ಜಮ್ಮು ಕಾಶ್ಮೀರ ಮತ್ತು ಹರಿಯಾಣ ವಿಧಾನಸಭೆ ಚುನಾವಣೆಗಳ ಮತದಾನ ಪ್ರಕ್ರಿಯೆ ಇಂದು (ಅ.5) ಕೊನೆಗೊಂಡಿದೆ. ಅಕ್ಟೋಬರ್ 8ರಂದು ಎರಡೂ ರಾಜ್ಯಗಳ ಫಲಿತಾಂಶ ಪ್ರಕಟಗೊಳ್ಳಲಿದೆ.
ಮತದಾನ ಅಂತ್ಯಗೊಂಡ ಬೆನ್ನಲ್ಲೇ ವಿವಿಧ ಸಂಸ್ಥೆಗಳು ನಡೆಸಿದ ಚುನಾವಣೋತ್ತರ ಸಮೀಕ್ಷೆಗಳು (Exit Poll) ಪ್ರಕಟಗೊಂಡಿದೆ. ಬಹುತೇಕ ಎಲ್ಲಾ ಸಮೀಕ್ಷೆಗಳು ಎರಡೂ ರಾಜ್ಯಗಳಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ರಚನೆಯಾಗುವ ಮುನ್ಸೂಚನೆ ನೀಡಿವೆ.
ಜಮ್ಮು ಕಾಶ್ಮೀರ ಮತಗಟ್ಟೆ ಸಮೀಕ್ಷೆ
ಜಮ್ಮು ಕಾಶ್ಮೀರದಲ್ಲಿ ಯಾವ ಪಕ್ಷ ಎಷ್ಟು ಸ್ಥಾನ ಪಡೆಯಬಹುದು? ಯಾರು ಅಧಿಕಾರ ಹಿಡಿಯಬಹುದು ಎಂಬುವುದರ ಕುರಿತು ವಿವಿಧ ಸಂಸ್ಥೆಗಳು ನಡೆಸಿದ ಸಮೀಕ್ಷೆಯ ವಿವರ ಕೆಳಗಿದೆ.
ಪೀಪಲ್ಸ್ ಪಲ್ಸ್
ಬಿಜೆಪಿ : 23-27
ಕಾಂಗ್ರೆಸ್ +ಎನ್‌ಸಿ : 46-50
ಪಿಡಿಪಿ : 7-11
ಇತರೆ 4-6
ಸಿ-ವೋಟರ್
ಬಿಜೆಪಿ : 27-32
ಕಾಂಗ್ರೆಸ್+ಎನ್‌ಸಿ : 40-48
ಪಿಡಿಪಿ-6-12
ಇತರೆ-6-11
ಹರಿಯಾಣ ಮತಗಟ್ಟೆ ಸಮೀಕ್ಷೆ
ಹರಿಯಾಣದಲ್ಲಿ ಯಾವ ಪಕ್ಷಗಳು ಎಷ್ಟು ಸ್ಥಾನಗಳನ್ನು ಪಡೆಯಬಹುದು ಎಂಬುವುದರ ಕುರಿತು ವಿವಿಧ ಸಂಸ್ಥೆಗಳು ನಡೆಸಿದ ಸಮೀಕ್ಷೆ ವಿವರ ಕೆಳಗಿದೆ.
ಪೀಪಲ್ಸ್ ಪಲ್ಸ್
ಕಾಂಗ್ರೆಸ್ : 49-61
ಬಿಜೆಪಿ-20-32
ಜೆಜೆಪಿ-0-3
ಐಎನ್‌ಎಲ್‌ಡಿ : 3-6
ಇತರೆ :2-5
ಧೈನಿಕ್ ಭಾಸ್ಕರ್
ಕಾಂಗ್ರೆಸ್ : 44-54
ಬಿಜೆಪಿ: 15-29
ಜೆಜೆಪಿ : 0-1
ಐಎನ್‌ಎಲ್‌ಡಿ : 1-15
ಧ್ರವ್ ರಿಸರ್ಚ್
ಕಾಂಗ್ರೆಸ್ : 50-64
ಬಿಜೆಪಿ :22-32
ಜೆಜೆಪಿ: 0
ಐಎನ್‌ಎಲ್‌ಡಿ :2-8
ಇದನ್ನೂ ಓದಿ : ಪ್ರವಾದಿ ಮುಹಮ್ಮದರ ಕುರಿತು ದ್ವೇಷ ಭಾಷಣ : ಯತಿ ನರಸಿಂಗಾನಂದ ಬಂಧನ


