“ಇಂಡೋನೇಷ್ಯಾದಲ್ಲಿ ಶೇ.90ರಷ್ಟು ಮುಸ್ಲಿಮರು ಮತ್ತು ಶೇ.2ರಷ್ಟು ಹಿಂದೂಗಳಿದ್ದಾರೆ. ಆ ದೇಶದಲ್ಲಿ 11,000 ದೇವಾಲಯಗಳಿವೆ. ಆದರೆ, ಅಲ್ಲಿ ಯಾವುದೇ ಗಲಭೆಗಳು ನಡೆದಿರುವ ಬಗ್ಗೆ ಕೇಳಿಲ್ಲ. ಏಕೆಂದರೆ ಅಲ್ಲಿ ಆರ್‌ಎಸ್‌ಎಸ್ ಇಲ್ಲ” ಎಂದು ನಟ ಪ್ರಕಾಶ್ ರಾಜ್ ಹೇಳಿರುವುದಾಗಿ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟರ್ ಒಂದು ವೈರಲ್ ಆಗಿದೆ.


ಫ್ಯಾಕ್ಟ್‌ಚೆಕ್ : ಮೇಲೆ ನಾವು ಉಲ್ಲೇಖಿಸಿದಂತೆ ಪ್ರಕಾಶ್ ರಾಜ್ ಅವರು ಹೇಳಿರುವುದು ನಿಜಾನಾ? ಎಂದು ನಾವು ಪರಿಶೀಲಿಸಿದ್ದೇವೆ. ಈ ವೇಳೆ ಆ ರೀತಿಯ ಹೇಳಿಕೆ ಕೊಟ್ಟಿರುವ ಕುರಿತು ಯಾವುದೇ ಮಾಧ್ಯಮ ವರದಿಗಳು ನಮಗೆ ಲಭ್ಯವಾಗಿಲ್ಲ.
ಆಗಸ್ಟ್ 26ರಂದು ವೈರಲ್ ಪೋಸ್ಟರ್ ಕುರಿತು ಎಕ್ಸ್‌ನಲ್ಲಿ ಪೋಸ್ಟ್ ಒಂದನ್ನು ಹಾಕಿದ್ದ ಪ್ರಕಾಶ್ ರಾಜ್, “Megh Updates’ನೀವು ಅಥವಾ ಇನ್ಯಾರೋ, ಯಾರು ಇದನ್ನು ಸೃಷ್ಟಿಸಿದ್ದೀರೋ ನೀವೆ ಅದರ ಹೊಣೆ ಹೊತ್ತುಕೊಳ್ಳಿ. ಇದು ನನ್ನ ಹೇಳಿಕೆಯಲ್ಲ. ನಿಮ್ಮ ಹೇಳಿಕೆಗೆ ನನ್ನ ಹೆಸರು ಹಾಕಬೇಡಿ” ಎಂದು ಬರೆದುಕೊಂಡಿದ್ದರು.
If it’s you @MeghUpdates .. or Who ever has created this.. own it up. THIS IS NOT MY STATEMENT don’t put your statements in my name #justasking https://t.co/uD9e3agRxm
— Prakash Raj (@prakashraaj) August 26, 2024
ಪ್ರಕಾಶ್ ರಾಜ್ ತನ್ನ ಪೋಸ್ಟ್‌ನಲ್ಲಿ ಉಲ್ಲೇಖಿಸಿರುವ ‘Megh Updates’ಒಂದು ಬಲಪಂಥೀಯ ಎಕ್ಸ್ ಖಾತೆಯಾಗಿದ್ದು, ಸದಾ ಸುಳ್ಳು ಮತ್ತು ಕೋಮುದ್ವೇಷ ಹರಡುವ ಸುದ್ದಿಗಳನ್ನು ಹರಡುತ್ತಿರುತ್ತವೆ. ಈ ಖಾತೆಯ ಹಲವು ಸುಳ್ಳು ಮತ್ತು ಕೋಮುವೈಷಮ್ಯದ ಪೋಸ್ಟ್‌ಗಳ ಕುರಿತು ನಾನುಗೌರಿ. ಕಾಂ ಹಲವು ಬಾರಿ ಫ್ಯಾಕ್ಟ್‌ಚೆಕ್ ಸುದ್ದಿಗಳನ್ನು ಪ್ರಕಟಿಸಿದೆ.
ಆಗಸ್ಟ್ 28ರಂದು ಎಕ್ಸ್‌ನಲ್ಲಿ ಮತ್ತೊಂದು ಪೋಸ್ಟ್ ಹಾಕಿದ್ದ ಪ್ರಕಾಶ್ ರಾಜ್, “ಕೆಲ ಸಾಮಾಜಿಕ ಮಾಧ್ಯಮ ಖಾತೆಗಳು ಇತ್ತೀಚೆಗೆ ನನ್ನ ಹೆಸರಿನಲ್ಲಿ ಸುಳ್ಳು ಸುದ್ದಿ ಹರಡಿರುವುದಕ್ಕೆ ಸಂಬಂಧಿಸಿದಂತೆ ನಾನು ಪೊಲೀಸರಿಗೆ ದೂರು ನೀಡಿದ್ದೇನೆ. ಕಾನೂನು ತನ್ನದೇ ಆದ ಕ್ರಮ ತೆಗೆದುಕೊಳ್ಳಲಿದೆ. ಈ ದ್ವೇಷ ರಾಜಕಾರಣ ಮತ್ತು ವಾಟ್ಸಪ್ ಮತಾಂಧತೆ ನನ್ನ ಧ್ವನಿಯನ್ನು ಅಡಗಿಸಲು ಸಾಧ್ಯವಿಲ್ಲ ಅಥವಾ ಸತ್ಯ ಮಾತನಾಡುವುದನ್ನು ತಡೆಯಲು ಸಾಧ್ಯವಿಲ್ಲ” ಎಂದು ಬರೆದುಕೊಂಡಿದ್ದರು.
In regards to the recent misinformation and false statements attributed to me by certain social media accounts, I have lodged a complaint with the police. The law will take its own course now. This hate politics .. and whatsup bigotry can not silence my Voice… nor stop me from… https://t.co/6XJsz70pCE
— Prakash Raj (@prakashraaj) August 28, 2024
ಒಟ್ಟಿನಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಾಶ್ ರಾಜ್ ಹೆಸರಿನಲ್ಲಿ ವೈರಲ್ ಆಗಿರುವ ಹೇಳಿಕೆ, ಅವರದ್ದಲ್ಲ. ಅದು ಯಾರೋ ಸೃಷ್ಟಿಸಿದ್ದ ಸುಳ್ಳು ಸಂದೇಶ ಎಂಬುವುದನ್ನು ಸ್ವತಃ ಪ್ರಕಾಶ್ ರಾಜ್ ಅವರೇ ಸ್ಪಷ್ಟಪಡಿಸಿದ್ದಾರೆ ಮತ್ತು ದೂರು ದಾಖಲಿಸಿರುವುದಾಗಿಯೂ ತಿಳಿಸಿದ್ದಾರೆ.
ಇದನ್ನೂ ಓದಿ : FACT CHECK : ವೈರಲ್ ವಿಡಿಯೋ ಕೋಲ್ಕತ್ತಾ ಅತ್ಯಾಚಾರ ಸಂತ್ರಸ್ತೆಯದ್ದಲ್ಲ


