ಅರವಿಂದ್ ಕೇಜ್ರಿವಾಲ್ ಅವರ ಆಮ್ ಆದ್ಮಿ ಪಕ್ಷಕ್ಕೆ ಸ್ಪಷ್ಟ ಬಹುಮತ ದೊರೆಯುತ್ತದೆ ಎಂಬ ಎಲ್ಲಾ ಎಕ್ಸಿಟ್ ಪೋಲ್‌ಗಳ ಅಭಿಪ್ರಾಯವನ್ನು ಬಿಜೆಪಿ ತಳ್ಳಿಹಾಕಿದೆ. ಅಮಿತ್ ಶಾ ನೇತೃತ್ವದಲ್ಲಿ ಪಕ್ಷದ ಸಂಸದರು ಮತ್ತು ದೆಹಲಿ ಘಟಕದ ಹಿರಿಯ ನಾಯಕರ ಸಭೆಯ ನಂತರ ಸಂಸದೆ ಮೀನಾಕ್ಷಿ ಲೇಖಿ ಎಕ್ಸಿಟ್ ಪೋಲ್ಸ್ ಎಗ್ಸಾಕ್ಟ್ ಪೋಲ್ ಅಲ್ಲ ಎಂದು ಹೇಳಿದ್ದಾರೆ.
“ಮತದಾನೋತ್ತರ ಸಮೀಕ್ಷೆಗಳು ಸಮರ್ಪಕವಾಗಿಲ್ಲ. ಏಕೆಂದರೆ ಅವು ಸಂಜೆ 4 ಅಥವಾ 5 ರವರೆಗೆ ಡೇಟಾವನ್ನು ಮಾತ್ರ ಸಂಗ್ರಹಿಸಲಾಗುತ್ತದೆ … “ನಮ್ಮ ಮತದಾರರು ತಡವಾಗಿ ಬಂದು ಸಂಜೆಯವರೆಗೆ ಮತ ಚಲಾಯಿಸಿದರು” ಎಂದ ಅವರು ಈ ಕುರಿತು ಸಭೆಯಲ್ಲಿ ಚಚಿಸಲಾಗಿದ್ದು, ದೆಹಲಿಯಲ್ಲಿ ಬಿಜೆಪಿ ಸರ್ಕಾರ ರಚಿಸುತ್ತದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ತಡವಾಗಿ ಮತದಾನ ಮಾಡುವುದು ಬಿಜೆಪಿ ನಿರ್ಧರಿಸಿದ ತಂತ್ರವಲ್ಲ. ದೆಹಲಿ ಮತ್ತು ದೇಶವನ್ನು ಸುರಕ್ಷಿತವಾಗಿಸಲು ಅಮಿತ್ ಷಾ ಬುಧವಾರ ಬೆಳಿಗ್ಗೆ 10.30ರ ಮೊದಲು ತಮ್ಮ ಕುಟುಂಬಗಳೊಂದಿಗೆ ಮತ ಚಲಾಯಿಸುವಂತೆ ಜನರನ್ನು ಕೇಳಿದ್ದರು. “ನಿಮ್ಮ ನಿರ್ಧಾರ ನನಗೆ ತಿಳಿದಿದೆ. ಫೆಬ್ರವರಿ 11 ರ ಫಲಿತಾಂಶಗಳು ಎಲ್ಲರಿಗೂ ಆಘಾತವನ್ನುಂಟು ಮಾಡುತ್ತದೆ” ಎಂದು ಅವರು ಹೇಳಿದ್ದಾರೆ.
ಐದು ಎಕ್ಸಿಟ್ ಪೋಲ್ ಸಮೀಕ್ಷೆಗಳ ಪ್ರಕಾರ ಅರವಿಂದ್ ಕೇಜ್ರಿವಾಲ್ ಅವರ ಆಮ್ ಆದ್ಮಿ ಪಕ್ಷವು 56 ಸ್ಥಾನಗಳೊಂದಿಗೆ ಗೆಲ್ಲುತ್ತದೆ ಎಂದು ಸೂಚಿಸಿವೆ. 2015 ರಲ್ಲಿ ಕೇವಲ ಮೂರು ಸ್ಥಾನ ಗೆದ್ದಿದ್ದ ಬಿಜೆಪಿಗೆ 14 ಸ್ಥಾನಗಳು ದೊರೆಯುವ ನಿರೀಕ್ಷೆಯಿದೆ.
ಕಳೆದ ವರ್ಷದ ಲೋಕಸಭಾ ಚುನಾವಣೆಯ ಫಲಿತಾಂಶದ ಆಧಾರದ ಮೇಲೆ, ಬಿಜೆಪಿ ತನ್ನ 70 ಕೇಂದ್ರ ಸಚಿವರು, 270 ಸಂಸದರು ಮತ್ತು ವಿವಿಧ ರಾಜ್ಯಗಳ ಮುಖಂಡರು ಮತ್ತು ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಭಾರೀ ಪ್ರಚಾರ ನಡೆಸಿತ್ತು. ಪಕ್ಷವು 40 ಸ್ಟಾರ್ ಪ್ರಚಾರಕರ ಪಟ್ಟಿಯನ್ನು ರಚಿಸಿತ್ತು. ಅವರಲ್ಲಿ ಹಲವರು ದೆಹಲಿಯ ಚುನಾವಣೆಯ ನಿರ್ಣಾಯಕ ಪ್ರದೇಶಗಳಾದ ಕೊಳೆಗೇರಿ ಪ್ರದೇಶಗಳಲ್ಲಿ ಮತದಾರರೊಂದಿಗೆ ವಾಸ್ತವ್ಯ ಸಹ ಹೂಡಿದ್ದರು.
ಬಿಜೆಪಿಯ ಸಭೆಗೆ ಸಮಾನಾಂತರವಾಗಿ ಆಮ್ ಆದ್ಮಿ ಪಕ್ಷವು ಒಂದು ಸಭೆಯನ್ನು ಸಹ ನಡೆಸಿತು. ಅದರಲ್ಲಿ ಎಲೆಕ್ಟ್ರಾನಿಕ್ ಮತದಾನ ಯಂತ್ರಗಳ ಸುರಕ್ಷತೆಯ ಬಗ್ಗೆ ಚರ್ಚಿಸಿರುವುದಾಗಿ ಮೂಲಗಳು ತಿಳಿಸಿವೆ. ಸಭೆಯಲ್ಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಮತ್ತು ಚುನಾವಣಾ ತಂತ್ರಜ್ಞ ಪ್ರಶಾಂತ್ ಕಿಶೋರ್ ಭಾಗವಹಿಸಿದ್ದರು.
ಚುನಾವಣೆಯ ನಂತರ ಬಿಜೆಪಿ ವಿಜಯದ ಮುನ್ಸೂಚನೆ ನೀಡಿರುವ ದೆಹಲಿ ಬಿಜೆಪಿ ಮುಖ್ಯಸ್ಥ ಮನೋಜ್ ತಿವಾರಿ ಹೇಳಿದ್ದಾರೆ. 48 ಸ್ಥಾನಗಳನ್ನು ಬಿಜೆಪಿ ಪಡೆಯಲಿದೆ, ಒಮ್ಮೆ ಅದು ಸಂಭವಿಸಿದಲ್ಲಿ ಯಾರೂ “ಇವಿಎಂಗಳನ್ನು ದೂಷಿಸಬಾರದು” ಎಂದು ಟ್ವೀಟ್ ಮಾಡಿದ್ದಾರೆ.



ಹಾಗಾದರೆ ಇವಿಎಮ್ ತಿರುಚಲಾಗಿದೆ ಎನ್ನುವುದು ನಿಜವಾಗಿದೆ.