“ಐಆರ್‌ಸಿಟಿಸಿಯ ಹೊಸ ನಿಯಮದ ಪ್ರಕಾರ ವ್ಯಕ್ತಿಯೊಬ್ಬರು ತನ್ನ ವೈಯುಕ್ತಿಕ ಐಡಿ ಬಳಸಿ ರಕ್ತ ಸಂಬಂಧಿಗಳಿಗೆ ಅಥವಾ ಒಂದೇ ರೀತಿಯ ಉಪನಾಮೆ ಇರುವವರಿಗೆ ಮಾತ್ರ ರೈಲು ಟಿಕೆಟ್ ಕಾಯ್ದಿರಿಸಬಹುದು. ಸ್ನೇಹಿತರು ಅಥವಾ ಇತರರಿಗೆ ಟಿಕೆಟ್‌ಗಳನ್ನು ಕಾಯ್ದಿರಿಸಿದರೆ 10 ಸಾವಿರ ರೂಪಾಯಿ ದಂಡ ಮತ್ತು 3 ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಬಹುದು” ಎಂಬ ಸಂದೇಶವೊಂದು ಹರಿದಾಡುತ್ತಿದೆ.

ಫ್ಯಾಕ್ಟ್‌ಚೆಕ್ : ಸಾಮಾಜಿಕ ಜಾಲತಾಣದ ಸುದ್ದಿಯ ಸತ್ಯಾಸತ್ಯತೆಯನ್ನು ನಾವು ಪರಿಶೀಲಿಸಿದ್ದೇವೆ. ಗೂಗಲ್‌ನಲ್ಲಿ ಸಂಬಂಧಿತ ಕೀ ವರ್ಡ್ ಬಳಸಿ ಮಾಹಿತಿ ಹುಡುಕಿದ್ದೇವೆ. ಈ ವೇಳೆ ಐಆರ್‌ಸಿಟಿಸಿ ವೆಬ್‌ಸೈಟ್‌ನಲ್ಲಿ ನಮಗೆ ಈ ಕುರಿತು ಮಾಹಿತಿ ದೊರೆತಿದೆ. ವೆಬ್‌ಸೈಟ್‌ನ ಬುಕ್‌ಮೈ ಟ್ರೈನ್ ಎಂಬ ವಿಭಾಗದಲ್ಲಿ ಪದೇ ಪದೇ ಕೇಳುವ ಪ್ರಶ್ನೆಗಳ (FAQ) ಪಟ್ಟಿಯ ಕ್ರ.ಸಂ 12ರಲ್ಲಿ “ವಿಮಾನದಂತೆ ನೀವು ಸ್ನೇಹಿತರು ಮತ್ತು ಕುಟುಂಬಸ್ಥರಿಗೆ ಟಿಕೆಟ್‌ಗಳನ್ನು ಬುಕ್ ಮಾಡಬಹುದು. ನೆನಪಿಡಿ, ಪ್ರಯಾಣಿಸುವಾಗ ಪ್ರಯಾಣಿಕರು ಮಾನ್ಯವಾದ ಫೋಟೋ ಗುರುತಿನ ಪುರಾವೆಯನ್ನು ಹೊಂದಿರಬೇಕು” ಎಂದು ತಿಳಿಸಲಾಗಿದೆ.
ನಾವು ಇನ್ನಷ್ಟು ಮಾಹಿತಿ ಹುಡುಕಿದಾಗ ಜೂನ್ 27ರಂದು ಲೈವ್ ಮಿಂಟ್ ಈ ಕುರಿತು ಪ್ರಕಟಿಸಿದ ವರದಿಯೊಂದು ಲಭ್ಯವಾಗಿದೆ. ವರದಿಯಲ್ಲಿ “ಐಆರ್‌ಸಿಟಿಸಿ ತನ್ನ ಸಾಮಾಜಿಕ ಮಾಧ್ಯಮ ಪೋಸ್ಟ್‌ನಲ್ಲಿ ವ್ಯಕ್ತಿಯೊಬ್ಬರು ಸ್ನೇಹಿತರು, ಕುಟುಂಬಸ್ಥರು ಮತ್ತು ಸಂಬಂಧಿಕರಿಗೆ ಆನ್‌ಲೈನ್‌ನಲ್ಲಿ ಟಿಕೆಟ್‌ಗಳನ್ನು ಬುಕ್ ಮಾಡಬಹುದು ಎಂದು ಸ್ಪಷ್ಟಪಡಿಸಿರುವುದಾಗಿ ಹೇಳಿದೆ” ಎನ್ನಲಾಗಿದೆ.

ಜೂನ್ 25, 2024ರಂದು ಎಕ್ಸ್‌ನಲ್ಲಿ ಪೋಸ್ಟ್ ಹಾಕಿದ್ದ ಐಆರ್‌ಸಿಟಿಸಿ, ವಿವಿಧ ಉಪನಾಮಗಳ ಕಾರಣ ಇ-ಟಿಕೆಟ್‌ಗಳ ಬುಕ್ಕಿಂಗ್‌ಗೆ ನಿರ್ಬಂಧ ವಿಧಿಸಿರುವ ಕುರಿತು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ಸುದ್ದಿ ಸುಳ್ಳು ಮತ್ತು ತಪ್ಪುದಾರಿಗೆಳೆಯುವಂತಿದೆ. ಸಂಬಂಧಪಟ್ಟವರು ಇಂತಹ ಸುಳ್ಳು ಸುದ್ದಿ ಹರಡುವುದನ್ನು ನಿಲ್ಲಿಸಬೇಕಿದೆ. ರೈಲ್ವೆ ಮಂಡಳಿಯ ಮಾರ್ಗಸೂಚಿಗಳ ಪ್ರಕಾರ ಐಆರ್‌ಸಿಟಿಸಿ ಸೈಟ್‌ನಲ್ಲಿ ಟಿಕೆಟ್‌ಗಳನ್ನು ಬುಕ್ ಮಾಡಲಾಗುತ್ತಿದೆ ಎಂದು ಸ್ಪಷ್ಟಪಡಿಸಿದೆ”.

ರೈಲ್ವೆ ಸಚಿವಾಲಯದ ವಕ್ತಾರರು ಕೂಡ ಈ ವಿಷಯವನ್ನು ದೃಢಪಡಿಸಿದ್ದು “ಒಬ್ಬರು ವ್ಯಕ್ತಿ ಸ್ನೇಹಿತರು, ಕುಟುಂಬಸ್ಥರು ಮತ್ತು ಸಂಬಂಧಿಕರಿಗೆ ವೈಯಕ್ತಿಕ ಐಡಿ ಬಳಸಿ ಟಿಕೆಟ್‌ಗಳನ್ನು ಬುಕ್ ಮಾಡಬಹುದು. ತಿಂಗಳಿಗೆ 12 ಟಿಕೆಟ್‌ಗಳವರೆಗೆ ಬುಕ್ಕಿಂಗ್ ಮಾಡಬಹುದು. ಆಧಾರ್-ದೃಢೀಕೃತ ಬಳಕೆದಾರರಾದರೆ ತಿಂಗಳಿಗೆ 24 ಟಿಕೆಟ್‌ಗಳನ್ನು ಕಾಯ್ದಿರಿಸಬಹುದು. ಟಿಕೆಟ್‌ನಲ್ಲಿರುವ ಪ್ರಯಾಣಿಕರಲ್ಲಿ ಪೈಕಿ ಒಬ್ಬರ ಆಧಾರ್ ದೃಢೀಕರಿಸಿದ್ದರೆ ಸಾಕು” ಎಂದು ತಿಳಿಸಿದ್ದಾರೆ.

“ವೈಯಕ್ತಿಕ ಐಡಿ ಬಳಸಿ ಬುಕ್ ಮಾಡಲಾದ ಟಿಕೆಟ್‌ಗಳು ವಾಣಿಜ್ಯ ಉದ್ದೇಶಕ್ಕೆ ಮಾರಾಟ ಮಾಡುವಂತಿಲ್ಲ. ಅಂತಹ ಕೃತ್ಯವು ರೈಲ್ವೆ ಕಾಯ್ದೆ 1989ರ ಸೆಕ್ಷನ್ 143 ರ ಅಡಿಯಲ್ಲಿ ಅಪರಾಧವಾಗಿದೆ” ಎಕ್ಸ್ ಪೋಸ್ಟ್‌ನಲ್ಲಿ ಹೇಳಿದ್ದಾರೆ.
ಆದ್ದರಿಂದ, ಒಬ್ಬರು ವ್ಯಕ್ತಿ ತನ್ನ ವೈಯಕ್ತಿಕ ಐಡಿ ಬಳಸಿಕೊಂಡು ರಕ್ತ ಸಂಬಂಧಗಳಿಗೆ ಅಥವಾ ಅದೇ ಉಪನಾಮ ಹೊಂದಿರುವವರಿಗೆ ಮಾತ್ರ ಟಿಕೆಟ್‌ಗಳನ್ನು ಬುಕ್ ಮಾಡಬಹುದು ಎಂಬ ವೈರಲ್ ಸುದ್ದಿ ಸುಳ್ಳಾಗಿದೆ. ಇ-ಟಿಕೆಟ್ ಬುಕ್ಕಿಂಗ್‌ಗೆ ಅಂತಹ ಯಾವುದೇ ನಿಯಮ ಜಾರಿಗೊಳಿಸಿಲ್ಲ ಎಂದು ಐಆರ್‌ಸಿಟಿಸಿ ಮತ್ತು ರೈಲ್ವೆ ಸ್ಪಷ್ಟಪಡಿಸಿದೆ.
ಇದನ್ನೂ ಓದಿ : FACT CHECK : ಮುಸ್ಲಿಂ ಯುವಕ ಹಿಂದೂ ಯುವತಿಯನ್ನು ಹತ್ಯೆಗೈದಿದ್ದಾನೆ ಎಂಬುವುದು ಸುಳ್ಳು


