”ಬುಲ್ಡೋಜರ್ ನ್ಯಾಯ” ಎಂದು ಕರೆಯಲ್ಪಡುವ ನ್ಯಾಯವನ್ನು ಸುಪ್ರೀಂಕೋರ್ಟ್ ಕಾನೂನುಬಾಹಿರ ಎಂದು ಪರಿಗಣಿಸಿದೆ ಎಂದು ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರು ಬುಧವಾರ ಎತ್ತಿ ತೋರಿಸಿದ್ದು, “ಕಾರ್ಯಾಂಗವು ಏಕಕಾಲದಲ್ಲಿ ನ್ಯಾಯಾಧೀಶರು, ತೀರ್ಪುಗಾರರು ಮತ್ತು ಶಿಕ್ಷೆಯನ್ನು ಜಾರಿಗೊಳಿಸುವವರಾಗಲು ಸಾಧ್ಯವಿಲ್ಲ.” ಎಂದು ಅವರು ಹೇಳಿದ್ದಾರೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ. ಕಾರ್ಯಾಂಗ ಏಕಕಾಲದಲ್ಲಿ ನ್ಯಾಯಾಧೀಶ
ಇಟಲಿಯಲ್ಲಿ ನಡೆದ ನ್ಯಾಯಾಧೀಶರ ಸಭೆಯಲ್ಲಿ ಸಾಮಾಜಿಕ-ಆರ್ಥಿಕ ನ್ಯಾಯವನ್ನು ನೀಡುವಲ್ಲಿ ಸಂವಿಧಾನದ ಪಾತ್ರದ ಬಗ್ಗೆ ಮಾತನಾಡಿದ ಮುಖ್ಯ ನ್ಯಾಯಮೂರ್ತಿ ಬಿ. ಆರ್. ಗವಾಯಿ ಅವರು, ಆಶ್ರಯ ಪಡೆಯುವ ಹಕ್ಕು ಮೂಲಭೂತ ಹಕ್ಕು ಎಂದು ಹೇಳಿದ್ದಾರೆ.
ಆರೋಪಿಗಳಿಗೆ ಶಿಕ್ಷೆ ನೀಡುವ ಕ್ರಮವಾಗಿ ಅವರ ಆಸ್ತಿಯನ್ನು ಕೆಡವುವ ಯಾವುದೇ ಅವಕಾಶ ಭಾರತೀಯ ಕಾನೂನಿನಲ್ಲಿ ಇಲ್ಲ. ಆದಾಗ್ಯೂ, ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ಈ ಪದ್ಧತಿ ಸಾಮಾನ್ಯವಾಗಿದೆ. ಪ್ರಕರಣಗಳಲ್ಲಿ ಆರೋಪಿಗಳಾಗಿದ್ದ ಹಲವಾರು ಜನರ, ಅದರಲ್ಲೂ ಮುಖ್ಯವಾಗಿ ಮುಸ್ಲಿಮರ ಮನೆ ಮತ್ತು ಆಸ್ತಿಗಳನ್ನು ಕೆಡವುವ ಹಲವಾರು ಘಟನೆ ಇತ್ತೀಚೆಗೆ ನಡೆದಿದೆ.
ಪ್ರಕರಣಗಳಲ್ಲಿ ಆರೋಪ ಹೊತ್ತಿರುವ ವ್ಯಕ್ತಿಗಳ ಆಸ್ತಿಗಳನ್ನು ಕೆಡವುವ ಪದ್ಧತಿಯನ್ನು ಕಾನೂನುಬಾಹಿರ ಎಂದು ನವೆಂಬರ್‌ನಲ್ಲಿ ಸುಪ್ರೀಂಕೋರ್ಟ್ ಹೇಳಿದ್ದು, ಅಕ್ರಮ ಅತಿಕ್ರಮಣಗಳನ್ನು ತೆಗೆದುಹಾಕುವ ಮೊದಲು ಪ್ರಕ್ರಿಯೆಗಳನ್ನು ಅನುಸರಿಸಬೇಕು ಎಂದು ತಿಳಿಸಿತ್ತು.
ಬುಧವಾರ ಈ ತೀರ್ಪನ್ನು ಉಲ್ಲೇಖಿಸಿದ ಮುಖ್ಯ ನ್ಯಾಯಮೂರ್ತಿ ಗವಾಯಿ ಅವರು, “… ಕಾನೂನು ಪ್ರಕ್ರಿಯೆಗಳನ್ನು ಬೈಪಾಸ್ ಮಾಡುವ ಇಂತಹ ಅನಿಯಂತ್ರಿತ ಧ್ವಂಸಗಳು ಕಾನೂನಿನ ನಿಯಮ ಮತ್ತು ಆರ್ಟಿಕಲ್ 21 ರ ಅಡಿಯಲ್ಲಿ ಆಶ್ರಯ ಪಡೆಯುವ ಮೂಲಭೂತ ಹಕ್ಕನ್ನು ಉಲ್ಲಂಘಿಸುತ್ತವೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ” ಎಂದು ಹೇಳಿದ್ದಾರೆ.
ಸಾಮಾನ್ಯ ನಾಗರಿಕರೊಬ್ಬರಿಗೆ ಮನೆ ಕಟ್ಟುವುದು ಎನ್ನುವುದು ವರ್ಷಗಳ ಕಾಲದ ಕಠಿಣ ಪರಿಶ್ರಮ, ಕನಸುಗಳ ಮತ್ತು ಆಕಾಂಕ್ಷೆಗಳ ಪರಾಕಾಷ್ಠೆಯಾಗಿದೆ ಎಂದು ಗವಾಯಿ ಹೇಳಿದ್ದಾರೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ. “ಮನೆ ಎಂದರೆ ಕೇವಲ ಆಸ್ತಿಯಲ್ಲ, ಅದು ಸ್ಥಿರತೆ, ಭದ್ರತೆ ಮತ್ತು ಭವಿಷ್ಯಕ್ಕಾಗಿ ಕುಟುಂಬ ಅಥವಾ ವ್ಯಕ್ತಿಗಳ ಸಾಮೂಹಿಕ ಭರವಸೆಯನ್ನು ಸಾಕಾರಗೊಳಿಸುತ್ತದೆ” ಎಂದು ಮುಖ್ಯ ನ್ಯಾಯಾಮೂರ್ತಿ ಹೇಳಿದ್ದಾರೆ. ಕಾರ್ಯಾಂಗ ಏಕಕಾಲದಲ್ಲಿ ನ್ಯಾಯಾಧೀಶ
ಇಲ್ಲಿ ಕ್ಲಿಕ್ ಮಾಡಿ
ಇದನ್ನೂಓದಿ: ವಸತಿ ಯೋಜನೆಯಲ್ಲಿ ಭಾರಿ ಲಂಚದ ಆರೋಪ ಮಾಡಿರುವ ಕಾಂಗ್ರೆಸ್ ಶಾಸಕ ಬಿ.ಆರ್. ಪಾಟೀಲ್; ಆಡಿಯೋ ವೈರಲ್
ವಸತಿ ಯೋಜನೆಯಲ್ಲಿ ಭಾರಿ ಲಂಚದ ಆರೋಪ ಮಾಡಿರುವ ಕಾಂಗ್ರೆಸ್ ಶಾಸಕ ಬಿ.ಆರ್. ಪಾಟೀಲ್; ಆಡಿಯೋ ವೈರಲ್

