ಕೋವಿಡ್ ಪ್ರೋಟೋಕಾಲ್‌ಗಳನ್ನು ಅನುಸರಿಸಿ ಸೆಪ್ಟೆಂಬರ್ 12 ರಂದು ನೀಟ್ ಯುಜಿ-2021 ಪರೀಕ್ಷೆ ನಡೆಯಲಿದೆ ಎಂದು ಒಕ್ಕೂಟ ಸರ್ಕಾರದ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಸೋಮವಾರ ಮಾಹಿತಿ ನೀಡಿದ್ದಾರೆ. ಆಸಕ್ತ ಅಭ್ಯರ್ಥಿಗಳು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ವೆಬ್‌ಸೈಟ್‌ನಲ್ಲಿ 2021 ರ ಜುಲೈ 13 ರ ಸಂಜೆ 5 ಗಂಟೆಯಿಂದ ಅರ್ಜಿ ಸಲ್ಲಿಸಲು ಪ್ರಾರಂಭಿಸಬಹುದಾಗಿದೆ.
“ಕೊರೊನಾ ಪ್ರೋಟೋಕಾಲ್‌ಗಳನ್ನು ಅನುಸರಿಸಿ 2021 ಸೆಪ್ಟೆಂಬರ್ 12 ರಂದು ದೇಶಾದ್ಯಂತ ನೀಟ್ ಯುಜಿ-2021 ನಡೆಯಲಿದೆ. ಅರ್ಜಿ ಪ್ರಕ್ರಿಯೆ ನಾಳೆ ಸಂಜೆ 5 ಗಂಟೆಯಿಂದ ಎನ್‌ಟಿಎ ವೆಬ್‌ಸೈಟ್ ಮೂಲಕ ಪ್ರಾರಂಭವಾಗಲಿದೆ” ಎಂದು ಧರ್ಮೇಂದ್ರ ಟ್ವೀಟ್ ಮಾಡಿದ್ದಾರೆ.
The NEET (UG) 2021 will be held on 12th September 2021 across the country following COVID-19 protocols. The application process will begin from 5 pm tomorrow through the NTA website(s).
— Dharmendra Pradhan (@dpradhanbjp) July 12, 2021
ಇದನ್ನೂ ಓದಿ: ಆರ್‌ಟಿಇ ನಿಧಿ ₹ 1.87 ಕೋಟಿ ದುರುಪಯೋಗ ಆರೋಪ – 20 ಬ್ಲಾಕ್ ಶಿಕ್ಷಣ ಅಧಿಕಾರಿಗಳಿಗೆ ನೋಟಿಸ್
ಸಾಮಾಜಿಕ ಅಂತರದ ಮಾನದಂಡಗಳನ್ನು ಖಚಿತಪಡಿಸಲು ಬೇಕಾಗಿ ಪರೀಕ್ಷೆಗಳನ್ನು ನಡೆಸುವ ನಗರಗಳ ಸಂಖ್ಯೆಯನ್ನು 155 ರಿಂದ 198 ಕ್ಕೆ ಹೆಚ್ಚಿಸಲಾಗಿದ್ದು, ಪರೀಕ್ಷಾ ಕೇಂದ್ರಗಳ ಸಂಖ್ಯೆಯನ್ನೂ ಹೆಚ್ಚಿಸಲಾಗಿದೆ ಎಂದು ಅವರು ಹೇಳಿದ್ದಾರೆ.
2020 ರಲ್ಲಿ ವೈದ್ಯಕೀಯ ಪ್ರವೇಶ ಪರೀಕ್ಷೆಗೆ ದೇಶಾದ್ಯಂತ 3862 ಕೇಂದ್ರಗಳು ಇದ್ದವು. ಪ್ರತಿ ವರ್ಷ ಸುಮಾರು 15 ಲಕ್ಷ ಆಕಾಂಕ್ಷಿಗಳು ಪರೀಕ್ಷೆಗೆ ಹಾಜರಾಗುತ್ತಾರೆ.
To ensure adherence to COVID-19 protocols, face mask will be provided to all candidates at the centre. Staggered time slots during entry and exit, contactless registration, proper sanitisation, seating with social distancing etc. will also be ensured.
— Dharmendra Pradhan (@dpradhanbjp) July 12, 2021
ಇದನ್ನೂ ಓದಿ: ಆನ್‌ಲೈನ್ ಶಿಕ್ಷಣಕ್ಕೆ ಮಾದರಿ ಸೃಷ್ಟಿಸದೆ, ಮೂಲಸೌಕರ್ಯಗಳಿಗೆ ಕ್ರಮ ತೆಗೆದುಕೊಳ್ಳದೆ ಪೋಷಕರನ್ನು ಆತಂಕಕ್ಕೆ ತಳ್ಳಿರುವ ಸರ್ಕಾರ


