ದೆಹಲಿ ಅಬಕಾರಿ ನೀತಿಯ ಭ್ರಷ್ಟಾಚಾರ ಪ್ರಕರಣ ಸಂಬಂಧ ಸಿಬಿಐ ದಾಖಲಿಸಿದ್ದ ಕೇಸ್‌ನಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್‌ಗೆ ಸುಪ್ರೀಂ ಕೋರ್ಟ್ ಜಾಮೀನು ನೀಡಿದೆ.
ಪ್ರಕರಣದ ಅರ್ಹತೆಯ ಬಗ್ಗೆ ಯಾವುದೇ ಸಾರ್ವಜನಿಕ ಪ್ರತಿಕ್ರಿಯೆ ನೀಡದಂತೆ ಸುಪ್ರೀಂ ಕೋರ್ಟ್ ಅರವಿಂದ್ ಕೇಜ್ರಿವಾಲ್‌ಗೆ ನಿರ್ದೇಶಿಸಿದೆ. ಅಬಕಾರಿ ನೀತಿಯ ಭ್ರಷ್ಟಾಚಾರ ಪ್ರಕರಣದಲ್ಲಿ ಕೇಜ್ರಿವಾಲ್‌ಗೆ ನಿಯಮಿತ ಜಾಮೀನು ನೀಡುವ ಕುರಿತು ನ್ಯಾಯಮೂರ್ತಿ ಉಜ್ಜಲ್ ಭುಯಾನ್ ಅವರು ನ್ಯಾಯಮೂರ್ತಿ ಸೂರ್ಯ ಕಾಂತ್ ಅವರೊಂದಿಗೆ ಇಂದು ಸಮ್ಮತಿಸಿದ್ದಾರೆ.
10 ಲಕ್ಷ ರೂ ಜಾಮೀನು ಬಾಂಡ್, ಇಬ್ಬರ ಶ್ಯೂರಿಟಿಗಳ ಮೇಲೆ ಅರವಿಂದ್ ಕೇಜ್ರಿವಾಲ್‌ಗೆ ಸುಪ್ರೀಂ ಜಾಮೀನು ನೀಡಿದೆ.
ಜಾಮೀನು ಕೋರಿ ಕೇಜ್ರಿವಾಲ್ ಸಲ್ಲಿಸಿದ್ದ ಅರ್ಜಿಯ ತೀರ್ಪನ್ನು ಸೆಪ್ಟೆಂಬರ್ 5 ರಂದು ಕಾಯ್ದಿರಿಸಿದ್ದ ನ್ಯಾಯಮೂರ್ತಿ ಸೂರ್ಯ ಕಾಂತ್ ಮತ್ತು ನ್ಯಾಯಮೂರ್ತಿ ಉಜ್ಜಲ್ ಭುಯಾನ್ ಅವರನ್ನೊಳಗೊಂಡ ಸುಪ್ರೀಂ ಕೋರ್ಟ್‌ನ ದ್ವಿಸದಸ್ಯ ಪೀಠ, ಶುಕ್ರವಾರ ತೀರ್ಪು ಪ್ರಕಟಿಸಿದ್ದು, ಅವರಿಗೆ ಜಾಮೀನು ನೀಡುವಲ್ಲಿ ಸರ್ವಾನುಮತದ ತೀರ್ಪು ನೀಡಿದೆ.
ಪ್ರಕರಣದ ಕುರಿತು ಸಾರ್ವಜನಿಕವಾಗಿ ಯಾವುದೇ ಹೇಳಿಕೆ ನೀಡದಂತೆ ಕೇಜ್ರಿವಾಲ್‌ಗೆ ಸುಪ್ರೀಂ ಕೋರ್ಟ್ ತನ್ನ ತೀರ್ಪಿನಲ್ಲಿ ಸೂಚಿಸಿದೆ.
ಜಾಮೀನು ನೀಡದರೂ ಸುಪ್ರೀಂ ಕೋರ್ಟಿನ ನ್ಯಾಯಾಧೀಶರು, ಸಿಬಿಐ ಅವರನ್ನು ಬಂಧಿಸುವ ವಿಷಯದಲ್ಲಿ ವಿಭಿನ್ನ ಅಭಿಪ್ರಾಯವನ್ನು ಹೊಂದಿದ್ದರು. ನ್ಯಾಯಮೂರ್ತಿ ಸೂರ್ಯಕಾಂತ್ ಅವರು, ಸಿಬಿಐ ಬಂಧನ ಕಾನೂನುಬದ್ಧವಾಗಿದೆ. ಆದರೆ, ನ್ಯಾಯಮೂರ್ತಿ ಭೂಯಾನ್ ಅವರು ಕೇಜ್ರಿವಾಲ್ ಬಂಧನಕ್ಕೆ ಸಂಬಂಧಿಸಿದಂತೆ ನ್ಯಾಯಮೂರ್ತಿ ಸೂರ್ಯಕಾಂತ್ ಅವರಿಗಿಂತ ಭಿನ್ನರಾಗಿದ್ದಾರೆ. ಇಡಿ ಪ್ರಕರಣದಲ್ಲಿ ನೀಡಲಾದ ಜಾಮೀನನ್ನು ವಿಫಲಗೊಳಿಸಲು ಸಿಬಿಐ ಅರವಿಂದ್ ಕೇಜ್ರಿವಾಲ್ ಅವರನ್ನು ಬಂಧಿಸಿದೆ ಎಂದು ನ್ಯಾಯಮೂರ್ತಿ ಭುಯಾನ್ ಹೇಳಿದರು.
ಕೇಜ್ರಿವಾಲ್ ಪರ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ, ಸಿಬಿಐ ತನ್ನ ಹೆಚ್ಚುವರಿ ಸಾಲಿಸಿಟರ್ ಜನರಲ್ (ಎಎಸ್‌ಜಿ) ಮತ್ತು ಹಿರಿಯ ವಕೀಲ ಎಸ್‌ವಿ ರಾಜು ಅವರ ಮೂಲಕ ವಾದ ಮತ್ತು ಸಲ್ಲಿಕೆಗಳನ್ನು ನ್ಯಾಯಾಲಯ ವಿವರವಾಗಿ ಆಲಿಸಿದೆ.
ಕೇಜ್ರಿವಾಲ್ ಅವರ ಬಂಧನವನ್ನು ಕಾನೂನುಬಾಹಿರ ಮತ್ತು ಅನಿಯಂತ್ರಿತ ಎಂದು ಹೇಳಿದ ಸಿಂಘ್ವಿ, ಅದಕ್ಕೆ ಕೆಲವು ಸುರಕ್ಷತೆಗಳು ಇರಬೇಕು ಎಂದು ಹೇಳಿದರು. “ಆರೋಪಿ ವ್ಯಕ್ತಿಯನ್ನು ಬಂಧಿಸುವ ಬಗ್ಗೆ ರಕ್ಷಣಾತ್ಮಕ ಕ್ರಮಗಳು ಇರಬೇಕು. ಯಾವುದೇ ಆಧಾರವಿಲ್ಲದೆ ನೀವು ಬಂಧಿಸಲು ಸಾಧ್ಯವಿಲ್ಲ” ಎಂದು ಅವರು ಹೇಳಿದರು.
“ಸುಳ್ಳು, ಷಡ್ಯಂತ್ರಗಳ ವಿರುದ್ಧದ ಹೋರಾಟದಲ್ಲಿ ಸತ್ಯಕ್ಕೆ ಮತ್ತೆ ಜಯ ಸಿಕ್ಕಿದೆ” ಎಂದು ಕೇಜ್ರಿವಾಲ್‌ಗೆ ಸಿಕ್ಕ ನಂತರ ಎಎಪಿ ನಾಯಕ ಮನೀಶ್ ಸಿಸೋಡಿಯಾ ಪ್ರತಿಕ್ರಿಯಿಸಿದ್ದಾರೆ.
ಇದನ್ನೂ ಓದಿ; ಅಬಕಾರಿ ನೀತಿ ಪ್ರಕರಣ | ಶುಕ್ರವಾರ ಅರವಿಂದ್ ಕೇಜ್ರಿವಾಲ್ ಜಾಮೀನು ಅರ್ಜಿ ತೀರ್ಪು ಪ್ರಕಟ


