2024ರ ಲೋಕಸಭೆ ಚುನಾವಣೆಗೆ ಇಂದು ಏಳನೇ ಹಂತದ ಮತದಾನ ಕೊನೆಗೊಂಡಿದೆ. ಜೂನ್ 4 ರಂದು ಅಂತಿಮ ಫಲಿತಾಂಶ ಪ್ರಕಟವಾಗಲಿದ್ದು, ಎಕ್ಸಿಟ್ ಪೋಲ್‌ಗಳು ಇಂದು ಸಂಜೆ 6:30ರಿಂದ ಪ್ರಸಾರವಾಗಲಿದೆ. 2024ರ ಲೋಕಸಭಾ ಚುನಾವಣೆಯ 543 ಸಂಸದೀಯ ಸ್ಥಾನಗಳ ನೈಜ ಫಲಿತಾಂಶ ಜೂನ್ 4ರಂದು ಭಾರತೀಯ ಚುನಾವಣಾ ಆಯೋಗ ಪ್ರಕಟಿಸಲಿದೆ. ಎಕ್ಸಿಟ್ ಪೋಲ್‌ಗಳು ಯಾವಾಗಲೂ 100% ಅಧಿಕೃತ ಫಲಿತಾಂಶಗಳಲ್ಲ, ನೈಜ ಫಲಿತಾಂಶಗಳಲ್ಲಿ ಸಾಕಷ್ಟು ವ್ಯತ್ಯಾಸಗಳು ಕಂಡು ಬರುತ್ತದೆ.
2014 ಮತ್ತು 2019 ರ ಲೋಕಸಭಾ ಚುನಾವಣೆಗಳಲ್ಲಿ ಎಕ್ಸಿಟ್ ಪೋಲ್‌ಗಳ ಫಲಿತಾಂಶಗಳು ಮತ್ತು ನಿಜವಾದ ಫಲಿತಾಂಶಗಳ ವಿವರ ಈ ಕೆಳಗಿದೆ.
2014ರ ಎಕ್ಸಿಟ್ ಪೋಲ್ vs ವಾಸ್ತವ ಫಲಿತಾಂಶಗಳು
2014ರಲ್ಲಿ ಹೆಚ್ಚಿನ ಎಕ್ಸಿಟ್ ಪೋಲ್ ಸಮೀಕ್ಷೆಗಳು ಬಿಜೆಪಿ ನೇತೃತ್ವದ ಎನ್‌ಡಿಎ ಅಧಿಕಾರಕ್ಕೆ ಬರುವುದನ್ನು ಹೇಳಿದ್ದವು. ಆದರೆ ವಿಜಯದ ಅಂತರವನ್ನು ನಿಖರವಾಗಿ ಊಹಿಸಲು ವಿಫಲವಾಗಿವೆ.
2014ರಲ್ಲಿನ ಎನ್‌ಡಿಎ ಬಗ್ಗೆ ಎಕ್ಸಿಟ್ ಪೋಲ್ ಫಲಿತಾಂಶಗಳು
1. ಇಂಡಿಯಾ ಟುಡೇ-ಸಿಸೆರೊ: ಎನ್‌ಡಿಎಗೆ 272 ಸ್ಥಾನಗಳನ್ನು ಊಹಿಸಿದ್ದವು.
2. ನ್ಯೂಸ್ 24-ಚಾಣಕ್ಯ: 340 ಸ್ಥಾನಗಳು
3. CNN-IBN-CSDS: 280 ಸೀಟುಗಳು
4. ಟೈಮ್ಸ್ ನೌ ORG: 249 ಸೀಟುಗಳು
5. ಎಬಿಪಿ ನ್ಯೂಸ್-ನೀಲ್ಸನ್: 274 ಸ್ಥಾನಗಳು
6. NDTV ಸಂಶೋಧನೆ: 279 ಸ್ಥಾನಗಳು
ಯುಪಿಎ ಬಗ್ಗೆ ಎಕ್ಸಿಟ್ ಪೋಲ್ ಫಲಿತಾಂಶಗಳು
1. ಇಂಡಿಯಾ ಟುಡೇ-ಸಿಸೆರೊ: ಯುಪಿಎಗೆ 115 ಸ್ಥಾನಗಳನ್ನು ಊಹಿಸಲಾಗಿದೆ
2.ನ್ಯೂಸ್ 24-ಚಾಣಕ್ಯ: 101 ಸ್ಥಾನಗಳು
3. CNN-IBN-CSDS: 97 ಸ್ಥಾನಗಳು
4. ಟೈಮ್ಸ್ ನೌ ORG: 148 ಸೀಟುಗಳು
5. ಎಬಿಪಿ ನ್ಯೂಸ್-ನೀಲ್ಸನ್: 97 ಸ್ಥಾನಗಳು
6. NDTV ಸಂಶೋಧನೆ: 103 ಸ್ಥಾನಗಳು
ನಿಜವಾದ ಫಲಿತಾಂಶಗಳು
2014ರ ಲೋಕಸಭೆ ಚುನಾವಣೆಯಲ್ಲಿ NDA 336 ಸ್ಥಾನಗಳನ್ನು ಪಡೆದುಕೊಂಡಿದೆ. ಅದರಲ್ಲಿ ಬಿಜೆಪಿ 282 ಸ್ಥಾನಗಳನ್ನು ಗೆದ್ದುಕೊಂಡಿದೆ. ಯುಪಿಎ 60 ಸ್ಥಾನಗಳಲ್ಲಿ ಗೆಲುವನ್ನು ಕಂಡಿದ್ದು, ಕಾಂಗ್ರೆಸ್ ಕೇವಲ 44 ಸ್ಥಾನಗಳನ್ನು ಮಾತ್ರ ಗೆದ್ದುಕೊಂಡಿತ್ತು.
2019ರ ಎಕ್ಸಿಟ್ ಪೋಲ್ vs ವಾಸ್ತವ ಫಲಿತಾಂಶಗಳು
ಎನ್‌ಡಿಎ ಬಗ್ಗೆ ಎಕ್ಸಿಟ್ ಪೋಲ್ ಫಲಿತಾಂಶಗಳು
1. ಇಂಡಿಯಾ ಟುಡೇ-ಆಕ್ಸಿಸ್: 339-365 ಸೀಟುಗಳು
2. ನ್ಯೂಸ್ 24-ಟುಡೇಸ್ ಚಾಣಕ್ಯ: 350 ಸ್ಥಾನಗಳು
3. News18-IPSOS: 336 ಸ್ಥಾನಗಳು
4. ಟೈಮ್ಸ್ ನೌ VMR: 306 ಸ್ಥಾನಗಳು
5. ಇಂಡಿಯಾ ಟಿವಿ-ಸಿಎನ್‌ಎಕ್ಸ್: 300 ಸೀಟುಗಳು
6. ಸುದರ್ಶನ ನ್ಯೂಸ್: 305 ಸ್ಥಾನಗಳು
ಯುಪಿಎ ಎಕ್ಸಿಟ್ ಪೋಲ್ ಫಲಿತಾಂಶಗಳು
1. ಇಂಡಿಯಾ ಟುಡೇ-ಆಕ್ಸಿಸ್: 77-108 ಸೀಟುಗಳು
2.ನ್ಯೂಸ್ 24-ಟುಡೇಸ್ ಚಾಣಕ್ಯ: 95 ಸ್ಥಾನಗಳು
3. News18-IPSOS: 82 ಸ್ಥಾನಗಳು
4. ಟೈಮ್ಸ್ ನೌ VMR: 132 ಸ್ಥಾನಗಳು
5. ಇಂಡಿಯಾ TV-CNX: 120 ಸ್ಥಾನಗಳು
6. ಸುದರ್ಶನ ಸುದ್ದಿ: 124 ಸ್ಥಾನಗಳು
ನಿಜವಾದ ಫಲಿತಾಂಶಗಳು
2019ರ ಲೋಕಸಭೆ ಚುನಾವಣೆಯಲ್ಲಿ NDA 352 ಸ್ಥಾನಗಳನ್ನು ಗೆದ್ದಿದೆ. ಬಿಜೆಪಿ ಏಕಾಂಗಿಯಾಗಿ 303 ಸ್ಥಾನವನ್ನು ಗಳಿಸಿದೆ. ಯುಪಿಎ 91 ಸ್ಥಾನಗಳಲ್ಲಿ ಗೆಲುವನ್ನು ಕಂಡಿದ್ದು, ಕಾಂಗ್ರೆಸ್ 52 ಸ್ಥಾನಗಳನ್ನು ಗೆದ್ದುಕೊಂಡಿತ್ತು. ಆದರೆ ವಾಸ್ತವವಾಗಿ ನಿಖರವಾದ ಫಲಿತಾಂಶವನ್ನು ಯಾವುದೇ ಎಕ್ಸಿಟ್ ಪೋಲ್ ಫಲಿತಾಂಶಗಳು ನೀಡಿಲ್ಲ.
ಲೋಕಸಭೆ ಚುನಾವಣೆ 2024 ಬಿಜೆಪಿ ನೇತೃತ್ವದ ಎನ್‌ಡಿಎ ಮತ್ತು ಕಾಂಗ್ರೆಸ್ ನೇತೃತ್ವದ ಇಂಡಿಯಾ ಮೈತ್ರಿಕೂಟದ ನಡುವೆ ನೇರ ಹಣಾಹಣಿಗೆ ಸಾಕ್ಷಿಯಾಗಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಆಡಳಿತಾರೂಢ ಬಿಜೆಪಿ ಸತತ ಮೂರನೇ ಬಾರಿಗೆ ಅಧಿಕಾರ ಹಿಡಿಯಲು ಪ್ರಯತ್ನಿಸಿದೆ. ಮೋದಿಯನ್ನು ಅಧಿಕಾರದಿಂದ ಕೆಳಗಿಳಿಸಿ ಹೊಸ ಸರಕಾರ ರಚನೆಗೆ ಪ್ರತಿಪಕ್ಷಗಳು ಬಿರುಸಿನ ಪ್ರಚಾರ ನಡೆಸಿದೆ. ಜೂ.4ರಂದು ಯಾರಿಗೆ ಮತದಾರ ಆಶೀರ್ವಾದ ಮಾಡಿದ್ದಾನೆ ಎಂದು ತಿಳಿದು ಬರಲಿದೆ.
ಇದನ್ನು ಓದಿ: ದಲಿತ ಯುವಕನನ್ನು ಅಪಹರಿಸಿ ಬೆತ್ತಲೆಗೊಳಿಸಿ ಥಳಿತ: ಬಿಜೆಪಿ ಶಾಸಕಿಯ ಪುತ್ರನ ವಿರುದ್ಧ ಎಫ್‌ಐಆರ್


