Homeನಿಜವೋ ಸುಳ್ಳೋFact Check: ಕೊರೊನಾ ಹರಡುವುದೇಗೆಂದು ಮುಸ್ಲಿಂ ಯುವಕನಿಂದ ಟಿಕ್‌ಟಾಕ್‌? ಈ ಸುದ್ದಿ ನಿಜವೇ?

Fact Check: ಕೊರೊನಾ ಹರಡುವುದೇಗೆಂದು ಮುಸ್ಲಿಂ ಯುವಕನಿಂದ ಟಿಕ್‌ಟಾಕ್‌? ಈ ಸುದ್ದಿ ನಿಜವೇ?

- Advertisement -
- Advertisement -

ಟಿಕ್ ಟಾಕ್‌ ಬಳಕೆದಾರ ಶಾದಾಬ್ ಖಾನ್ ಅವರ ವೀಡಿಯೊವೊಂದನ್ನು ಎಲ್ಲಾ ಕಡೆ ಷೇರ್‌ ಮಾಡಿ ಕೊರೊನಾ ಹರಡುವುದೇಗೆಂದು ಈ ಮುಸ್ಲಿಂ ಯುವಕ ವಿಡಿಯೋ ಮಾಡಿ ಹಂಚುತ್ತಿದ್ದಾನೆ ಎಂಬ ಆರೋಪ ಮಾಡಲಾಗಿದೆ.

ಟ್ವಿಟರ್ ಬಳಕೆದಾರ ದೀಪಕ್ ಖಾಂಡ್ವಾಲ್ ಅವರು ವಿಡಿಯೋ ಕ್ಲಿಪ್ ಅನ್ನು ಹಂಚಿಕೊಂಡಿದ್ದು “ಶಬಾದ್ ಖಾನ್ ಟಿಕ್ ಟಾಕ್‌ನಲ್ಲಿ 11 ಮಿಲಿಯನ್ ಫಾಲೋವರ್ಸ್ ಹೊಂದಿದ್ದಾರೆ ಮತ್ತು ಅವರು ಕರೋನವೈರಸ್ ಅನ್ನು ಹೇಗೆ ಹರಡಬೇಕೆಂದು ಪ್ರಚಾರ ಮಾಡುತ್ತಿದ್ದಾರೆ” ಎಂದು ಬರೆದಿದ್ದಾರೆ.

ಒಂದು ವಿಡಿಯೋದಲ್ಲಿ ಶಾದಾಬ್ ಖಾನ್ ತನ್ನ ಅಂಗೈಯನ್ನು ಉಗುಳಿನಿಂದ ತುಂಬಿಸಿ ಮಹಿಳೆಯ ಕೈ ಕುಲುಕುತ್ತಾನೆ. ಈ ವೀಡಿಯೊವನ್ನು ಹಂಚಿಕೊಂಡವರಲ್ಲಿ ಟ್ವಿಟರ್ ಬಳಕೆದಾರರಾದ ಬಾಲಾ ಮೊದಲಿಗರಾಗಿದ್ದಾರೆ. ಬಾಲಾ ಅವರನ್ನು ಟ್ವಿಟ್ಟರ್ ನಲ್ಲಿ ಪ್ರಧಾನಿ ಮೋದಿ ಫಾಲೋ ಮಾಡುತ್ತಿದ್ದಾರೆ ಎಂಬುದು ಗಮನಾರ್ಹ ಸಂಗತಿಯಾಗಿದೆ.

 

ಅದೇ ಕ್ಲಿಪ್ ಫೇಸ್‌ಬುಕ್‌ನಲ್ಲಿ ವೈರಲ್ ಆಗಿದೆ. ಎಕ್ಸ್‌ಪೋಸ್ ದಿ ದೇಶ್ರೋಹಿಸ್ ಮತ್ತು ಮೋದಿ ಒನ್ಸ್ ಮೋರ್ ಎಂಬ ಫೇಸ್‌ಬುಕ್‌ ಪುಟಗಳಿಂದ ಇದು ಸಾವಿರಾರು ವೀಕ್ಷಣೆಗಳನ್ನು ಗಳಿಸಿದೆ. ರಣವೀರ್ ಗುಪ್ತಾ ಅವರ ಖಾತೆಯಿಂದ ಇದು 25 ಸಾವಿರ ವೀಕ್ಷಣೆಗಳನ್ನು ಪಡೆದಿದೆ, ಅವರು ಬಿಜೆಪಿಯಲ್ಲಿ ಯುವ ಕಾರ್ಯಕರ್ತ, ಆರ್‌ಎಸ್‌ಎಸ್‌ನಲ್ಲಿ ಸ್ವಯಂ ಸೇವಕ ಮತ್ತು ಎಬಿವಿಪಿ ಕಾರ್ಯಕರ್ತರಾಗಿ ಗುರುತಿಸಿಕೊಂಡಿದ್ದಾರೆ.

ಫ್ಯಾಕ್ಟ್‌ ಚೆಕ್‌

ಕೊರೋನವೈರಸ್ ಭಾರತದಲ್ಲಿ ಹರಡಲು ಅಥವಾ ಭಾರತದಲ್ಲಿ ಆರೋಗ್ಯ ತುರ್ತುಸ್ಥಿತಿ ಎಂದು ಘೋಷಿಸುವ ಹಲವು ವಾರಗಳ ಮೊದಲು, ಅಂದರೆ ಫೆಬ್ರವರಿ 6, 2020 ರಂದು ವೀಡಿಯೊವನ್ನು ತಯಾರಿಸಲಾಗಿದೆ ಎಂದು ಸದಾಬ್ ಖಾನ್ ಅವರ ಟಿಕ್ ಟೋಕ್ ಪ್ರೊಫೈಲ್ ಮೂಲಕ ತಿಳಿಯಬಹುದಾಗಿದೆ. ಅಂದರೆ ಈ ವಿಡಿಯೋಗೂ ಕೊರೊನಾ ವೈರಸ್‌ಗೂ ಸಂಬಂಧವಿಲ್ಲ ಎಂಬುದು ಸ್ಪಷ್ಟವಾಗುತ್ತದೆ. ಸದಾಬ್‌ ಖಾನ್‌ ಮುಸ್ಲಿಂ ಯುವಕನಾಗಿದ್ದರಿಂದ ಇದು ವೈರಲ್‌ ಆಗಿದೆ.

ಅಲ್ಲದೇ ಕರೋನ ವೈರಸ್‌ ಕುರಿತು ಜಾಗೃತಿಗೆ ಸಂಬಂಧಿಸಿದ ಹಲವಾರು ವೀಡಿಯೊಗಳನ್ನು ಸಹ ಖಾನ್ ಮಾಡಿದ್ದಾರೆ. ಅವರು ಮನೆಯಲ್ಲಿರಲು ಜನರಿಗೆ ಸಲಹೆ ನೀಡುತ್ತಿರುವ ಒಂದು ವಿಡಿಯೋ ಕೆಳಗಿದ ನೋಡಿ.

ಟಿಕ್‌ಟಾಕ್‌ ಅಷ್ಟೇನೂ ಒಳ್ಳೇಯ ಸಾಮಾಜಿಕ ಜಾಲತಾಣವಲ್ಲ. ಅದರಲ್ಲಿ ದ್ವೇಷಪೂರಿತ, ಸುಳ್ಳಿನಿಂದ ಕೂಡಿದ ವಿಡಿಯೋಗಳೇ ತುಂಬಿರುತ್ತವೆ. ಅತಿಹೆಚ್ಚಿನ ಮನರಂಜನೆಗಾಗಿ ಅತಿಹೆಚ್ಚಿನ ಸುಳ್ಳುಗಳು ಸೇರಿಕೊಳ್ಳುತ್ತವೆ.

ಅದೇ ರೀತಿಯಲ್ಲಿ ಇಲ್ಲಿ ಈ ಹಿಂದೆ ಟ್ರೋಲ್‌ ಮಾಡುವ ಸಲುವಾಗಿ ಮುಸ್ಲಿಂ ಯುವಕ ಶಬಾದ್‌ ಖಾನ್‌ ಮಾಡಿದ ವಿಡಿಯೋ ಕೊರೊನಾ ತೀವ್ರವಾಗಿ ಭೀತಿ ಹುಟ್ಟಿಸಿರುವ ಸಮಯದಲ್ಲಿ ವೈರಲ್‌ ಆಗಿದೆ. ಅಲ್ಲದೇ ಕೊರೊನಾ ಹರಡುತ್ತಿದ್ದಾರೆ ಎಂಬು ಕೋಮುವಾದಿ ಆಯಾಮವನ್ನು ಸಹ ನೀಡಲಾಗಿದೆ. ಆದರೆ ಅದೆಲ್ಲವೂ ಸುಳ್ಳಾಗಿದೆ. ಒಂದು ಧರ್ಮವನ್ನು ಗುರಿಯಾಗಿಸಿ ಪ್ರಚಾರ ಮಾಡಲು ಈ ರೀತಿಯ ವಿಡಿಯೋಗಳು ಸರಕಾಗಿ ಬಳಕೆಯಾಗುತ್ತಿವಿ.

ಕೃಪೆ: ಆಲ್ಟ್‌ನ್ಯೂಸ್‌


ಇದನ್ನೂ ಓದಿ: ನಿಮ್ಮ ಚಾನೆಲ್‌ ಪ್ರಸಾರ ಏಕೆ ನಿಲ್ಲಿಸಬಾರದು: ಸುಳ್ಳು ಸುದ್ದಿ ಪ್ರಸಾರ ಮಾಡಿದ ಪಬ್ಲಿಕ್‌ ಟಿವಿಗೆ ನೋಟಿಸ್‌

ಇದನ್ನೂ ಓದಿ: ಇಡೀ ಪ್ರಪಂಚ ಎದುರಿಸುವಷ್ಟು ಕೊರೊನಾವನ್ನು ಭಾರತವೊಂದೇ ಎದುರಿಸುತ್ತಿದೆ ಎಂಬುದು ನಿಜವೇ? ಈ ನಕ್ಷೆ ಯಾವಾಗಿನದು? 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. Respected Sir/ Madam, I am reading articles from last one month in your webesite, I feel your publishing only one side favoured articles. Reality should have some base. I want inform you that I will continue as yours published articles if it says impartial truths. Otherwise I think you’re also sailing in the same boat.
    With regards
    S V GANESH

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...