ ಅಂತಹ ಯಾವುದೇ ಅನುಭವ ಆಗಿಲ್ಲ. ನಮ್ಮ ಅಕ್ಕಪಕ್ಕದ ಮುಸ್ಲಿಮರು ಉಳಿದ ಎಲ್ಲರಂತೆಯೇ ಇರುತ್ತಾರೆ. ಅದು ನಮ್ಮ ದಿನನಿತ್ಯದ ಅನುಭವ. ಆದರೆ ನಿಜವಾದ ಸಮಸ್ಯೆಯೆಂದರೆ ಈಗ ನಮ್ಮ ಅಕ್ಕಪಕ್ಕದಲ್ಲಿ ಮುಸ್ಲಿಮರು ವಾಸಿಸುತ್ತಿಲ್ಲ. ಅವರಲ್ಲಿ ಹೆದರಿಕೆ ಹುಟ್ಟಿಸಿ, ತಮ್ಮಷ್ಟಕ್ಕೆ ತಾವೇ ಅವರು ಅದೃಶ್ಯರಾಗುವಂತೆ ಮಾಡಿದ್ದೇವೆ. ನಾವು ಅವರನ್ನು ಇಂದು ನೋಡುತ್ತಿರುವುದು ವೃತ್ತಪತ್ರಿಕೆಯ ಪುಟಗಳಲ್ಲಿ ಅಥವಾ ಮಾಂಸದ ಅಂಗಡಿಗಳಲ್ಲಿ. ಅದು ನಮ್ಮ ಪೂರ್ವಗ್ರಹವನ್ನು ಮತ್ತಷ್ಟು ಗಟ್ಟಿಗೊಳಿಸುತ್ತಿದೆ.

ಇನ್ನು ನಮ್ಮ ಮಗಳನ್ನು ಮದುವೆಯಾಗಲಿರುವ ಕೆಳಜಾತಿಯ ಅಳಿಯನ ವಿಷಯಕ್ಕೆ ಬಂದರೆ, ಅವನ ಮೋಹಕ ಗುಣ, ಜಗತ್ತಿನಲ್ಲಿ ಅವನು ಸಾಧಿಸಿರುವ ಯಶಸ್ಸನ್ನು ತಿರಸ್ಕರಿಸುವುದಕ್ಕೆ ನಮಗೆ ಆಗೋದಿಲ್ಲ. ಅದಕ್ಕೇ ಅವನು ‘ಅಪಾಯಕಾರಿ’ಯಾಗಿ ಕಾಣುತ್ತಾನೆ. ಹಾಗಾಗಿಯೇ ಖಾಪ್ ಪಂಚಾಯತಿಗಳು ಅವರನ್ನು ಹೆದರಿಸಿ, ಬೆದರಿಸುವ ಕೆಲಸಕ್ಕೆ ಕೈಹಾಕಿವೆ.

ಈ ಸಂಕುಚಿತ ಮನಸ್ಸಿನ, ಪೂರ್ವಗ್ರಹದ ಕಥೆಗಳಲ್ಲಿ ಆರ್ಗಾನಿಕ್ ಆದದ್ದು ಅಥವಾ ಸತ್ಯ ಅನ್ನುವಂತಹದ್ದು ಏನೂ ಇಲ್ಲ. ಇಲ್ಲೊಂದಿಷ್ಟು ಕೊಂಕು, ಅಲ್ಲೊಂದಿಷ್ಟು ಅರ್ಧ ಸತ್ಯ ಸೇರಿಕೊಂಡು ಜಾಗರೂಕತೆಯಿಂದ ಈ ಕಥೆಯನ್ನು ಹೆಣೆಯಲಾಗಿದೆ. ಇಂದು ಪದ್ಮಾವತಿ, ನಾಳೆ ಅಯೋಧ್ಯಾ ಇಂತಹ ಘಟನೆಗಳು. ನಿರಂತರವಾಗಿ ಯುದ್ಧವೊಂದು ನಡೆಯುತ್ತಿದೆ, ತಮಗೆ ಅದರಲ್ಲಿ ಸೋಲಾಗಬಹುದು ಅನ್ನುವ ಭಾವನೆಯನ್ನು ಜನರಲ್ಲಿ ಮೂಡಿಸುತ್ತಿವೆ. ಇಂತಹ ಘಟನೆಗಳನ್ನು ನಿರಂತರವಾಗಿ ಸೃಷ್ಟಿಸುತ್ತಾ, ಉರಿ ಆರದ ಹಾಗೆ ನೋಡಿಕೊಳ್ಳುತ್ತಿವೆ.

ಬೇರೆ ಏನೂ ವಿಷಯ ಸಿಗದೇ ಹೋದಾಗ, ವಿಕಾಸದ ವಿಷಯವನ್ನು ಯಾಕೆ ಪ್ರಯತ್ನಿಸಬಾರದು? ಈ ಕಚ್ಚಾಟದಲ್ಲಿ ಯಾರಾದರೂ ಒಂದಿಷ್ಟು ಜನ ತೊಡಗಿಕೊಳ್ಳಬಹುದು ಅನ್ನೋ ಯೋಚನೆ ಇವರಿಗೆ ಬರುತ್ತೆ. ನಾವೆಲ್ಲಾ ಕೋತಿಗಳಾಗುತ್ತಿರುವುದು ಹೀಗೆ. ನಿಜವಾಗಿ ಆತಂಕದ ವಿಷಯ ಅಂದರೆ ಈ ಕುರಿತು ಏನೂ ಮಾಡುತ್ತಿಲ್ಲ. ನನ್ನದೇ ವಿಷಯಕ್ಕೆ ಬಂದರೆ ಕೈ ಹಿಸುಕಿಕೊಂಡು ಒಳ್ಳೆಯ ಶಿಕ್ಷಣ ಬೇಕು ಅಂತ ಮಾತನಾಡುತ್ತೇನೆ. ನಿಜ ಹೇಳಬೇಕೆಂದರೆ ಆಶೋಕ ವಿಶ್ವವಿದ್ಯಾನಿಲಯದಲ್ಲಿ ಮತ್ತು ಅಹಮದಾಬಾದ್ ವಿಶ್ವವಿದ್ಯಾನಿಲಯಗಳಲ್ಲ್ಲಿ ಒಳ್ಳೆ ಕೆಲಸಗಳು ಆಗುತ್ತಿವೆ. ಒಂದು ಉದಾರವಾದಿ ಶಿಕ್ಷಣ ಕೊಡೋ ಅದ್ಭುತವಾದ ಕೆಲಸ ಅಲ್ಲಿ ನಡೆಯುತ್ತಿದೆ. ಹಾಗೆಯೇ ಚೆನ್ನೈನಲ್ಲಿನ ಇನ್ಸ್ಟಿಟ್ಯೂಟ್ ಫಾರ್ ಫೈನಾನ್ಸಿಯಲ್ ಮ್ಯಾನೇಜ್‌ಮೆಂಟ್ ಅಂಡ್ ರೀಸರ್ಚ್ ಅಂತಹ ಸಂಸ್ಥೆಗಳಲ್ಲೂ ಒಳ್ಳೆ ಕೆಲಸ ಆಗುತ್ತಿದೆ. ಆದರೆ ತುಂಬಾ ಕಡಿಮೆ. ತುಂಬಾ ಸಮಯ ಉಳಿದಿಲ್ಲ.

ನಮ್ಮ ದೇಶವನ್ನು ಉಳಿಸಲು, ಅಥವಾ ನಮ್ಮಲ್ಲಿ ಅನೇಕರು ಇದೆ ಅಂದುಕೊಂಡಿದ್ದ ದೇಶವನ್ನು ಉಳಿಸಲು ಒಂದು ಚಳುವಳಿಯನ್ನು ಮಾಡಬೇಕಾಗಿದೆ. ನಮ್ಮ ದೇಶದಲ್ಲಿನ ಮುಕ್ತತೆಯ, ಕುತೂಹಲದ, ಸಂವಾದದ, ಅಮೂರ್ತತೆಯ, ಆತಿಥ್ಯದ ಮತ್ತು ಕಾರುಣ್ಯದ ಸಂಪ್ರದಾಯಗಳನ್ನು ಗೌರವಿಸಿ, ಮೆಚ್ಚುವ ಚಳುವಳಿಯೊಂದನ್ನು ಹುಟ್ಟುಹಾಕಬೇಕಾಗಿದೆ. ಈ ಚಳುವಳಿಯಲ್ಲಿ ಧಾರ್ಮಿಕರು ಮತ್ತು ನಿರೀಶ್ವರವಾದಿಗಳು; ಅಂತೆಯೇ ತೀವ್ರವಾದ ಭಾವುಕತೆ ಹಾಗೂ ವೈಚಾರಿಕತೆ ಮತ್ತು ವಿಶಿಷ್ಟವಾಗಿ ಭಾರತೀಯವೇ ಅಗಿರುವ ಇವೆಲ್ಲವುಗಳು ಒಟ್ಟಾಗಿ ಸೇರಿಕೊಂಡ ಚಳುವಳಿಯೊಂದು ಆಗಬೇಕಾಗಿದೆ. ಹೊಸ ರಾಷ್ಟ್ರೀಯ ಚಳುವಳಿಯೊಂದು ಬೇಕಾಗಿದೆ.

ಕೃಪೆ: ಇಂಡಿಯನ್ ಎಕ್ಸ್‌ಪ್ರೆಸ್

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೇಂದ್ರದ ವಿಬಿ-ಜಿ ರಾಮ್ ಜಿಗೆ ಟಕ್ಕರ್ : ಪ. ಬಂಗಾಳದ ‘ಕರ್ಮಶ್ರೀ’ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಡುವುದಾಗಿ ಘೋಷಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸರ್ಕಾರದ ಉದ್ಯೋಗ ಖಾತರಿ ಯೋಜನೆ 'ಕರ್ಮಶ್ರೀ'ಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಡಿಸೆಂಬರ್ 18) ಘೋಷಿಸಿದ್ದಾರೆ. ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ...

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ: ಶಾಸಕ ಕುಣಿಗಲ್ ರಂಗನಾಥ್ ವಿರುದ್ಧ ಕೆ.ಎನ್. ರಾಜಣ್ಣ ವಾಗ್ದಾಳಿ

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ ಮಾಡುವುದನ್ನು ಮಾಜಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಗುರುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆಡಳಿತ ಪಕ್ಷದೊಳಗಿನ ಸಾರ್ವಜನಿಕ ಭಿನ್ನಾಭಿಪ್ರಾಯದ ನಡುವೆಯೂ, "ಸಂಘಗಳಿಗೆ ವಿತರಿಸಲಾದ ನಿಧಿ ಠೇವಣಿದಾರರ ಹಣ,...

ತನ್ನದೇ ಶಾಸಕರ ಅನರ್ಹತೆ ಕೋರಿ ಬಿಆರ್‌ಎಸ್‌ ಅರ್ಜಿ : ತಿರಸ್ಕರಿಸಿದ ತೆಲಂಗಾಣ ಸ್ಪೀಕರ್

ಆಡಳಿತಾರೂಢ ಕಾಂಗ್ರೆಸ್‌ಗೆ ನಿಷ್ಠೆ ಬದಲಾಯಿಸಿದ್ದಾರೆಂದು ಹೇಳಲಾದ ಹತ್ತು ಬಿಆರ್‌ಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದ ಅರ್ಜಿಗಳ ಪೈಕಿ ಐದು ಅರ್ಜಿಗಳನ್ನು ತೆಲಂಗಾಣ ವಿಧಾನಸಭೆಯ ಸ್ಪೀಕರ್ ಗದ್ದಂ ಪ್ರಸಾದ್ ಕುಮಾರ್ ಬುಧವಾರ (ಡಿಸೆಂಬರ್ 18) ತಿರಸ್ಕರಿಸಿದ್ದಾರೆ....

ಸಾಮಾಜಿಕ ಬಹಿಷ್ಕಾರ, ದ್ವೇಷ ಭಾಷಣ ತಡೆ ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರ

ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025 ಗುರುವಾರ (ಡಿ.18) ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರಗೊಂಡಿತು. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ...

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...