ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್ ಅವರು ಮೀಸಲಾತಿಯನ್ನು (ಜಾತಿ ಆಧಾರಿತ) ಕೊನೆಗೊಳಿಸುವ ಹೇಳಿಕೆ ನೀಡಿದ್ದಾರೆ ಎಂದು ಪ್ರತಿಪಾದಿಸಿ ಹಿಂದಿ ಪತ್ರಿಕೆಯೊಂದರ ಫೋಟೋವನ್ನು ಹಲವು ಸಾಮಾಜಿಕ ಮಾಧ್ಯಮಗಳ ಬಳಕೆದಾರರು ಹಂಚಿಕೊಂಡಿದ್ದಾರೆ.

ಸೆಪ್ಟೆಂಬರ್ 20ರಂದು S4 (@samyak_samaj)ಎಂಬ ಎಕ್ಸ್ ಖಾತೆಯಲ್ಲಿ ಫೋಟೋ ಹಂಚಿಕೊಂಡು ” ದೇಶದಲ್ಲಿ ಅಶಾಂತಿಗೆ ಕಾಂಗ್ರೆಸ್ ಪಕ್ಷವೇ ಮೂಲ ಕಾರಣ. ಕಾಂಗ್ರೆಸ್ ಉಳಿದರೆ ಮೀಸಲಾತಿ ಮೇಲಿನ ದಾಳಿ ಮುಂದುವರಿಯಲಿದೆ. ಕಾಂಗ್ರೆಸ್ ನಾಶವಾದರೆ ಮೀಸಲಾತಿ ಉಳಿಯಲಿದೆ” ಎಂದು ಬರೆದುಕೊಳ್ಳಲಾಗಿತ್ತು.
काँग्रेस ही देश में अशांति उच्च नीच का जड़ है। काँग्रेस रहेगी तो आरक्षण पर हमले होते रहेंगे।
काँग्रेस बर्बाद तो आरक्षण आबाद pic.twitter.com/hLIEF8HSE2
— S4 (@samyak_samaj) September 20, 2024
ಸೆ.20ರಂದು ಅಮರ್ ವರ್ಮಾ (@AmarVarma_)ಎಂಬ ಎಕ್ಸ್ ಖಾತೆಯಲ್ಲೂ ಅದೇ ಫೋಟೋ ಹಂಚಿಕೊಂಡು ” ಡಾ.ಬಿಆರ್ ಅಂಬೇಡ್ಕರ್ ಅವರು ಹೇಳಿದ್ದು ಸರಿ ಇದೆ. ಕಾಂಗ್ರೆಸ್ ದಲಿತ ವಿರೋಧಿಯಾಗಿದೆ. ಅದು ಭಾರತದಲ್ಲಿ ಮೀಸಲಾತಿಯನ್ನು ಕೊನೆಗೊಳಿಸಲು ಬಯಸುತ್ತದೆ. ಕಾಂಗ್ರೆಸ್‌ನ ಪ್ರಮುಖ ನಾಯಕನೇ ಈ ಬಗ್ಗೆ ಹೇಳಿದ್ದಾರೆ” ಎಂದು ಬರೆದುಕೊಳ್ಳಲಾಗಿತ್ತು.
DR BR AMBEDKAR जी ने सही कहा है कांग्रेस दलित विरोधी था दलित विरोधी हैं और SC/ST विरोधी रहेगा।
देख लीजिए कांग्रेस के नेता कांग्रेस का सबसे बड़ा लक्ष्य क्या है कांग्रेस के नेता खुद बता रहे हैं कि कांग्रेस भारत से आरक्षण समाप्त करना है।@kharge @RahulGandhi @AnandAkash_BSP pic.twitter.com/hV02qJ9GZB— Amar Varma (@AmarVarma_) September 20, 2024
ಫ್ಯಾಕ್ಟ್‌ಚೆಕ್ : ಹಲವರು ಹಂಚಿಕೊಂಡಿರುವ ದಿನಪತ್ರಿಕೆ ಫೋಟೋದಲ್ಲಿ, ಆ ಪತ್ರಿಕೆಯ ಹೆಸರು ‘ಆಪ್ಕಿ ಆವಾಝ್’ ಎಂದಿರುವುದು ಗಮನಿಸಿದ ನಾವು, ಆ ಪತ್ರಿಕೆ ಬಗ್ಗೆ ಇಂಟರ್‌ನೆಟ್‌ನಲ್ಲಿ ಹುಡುಕಾಡಿದ್ದೇವೆ. ಆ ಹೆಸರಿನ ಯಾವುದೇ ವಿಶ್ವಾಸಾರ್ಹ ಪತ್ರಿಕೆ ನಮಗೆ ಕಂಡು ಬಂದಿಲ್ಲ.
ಇನ್ನು ಕೆ.ಸಿ ವೇಣುಗೋಪಾಲ್ ಅವರು ಮೀಸಲಾತಿ ಕೊನೆಗೊಳಿಸುವ ಹೇಳಿಕೆ ನೀಡಿದ್ದು ನಿಜವೇ? ಎಂದು ಮಾಧ್ಯಮ ವರದಿಗಳನ್ನೂ ನಾವು ಹುಡುಕಿದ್ದೇವೆ. ಈ ವೇಳೆ ಯಾವುದೇ ಮುಖ್ಯವಾಹಿನಿ, ವಿಶ್ವಾಸಾರ್ಹ ಮಾಧ್ಯಮಗಳು ಆ ಕುರಿತು ವರದಿ ಮಾಡಿರುವುದು ಲಭ್ಯವಾಗಿಲ್ಲ. ಕೆ.ಸಿ ವೇಣುಗೋಪಾಲ್ ಕಾಂಗ್ರೆಸ್‌ನ ಪ್ರಮುಖ ನಾಯಕ ಹಾಗೂ ದೇಶದ ಪ್ರಸಿದ್ದ ರಾಜಕಾರಣಿಗಳಲ್ಲಿ ಒಬ್ಬರಾಗಿರುವುದರಿಂದ ಅವರು ಮೀಸಲಾತಿ ವಿರುದ್ದ ಹೇಳಿಕೆ ಕೊಟ್ಟಿದ್ದರೆ ಅದು ಮಾಧ್ಯಮಗಳಲ್ಲಿ ದೊಡ್ಡ ಸುದ್ದಿಯಾಗುತ್ತಿತ್ತು.
ಇತ್ತೀಚೆಗೆ ಅಮೆರಿಕಕ್ಕೆ ತೆರಳಿದ್ದ ವೇಳೆ, ಅಲ್ಲಿನ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ್ದ ರಾಹುಲ್ ಗಾಂಧಿ “ದೇಶದಲ್ಲಿ ಸಮಾನತೆ ಸಾರ್ವತ್ರಿಕವಾದಾಗ ನಾವು ಮೀಸಲಾತಿ ಕೊನೆಗೊಳಿಸುವ ಬಗ್ಗೆ ಯೋಚಿಸುತ್ತೇವೆ” ಎಂದಿದ್ದರು. ಆ ಹೇಳಿಕೆಯನ್ನು ತಪ್ಪಾಗಿ ಪ್ರಚಾರಪಡಿಸಿದ ಬಿಜೆಪಿಗರು, ರಾಹುಲ್ ಗಾಂಧಿ ಮೀಸಲಾತಿ ವಿರುದ್ದ ಹೇಳಿಕೆ ನೀಡಿದ್ದಾರೆ ಎಂದಿದ್ದರು. ಆಗ ಕೆ.ಸಿ ವೇಣುಗೋಪಾಲ್ ರಾಹುಲ್ ಗಾಂಧಿ ಪರ ಹೇಳಿಕೆ ಕೊಟ್ಟಿದ್ದರು. ಬಿಜೆಪಿಗರ ವಿರುದ್ದ ಕಿಡಿಕಾರಿದ್ದರು. ಈ ಕುರಿತು ಎಬಿಪಿ ಲೈವ್ ಪ್ರಕಟಿಸಿದ್ದ ವರದಿ ಇಲ್ಲಿದೆ.
ಲಭ್ಯ ಮಾಹಿತಿಗಳನ್ನು ಆಧರಿಸಿ ನಾವು ನಡೆಸಿ ಪರಿಶೀಲನೆಯಲ್ಲಿ ಕೆ.ಸಿ ವೇಣುಗೋಪಾಲ್ ಮೀಸಲಾತಿ ವಿರುದ್ದ ಹೇಳಿಕೆ ನೀಡಿದ್ದಾರೆ ಎಂದು ಹಂಚಿಕೊಳ್ಳಲಾಗುತ್ತಿರುವ ಪತ್ರಿಕೆಯ ಫೋಟೋ ನಕಲಿ ಎಂದು ಗೊತ್ತಾಗಿದೆ.
ಇದನ್ನೂ ಓದಿ : FACT CHECK : ಟೋಲ್ ಪ್ಲಾಝಾದಲ್ಲಿ ಗಲಾಟೆ ನಡೆಸಿದ ಮುಸ್ಲಿಮರು? ವೈರಲ್ ವಿಡಿಯೋದ ಸತ್ಯಾಸತ್ಯತೆ ಏನು?


