ಎಬಿವಿಪಿ ನಡೆಸಿದ ಪ್ರತಿಭಟನೆಗಳ ಕಾರಣಕ್ಕೆ ಪುಣೆಯ ಭಾರತೀಯ ವಿಜ್ಞಾನ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆ(IISER) ಗುರುವಾರ ಬಿ.ಆರ್. ಅಂಬೇಡ್ಕರ್ ಅವರ ಜನ್ಮ ದಿನಾಚರಣೆಯ ಕಾರ್ಯಕ್ರಮದಲ್ಲಿ ಮಾತನಾಡಲು ಆಹ್ವಾನಿಸಲಾದ ಹಲವಾರು ತಜ್ಞರನ್ನು ಕೈಬಿಟ್ಟಿದೆ ಎಂದು ದಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ. ಕಾರ್ಯಕ್ರಮದಲ್ಲಿ ಮಾತನಾಡಲು ಬರುವ ತಜ್ಞರು “ತುಕ್ಡೆ ತುಕ್ಡೆ ಗ್ಯಾಂಗ್ ಸದಸ್ಯರು” ಎಂದು ಆರೋಪಿಸಿ ಎಬಿವಿಪಿ ಪ್ರತಿಭಟನೆ ಮಾಡಿತ್ತು. ತಜ್ಞರನ್ನು ‘ತುಕ್ಡೆ ತುಕ್ಡೆ ಗ್ಯಾಂಗ್’
ಎಬಿವಿಪಿಯು ಬಿಜೆಪಿಯ ಮಾತೃ ಸಂಘಟನೆಯಾದ ಆರೆಸ್ಸೆಸ್‌ನ ವಿದ್ಯಾರ್ಥಿ ವಿಭಾಗವಾಗಿದೆ. ಬಿಜೆಪಿ ಮತ್ತು ಅದರ ಅಂಗಸಂಸ್ಥೆಗಳ ನಾಯಕರು ತಮ್ಮ ವಿರೋಧಿಗಳು ಮತ್ತು ಭಿನ್ನಮತೀಯರನ್ನು “ತುಕ್ಡೆ ತುಕ್ಡೆ” ಗ್ಯಾಂಗ್ ಅಥವಾ ಭಾರತವನ್ನು ವಿಭಜಿಸಲು ಪ್ರಯತ್ನಿಸುತ್ತಿರುವ ವ್ಯಕ್ತಿಗಳ ಗುಂಪಿನ ಸದಸ್ಯರು ಎಂದು ಆಗಾಗ್ಗೆ ಆರೋಪಿಸುತ್ತಾರೆ.
ಪತ್ರಿಕಾ ಹೇಳಿಕೆಯಲ್ಲಿ, ಅಂಬೇಡ್ಕರ್ ಅವರ ವಾರ್ಷಿಕೋತ್ಸವವನ್ನು ಆಚರಿಸಲು ಸರಣಿ ಮಾತುಕತೆಗಳನ್ನು ಆಯೋಜಿಸಲಾಗಿದೆ ಎಂದು IISER ತಿಳಿಸಿದೆ ಎಂದು ದಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ. “ವಿದ್ಯಾರ್ಥಿ ನೇತೃತ್ವದ ಮುಕ್ತಿಪರ್ವ ಕಾರ್ಯಕ್ರಮದ ಭಾಗವಾಗಿ, ಸಾಮಾಜಿಕ ಸಮಾನತೆ, ಜಾತಿ ಮತ್ತು ಲಿಂಗ ಚಲನಶೀಲತೆ ಕ್ಷೇತ್ರಗಳಲ್ಲಿ ಕೆಲಸ ಮಾಡುವ ಶಿಕ್ಷಣ ತಜ್ಞರಿಂದ ಸಂಸ್ಥೆಯಲ್ಲಿ ಸಂವಾದಗಳನ್ನು ಯೋಜಿಸಲಾಗಿತ್ತು” ಎಂದು ಸಂಸ್ಥೆ ಹೇಳಿತ್ತು ಎಂದು ಪತ್ರಿಕೆ ವರದಿ ಮಾಡಿದೆ.
ದೀಪಾಲಿ ಸಾಳ್ವೆ, ನಜೀಮಾ ಪರ್ವೀನ್ ಮತ್ತು ಸ್ಮಿತಾ ಎಂ ಪಾಟೀಲ್ ಸೇರಿದಂತೆ ಹಲವಾರು ಶಿಕ್ಷಣ ತಜ್ಞರನ್ನು ಜಾತಿ, ಅರ್ಥಶಾಸ್ತ್ರ ಮತ್ತು ಲಿಂಗ ಚಲನಶೀಲತೆಯ ಬಗ್ಗೆ ಮಾತನಾಡಲು ಆಹ್ವಾನಿಸಲಾಗಿತ್ತು ಎಂದು ಅದು ಹೇಳಿದೆ. “ಆದಾಗ್ಯೂ, ವಿವಾದವನ್ನು ತಪ್ಪಿಸಲು, ಈ ಸಮಯದಲ್ಲಿ ಯೋಜಿತ ಭಾಷಣಕಾರರನ್ನು ಕೈಬಿಡಲು ನಾವು ನಿರ್ಧಾರ ತೆಗೆದುಕೊಂಡಿದ್ದೇವೆ” ಎಂದು ಸಂಸ್ಥೆ ಹೇಳಿದೆ.
इंडियन इन्स्टिट्यूट ऑफ सायन्स एकुकेशन अँड रिसर्च (IISER) पुणे येथे आयोजित करण्यात आलेल्या मुक्तीपर्व या कार्यक्रमात निमंत्रित माओवादी, कट्टरपंथी आणि तुकडे तुकडे गॅंगसोबत संबंधित असणाऱ्या वक्त्यांवर प्रतिबंध घालण्यात यावे अशी मागणी pic.twitter.com/zS7aSjWnXu
— ABVP Maharashtra (@mahaabvp) April 10, 2025
ಸಂಸ್ಥೆಯು ನಿರ್ಧಾರ ತೆಗೆದುಕೊಳ್ಳುವ ಒಂದು ದಿನದ ಮೊದಲು, ಎಬಿವಿಪಿ ಕಾರ್ಯಕರ್ತರು ಕಾರ್ಯಕ್ರಮಕ್ಕೆ ಆಹ್ವಾನಿಸಲಾದ ಭಾಷಣಕಾರರ ವಿರುದ್ಧ ತಮ್ಮ ಪ್ರತಿಭಟನೆ ನಡೆಸಿತ್ತು. ಈ ಬಗ್ಗೆ ಸಂಸ್ಥೆಯ ನಿರ್ದೇಶಕ ಸುನಿಲ್ ಭಾಗವತ್ ಅವರನ್ನು ಭೇಟಿಯಾಗಿದ್ದ ಎಬಿವಿಪಿ ಸದಸ್ಯರು, ಮಾತನಾಡಲು ಆಹ್ವಾನಿಸಲಾದ “ಕಟ್ಟರ್ ಮಾವೋವಾದಿಗಳ” ಉಪಸ್ಥಿತಿಯನ್ನು ಆಕ್ಷೇಪಿಸುವುದಾಗಿ ಹೇಳಿದ್ದರು.
“ಅವರ ಹೇಳಿಕೆಗಳು ಕಾನೂನು ಮತ್ತು ಸುವ್ಯವಸ್ಥೆಗೆ ಸಮಸ್ಯೆ ಉಂಟುಮಾಡುವ ಸಾಧ್ಯತೆಯಿದೆ. ಜೊತೆಗೆ ಅವರು ಧರ್ಮದ ಆಧಾರದ ಮೇಲೆ ಸಮಾಜವನ್ನು ವಿಭಜಿಸಲು ಪ್ರಯತ್ನಿಸುತ್ತಾರೆ. ಅಲ್ಲದೆ, ಅಂಬೇಡ್ಕರ್ ತಮ್ಮ ಜೀವನದುದ್ದಕ್ಕೂ ಎಡಪಂಥೀಯರ ಸಿದ್ಧಾಂತವನ್ನು ವಿರೋಧಿಸಿದ್ದರು ಎಂದು ಅದು ಹೇಳಿಕೊಂಡಿದೆ.
“ಐಐಎಸ್‌ಇಆರ್ ಅವರ ಜಯಂತಿಯ ಸಂದರ್ಭದಲ್ಲಿ ‘ತುಕ್ಡೆ ತುಕ್ಡೆ ಗ್ಯಾಂಗ್’ ಜೊತೆಗೆ ಗುರುತಿಸಿಕೊಂಡ ಸದಸ್ಯರ ಉಪಸ್ಥಿತಿಗೆ ಅವಕಾಶ ನೀಡಿದ್ದು ಏಕೆ?. ಕಳೆದ ವರ್ಷ ಮುಕ್ತಿಪರ್ವದ ಸಂದರ್ಭದಲ್ಲಿ, ಭಾಷಣಕಾರರು ಜನರ ಭಾವನೆಗಳಿಗೆ ನೋವುಂಟು ಮಾಡುವ ಹೇಳಿಕೆಗಳನ್ನು ನೀಡಿದ್ದರು.” ಎಂದು ಎಬಿವಿಪಿ ಕೇಳಿದೆ. ಕಾರ್ಯಕ್ರಮದ ಬಗ್ಗೆ ಪುಣೆ ಪೊಲೀಸರಿಗೆ ಕೂಡಾ ಎಬಿವಿಪಿ ಮನವಿ ಸಲ್ಲಿಸಿದೆ ಎಂದು ವರದಿಯಾಗಿದೆ. ತಜ್ಞರನ್ನು ‘ತುಕ್ಡೆ ತುಕ್ಡೆ ಗ್ಯಾಂಗ್’
ಇಲ್ಲಿ ಕ್ಲಿಕ್ ಮಾಡಿ
ಇದನ್ನೂಓದಿ: ‘ಪ್ರತಿ ಊರಿನಲ್ಲಿ 8-10 ಜನ ಸಾಯಲಿ..’; ವಕ್ಫ್ ಕಾಯ್ದೆ ವಿರುದ್ಧ ಹಿಂಸಾಚಾರಕ್ಕೆ ಪ್ರಚೋದನೆ ನೀಡಿದ ಕಾಂಗ್ರೆಸ್ ಮುಖಂಡ
‘ಪ್ರತಿ ಊರಿನಲ್ಲಿ 8-10 ಜನ ಸಾಯಲಿ..’; ವಕ್ಫ್ ಕಾಯ್ದೆ ವಿರುದ್ಧ ಹಿಂಸಾಚಾರಕ್ಕೆ ಪ್ರಚೋದನೆ ನೀಡಿದ ಕಾಂಗ್ರೆಸ್ ಮುಖಂಡ

