Homeರಾಜಕೀಯಭಾರತದ ರಾಷ್ಟ್ರಪತಿಯನ್ನು ಹೇಗೆ ಆಯ್ಕೆ ಮಾಡಲಾಗುತ್ತದೆ? | ಸಂಕ್ಷಿಪ್ತ ವಿವರಣೆ

ಭಾರತದ ರಾಷ್ಟ್ರಪತಿಯನ್ನು ಹೇಗೆ ಆಯ್ಕೆ ಮಾಡಲಾಗುತ್ತದೆ? | ಸಂಕ್ಷಿಪ್ತ ವಿವರಣೆ

- Advertisement -
- Advertisement -

ವಿಶ್ವದ ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ದೇಶಗಳಲ್ಲಿ ಒಂದಾಗಿರುವ ಭಾರತವು ತನ್ನ ಅಧ್ಯಕ್ಷರನ್ನು ಆಯ್ಕೆ ಮಾಡುವ ರೀತಿಯೂ ಇತರ ದೇಶಗಳಿಗಿಂತಲೂ ಭಿನ್ನವಾಗಿದೆ. ಅಧ್ಯಕ್ಷೀಯ ಆಡಳಿತವಿರುವ ದೇಶಗಳಲ್ಲಿ ಅಲ್ಲಿನ ಪ್ರಜೆಗಳೇ ತನ್ನ ಅಧ್ಯಕ್ಷರನ್ನು ನೇರವಾಗಿ ಆಯ್ಕೆ ಮಾಡುತ್ತಾರೆ. ಆದರೆ ಭಾರತದಲ್ಲಿ ಪರೋಕ್ಷವಾಗಿ ತನ್ನ ಅಧ್ಯಕ್ಷರನ್ನು ಆಯ್ಕೆ ಮಾಡಲಾಗುತ್ತದೆ.

ದೇಶದ ಹಾಲಿ ರಾಷ್ಟ್ರಪತಿ ರಾಮ್ ನಾಥ್‌‌ ಕೋವಿಂದ್ ಅವರ ಅಧಿಕಾರಾವಧಿ ಜುಲೈ 24 ರಂದು ಕೊನೆಗೊಳ್ಳುತ್ತಿದೆ. ಈ ಹಿನ್ನೆಲೆಯಲ್ಲಿ ದೇಶದ 16ನೇ ರಾಷ್ಟ್ರಪತಿ ಆಯ್ಕೆ ಮಾಡುವ ‘ರಾಷ್ಟ್ರಪತಿ ಚುನಾವಣೆ’ ಜುಲೈ 18 ರಂದು ನಡೆಯಲಿದೆ. ಜುಲೈ 21 ರಂದು ಈ ಚುನಾವಣೆಯ ಫಲಿತಾಂಶ ಪ್ರಕಟವಾಗಲಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಭಾರತವು ತನ್ನ ರಾಷ್ಟ್ರಪತಿಯನ್ನು ಆಯ್ಕೆ ಮಾಡುವ ಪ್ರಕ್ರಿಯೆ ಹೇಗೆ, ಈ ಚುನಾವಣೆಯಲ್ಲಿ ಯಾರ್‍ಯಾರು ಮತ ಚಲಾಯಿಸಬಹುದು, ಮತದಾನದ ವಿಧಾನ ಮತ್ತು ಇತರ ಕಾರ್ಯವಿಧಾನಗಳ ಬಗ್ಗೆ ಇಲ್ಲಿ ಸಂಕ್ಷಿಪ್ತವಾಗಿ ವಿವರಿಸಲಾಗಿದೆ.

ಮತದಾನ ಪ್ರಕ್ರಿಯೆಯಲ್ಲಿ ಯಾರು ಭಾಗವಹಿಸಬಹುದು?

ಭಾರತೀಯ ಸಂವಿಧಾನದ 54 ನೇ ವಿಧಿಯು ಅಧ್ಯಕ್ಷರ ಚುನಾವಣೆಯಲ್ಲಿ ಭಾಗವಹಿಸಬಹುದಾದ ಮತದಾರರಿಗೆ ನಿಬಂಧನೆಗಳನ್ನು ವಿವರಿಸುತ್ತದೆ. ಸಂಸತ್ತಿನ ಉಭಯ ಸದನಗಳ ಸಂಸದರು, ದೆಹಲಿ-ಪುದುಚೇರಿ (ಎರಡೂ ಕೇಂದ್ರಾಡಳಿತ ಪ್ರದೇಶಗಳು) ಸೇರಿದಂತೆ ಎಲ್ಲಾ ರಾಜ್ಯಗಳ ಶಾಸನ ಸಭೆಗಳ ‘ಚುನಾಯಿತ’ ಸದಸ್ಯರು (MLA) ಈ ಚುನಾವಣೆಯಲ್ಲಿ ಭಾಗವಹಿಸಬಹುದು.

ಈ ಚುನಾಯಿತ ಸದಸ್ಯರನ್ನು ‘ಚುನಾವಣಾ ಕಾಲೇಜ್‌’ನ ಸದಸ್ಯರು ಎಂದು ಹೇಳುತ್ತಾರೆ. ಈ ಚುನಾವಣಾ ಕಾಲೇಜ್‌ನ ಸದಸ್ಯರು ಮಾತ್ರ ಭಾರತದ ರಾಷ್ಟ್ರಪತಿಯನ್ನು ಚುನಾಯಿಸಬಹುದು ಎಂದು ಸಂವಿಧಾನ ಹೇಳುತ್ತದೆ.

“ಚುನಾಯಿತ ಸದಸ್ಯ” ಎಂಬ ಪದವು ಸಂಸತ್ತಿನ ಸದನ ಅಥವಾ ರಾಜ್ಯಗಳ ಶಾಸನ ಸಭೆಗಳಿಗೆ ನಾಮನಿರ್ದೇಶಗಳ ಮೂಲಕ ಆಯ್ಕೆಯಾದ ಸದಸ್ಯರು ಭಾಗವಹಿಸುವಂತಿಲ್ಲ ಎಂದು ಸ್ಪಷ್ಟಪಡಿಸುತ್ತದೆ. ಅದೇ ರೀತಿ, ರಾಜ್ಯಗಳ ವಿಧಾನ ಪರಿಷತ್ತಿನ ಸದಸ್ಯರು ಕೂಡಾ ರಾಷ್ಟ್ರಪತಿ ಚುನಾವಣೆಯಲ್ಲಿ ಮತ ಚಲಾಯಿಸುವಂತಿಲ್ಲ.

ಇದನ್ನೂ ಓದಿ: ರಾಷ್ಟ್ರಪತಿ ಚುನಾವಣೆ: ವಿರೋಧ ಪಕ್ಷಗಳ ಒಮ್ಮತದ ಅಭ್ಯರ್ಥಿಯಾಗಿ ಶರದ್‌ ಪವಾರ್‌‌ ಸಾಧ್ಯತೆ

ಲೋಕಸಭೆಯಲ್ಲಿ ಇಬ್ಬರು ಮತ್ತು ರಾಜ್ಯಸಭೆಯಲ್ಲಿ 12 ನಾಮನಿರ್ದೇಶಿತ ಸದಸ್ಯರು ಇದ್ದಾರೆ. ಹೀಗಾಗಿ ರಾಷ್ಟ್ರಪತಿ ಚುನಾವಣೆಗೆ ಮತಚಲಾಯಿಸುವ ಲೋಕಸಭೆ ಮತ್ತು ರಾಜ್ಯಸಭೆಯ ಮತದಾರರು ಕ್ರಮವಾಗಿ 543 ಮತ್ತು 233 ಆಗಿದ್ದು, ಒಟ್ಟು 776 ಮತದಾರರಿದ್ದಾರೆ.

ಇದರ ಜೊತೆಗೆ ಎಲ್ಲಾ ರಾಜ್ಯಗಳು, ದೆಹಲಿ ಮತ್ತು ಪುದುಚೇರಿಯ MLAಗಳು ಸೇರಿ ಒಟ್ಟು 4,033 ಮತದಾರರಿದ್ದಾರೆ. ಹೀಗಾಗಿ ರಾಷ್ಟ್ರಪತಿ ಚುನಾವಣಾ ಕಾಲೇಜಿನಲ್ಲಿ ಒಟ್ಟು 4,809 ಸದಸ್ಯರು ಅಥವಾ ಮತದಾರರು ಇದ್ದಾರೆ.

ಮತದಾರನ ‘ಮೌಲ್ಯ’ ಪ್ರಾಮುಖ್ಯತೆ ಪಡೆಯುತ್ತದೆ, ಮತದಾರನ ‘ಸಂಖ್ಯೆ’ ಅಲ್ಲ

ಚುನಾವಣೆಯಲ್ಲಿ ಸಂಸತ್ತಿನ ಸದಸ್ಯರು ಮತ್ತು ವಿಧಾನಸಭೆಯ ಸದಸ್ಯರಿಗೆ ವಿಭಿನ್ನ ಮೌಲ್ಯಗಳನ್ನು ನಿಗದಿಪಡಿಸಲಾಗಿದೆ. ಒಬ್ಬ ಸಂಸದನ ಮತದ ಮೌಲ್ಯವನ್ನು ‘700’ ಎಂದು ನಿಗದಿ ಪಡಿಸಲಾಗಿದೆ. ಈ ಮೌಲ್ಯವನ್ನು ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಒಟ್ಟು ಮತಗಳ ಮೌಲ್ಯವನ್ನು, ಒಟ್ಟು ಚುನಾಯಿತ ಸಂಸದರ ಸಂಖ್ಯೆಯಿಂದ ಭಾಗಿಸುವ ಮೂಲಕ ಲೆಕ್ಕಹಾಕಲಾಗುತ್ತದೆ. ಭಾರತೀಯ ಚುನಾವಣಾ ಆಯೋಗದ ಪ್ರಕಾರ, ಸಂಸತ್ತಿನ ಒಟ್ಟು ಮತಗಳ ಸಂಖ್ಯೆ 5,43,200 ಮತ್ತು ಸಂಸದರ ಸಂಖ್ಯೆ 776 ಆಗಿರುವುದರಿಂದ, ಪ್ರತಿ ಸಂಸದರ ಮತದ ಮೌಲ್ಯ 700 ಆಗಿರುತ್ತದೆ.

2018 ಕ್ಕಿಂತ ಮೊದಲು ಪ್ರತೀ ಸಂಸದನ ಮೌಲ್ಯ 708 ಇತ್ತು. ಆದರೆ 2018 ರಲ್ಲಿ ಜಮ್ಮು ಕಾಶ್ಮೀರ ರಾಜ್ಯವನ್ನು ವಿಸರ್ಜಿಸಿದ ನಂತರ ಇದನ್ನು ಕಡಿಮೆಗೊಳಿಸಲಾಗಿದೆ. ಜಮ್ಮು ಕಾಶ್ಮೀರ ಒಟ್ಟು 6,264 ಮತಗಳ ಮೌಲ್ಯವನ್ನು ಹೊಂದಿರುವ 87 ಸದಸ್ಯರನ್ನು ಒಳಗೊಂಡಿದೆ.

ಇದನ್ನೂ ಓದಿ: ಜುಲೈ 18ಕ್ಕೆ ರಾಷ್ಟ್ರಪತಿ ಚುನಾವಣೆ, 21ರಂದು ಮತ ಎಣಿಕೆ: ಚುನಾವಣಾ ಆಯೋಗ

ಶಾಸಕರ ಮತದ ಮೌಲ್ಯ ಲೆಕ್ಕಾಚಾರ

ಪ್ರತಿ ಶಾಸಕರ ಮತಗಳ ಮೌಲ್ಯವು ಅವರ ರಾಜ್ಯದ ಜನಸಂಖ್ಯೆ ಮತ್ತು ಆ ರಾಜ್ಯದ ಶಾಸಕಾಂಗ ಸಭೆಯ ಬಲವನ್ನು ಅವಲಂಬಿಸಿರುತ್ತದೆ. ಇಲ್ಲಿ ಏಕರೂಪತೆಯನ್ನು ಖಚಿತಪಡಿಸಿಕೊಳ್ಳಲು, ಮೌಲ್ಯವನ್ನು ನಿರ್ಧರಿಸಲು ಬಳಸಲಾಗುವ ಒಂದು ಸೂತ್ರ ಕೆಳಗಿನಂತಿದೆ:

ರಾಜ್ಯದ ಜನಸಂಖ್ಯೆಯನ್ನು ಅದರ ಶಾಸಕಾಂಗ ಸಭೆಯ ಸಂಖ್ಯೆಗೆ 1,000 ದಿಂದ ಭಾಗಿಸಲಾಗುತ್ತದೆ

ಜನಸಂಖ್ಯೆಯನ್ನು 1971 ರ ಜನಗಣತಿಯನ್ನು ಆಧರಿಸಿ ಲೆಕ್ಕ ಮಾಡಲಾಗುತ್ತದೆ. ಉದಾಹರಣೆಗೆ, ಕರ್ನಾಟಕದ ಒಬ್ಬ ಎಂಎಲ್ಎ ಹೊಂದಿರುವ ಮತದ ಮೌಲ್ಯವನ್ನು ಲೆಕ್ಕಾಚಾರ ಮಾಡಲು ನಾವು ಉದ್ದೇಶಿಸಿದ್ದರೆ, ನಾವು 1971 ರ ಜನಗಣತಿಯಿಂದ ಕರ್ನಾಟಕದ ಜನಸಂಖ್ಯೆಯ ಡೇಟಾವನ್ನು ಬಳಸಬೇಕು. 1971 ರ ಜನಗಣತಿಯ ಪ್ರಕಾರ 29,299,014 ರಾಜ್ಯದಲ್ಲಿ ಜನಸಂಖ್ಯೆಯಿತ್ತು. 224 ರಷ್ಟಿರುವ ಕರ್ನಾಟಕ ವಿಧಾನಸಭೆಯ ಸಂಖ್ಯಾಬಲವನ್ನು ಬಳಸಬೇಕು.

ಆದ್ದರಿಂದ, ರಾಜ್ಯದ ಶಾಸಕರೊಬ್ಬರ ಮತದ ಮೌಲ್ಯವನ್ನು 29,299,014 ÷ 224 x 100=130.7 ಎಂದು ಲೆಕ್ಕ ಹಾಕಬಹುದಾಗಿದೆ. ಅದನ್ನು 131 ಪೂರ್ಣಗೊಳಿಸಲಾಗುತ್ತದೆ. ಆದ್ದರಿಂದ, ಕರ್ನಾಟಕದ ಶಾಸಕರ ಮತವು 131 ರ ಮೌಲ್ಯವನ್ನು ಹೊಂದಿರುತ್ತದೆ.

https://www.google.com/search?q=how+to+calculate+mla+vote+value+in+president+election&sxsrf=ALiCzsb61HnbWZqRU4hZOtNop-oc8iwAig:1655128326039&tbm=isch&source=iu&ictx=1&vet=1&fir=7P0L0AdQ1jw3QM%252CBnB_PFmmb7lOUM%252C_%253B5zK-dwY8eD0mRM%252CBnB_PFmmb7lOUM%252C_%253BuygfgqHCNv0ylM%252Ca42xA2l8ZufUFM%252C_%253B5b_ssRLNJkE8gM%252C3Kct3927MGYdpM%252C_%253BPwoF4eHY6uEw0M%252CCoBmTD__lj_EDM%252C_%253BLT4mIb_CRJDxTM%252Ca42xA2l8ZufUFM%252C_%253B1pvvhudaYR6-WM%252Cy1WoKv1CFbKKjM%252C_%253BIbfEqq6RILNqPM%252CEibRYrEu3GyvBM%252C_%253B2FCT0dqHXevN7M%252CWUKkY6nDVx8C_M%252C_%253BPWQhU-jycHWFsM%252CBnB_PFmmb7lOUM%252C_&usg=AI4_-kQhLML0UM86darodbhkfUeHYY42gA&sa=X&ved=2ahUKEwiTl7m_yar4AhUn-DgGHSKsCSAQ9QF6BAgiEAE#imgrc=7P0L0AdQ1jw3QM
ಕರ್ನಾಟಕದ ಶಾಸಕರೊಬ್ಬರ ಮತದ ಮೌಲ್ಯ ಕಂಡು ಹಿಡಿಯುವ ವಿಧಾನ

ಸಂವಿಧಾನದ 84 ನೇ ತಿದ್ದುಪಡಿಯು 2026 ರ ನಂತರ ನಡೆಸಿದ ರಾಷ್ಟ್ರೀಯ ಜನಗಣತಿಯನ್ನು ಪ್ರಕಟಿಸುವವರೆಗೆ ಕ್ಷೇತ್ರದ ಗಡಿಗಳಲ್ಲಿ ಯಾವುದೇ ಬದಲಾವಣೆ ಮಾಡುವಂತಿಲ್ಲ. ಆದ್ದರಿಂದ 2031 ರ ಜನಗಣತಿ ಪ್ರಕಟವಾದ ನಂತರ ಮಾತ್ರ ಈ ಮೌಲ್ಯಗಳಲ್ಲಿ ಬದಲಾವಣೆ ಆಗುತ್ತದೆ.

ಇದನ್ನೂ ಓದಿ:  ಶಿಕ್ಷಣವನ್ನು ಕೇಸರಿಕರಣ ಮಾಡುವುದರಲ್ಲಿ ತಪ್ಪೇನಿದೆ: ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು

ಪ್ರಸ್ತುತ, 208 ಮೌಲ್ಯಗಳ ಮೂಲಕ ಉತ್ತರ ಪ್ರದೇಶದ ಶಾಸಕರು ತಮ್ಮ ಮತಗಳಿಗೆ ಹೆಚ್ಚಿನ ಮೌಲ್ಯವನ್ನು ಹೊಂದಿದ್ದಾರೆ, ಸಿಕ್ಕಿಂ ಅತ್ಯಂತ ಕಡಿಮೆ ಮೌಲ್ಯವನ್ನು ಹೊಂದಿದ್ದು ಅಲ್ಲಿನ ಶಾಸಕರೊಬ್ಬರ ಮತದ ಮೌಲ್ಯ ಏಳು ಆಗಿದೆ.

ಗುರುವಾರ ಬಿಡುಗಡೆ ಮಾಡಿರುವ ಚುನಾವಣಾ ಆಯೋಗದ ಅಂಕಿಅಂಶಗಳ ಪ್ರಕಾರ, ಸಂಸದರ ಒಟ್ಟು ಮತಗಳ ಮೌಲ್ಯ 5,43,200 ಆಗಿದ್ದರೆ, ಶಾಸಕರ ಮತಗಳ ಮೌಲ್ಯ 5,43,231 ಆಗಿದೆ. ಹೀಗಾಗಿ ರಾಷ್ಟ್ರಪತಿ ಚುನಾವಣೆಗೆ ಒಟ್ಟು 10,86,431 ಮೌಲ್ಯಗಳ ಮತಗಳನ್ನು ಪರಿಗಣಿಸಲಾಗುತ್ತದೆ.

ಮತದಾನದ ವಿಧಾನ

ರಾಜ್ಯಸಭಾ ಚುನಾವಣೆಗಳಂತೆ, ರಾಷ್ಟ್ರಪತಿ ಚುನಾವಣೆಗಳು ಕೂಡ ಒಂದೇ ವರ್ಗಾವಣೆ ಮತದ ವ್ಯವಸ್ಥೆಯನ್ನು ಅನುಸರಿಸುತ್ತವೆ ಮತ್ತು ಪ್ರಮಾಣಾನುಗುಣ ಪ್ರಾತಿನಿಧ್ಯದ ತತ್ವವನ್ನು ಆಧರಿಸಿವೆ. ಒಂದೇ ವರ್ಗಾವಣೆ ಮಾಡಬಹುದಾದ ಮತವು ಮತದಾರರಿಗೆ ಆದ್ಯತೆಯ ಕ್ರಮದಲ್ಲಿ ಯಾವುದೇ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಅನುಮತಿಸುತ್ತದೆ.

ಉದಾಹರಣೆಗೆ ಈ ಚುನಾವಣೆಯತಲ್ಲಿ 10 ಅಭ್ಯರ್ಥಿಗಳು ಸ್ಪರ್ಧಿಸುತ್ತಿದ್ದರೆ, ಮತದಾರರು ಅವರ ಆಯ್ಕೆಯ ಆಧಾರದ ಮೇಲೆ ಅವರನ್ನು 1,2,3,4 ಎಂದು ಗುರುತಿಸಬಹುದು.

ಇದನ್ನೂ ಓದಿ: ಧರ್ಮ ಆಚರಿಸಿ, ದ್ವೇಷ ಭಾಷಣವನ್ನಲ್ಲ: ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು

ಮತದಾರರಿಗೆ ನೀಡಲಾಗುವ ಮತಪತ್ರದಲ್ಲಿ ಯಾವುದೇ ರಾಜಕೀಯ ಪಕ್ಷಗಳ ಚಿಹ್ನೆಗಳು ಇರುವುದಿಲ್ಲ. ಅದರ ಹೊರತಾಗಿ ಮತಪತ್ರಗಳಲ್ಲಿ ಮೇಲೆ ಎರಡು ಕಾಲಂಗಳಿರುತ್ತವೆ. ಮೊದಲ ಕಾಲಂನಲ್ಲಿ ಚುನಾವಣೆಗೆ ಸ್ಪರ್ಧಿಸಿರುವ ಅಭ್ಯರ್ಥಿಗಳ ಹೆಸರಿದ್ದರೆ, ಎರಡನೇ ಕಾಲಂನಲ್ಲಿ ಆದ್ಯತೆಯ ಕ್ರಮವಿದೆ. ಅಭ್ಯರ್ಥಿಗಳ ಹೆಸರಿನ ಮುಂದೆ ನೀಡಿರುವ ಜಾಗದಲ್ಲಿ ಮತದಾರರು ತಮ್ಮ ಆದ್ಯತೆಗಳನ್ನು ಗುರುತಿಸಬಹುದು.

ಗರಿಷ್ಠ ಸಂಖ್ಯೆಯ ಮೊದಲ ಪ್ರಾಶಸ್ತ್ಯದ ಮತಗಳನ್ನು ಪಡೆದ ಅಭ್ಯರ್ಥಿಯನ್ನು ವಿಜೇತ ಎಂದು ಘೋಷಿಸಲಾಗುತ್ತದೆ.

ಮತದಾರರು ತಮ್ಮ ಆದ್ಯತೆಯ ಅಭ್ಯರ್ಥಿಯನ್ನು ಗುರುತಿಸಲು ಚುನಾವಣಾ ಆಯೋಗ ಒದಗಿಸುವ ಪೆನ್ ಅನ್ನು ಬಳಸಬೇಕಾಗುತ್ತದೆ. ಒಂದು ವೇಳೆ ಮತದಾರರು ಬೇರೆ ಪೆನ್‌ ಅನ್ನು ಬಳಸಿದರೆ ಅವರ ಬ್ಯಾಲೆಟ್ ಪೇಪರ್ ಅನ್ನು ರದ್ದುಗೊಳಿಸುತ್ತದೆ ಎಂದು ಚುನಾವಣಾ ಆಯೋಗ ಹೇಳಿದೆ.

ಇನ್‌ಪುಟ್‌: ಡೆಕ್ಕನ್‌ ಹೆರಾಲ್ಡ್‌‌

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...